• Home
  • »
  • News
  • »
  • lifestyle
  • »
  • Navaratri Fasting: ನವರಾತ್ರಿಗೆ ಉಪವಾಸ ಮಾಡ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ಕೆಲವು ಟಿಪ್ಸ್

Navaratri Fasting: ನವರಾತ್ರಿಗೆ ಉಪವಾಸ ಮಾಡ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ಕೆಲವು ಟಿಪ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನವರಾತ್ರಿಯಲ್ಲಿ ದುರ್ಗಾದೇವಿಯನ್ನು ಪೂಜಿಸಿ ಉಪವಾಸ ವ್ರತ ಸಹ ಕೈಗೊಳ್ಳಲಾಗುತ್ತದೆ. ಉಪವಾಸ ಮಾಡುವುದರಿಂದ ಇಷ್ಟಾರ್ಥಗಳು ಬೇಗ ನೆರವೇರುತ್ತದೆ ಎಂಬುವುದು ಭಕ್ತರ ನಂಬಿಕೆ. ನವರಾತ್ರಿಯಲ್ಲಿ ಕೆಲವರು ಒಂದೆರೆಡು ದಿನ ಉಪವಾಸ ಮಾಡಿದರೆ, ಇನ್ನೂ ಕೆಲವರು 9 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಹಾಗಾದರೆ ಇಲ್ಲಿ ಕೆಲ ನವರಾತ್ರಿ ಉಪವಾಸದ ಸಲಹೆಗಳನ್ನು ನೀಡಲಾಗಿದೆ, ಯಾವುವೆಂದು ನೋಡಿ.

ಮುಂದೆ ಓದಿ ...
  • Share this:

ನವರಾತ್ರಿ (Navaratri) ಹಬ್ಬವು ನಿನ್ನೆಯಿಂದಲೇ (ಸೆಪ್ಟೆಂಬರ್ 26) ಪ್ರಾರಂಭವಾಗಿದೆ. ಭಕ್ತರು ವಿಶೇಷವಾಗಿ ಆಚರಿಸುವ ಈ ಹಬ್ಬ ಹಲವು ವಿಶೇಷತೆಗಳಿಂದ ಕೂಡಿದೆ. ನವರಾತ್ರಿಯಲ್ಲಿ 9 ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ದುರ್ಗಾದೇವಿಯನ್ನು (Durga Devi) ಪೂಜಿಸಿ ಉಪವಾಸ ವ್ರತ ಸಹ ಕೈಗೊಳ್ಳಲಾಗುತ್ತದೆ. ಉಪವಾಸ ಮಾಡುವುದರಿಂದ ಇಷ್ಟಾರ್ಥಗಳು ಬೇಗ ನೆರವೇರುತ್ತದೆ ಎಂಬುವುದು ಭಕ್ತರ ನಂಬಿಕೆ. ನವರಾತ್ರಿಯಲ್ಲಿ ಕೆಲವರು ಒಂದೆರೆಡು ದಿನ ಉಪವಾಸ (Fasting) ಮಾಡಿದರೆ, ಇನ್ನೂ ಕೆಲವರು 9 ದಿನಗಳ ಕಾಲ ಉಪವಾಸ ಮಾಡುತ್ತಾರೆ. ನವರಾತ್ರಿಯ ಸಮಯದಲ್ಲಿ ಈ ಉಪವಾಸ ಮಂಗಳಕರ ಎನ್ನುವುದರ ಜೊತೆಗೆ, ಇದು ಆರೋಗ್ಯಕರವಾಗಿಯೂ (Healthy) ಇರುತ್ತದೆ.


ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಉಪವಾಸ ಅದ್ಭುತವಾದ ಮಾರ್ಗವಾಗಿದೆ, ಏಕೆಂದರೆ ಇದು ಹಾನಿಕಾರಕ ವಿಷವನ್ನು ದೇಹದಿಂದ ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಆದಾಗ್ಯೂ, ಆಹಾರದ ಬದಲಾವಣೆಗಳಿಂದಾಗಿ, ಉಪವಾಸವು ದಣಿವು ಮತ್ತು ಆಲಸ್ಯವನ್ನು ಉಂಟು ಮಾಡಬಹುದು. ಹೀಗಾಗಿ ಉಪವಾಸ ಸಂದರ್ಭದಲ್ಲಿ ಆಹಾರದ ವಿಚಾರವಾಗಿ ಹೆಚ್ಚು ಕಾಳಜಿವಹಿಸಬೇಕು.


ಹಾಗಾದರೆ ಇಲ್ಲಿ ಕೆಲ ನವರಾತ್ರಿ ಉಪವಾಸದ ಸಲಹೆಗಳನ್ನು ನೀಡಲಾಗಿದೆ, ಯಾವುವೆಂದು ನೋಡಿ.


ನವರಾತ್ರಿ ಉಪವಾಸ ಆರೋಗ್ಯವಾಗಿರಲು 9 ಸಲಹೆಗಳು
1. ಉಪವಾಸದ ಅವಧಿ
ಪ್ರತಿದಿನ 14 ರಿಂದ 16 ಗಂಟೆಗಳ ಉಪವಾಸ ಅವಧಿಯನ್ನು ನಿರ್ವಹಿಸಿ ಮತ್ತು ಉಳಿದ ಗಂಟೆಗಳಲ್ಲಿ ತಿನ್ನಿರಿ. ಇದರಲ್ಲಿ ನೀವು 2, 3 ಅಥವಾ ಹೆಚ್ಚಿನ ಊಟಗಳನ್ನು ಸೇವಿಸಬಹುದು. ನೀವು 6 ದಿನಗಳವರೆಗೆ 14 ಗಂಟೆಗಳ ಉಪವಾಸ ವಿಂಡೋವನ್ನು ಮತ್ತು 3 ದಿನಗಳವರೆಗೆ 16 ಗಂಟೆಗಳ ಉಪವಾಸ ವಿಂಡೋವನ್ನು ಸಹ ನಿರ್ವಹಿಸಬಹುದು.


2. ತಿನ್ನುವ ವಿಧಾನ
ಉಪವಾಸದ ಸಮಯದಲ್ಲಿ ಮದ್ಯಂತರ ಉಪವಾಸ ಉತ್ತಮ ಮತ್ತು ಸರಳ ಮಾರ್ಗವಾಗಿದೆ. ಊಟಗಳ ನಡುವೆ 2.5 ಗಂಟೆಗಳಿಗಿಂತ ಹೆಚ್ಚು ಅಂತರವನ್ನು ಇಟ್ಟುಕೊಳ್ಳಿ.


3. ಆರೋಗ್ಯಕರ ಆಹಾರ ಸೇವಿಸಿ
ಉಪವಾಸದ ಸಮಯದಲ್ಲಿ ವಿಶೇಷವಾಗಿ ಆರೋಗ್ಯಕರ ಆಹಾರ ಸೇವಿಸುವತ್ತ ಗಮನಹರಿಸಿ. ಉದಾಹರಣೆಗೆ, ಸಾಬುದಾನ ಖಿಚಡಿಯಂತಹ ಆಹಾರವನ್ನು ಸೇವಿಸಿ. ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುವ ಹಣ್ಣುಗಳನ್ನು ಸಹ ನೀವು ತಿನ್ನಬಹುದು. ನಿಮ್ಮ ಊಟದಲ್ಲಿ ಸಕ್ಕರೆಯನ್ನು ಹೆಚ್ಚು ಅಳವಡಿಸಿಕೊಳ್ಳದಂತೆ ಎಚ್ಚರವಹಿಸಿ.


4. ಹೆಚ್ಚು ನೀರು ಸೇವಿಸಿ
ಉಪವಾಸ ಮಾಡುವಾಗ ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಬಹಳ ಅವಶ್ಯಕ, ಏಕೆಂದರೆ ಇದು ಹಸಿವಿನ ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇಷ್ಟೇ ಅಲ್ಲ, ನೀರು ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ. ಹೀಗಾಗಿ ಯಾವಾಗಲೂ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಮತ್ತು ಸಮಯಕ್ಕೆ ಸರಿಯಾಗಿ ನೀರು ಕುಡಿಯಿರಿ.


ಇದನ್ನೂ ಓದಿ:  Pregnant Woman: ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡಬೇಕು ಎನ್ನುವ ಗರ್ಭಿಣಿಯರಿಗೆ ಇಲ್ಲಿದೆ ಸಲಹೆ


5. ಗ್ಯಾಸ್‌ ನಿವಾರಿಸಲು ತಣ್ಣನೆಯ ಹಾಲು ಸೇವಿಸಿ
ಒಂಬತ್ತು ದಿನಗಳ ಉಪವಾಸವು ಖಂಡಿತವಾಗಿಯೂ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ, ಆದರೆ ಉಪವಾಸದ ಸಮಯದಲ್ಲಿ ಆಹಾರ ಬದಲಾವಣೆಯು ಕೆಲವು ಜನರಲ್ಲಿ ಆಮ್ಲೀಯತೆ ಅಥವಾ ಮಲಬದ್ಧತೆಗೆ ಕಾರಣವಾಗಬಹುದು. ಹೀಗಾಗಿ ಗ್ಯಾಸ್ಟಿಕ್‌ ನಂತಹ ಸಮಸ್ಯೆ ನಿವಾರಿಸಲು ತಣ್ಣನೆಯ ಹಾಲನ್ನು ಕುಡಿಯಿರಿ.


6. ಫೈಬರ್ಗಾಗಿ ಹಣ್ಣುಗಳು
ಉಪವಾಸದಂತಹ ಸಮಯದಲ್ಲಿ ಹೆಚ್ಚು ಹಣ್ಣುಗಳಿಗೆ ಪ್ರಾಶಸ್ತ್ಯ ನೀಡಿ. ಹಣ್ಣುಗಳು ನಿಮಲ್ಲಿ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುವ ಫೈಬರ್ ಅನ್ನು ನೀಡುತ್ತದೆ.


ಬಾಳೆಹಣ್ಣು, ಪಪ್ಪಾಯಿ, ಸೇಬು ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನಿರಿ. ಉಪವಾಸ ಸಂದರ್ಭದಲ್ಲಿ ನೀವು ನಿಂಬೆ ಹಣ್ಣಿನ ಜ್ಯೂಸ್‌ ಸಹ ಕುಡಿಯಬಹುದು, ಇದು ವಿಶೇಷವಾಗಿ ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.


7. ಸಕ್ಕರೆ ಸೇರಿಸಿ ಆದರೆ ಮಿತಿಯಲ್ಲಿರಲಿ
ಉಪವಾಸ ಸಂದರ್ಭದಲ್ಲಿ ನಿಮ್ಮ ನಾಲಿಗೆ ರುಚಿಗಾಗಿ ನೀವು ಸಕ್ಕರೆ ಭರಿತ ಪಾಯಸ, ಸಿಹಿಗಳನ್ನು ಮಿತಿಯಲ್ಲಿ ಸೇವಿಸಬಹುದು. ಮಖಾನಾ ಅಥವಾ ಸಾಬುದಾನ ಖೀರ್ ಅನ್ನು ಸ್ವಲ್ಪೇ ಸ್ವಲ್ಪ ಸೇವಿಸಬಹುದು.


8. ಆರೋಗ್ಯಕರ ಕೊಬ್ಬಿಗಾಗಿ ಡ್ರೈಪ್ರೂಟ್ಸ್‌
ಉಪವಾಸ ಸಮಯದಲ್ಲಿ ಆರೋಗ್ಯಕರ ಕೊಬ್ಬುಗಳಿಗಾಗಿ ನೀವು ಬಾದಾಮಿ, ವಾಲ್‌ನಟ್ಸ್, ಪಿಸ್ತಾ ಸೇರಿದಂತೆ ಡ್ರೈಫ್ರುಟ್ಸ್‌ ತಿನ್ನಬಹುದು. ಉಪವಾಸದ ಮೆನುವಿನಲ್ಲಿ ಖರ್ಜೂರ, ಅಂಜೂರ, ಒಣದ್ರಾಕ್ಷಿ ಸೇರಿದಂತೆ ಡ್ರೈಪ್ರೂಟ್ಸ್‌ ಗಳನ್ನು ರಾತ್ರಿ ನೆನಸಿಟ್ಟು ಬೆಳಿಗ್ಗಿನ ಜಾವ ಸೇವಿಸುವುದು ಆರೋಗ್ಯಕರವಾಗಿರುತ್ತದೆ.


ಇದನ್ನೂ ಓದಿ: Navratri 2022: ಹಬ್ಬದ ಮೊದಲ ದಿನ ಈ ಸ್ಪೆಷಲ್ ಗೋಧಿ ಹಲ್ವಾ ಟ್ರೈ ಮಾಡಿ, ಇಲ್ಲಿದೆ ರೆಸಿಪಿ


9. ಎಳೆನೀರು
ಉಪವಾಸ ಸಂದರ್ಭದಲ್ಲಿ ಶಕ್ತರಾಗಿರಲು, ಹೈಡ್ರೇಟ್‌ ಆಗಿರಲು ಎಳೆನೀರು, ಬಾಳೆಹಣ್ಣನ್ನು ಸೇವಿಸುವುದು ಉತ್ತಮವಾಗಿರುತ್ತದೆ.ಕೇವಲ ನವರಾತ್ರಿ ಮಾತ್ರವಲ್ಲದೇ ಯಾವುದೇ ಉಪವಾಸ ಸಂದರ್ಭದಲ್ಲೂ ಈ ಸಲಹೆಗಳು ಪ್ರಯೋಜನಕಾರಿಯಾಗಿವೆ.

Published by:Ashwini Prabhu
First published: