Father’s Day 2020: ಬದುಕು ರೂಪಿಸಿದ ಅಪ್ಪನಿಗೆ ನನ್ನದೊಂದು ಕೃತಜ್ಞತೆ

Father’s Day: ನಾನು ಹೇಗಿದ್ದರು ಪರವಾಗಿಲ್ಲ, ನನ್ನ ಕುಟುಂಬ ಚೆನ್ನಾಗಿರಬೇಕು, ನನ್ನ ಮಗ ಡಾಕ್ಟರ್​ ಆಗಬೇಕು, ಇಂಜಿನೀಯರ್​​ ಪದವಿ ಪಡೆದಿರಬೇಕು, ಕಂಪೆನಿಯ ಮುಖ್ಯಸ್ಥನಾಗಿ ಉದ್ಯೋಗಿಗಳನ್ನು ಇಟ್ಟುಕೊಂಡಿರಬೇಕು ಎಂದು ಮಗನ ಬಗ್ಗೆ ಕನಸು ಕಂಡಿದ್ದ ಅಪ್ಪನಿಗೆ ಕೊನೆಗೊಂದು ದಿನ ಆ ಕನಸು ನನಸಾದಾಗ ಆ ಖುಷಿಯನ್ನು ಹೇಳಿಕೊಳ್ಳುವ ಸನ್ನಿವೇಷ ಅಂತಿದ್ದದಲ್ಲ.

news18-kannada
Updated:June 21, 2020, 7:19 AM IST
Father’s Day 2020: ಬದುಕು ರೂಪಿಸಿದ ಅಪ್ಪನಿಗೆ ನನ್ನದೊಂದು ಕೃತಜ್ಞತೆ
ಫಾದರ್ಸ್​ ಡೇ
  • Share this:
ವಿಶ್ವ ತಂದೆಯಂದಿರ ದಿನವಿಂದು. ಮಗುವಾಗಿದ್ದ ಆತನನ್ನು ಎತ್ತಿಕೊಂಡು ಮುದ್ದಾಡಿಸಿ, ಆತನಿಗೆ ಅಕ್ಷರ ಅಭ್ಯಾಸಕ್ಕೆ ಶಾಲೆಗೆ ಕಳುಹಿಸಿ, ಓದಿಸಿ, ಆತನನ್ನು ಬೆಳೆಸಿ, ಪ್ರೋತ್ಸಾಹಿಸಿ, ಬದುಕಿಕೊಂದು ದಾರಿ ರೂಪಿಸಿ ಕೊಟ್ಟ ತಂದೆಗೆ ನಮನ ಸಲ್ಲಿಸುವ ದಿನವಿಂದು. ಹಾಗಾಗಿ ಸೂಪರ್​ ಮ್ಯಾನ್​ ಅಪ್ಪನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೆ ಸಾಲದು.

ನಾನು ಹೇಗಿದ್ದರು ಪರವಾಗಿಲ್ಲ, ನನ್ನ ಕುಟುಂಬ ಚೆನ್ನಾಗಿರಬೇಕು, ನನ್ನ ಮಗ ಡಾಕ್ಟರ್​ ಆಗಬೇಕು, ಇಂಜಿನೀಯರ್​​ ಪದವಿ ಪಡೆದಿರಬೇಕು, ಕಂಪೆನಿಯ ಮುಖ್ಯಸ್ಥನಾಗಿ ಉದ್ಯೋಗಿಗಳನ್ನು ಇಟ್ಟುಕೊಂಡಿರಬೇಕು ಎಂದು ಮಗನ ಬಗ್ಗೆ ಕನಸು ಕಂಡಿದ್ದ ಅಪ್ಪನಿಗೆ ಕೊನೆಗೊಂದು ದಿನ ಆ ಕನಸು ನನಸಾದಾಗ ಆ ಖುಷಿಯನ್ನು ಹೇಳಿಕೊಳ್ಳುವ ಸನ್ನಿವೇಷ ಅಂತಿದ್ದದಲ್ಲ.

ಅಪ್ಪ ಆ ಕನಸಿನ ಹಿಂದೆ ಸಾಕಷ್ಟು ಶ್ರಮವಿದೆ. ಬೆಳಗ್ಗಿನಿಂದ ಸಂಜೆಯವರೆಗೆ ದುಡಿದು, ಚಿಕ್ಕ ಟಿವಿನ್​ ಬಾಕ್ಸ್​ನಲ್ಲಿ ಮಡದಿ ಕೊಟ್ಟ ಸ್ವಲ್ಪ ಊಟವನ್ನು ಮಾಡಿ, ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಓಡಿ ಬರುವ ಅಪ್ಪನ ಶ್ರಮ ಜೀವನ ಸಾಕಷ್ಟು ಮಕ್ಕಳಿಗೆ ತಿಳಿದಿಲ್ಲ. ತಿಂಗಳ ಸಂಬಳವನ್ನು ಒಟ್ಟು ಗೂಡಿಸಿ  ಮಗನ ಸ್ಕೂಲ್​ ಫೀಸ್​, ಬಟ್ಟೆ, ಬ್ರಾಂಡೆಡ್​ ಶೂ ಹೀಗೆ ಕೇಳಿದ್ದನೆಲ್ಲ ಕೊಡುವ ಅಪ್ಪನ ಮನಸ್ಸೇ ಅಂತದ್ದು, ಅದಕ್ಕೆ ಅಪ್ಪನನ್ನು ಆಕಾಶಕ್ಕೆ ಹೋಲಿಸಲಾಗಿದೆ. ಅವರ ಮನಸ್ಸು ಕೂಡ ಆಕಾಶದಷ್ಟೇ ವಿಶಾಲವಾಗಿದೆ.

ಅಂದಹಾಗೇ, ಈ ಅಪ್ಪಂದಿರ ದಿನ ಪ್ರಾರಂಭವಾದ್ದದು ಹೇಗೆ ಗೊತ್ತಾ? ವಿದೇಶದಲ್ಲಿ ಮೊದಲು ಫಾದರ್ಸ್ ​ಡೇ ಆಚರಿಸುವ ಮೂಲಕ ಬೆಳಕಿಗೆ ಬಂತು. ತಾಯಿಯನ್ನು ಕಳೆದುಕೊಂಡ 15 ಮಗಳೊಬ್ಬಳು ತಂದೆಯ ಆಶ್ರಯದಲ್ಲಿ ಬೆಳೆದಳು. ಆಕೆಯನ್ನು ಮತ್ತು ಆಕೆಯ ತಮ್ಮನನ್ನು ತಂದೆ ಕಷ್ಟಪಟ್ಟ ಸಾಕಿದರು. ತಾಯಂದಿರ ದಿನಾಚರಣೆಯ ಬಗ್ಗೆ ಅರಿತ ಆಕೆ ಅಪ್ಪಂದಿರ ದಿನಾಚರಣೆಯನ್ನು ಮಾಡಬೇಕೆಂದು ಮೊದಲು ಪ್ರಾರಂಭಿಸಿದಳು. ಆಕೆ ಮತ್ಯಾರು ಅಲ್ಲ ಸೊನೊರಾ ಲೂಯಿಸ್​​ ಡಾಡ್​!

ಅಂದಿನಿಂದ ಇಂದಿನವರೆಗೆ ವಿಶ್ವದಾದ್ಯಂತ ಜೂನ್ ತಿಂಗಳಿನ ಮೂರನೇ ವಾರದಂದು ಫಾದರ್ಸರ್ ಡೇ ಆಚರಿಸಲಾಗುತ್ತದೆ.  ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ನಲ್ಲಿ ಸೆಪ್ಟೆಂಬರ್​ ತಿಂಗಳಿನ ಮೊದಲ ಭಾನುವಾರ ಫಾದರ್ಸ್​ ಡೇ ಆಚರಿಸಲಾಗುತ್ತದೆ. ಬ್ರೆಜಿಲ್​ನಲ್ಲಿ ಅಗಸ್ಟ್​ ಎರಡನೇ ಭಾನುವಾರ ಆಚರಿಸುತ್ತಾರೆ.

Father’s Day 2020: ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಫಾದರ್ಸ್​ ಡೇ ವಿಶೇಷ ಮತ್ತು ಇತಿಹಾಸ ನಿಮಗೆ ಗೊತ್ತಾ?

ರಿಲೀಸ್​​ಗೆ ರೆಡಿಯಾದ ಸಂಚಾರಿ ವಿಜಯ್​ ನಟನೆಯ ‘ಮೇಲೊಬ್ಬ ಮಾಯಾವಿ‘ ಸಿನಿಮಾ
First published:June 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading