ಸೀರೆಯು ಮಹಿಳೆಯ ಅಂದ ಹೆಚ್ಚಿಸುವ ಉಡುಪು. ಮಹಿಳೆಯರಿಗೂ ಕೂಡ ಯಾವಾಗಲೂ ಇದು ಅಚ್ಚುಮೆಚ್ಚಿನ ಔಟ್ ಫಿಟ್. ಕಾರಣ ಸೀರೆ (Saree) ಮಾಡರ್ನ್ ಲುಕ್ ಜೊತೆಗೆ ಟ್ರೇಡಿಷನಲ್ (Traditional) ಲುಕ್ ನೀಡಲು ಸೈ ಎನಿಸಿದೆ. ಮಹಿಳೆಯರು ಸೀರೆ ಆಯ್ಕೆಯಲ್ಲಿ ತುಂಬಾ ಚ್ಯೂಸಿಗಳು. ಬಣ್ಣ , ಡಿಸೈನ್ (Design), ಬಟ್ಟೆ ಯಾವ ರೀತಿಯದ್ದು ಹೀಗೆ ಹಲವು ಅಂಶಗಳನ್ನು ನೋಡಿ ತೆಗೆದುಕೊಳ್ಳುತ್ತಾರೆ. ಆದರೆ ಸೀರೆ ಇಷ್ಟ ಪಡುವ ಮಹಿಳೆಯರಿಗೆ ಈ ಒಂದು ವಿಚಾರ ಅಷ್ಟಾಗಿ ತಿಳಿದಿರುವುದಿಲ್ಲ. ಹೌದು, ಸೀರೆ ಬಣ್ಣ, ಡಿಸೈನ್, ಬಟ್ಟೆ ನೋಡುವ ಜೊತೆಗೆ ಇನ್ಮೇಲೆ ನಿಮ್ಮ ದೇಹದ ಪ್ರಕಾರಕ್ಕೆ ಅನುಗುಣವಾಗಿ ಸೀರೆ ಆಯ್ಕೆ ಮಾಡಿ ಉಟ್ಟು ನೋಡಿ. ಸೀರೆಯ ಡ್ರಾಪಿಂಗ್ ಮತ್ತು ಬಟ್ಟೆಯ ಶೈಲಿಯು ನಿಮ್ಮ ಸೌಂದರ್ಯ (Beauty) ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬ ಮಹಿಳೆ ತನ್ನ ದೇಹದ ಪ್ರಕಾರ ಮತ್ತು ಅದಕ್ಕೆ ಹೊಂದುವ ಸೀರೆಯ ವೈವಿಧ್ಯತೆಯ ಬಗ್ಗೆ ತಿಳಿದಿರಬೇಕು.
ನಿಮ್ಮ ದೇಹ ಪ್ರಕಾರಕ್ಕೆ ಅನುಗುಣವಾಗಿ ಸೀರೆಯನ್ನು ಆರಿಸಿ
1) ಎತ್ತರ ಮತ್ತು ಸ್ಲಿಮ್ ದೇಹ:
ನೀವು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಂತೆ ಎತ್ತರ ಮತ್ತು ಸ್ಲಿಮ್ ಆಗಿದ್ದರೆ, ನೀವು ಸೀರೆಯಲ್ಲಿ ಜಾರ್ಜೆಟ್, ಕಚ್ಚಾ ರೇಷ್ಮೆ, ಟಸ್ಸಾರ್ ಮತ್ತು ಶಿಫಾನ್ ಸೇರಿದಂತೆ ವಿವಿಧ ಬಟ್ಟೆಗಳನ್ನು ಧರಿಸಬಹುದು. ಎತ್ತರ ಮತ್ತು ಸ್ಲಿಮ್ ದೇಹ ಹೊಂದಿರುವ ಮಹಿಳೆಯರಿಗೆ ದೊಡ್ಡ ಮತ್ತು ದಪ್ಪ ಡಿಸೈನ್ ಸೀರೆಗಳನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ಅವು ನಿಮ್ಮ ಕರ್ವ್ಸ್ ಗಳನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನೀವು ಲೇಸ್ವರ್ಕ್, ದೊಡ್ಡ ಬಾರ್ಡರ್ ಸೀರೆ, ಕಾಟನ್ ಸೀರೆಗಳನ್ನು ಸಹ ಪ್ರಯತ್ನಿಸಬಹುದು.
2) ಪಿಯರ್ ಆಕಾರದ ದೇಹ:
ಪಿಯರ್ ಆಕಾರದ ದೇಹವನ್ನು ಹೊಂದಿರುವ ಮಹಿಳೆಯರು ಜಾರ್ಜೆಟ್ನಂತಹ ಬಟ್ಟೆಗಳನ್ನು ಆರಿಸಿಕೊಳ್ಳಬೇಕು. ದೇಹದ ಮೇಲಿನ ಮತ್ತು ಕೆಳಗಿನ ಭಾಗಗಳ ನಡುವೆ ಸಮತೋಲನವನ್ನು ಸೃಷ್ಟಿಸಲು ಇವು ಸಹಾಯ ಮಾಡುತ್ತವೆ. ನೀವು ರೇಷ್ಮೆ ಸೀರೆಗಳನ್ನು ಸಹ ಪ್ರಯತ್ನಿಸಬಹುದು, ವಿಶೇಷವಾಗಿ ಬನಾರಸಿ ಸಿಲ್ಕ್, ಭಾರೀ ಕಸೂತಿ, ಸೂಕ್ಷ್ಮ ಮುದ್ರಣಗಳು ಮತ್ತು ಕ್ಯಾಸ್ಕೇಡಿಂಗ್ ವಿನ್ಯಾಸಗಳು ನಿಮ್ಮ ಆಯ್ಕೆಯಾಗಿರಬೇಕು.
ಇದನ್ನೂ ಓದಿ: Fashion Tips: ನೀವು ತೆಳ್ಳಗಿದ್ರೆ ಈ ಬಟ್ಟೆಗಳು ಸ್ಟೈಲಿಶ್ ಲುಕ್ ನೀಡುತ್ತೆ
3) ಸಣ್ಣ ಮತ್ತು ಸ್ಲಿಮ್ ದೇಹ:
ಕಡಿಮೆ ಎತ್ತರವನ್ನು ಹೊಂದಿರುವ ಆದರೆ ತೆಳ್ಳಗಿನ ದೇಹ ಹೊಂದಿರುವ ಮಹಿಳೆಯರು ಜಾರ್ಜೆಟ್ನಿಂದ ಚಿಫೋನ್ವರೆಗೆ ಯಾವುದೇ ಬಟ್ಟೆಯನ್ನಾದರೂ ಸಹ ಆರಿಸಿಕೊಳ್ಳಬಹುದು. ತೆಳುವಾದ ಬಾರ್ಡರ್ ನೀವು ಈಗಾಗಲೇ ಇರುವದಕ್ಕಿಂತ ಎತ್ತರವಾಗಿ ಕಾಣುವಂತೆ ಮಾಡುತ್ತವೆ. ಸೀರೆ ಜೊತೆ ನೀವು ಧರಿಸುವ ಆಕ್ಸೆಸರಿಸ್ ನಿಮ್ಮನ್ನು ಅಂದಗೊಳಿಸುತ್ತವೆ. ಉದಾಹರಣೆಗೆ, ಹೀಲ್, ಕ್ಲಚ್ ಅಥವಾ ಸ್ಟೇಟ್ಮೆಂಟ್ ನೆಕ್ಪೀಸ್ನ ಉದ್ದವು ಒಟ್ಟಾರೆ ನೋಟವನ್ನು ಹೆಚ್ಚಿಸಬಹುದು. ಇಂತಹ ಮಹಿಳೆಯರು ಹೆವಿ ಬ್ಲೌಸ್ ಮತ್ತು ಹಗುರವಾದ ಸೀರೆಗಳನ್ನು ಧರಿಸಬೇಕು.
3) ಕೊಂಚ ದಪ್ಪ ದೇಹ:
ನೀವು ಸೇಬಿನ ಆಕಾರದ ದೇಹವನ್ನು ಹೊಂದಿದ್ದರೆ, ನಿಮ್ಮ ಕರ್ವ್ಸ್ ವರ್ಧಿಸುವ ಬಟ್ಟೆಯ ಅಗತ್ಯವಿದೆ. ಆದ್ದರಿಂದ, ಪಾರ್ಟಿ ಅಥವಾ ಕಾರ್ಯಕ್ರಮಕ್ಕೆ ಹೋಗುವಾಗ ಜಾರ್ಜೆಟ್ ಅಥವಾ ಶಿಫಾನ್ ಸೀರೆಗಳನ್ನು ಟ್ರೈ ಮಾಡಿ. ಮತ್ತು ನೆಟ್ ಸೀರೆಗಳಿಂದ ದೂರವಿರಿ.
ಇದನ್ನೂ ಓದಿ: Fashion Tips: ಮಹಿಳೆಯರ ಬಳಿ ಇರಲೇಬೇಕಂತೆ ಈ ಫ್ಯಾಷನ್ ವಸ್ತುಗಳು
4) ಸಾಧಾರಣ ಎತ್ತರ ಮತ್ತು ಸ್ಲಿಮ್ ದೇಹ:
ಈ ದೇಹ ಪ್ರಕಾರ ಹೊಂದಿರುವ ಮಹಿಳೆಯರು ಪೂರ್ಣವಾಗಿ ಕಾಣಬೇಕು. ಆದ್ದರಿಂದ, ಅವರು ಆರ್ಗನ್ಜಾ, ಕಾಟನ್ ಅಥವಾ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಬಹುದು. ಭಾರೀ ಕಸೂತಿ ಮತ್ತು ತಿಳಿ ಬಣ್ಣಗಳು ಅವರಿಗೆ ಹೆಚ್ಚು ಸರಿಹೊಂದುತ್ತವೆ. ನೀವು ಮಣಿ ಅಥವಾ ಬ್ರೊಕೇಡ್ ಕೆಲಸವಿರುವ ಸೀರೆಗಳನ್ನು ಸಹ ಆಯ್ಕೆ ಮಾಡಬಹುದು. ಬ್ಲೌಸ್ಗಳಿಗಾಗಿ, ನೀವು ಸ್ಲೀವ್ಲೆಸ್, ಟ್ಯೂಬ್, ಬ್ಯಾಕ್ಲೆಸ್ ಮತ್ತು ಹಾಲ್ಟರ್ ನೆಕ್ ವಿನ್ಯಾಸಗಳನ್ನು ಆಯ್ಕೆ ಮಾಡಬಹುದು.
ಹಾಗಾದರೆ ಇನ್ನುಮುಂದೆ ಸೀರೆ ಖರೀದಿಸುವಾಗ ಬಣ್ಣ, ಡಿಸೈನ್ ಜೊತೆಗೆ ನಿಮ್ಮ ಬಾಡಿ ಟೈಪ್ಗೆ ಅನುಗುಣವಾಗಿ ಸೀರೆ ಕೊಳ್ಳಲು ಮರೆಯಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ