Father’s Day 2020: ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಫಾದರ್ಸ್​ ಡೇ ವಿಶೇಷ ಮತ್ತು ಇತಿಹಾಸ ನಿಮಗೆ ಗೊತ್ತಾ?

Father’s Day 2020; ಅಪ್ಪ ಶ್ರಮಜೀವಿ ಎಂದರೆ ತಪ್ಪಾಗಲಾರದು. ಮಗನ ಕನಸು ನನಸು ಮಾಡುವವರೆಗೆ ಅಪ್ಪನ ಹೋರಾಟ ಮಾತ್ರ ನಿಲ್ಲದು. ಏನೇ ಕೇಳಿದರು, ಏನೇ ಹೇಳಿದರು ತಂದು ಕೊಡುವ ಅಪ್ಪ ಸೂಪರ್​ ಮ್ಯಾನ್​. ಹಗಲು, ರಾತ್ರಿ ಕಷ್ಟಪಟ್ಟು ದುಡಿದು ಕೂಡಿಟ್ಟು, ಕುಟುಂಬ ಸಂತೋಷಕ್ಕೆ ಮೀಸಲಾಗಿಡುವ ಅಪ್ಪನ ಶ್ರಮವನ್ನು ಹೇಳತೀರದು. ಎಷ್ಟೇ ಕಷ್ಟ ಪಟ್ಟರು, ನೊಂದರು ಯಾರೊಂದಿಗೂ ಹಂಚಿಕೊಳ್ಳದೇ ತನ್ನ ಕುಟುಂಬ, ಹೆಂಡತಿ, ಮಕ್ಕಳ ಹಿತ ಭಯಸುವ ಗ್ರೇಟ್​ ಮ್ಯಾನ್​!.

news18-kannada
Updated:June 20, 2020, 4:14 PM IST
Father’s Day 2020: ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಫಾದರ್ಸ್​ ಡೇ ವಿಶೇಷ ಮತ್ತು ಇತಿಹಾಸ ನಿಮಗೆ ಗೊತ್ತಾ?
ಫಾದರ್ಸ್​ ಡೇ
  • Share this:
ಜೂನ್​ 21 ಅಪ್ಪಂದಿರ ದಿನಾಚರಣೆ. ಅತ್ತಾಗ ಅಪ್ಪಿಕೊಂಡು, ಎತ್ತಿಕೊಂಡು ಮುದ್ದಿಸಿ, ಬೆಳೆಯುವಾಗ ಬೆನ್ನೆಲುಬಾಗಿ ಪ್ರೋತ್ಸಾಹಿಸಿದ ತಂದೆಯಂದಿರ ದಿನಾಚರಣೆ. ಹಾಗಾಗಿ ವಿಶ್ವದಾದ್ಯಂತ ಆ ಒಂದು  ದಿನವನ್ನು ತಂದೆಗಾಗಿ ಮೀಸಲಿರಿಸಲಾಗಿದೆ. 

ಅಪ್ಪ ಶ್ರಮಜೀವಿ ಎಂದರೆ ತಪ್ಪಾಗಲಾರದು. ಮಗನ ಕನಸು ನನಸು ಮಾಡುವವರೆಗೆ ಅಪ್ಪನ ಹೋರಾಟ ಮಾತ್ರ ನಿಲ್ಲದು. ಏನೇ ಕೇಳಿದರು, ಏನೇ ಹೇಳಿದರು ತಂದು ಕೊಡುವ ಅಪ್ಪ ಸೂಪರ್​ ಮ್ಯಾನ್​. ಹಗಲು, ರಾತ್ರಿ ಕಷ್ಟಪಟ್ಟು ದುಡಿದು ಕೂಡಿಟ್ಟು, ಕುಟುಂಬ ಸಂತೋಷಕ್ಕೆ ಮೀಸಲಾಗಿಡುವ ಅಪ್ಪನ ಶ್ರಮವನ್ನು ಹೇಳತೀರದು. ಎಷ್ಟೇ ಕಷ್ಟ ಪಟ್ಟರು, ನೊಂದರು ಯಾರೊಂದಿಗೂ ಹಂಚಿಕೊಳ್ಳದೇ ತನ್ನ ಕುಟುಂಬ, ಹೆಂಡತಿ, ಮಕ್ಕಳ ಹಿತ ಭಯಸುವ ಗ್ರೇಟ್​ ಮ್ಯಾನ್​!.

ತಾಯಿ ಪ್ರೀತಿಯನ್ನು ನೀಡಿದರೆ, ತಂದೆ ಸ್ನೇಹ ಅಕ್ಕರೆಯನ್ನು ನೀಡುತ್ತಾರೆ. ಹಾಗಾಗಿ ಜಗತ್ತಿನಾದ್ಯಂತ  ಒಂದು  ದಿನವನ್ನು ಅಪ್ಪಂದಿರ ದಿನಾಚರಣೆ ಮೂಲಕ ಅವರಿಗೆ ಕೃತಜ್ಣತೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಜೂನ್​​ ತಿಂಗಳಿನ ಮೂರನೇ ವಾರದಂದು ವಿಶ್ವ ಅಪ್ಪದಿಂರ ದಿನವನ್ನು ಆಚರಿಸಲಾಗುತ್ತದೆ. ಹಾಗೆಯೇ ಈ ವರ್ಷ ಜೂನ್​ 21ರಂದು ಫಾದರ್ಸ್​ ಡೇ ಆಚರಿಸಲಾಗುತ್ತಿದೆ.



1910ರಲ್ಲಿ ವಾಷಿಂಗ್ಟನ್​ನಲ್ಲಿ ಮೊದಲ ಬಾರಗೆ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಅಮೆರಿಕದ ಸಿವಿಲ್​ ವಾರ್​​ನಲ್ಲಿ ಫಾಲೋಗ್ಗೊಂಡಿದ್ದ ವಿಲಿಯಂ ಜಾಕ್ಸನ್​​ ಸ್ಮಾರ್ಟ್​ ಅವರ ಮಗಳು ಸೊನೊರಾ ಸ್ಮಾರ್ಟ್​ ಡಾಡ್​​ ತನ್ನ ತಂದೆಯ ಹುಟ್ಟು ಹಬ್ಬವನ್ನು ಮೊದಲು ಆಚರಿಸಿದರು ಎಂದು ಹೇಳಲಾಗಿದೆ.

ಅಂದಿನಿಂದ ವಿಶ್ವ ಅಪ್ಪಂದಿರ ದಿನವನ್ನು 11 ದೇಶಗಳು ಆಚರಿಸುತ್ತಾ ಬಂದಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ನಲ್ಲಿ ಸೆಪ್ಟೆಂಬರ್​ ತಿಂಗಳಿನ ಮೊದಲ ಭಾನುವಾರ ಫಾದರ್ಸ್​ ಡೇ ಆಚರಿಸಲಾಗುತ್ತದೆ. ಬ್ರೆಜಿಲ್​ನಲ್ಲಿ ಅಗಸ್ಟ್​ ಎರಡನೇ ಭಾನುವಾರ ಆಚರಿಸುತ್ತಾರೆ.
First published:June 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading