Organic Farming : 3 ತಿಂಗಳು ಕೆಡದಂತೆ ಸಾವಯವ ಈರುಳ್ಳಿ ಬೆಳೆದ ಹರಿಯಾಣದ ರೈತ

ಅಂಗಡಿದಾರರು ಬಾಳೆಹಣ್ಣುಗಳನ್ನು ನೇತುಹಾಕುವಂತೆ ಈರುಳ್ಳಿಯನ್ನು ನೇತು ಹಾಕಿದರೇ, ಅವು ಹಲವು ತಿಂಗಳುಗಳವರೆಗೆ ಸುರಕ್ಷಿತವಾಗಿರುತ್ತವೆ, ”ಎಂದು ಸುಮೇರ್ ಹೇಳುತ್ತಾರೆ. ಈ ವಿಧಾನದಿಂದ ಸುಮಾರು ಮೂರರಿಂದ ನಾಲ್ಕು ತಿಂಗಳವರೆಗೆ ಈರುಳ್ಳಿಯನ್ನು ಸುರಕ್ಷಿತವಾಗಿಡಬಹುದು.

ಸಾವಯಾವ ಈರುಳ್ಳಿ

ಸಾವಯಾವ ಈರುಳ್ಳಿ

 • Share this:
  ಅಕಾಲಿಕವಾಗಿ ಸುರಿದ ಮಳೆಯಿಂದಾಗಿ(Rain) ಈಗಾಗಲೇ ರೈತರು ಬೆಳೆದ ಸಾಕಷ್ಟು ಬೆಳೆಗಳು ನೆಲಕಚ್ಚಿವೆ, ಇದ್ದರಿಂದ ರೈತರು ಕಂಗಲಾಗುವಂತೆ ಮಾಡಿದೆ. ಆದರೆ ಹರಿಯಾಣ ಮೂಲದ ರೈತ ಸುಮೇರ್ ಸಿಂಗ್ (Sumer Singh)ಸಾವಯವ ಈರುಳ್ಳಿ ಬೆಳೆದು ದೇಶದೆಲ್ಲೆಡೆ ಗಮನ ಸೆಳೆದಿದ್ದಾರೆ. ಹೌದು ಸಾವಯವ ಕೃಷಿಯು ಹೆಚ್ಚು ಜನಪ್ರಿಯವಾಗಿದ್ದರೂ ಮತ್ತು ಆದಾಯವನ್ನು( income generating) ಗಳಿಸುವುದಾದರೂ ಇದು ಒಂದು ಅಪಾಯಕಾರಿ ( risky process) ಪ್ರಕ್ರಿಯೆಯಾಗಿದೆ. ಆದರೆ ಹರಿಯಾಣದ ಧನಿ ಮಾಹು ಗ್ರಾಮದ ಸುಮೇರ್ ಸಿಂಗ್, ರಾಸಾಯನಿಕ ಗೊಬ್ಬರಗಳ ( chemical fertilizers)ಬಳಕೆಯ ದುಷ್ಪರಿಣಾಮಗಳನ್ನು ಅರಿತು ಈ ಸಾವಯವ ಕೃಷಿ (Organic farming)ಮಾಡುವ ಅಪಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದರು.

  ಇದನ್ನು ಓದಿ: Organic Farming: ಈ ರೈತ ತನ್ನ ಬೆಳೆಗಳನ್ನು ವಿಭಿನ್ನವಾಗಿ ಮಾರುತ್ತಿದ್ದಾನೆ, ವರ್ಷಕ್ಕೆ ಮಿನಿಮಮ್ 2 ಕೋಟಿ ಲಾಭ ಗ್ಯಾರಂಟಿ ! ನೀವೂ ಟ್ರೈ ಮಾಡಬಹುದು

  ಆರೋಗ್ಯವು ಹದಗೆಟ್ಟಿತ್ತು
  ಸುಮೇರ್ ತನ್ನ 14 ಎಕರೆ ಸಾವಯವ ಕೃಷಿಯಿಂದ ಕೃಷಿ ಮಾಡುತ್ತಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಗಳಿಸುತ್ತಿದ್ದಾರೆ ನೀವು ನಂಬಲೇಬೇಕು. ಇವರು ಇತರ ರೈತರನ್ನು ಸಹ ತನ್ನ ವಿಧಾನಗಳನ್ನು ಅನುಸರಿಸುವಂತೆ ಪ್ರೇರೇಪಿಸುತ್ತಿರುವುದು ಗಮರ್ನಾಹ. ಸಮೇರ್‌ 1999 ರಲ್ಲಿ ಕೃಷಿ ಆರಂಭಿಸಿದಾಗ, ಮೊದ ಮೊದಲ ರಾಸಾಯನಿಕ ಗೊಬ್ಬರಗಳನ್ನು ಬಳಸಿದರು, ಆಗ ಅವರು ಪ್ರಮುಖ ಕೃಷಿ ಹತ್ತಿ ಬೆಳೆಯುವುದಾಗಿತ್ತು. ಆದರೆ ಅದು ಶೀಘ್ರದಲ್ಲೇ, ಅವರ ಭೂಮಿ ಮತ್ತು ಕುಟುಂಬದ ಆರೋಗ್ಯವು ಹದಗೆಡುವಂತೆ ಮಾಡಿತು.

  ಹೆಮ್ಮೆಪಟ್ಟ ರೈತ

  ಇತರ ಸಾವಯವ ಕೃಷಿಕರ ಮಾರ್ಗದರ್ಶನದೊಂದಿಗೆ ಸಾವಯವ ಕೃಷಿಯನ್ನು ಆರಂಭಿಸಿದ ಸುಮೇರ್‌ಗೆ ಅದು ಎಚ್ಚರಿಕೆಯ ಕರೆಯಾಗಿತ್ತು. ಇಂದು ಅವರು ಯಶಸ್ವಿಯಾಗಿ ತರಕಾರಿ, ಬೇಳೆಕಾಳು, ಕಡಲೆ, ರಾಗಿ ಬೆಳೆಯುತ್ತಾರೆ. ನಾನು ಕಳೆದ ಆರು ವರ್ಷಗಳಿಂದ ಈ ಮಾದರಿಯ ಕೃಷಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಕುಟುಂಬದವರಾಗಲಿ ಅಥವಾ ನನಗಾಗಲಿ ಆಸ್ಪತ್ರೆಯ ಬಿಲ್‌ಗಳಿಗೆ ಒಂದೇ ಒಂದು ಪೈಸ ಅನ್ನು ಖರ್ಚು ಮಾಡಲ್ಲ. ಇದು ನನ್ನ ದೊಡ್ಡ ಲಾಭ ಎಂದು ನಾನು ಪರಿಗಣಿಸುತ್ತೇನೆ ಎಂದು ಸುಮೇರ್‌ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

  ರಾಸಾಯನಿಕಗಳನ್ನು ಬಳಸಿ ಹೆಚ್ಚು ಲಾಭ ಗಳಿಸಿ ಮತ್ತು ಆಸ್ಪತ್ರೆಗಳಲ್ಲಿ ಖರ್ಚು ಮಾಡುವುದರಿಂದ ಏನು ಪ್ರಯೋಜನ? ಎಂದು ಅವರು ಮರು ಪ್ರಶ್ನೆ ಮಾಡಿದ್ದಾರೆ. ಅವರ ನೆರೆಹೊರೆಯವರು ಮತ್ತು ಕುಟುಂಬದ ಸದಸ್ಯರು ಸಂಪೂರ್ಣವಾಗಿ ಅವರ ತರಕಾರಿಗಳನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳುತ್ತಾರೆ.

  ವ್ಯತ್ಯಾಸ ಕಂಡ ಖರೀದಾರರು
  ನಾವು ಸ್ವಲ್ಪ ಸಮಯದಿಂದ ಸುಮೇರ್ ಜಿಯಿಂದ ತರಕಾರಿಗಳನ್ನು ಖರೀದಿಸುತ್ತಿದ್ದೇವೆ. ಸಾವಯವ ಈರುಳ್ಳಿ ಮತ್ತು ಮಾರುಕಟ್ಟೆಯಿಂದ ಖರೀದಿಸಿದ ಈರುಳ್ಳಿಗಳ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ. ಆಹಾರಕ್ಕೆ ಪರಿಮಳವನ್ನು ಸೇರಿಸುವುದರ ಜೊತೆಗೆ, ನಾವು ಅದನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು ಸುಮೇರ್‌ ನಿಂದ ಈರುಳ್ಳಿ ಖರೀದಿಸುವ ಸುಖ್ ದರ್ಶನ್ ಹೇಳುತ್ತಾರೆ.

  ಈರುಳ್ಳಿಯನ್ನು ನೇತು ಹಾಕಿದ ಸುಮೇರು
  ಸುಮೇರ್ ತನ್ನ ಸ್ವಂತ ಆಲೋಚನೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಉದಾಹರಣೆಗೆ, ಅವರು ಒಂದು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆಯುತ್ತಾರೆ ಮತ್ತು ಮಲ್ಚಿಂಗ್ ಉದ್ದೇಶಕ್ಕಾಗಿ ಪ್ಲಾಸ್ಟಿಕ್ ಬಳಸುವ ಬದಲು, ಅವರು ಹುಲ್ಲು ಬಳಸುತ್ತಾರೆ. ಇದು ಮಣ್ಣಿನ ತೇವಾಂಶವನ್ನು ದೀರ್ಘಕಾಲದವರೆಗೆ ಇಡುತ್ತದೆ. ನೀರಿನ ಕೊರತೆ ಇರುವಂತಹ ಸ್ಥಳಗಳಿಗೆ ಈ ವಿಧಾನವು ಪರಿಣಾಮಕಾರಿಯಾಗಿದೆ.

  ಸಾಮಾನ್ಯವಾಗಿ ಈರುಳ್ಳಿಯನ್ನು ಗೋಣಿಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ, ಇದು ಶಾಖದ ಕಾರಣದಿಂದಾಗಿ ಅದರ ಒತ್ತಿ ಮತ್ತು ಹಾಳಾಗುವಿಕೆಗೆ ಕಾರಣವಾಗುತ್ತದೆ. ಈ ವ್ಯರ್ಥವನ್ನು ತಪ್ಪಿಸಲು, ಸುಮೇರ್ ಈರುಳ್ಳಿಯನ್ನು ಕಟ್ಟುಗಳಲ್ಲಿ ನೇತುಹಾಕುತ್ತಾರೆ. ಈ ರೀತಿಯಲ್ಲಿ ಒಂದು ಅಥವಾ ಎರಡು ಹಾನಿಗೊಳಗಾದರೂ ಸಹ, ಅವುಗಳನ್ನು ಸುಲಭವಾಗಿ ತೆಗೆಯಬಹುದು ಅದು ಉತ್ಪನ್ನದ ಹಾಳಾಗುವುದನ್ನು ತಡೆಯಬಹುದು.

  ಅಂಗಡಿದಾರರು ಬಾಳೆಹಣ್ಣುಗಳನ್ನು ನೇತುಹಾಕುವಂತೆ ಈರುಳ್ಳಿಯನ್ನು ನೇತು ಹಾಕಿದರೇ, ಅವು ಹಲವು ತಿಂಗಳುಗಳವರೆಗೆ ಸುರಕ್ಷಿತವಾಗಿರುತ್ತವೆ, ”ಎಂದು ಸುಮೇರ್ ಹೇಳುತ್ತಾರೆ. ಈ ವಿಧಾನದಿಂದ ಸುಮಾರು ಮೂರರಿಂದ ನಾಲ್ಕು ತಿಂಗಳವರೆಗೆ ಈರುಳ್ಳಿಯನ್ನು ಸುರಕ್ಷಿತವಾಗಿಡಬಹುದು. ಒಂದೂವರೆ ವರ್ಷ ಸಂರಕ್ಷಿಸಬಹುದೇ ಎಂಬ ಪ್ರಯೋಗವಾಗಿ ಕ್ವಿಂಟಾಲ್‌ಗಟ್ಟಲೆ ಈರುಳ್ಳಿಯನ್ನು ನೇತು ಹಾಕಿದ್ದಾರೆ.

  ಇದನ್ನು ಓದಿ:Organic Farming: ಪೊಲೀಸ್ ವಸತಿ ಗೃಹದ‌ ಸುತ್ತಮುತ್ತ ಸಾವಯುವ ಕೃಷಿ : ಬೈಲಹೊಂಗಲ ಎಎಸ್​​ಪಿಯಿಂದ ಮಾದರಿ ಕೆಲಸ

  ಶೆಲ್ಫ್-ಲೈಫ್
  ಪ್ರತಿ ಬೆಳೆಗೆ ನೈಸರ್ಗಿಕವಾಗಿ ತಮ್ಮ ಶೆಲ್ಫ್-ಲೈಫ್ ಅನ್ನು ಹೆಚ್ಚಿಸಲು ಇದೇ ರೀತಿಯ ಆವಿಷ್ಕಾರಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ, “ಎಲ್ಲಾ ಕೃಷಿ ಸಂಬಂಧಿತ ಕೆಲಸಗಳಲ್ಲಿ ಅಪಾಯವಿದೆ, ಅದು ಸಾವಯವ ಅಥವಾ ರಾಸಾಯನಿಕವಾಗಿರಬಹುದು. ಆದರೆ ರೈತರು ಹೊಸ ಪ್ರಯೋಗಗಳನ್ನು ಪ್ರಯತ್ನಿಸಲು ಹಿಂಜರಿಯಬೇಕು ಮತ್ತು ಮುಂದುವರಿಯಬೇಕು ಎಂದು ಇದರ ಅರ್ಥವಲ್ಲ. ಸಾವಯವ ಕೃಷಿ ತಂತ್ರಗಳ ಮೂಲಕ ಬೆಳೆಗಳನ್ನು ಬೆಳೆಯುವಂತೆ ನಾನು ಎಲ್ಲ ರೈತರಲ್ಲಿ ಮನವಿ ಮಾಡುತ್ತೇನೆ. ಸಾವಯವ ಕೃಷಿ ತಂತ್ರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸುಮೇರ್ ಸಿಂಗ್ ಅವರನ್ನು 9991634300 ನಲ್ಲಿ ಸಂಪರ್ಕಿಸಬಹುದು.
  Published by:vanithasanjevani vanithasanjevani
  First published: