Fitness Tips: ತೂಕ ಇಳಿಸೋಕೆ ಸುಲಭ ಮಾರ್ಗ ಯಾವುದು? ಪ್ರಸಿದ್ಧ ಫಿಟ್ನೆಸ್ ತರಬೇತುದಾರ ಫರ್ಹಾನ್‌ ಖಾನ್‌ ಏನ್ ಹೇಳ್ತಿದ್ದಾರೆ ನೋಡಿ

ಪ್ರತಿಯೊಬ್ಬರು ತಮಗೆ ಅನುಕೂಲವಾಗುವ ದೇಹ ಕಸರತ್ತುಗಳನ್ನು ಮಾಡಿ ತಮ್ಮ ದೇಹದ ಕೊಬ್ಬನ್ನು ಕರಗಿಸುತ್ತಾರೆ. ಅದರ ಬಗ್ಗೆ ಫಿಟ್‌ನೆಸ್ ತರಬೇತುದಾರರು ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿಂದು ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಆಧುನಿಕ ಜೀವನಶೈಲಿಯಿಂದ ಎಲ್ಲರಿಗೂ ಬೊಜ್ಜು (Fat), ಅಧಿಕ ತೂಕ, ದೇಹದ ಕೆಲವು ಭಾಗಗಳಲ್ಲಿ ಶೇಖರಣೆ ಆಗುವ ಕೊಬ್ಬಿನಾಂಶದಿಂದ ಅನೇಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಕುರಿತು ಹಲವರು ಅನೇಕ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಯೋಗ (Yoga) ಮಾಡಿ ತಮ್ಮ ಕೊಬ್ಬಿನಾಂಶವನ್ನು (fat content) ಕಡಿಮೆ ಮಾಡಿಕೊಂಡರೆ, ಮತ್ತೆ ಕೆಲವರು ಜಿಮ್‌ ವರ್ಕ್‌ ಮಾಡಿ ತಮ್ಮ ದೇಹವನ್ನು ಫಿಟ್‌ (Fit) ಆಗಿರಿಸಲು ಪ್ರಯತ್ನ ಪಡುತ್ತಾರೆ. ಹೀಗೆ ಪ್ರತಿಯೊಬ್ಬರು ತಮಗೆ ಅನುಕೂಲವಾಗುವ ದೇಹ ಕಸರತ್ತುಗಳನ್ನು ಮಾಡಿ ತಮ್ಮ ದೇಹದ ಕೊಬ್ಬನ್ನು ಕರಗಿಸುತ್ತಾರೆ. ಅದರ ಬಗ್ಗೆ ಫಿಟ್‌ನೆಸ್ ತರಬೇತುದಾರರು (Fitness trainers) ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿಂದು ತಿಳಿಯೋಣ ಬನ್ನಿ.

ಈ ಬಗ್ಗೆ ಫರ್ಹಾನ್ ಖಾನ್ ಏನು ಹೇಳಿದ್ದಾರೆ ನೋಡಿ
ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಹೇಗೆ ಕರಗಿಸಬಹುದು ಎಂಬುದಕ್ಕೆ ʼಕೊಬ್ಬಿನ ನಷ್ಟಕ್ಕೆ ಅತ್ಯುತ್ತಮ ಸಾಧನಗಳುʼ ಎಂಬ ಶಿರ್ಷಿಕೆಯಡಿಯಲ್ಲಿ ಅವರು ತಮ್ಮ ಪೋಸ್ಟ್‌ನಲ್ಲಿ ಈ ವಿಷಯದ ಕುರಿತಾಗಿ ಕೆಲವು ಮಾಹಿತಿಗಳನ್ನು ಫಿಟ್‌ನೆಸ್‌ ತರಬೇತುದಾರ ಹಂಚಿಕೊಂಡಿದ್ದಾರೆ.




“ಕೊಬ್ಬನ್ನು ಕರಗಿಸುವ ಈ ಸಾಧನಗಳು ದೇಹದ ಬಿಎಮ್‌ಆರ್‌ ಅಥವಾ ದೇಹದ ಚಯಾಪಚಯ ದರ ವನ್ನು ಹೆಚ್ಚಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ" ಎಂದು ನಕುಲ್ ಮೆಹ್ತಾ ಮತ್ತು ದೃಷ್ಟಿ ಧಾಮಿಯಂತಹ ಪ್ರಸಿದ್ಧ ವ್ಯಕ್ತಿಗಳಿಗೆ ತರಬೇತಿ ನೀಡುವ ಫಿಟ್‌ನೆಸ್‌ ತರಬೇತುದಾರ ಫರ್ಹಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮ ಫಿಟ್ನೆಸ್ ದಿನಚರಿಯಲ್ಲಿ ತೂಕ ನಷ್ಟಕ್ಕೆ ಇರುವ ವ್ಯಾಯಮಗಳಾವುವು?
ಆಧುನಿಕತೆಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರು ತೂಕವನ್ನು ಕಳೆದುಕೊಳ್ಳುವುದರ ಮೇಲೆ ತಮ್ಮ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿರುತ್ತಾರೆ. ಆದರೆ ಅವರು ದಿನವೂ ಕೇವಲ ಒಂದೇ ರೀತಿಯ ವ್ಯಾಯಾಮವನ್ನು ಮಾಡುತ್ತಿರುತ್ತಾರೆ. ಇದರಿಂದ ತೂಕ ನಷ್ಟವು ಅಷ್ಟೊಂದು ಪರಿಣಾಮಕಾರಿ ಎನಿಸುವುದಿಲ್ಲ. ಇದರಿಂದ ಪರಿಣಾಮಕಾರಿ ಫಿಟ್‌ನೆಸ್ ದಿನಚರಿಯು ನಿಮ್ಮ ಶಕ್ತಿ ಮತ್ತು ಹೆಚ್ಚು ಕೊಬ್ಬಿನಾಂಶ ಕರಗುವ ವ್ಯಾಯಾಮಗಳ ಸಂಯೋಜನೆಯಾಗಿರಬೇಕು ಎಂಬುದನ್ನು ಕೆಲ ಜನರು ಮರೆತುಬಿಡುತ್ತಾರೆ.

ಇದನ್ನೂ ಓದಿ:  Weight Loss: ಹೆಚ್ಚುತ್ತಿರುವ ತೂಕ ನಿಯಂತ್ರಿಸಲು ತರಕಾರಿಗಳ ಸೇವನೆ! ಯಾವುದು ಬೆಸ್ಟ್?

ಇಂತಹ ತೀವ್ರವಾದ ವ್ಯಾಯಾಮಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಇದು ನಿಮ್ಮ ದೇಹದಲ್ಲಿನ ಕ್ಯಾಲೊರಿಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಅಂತಹ ದಿನಚರಿಯ ಅಗತ್ಯ ಬಹಳ ಮುಖ್ಯ ಎಂಬ ಅಂಶವನ್ನು ಒತ್ತಿಹೇಳುತ್ತಾ, ಫಿಟ್‌ನೆಸ್ ತರಬೇತುದಾರ ಫರ್ಹಾನ್ ಖಾನ್ ಕೊಬ್ಬು ನಷ್ಟಕ್ಕೆ ಉತ್ತಮ ಸಾಧನಗಳನ್ನು ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಪಟ್ಟಿ ಮಾಡಿದ್ದಾರೆ.

ಇವರ ಪ್ರಕಾರ ಕೊಬ್ಬು ನಷ್ಟಕ್ಕೆ ಉತ್ತಮ ಸಾಧನಗಳೆಂದರೆ:

  • ಭಾರ ಎತ್ತುವ ತರಬೇತಿ

  • ಹೆಚ್ಚಿನ ತೀವ್ರತೆಯನ್ನು ಹೊಂದಿರುವ ಮಧ್ಯಂತರ ತರಬೇತಿ


"ಇವು ಬಿಎಮ್‌ಆರ್‌ ಅಥವಾ ದೇಹದ ಚಯಾಪಚಯ ದರವನ್ನು ಹೆಚ್ಚಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿವೆ" ಎಂದು ಖಾನ್ ಹೇಳಿದ್ದಾರೆ. ನೀವು ಈ ವ್ಯಾಯಾಮಗಳನ್ನು ಮಾಡಿ ತೂಕ ನಷ್ಟ ಮಾಡಿಕೊಳ್ಳಬಹುದು. ಹಾಗಿದ್ರೆ ಆ ವ್ಯಾಯಾಮಗಳು ಯಾವುವು? ಎಂಬುದನ್ನು ಇಲ್ಲಿ ನೋಡೋಣ.

ವ್ಯಾಯಾಮಗಳು:
ಬೈಸೆಪ್ ಹ್ಯಾಮರ್ ಕರ್ಲ್‌ಗಳ ಜೊತೆ ರಿವರ್ಸ್ ಲುಂಜ್‌ ವ್ಯಾಯಾಮದ ಪ್ರಯೋಜನಗಳು: ರಿವರ್ಸ್ ಲುಂಜ್ ವ್ಯಾಯಾಮವು ಮೊಣಕಾಲಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅತ್ಯಂತ ಪ್ರಯೋಜನಕಾರಿ ವ್ಯಾಯಾಮ ಆಗಿದೆ.

ಮೊಣಕಾಲು ಮತ್ತು ಸೊಂಟದ ಕೀಲುಗಳನ್ನು ಬಲಪಡಿಸಲು ಈ ವ್ಯಾಯಾಮವು ಸಹಾಯ ಮಾಡುತ್ತದೆ. ಕೋರ್ ಸ್ನಾಯುಗಳ ಬೆಳವಣಿಗೆ ಮತ್ತು ಸ್ಥಿರೀಕರಣದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಬೈಸೆಪ್ ಮಾಡುವುದರಿಂದ ಅವು ಕೈಗಳ ಮತ್ತು ಬೈಸೆಪ್ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಲ್ಯಾಟರಲ್ ಸೈಡ್ ವಾಕ್ ವ್ಯಾಯಾಮದ ಪ್ರಯೋಜನಗಳು: ಲ್ಯಾಟರಲ್ ಸೈಡ್ ವಾಕ್‌ಗಳು ​​ಕೋರ್ ಮತ್ತು ಗ್ಲುಟಿಯಲ್ ಗುಂಪಿನ ಸ್ನಾಯುಗಳನ್ನು ಬಲಪಡಿಸಲು ಅತ್ಯುತ್ತಮವಾದ ವ್ಯಾಯಾಮವಾಗಿದೆ. ಈ ವ್ಯಾಯಾಮವು ಹೆಚ್ಚಿನ ಶಕ್ತಿಯನ್ನು ಬೇಡುತ್ತದೆ. ಮೊಣಕಾಲು ಸಮಸ್ಯೆಗಳಿಲ್ಲದವರು ಈ ವ್ಯಾಯಾಮ ಮಾಡಬಹುದು.

ಇದನ್ನೂ ಓದಿ: Orange Fruit: ಕಿತ್ತಳೆ ಹಣ್ಣಿನಿಂದ ಉತ್ತಮ ಆರೋಗ್ಯ, ಕೊಲೆಸ್ಟ್ರಾಲ್ ದೂರವಿರಿಸೋಕೆ ತಿನ್ನಿ ಆರೆಂಜ್ 

ಸ್ಕ್ವಾಟ್‌ಗಳ ಜೊತೆ ಸಿಟ್-ಅಪ್‌ ವ್ಯಾಯಾಮದ ಪ್ರಯೋಜನಗಳು: ಈ ವ್ಯಾಯಾಮವು ಕೋರ್ ಸ್ನಾಯುಗಳನ್ನು ಬಲಪಡಿಸುತ್ತದೆ. ನಾವು ನಡೆಯುವಾಗ, ಓಡುವಾಗ ಅಥವಾ ಯಾವುದೇ ದಿನನಿತ್ಯದ ಕೆಲಸವನ್ನು ಮಾಡುವಾಗ ನೇರವಾದ ಭಂಗಿಯನ್ನು ಕಾಪಾಡಿಕೊಳ್ಳಲು ನಮಗೆ ಈ ವ್ಯಾಯಾಮವು ಅನುವು ಮಾಡಿಕೊಡುತ್ತದೆ. ಸಿಟ್-ಅಪ್‌ ವ್ಯಾಯಾಮವನ್ನು ಯಾವುದೇ ವಯಸ್ಸಿನವರು ಕೂಡ ಮಾಡಬಹುದು.

ಚೆಂಡು ಎತ್ತುವ ವ್ಯಾಯಾಮದ ಪ್ರಯೋಜನಗಳು: ಈ ವ್ಯಾಯಾಮವು ನಮ್ಮ ದೇಹದಲ್ಲಿ ಇರುವ ಪ್ರಮುಖ ಅಂಗಗಳಾದ ಕೈ-ಕಾಲುಗಳಿಗೆ , ಭುಜಗಳಿಗೆ ಉತ್ತಮ ವ್ಯಾಯಾಮವನ್ನು ನೀಡುತ್ತವೆ. ಇದರಿಂದ ಉತ್ತಮವಾಗಿ ಚಲಿಸಲು ದೇಹವನ್ನು ಶಕ್ತಗೊಳಿಸುತ್ತದೆ.

ಹೀಗೆ ಇನ್ನಿತರ ವ್ಯಾಯಾಮಗಳನ್ನು ನಿಮ್ಮ ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವುದರಿಂದ ನೀವು ಪರಿಣಾಮಕಾರಿಯಾಗಿ ತೂಕ ನಷ್ಟವನ್ನು ಮಾಡಿಕೊಳ್ಳಬಹುದು.
Published by:Ashwini Prabhu
First published: