Father’s Care: ಜವಾಬ್ದಾರಿಗಳಲ್ಲಿ ಕಳೆದು ಹೋಗುವ ಅಪ್ಪಂದಿರ ಅಭ್ಯಾಸಗಳತ್ತ ಗಮನಹರಿಸಿ, ಅವರ ಆರೋಗ್ಯ ಕಾಪಾಡಿ

ಸಮತೋಲಿತ ಆಹಾರ ಸೇವನೆ ದೀರ್ಘ ಮತ್ತು ಆರೋಗ್ಯಕರ ಜೀವನದ ಪ್ರಮುಖ ಅಭ್ಯಾಸ. ಸಾಕಷ್ಟು ಹಣ್ಣು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ಗಳನ್ನು ಸೇವಿಸಿ. ಉಪ್ಪು ಮತ್ತು ಸಕ್ಕರೆಯಂತಹ ಸಂಸ್ಕರಿಸಿದ ಮತ್ತು ಅನಾರೋಗ್ಯಕರ ಆಹಾರಗಳ ಸೇವನೆ ಮಿತಿಗೊಳಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರಪಂಚದಾದ್ಯಂತ (World) ಪ್ರತಿ ವರ್ಷ ಜೂನ್ ತಿಂಗಳ (June Month) ಮೂರನೇ ಭಾನುವಾರವನ್ನು (Sunday) ತಂದೆಯ ದಿನವನ್ನಾಗಿ (Father’s Day) ಆಚರಣೆ ಮಾಡಲಾಗುತ್ತದೆ. ಈ ಬಾರಿ ಅಪ್ಪಂದಿರ ದಿನವನ್ನು ಜೂನ್ 19 ರಂದು ಆಚರಣೆ ಮಾಡಲಾಗುತ್ತಿದೆ. ತಂದೆ ಅಂದ್ರೆ ಆಕಾಶ. ಬೆಟ್ಟದಷ್ಟು ಜವಾಬ್ದಾರಿ ಹೊತ್ತು ಕುಟುಂಬವನ್ನು ಮುನ್ನಡೆಸುವವನು. ತನಗಾಗಿ ಏನೂ ಬಯಸದ, ಮನೆ, ಮಕ್ಕಳು, ಮಡದಿಗಾಗಿ ಎಲ್ಲವನ್ನೂ ಮಾಡುವ ತಂದೆಗೆ ಯಾರೂ ಸಾಟಿಯಿಲ್ಲ. ಹಾಗಾಗಿ ತಂದೆಯ ಪ್ರೀತಿ ಮತ್ತು ತ್ಯಾಗಕ್ಕೆ ಸಧನ್ಯವಾದ ಹೇಳಲು ಒಂದು ದಿನ ಸಾಕಾಗುವುದಿಲ್ಲ. ಸಾಕಷ್ಟು ಕಷ್ಟ, ಸಂಕಷ್ಟ ಏನೇ ಬಂದರೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ, ಮನೆಯ ಕೊರತೆ ನೀಗಿಸಿ, ಉತ್ತಮವಾಗಿ ನೋಡಿಕೊಳ್ಳುವ ತಂದೆಗೊಂದು ಸಲಾಂ.

  ಆರೋಗ್ಯಕರ ಮತ್ತು ಸಂತೋಷದ ಅಭ್ಯಾಸ ರೂಢಿಸಿಕೊಳ್ಳಿ

  ನೀವೇ ತಂದೆಯಾಗಿದ್ದರೆ ಆರೋಗ್ಯಕರ ಮತ್ತು ಸಂತೋಷದ ಭವಿಷ್ಯಕ್ಕಾಗಿ ಉತ್ತಮ ಅಭ್ಯಾಸಗಳನ್ನು ನಿರ್ಲಕ್ಷಿಸುವ ತಪ್ಪು ಮಾಡಬೇಡಿ. ವೆಲ್ತ್ ಬಿಫೋರ್ ಹೆಲ್ತ್ ಸಂಸ್ಥಾಪಕರಾದ ಪೌಷ್ಟಿಕತಜ್ಞೆ ಸಪ್ನಾ ಜೈಸಿಂಗ್ ಪಟೇಲ್ ಅವರು, ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು ನಿಮ್ಮ ಒಟ್ಟಾರೆ ಆರೋಗ್ಯ

  ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು ಎಂದು ಹೇಳುತ್ತಾರೆ. ಪ್ರತಿಯೊಬ್ಬರೂ ವಿಭಿನ್ನ ರೀತಿಯ ಆರೋಗ್ಯಕರ ಅಭ್ಯಾಸ ಹೊಂದಿರುತ್ತಾರೆ. ತಂದೆಯ ದಿನಚರಿಯಲ್ಲಿ ಸೇರಿಸಲು ವಿಶೇಷವಾಗಿ ಮುಖ್ಯವಾದ ಕೆಲವು ಅಭ್ಯಾಸಗಳಿವೆ ಅವುಗಳನ್ನು ಈ ಕೆಳಗೆ ನೋಡೋಣ.

  ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

  ಆರೋಗ್ಯಕರ ಆಹಾರ ಸೇವನೆ

  ಸಮತೋಲಿತ ಆಹಾರ ಸೇವನೆ ದೀರ್ಘ ಮತ್ತು ಆರೋಗ್ಯಕರ ಜೀವನದ ಪ್ರಮುಖ ಅಭ್ಯಾಸ. ಸಾಕಷ್ಟು ಹಣ್ಣು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ಗಳನ್ನು ಸೇವಿಸಿ. ಉಪ್ಪು ಮತ್ತು ಸಕ್ಕರೆಯಂತಹ ಸಂಸ್ಕರಿಸಿದ ಮತ್ತು ಅನಾರೋಗ್ಯಕರ ಆಹಾರಗಳ ಸೇವನೆ ಮಿತಿಗೊಳಿಸಿ. ಮನೆಯಲ್ಲಿ ತಯಾರಿಸಿದ ಆಹಾರ ಹೆಚ್ಚು ಹೆಚ್ಚು ಸೇವಿಸಿ.

  ಸರಿಯಾಗಿ ಮತ್ತು ಆರೋಗ್ಯಕರ ಪದಾರ್ಥ ಸೇವಿಸಿ. ತೂಕ ನಿಯಂತ್ರಣ ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳಿ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  ದಿನವೂ ವ್ಯಾಯಾಮ ಮಾಡುವುದು

  ನಿಮ್ಮ ಆರೋಗ್ಯಕ್ಕಾಗಿ ನೀವು ವ್ಯಾಯಾಮ ಮಾಡಿ. ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸಲು, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು, ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯ ಕಡಿಮೆ ಮಾಡಲು ಇದು ಕೆಲಸ ಮಾಡುತ್ತದೆ.

  ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆ ಮಾಡಿ. ವಾಕಿಂಗ್, ಜಾಗಿಂಗ್, ಪೂಲ್‌ನಲ್ಲಿ ಈಜುವುದು ಮತ್ತು ಟೆನಿಸ್ ಅಥವಾ ಬಾಸ್ಕೆಟ್‌ಬಾಲ್ ಆಡುವುದು ನಿಮ್ಮ ಹೃದಯ ಬಡಿತ  ಮತ್ತು ನಿಮ್ಮ ದೇಹವನ್ನು ಫಿಟ್ ಆಗಿರಿಸುತ್ತದೆ.

  ನಿದ್ರೆ ಮಾಡುವುದು

  ಒಟ್ಟಾರೆ ಆರೋಗ್ಯ ಮತ್ತು ಕ್ಷೇಮಕ್ಕೆ ನಿದ್ರೆ ಅತ್ಯಗತ್ಯ. ಪ್ರತಿ ರಾತ್ರಿ ಏಳರಿಂದ ಎಂಟು ಗಂಟೆಗಳ ನಿದ್ದೆ ಮಾಡಿ. ನಿಮ್ಮ ಶಕ್ತಿಯ ಮಟ್ಟ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆ ಅಭಿವೃದ್ಧಿಪಡಿಸುವ ನಿಮ್ಮ ಸಾಧ್ಯತೆ ಕಡಿಮೆಯಾಗಬಹುದು. ಇದು ನಿಮಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

  ನಿಯಮಿತ ದೇಹ ತಪಾಸಣೆ ಮಾಡುವುದು

  ವಯಸ್ಸಾದಂತೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ವೈದ್ಯರು ತಪಾಸಣೆ ಮಾಡುವ ಮೂಲಕ ಹೃದ್ರೋಗ, ಮಧುಮೇಹದಂತಹ ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ.

  ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

  ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

  ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನ ಮಾಡುತ್ತಿದ್ದರೆ, ತ್ಯಜಿಸುವುದು ಆರೋಗ್ಯಕರ ನಿರ್ಧಾರ. ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.
  Published by:renukadariyannavar
  First published: