Benne Dosa Near Me: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ ಅದ್ಭುತ ರುಚಿಯ ಬೆಣ್ಣೆ ದೋಸೆ? ಇಲ್ಲಿದೆ ಮಾಹಿತಿ

Davanagere Benne Dose Near Me: ಬೆಂಗಳೂರಿನಲ್ಲಿ ಅದ್ಭುತ ಬೆಣ್ಣೆ ದೋಸೆ ಸಿಗುವ ಕೆಲ ಸ್ಥಳಗಳ ಪಟ್ಟಿಯನ್ನು ನೀಡಿದ್ದು, ಈ ವೀಕೆಂಡ್​ ಹೋಗಿ ಬನ್ನಿ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಾವಣಗೆರೆ (Davanagere) ಎಂದರೆ ತಕ್ಷಣ ನೆನಪಾಗುವುದು ಬೆಣ್ಣೆ ದೋಸೆ (Benne Dose) ಬೆಂಗಳೂರಿನಲ್ಲಿ (Bengaluru) ದಾವಣಗೆರೆ ಬೆಣ್ಣೆ ದೋಸೆಯನ್ನು ಹುಡುಕಿಕೊಂಡು ಜನರು ಹಲವಾರು ಸ್ಥಳಗಳಿಗೆ ಹೋಗುತ್ತಾರೆ. ಏರಿಯಾದಿಂದ ಏರಿಯಾಗೆ ರುಚಿಕರವಾದ ದೋಸೆಯನ್ನು (Dosa)  ಅರಸಿ ಹೋಗುತ್ತಾರೆ. ಯಾವುದೇ ಒಂದು ಆಹಾರ ಪದಾರ್ಥವಾಗಲಿ ಕೆಲವೊಂದು ಸ್ಥಳಗಳಲ್ಲಿ ಅದ್ಭುತವಾಗಿ ಸಿಗುತ್ತದೆ. ಅಲ್ಲಿ ಸಿಗುವ ಆ ಪದಾರ್ಥದ ರುಚಿಯನ್ನು ಹೊಗಳಲು ಪದಗಳು ಸಾಲದು. ಹಾಗೆಯೇ ಬೆಂಗಳೂರಿನಲ್ಲಿ ಅದ್ಭುತ ಬೆಣ್ಣೆ ದೋಸೆ ಸಿಗುವ ಕೆಲ ಸ್ಥಳಗಳ ಪಟ್ಟಿಯನ್ನು ನೀಡಿದ್ದು, ಈ ವೀಕೆಂಡ್​ ಹೋಗಿ ಬನ್ನಿ.  

ದಾವಣಗೆರೆ ಬೆಣ್ಣೆ ದೋಸೆ (ಒರಿಜಿನಲ್)

ಸಾಮಾನ್ಯವಾಗಿ ಬೆಣ್ಣೆ ದೋಸೆಯ ರುಚಿ ಎಲ್ಲೆಡೆ ಒಂದೇ ರೀತಿ ಇರುವುದಿಲ್ಲ. ನಿಮಗೆ ವಿಶಿಷ್ಟವಾದ ಹಾಗೂ ಒರಿಜಿನಲ್​  ರುಚಿ ಬೇಕು ಎಂದರೆ ಈ ಸ್ಥಳಕ್ಕೆ ಹೋಗಬಹುದು. ಇಲ್ಲಿ ದೋಸೆಯ ಮೇಲೆ ಮತ್ತೊಂದು ಚೂರು ಬೆಣ್ಣೆಯನ್ನು ಹಾಕಿ ಕೊಡುತ್ತಾರೆ. ಅಲ್ಲದೇ ದೋಸೆ ಜೊತೆ ಒಂದು ಕಪ್ ಕಾಫಿ ನಿಮ್ಮ ಬೆಳಗಿನ ತಿಂಡಿಗೆ ಪರ್ಫೆಕ್ಟ್​.

ವಿಳಾಸ: 25ನೇ ಮುಖ್ಯ ರಸ್ತೆ, ಪುಟ್ಲನಪಾಳ್ಯ, ಜಯನಗರ 9ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560011

ಮೊಬೈಲ್ ನಂಬರ್:  099866 62211

ಸಮಯ: 7am–10pm

ಶ್ರೀ ರಾಘವೇಂದ್ರ ದಾವಣಗೆರೆ

ಬೆಣ್ಣೆ ದೋಸೆಬೆಂಗಳೂರಿಗರಿಗೆ ದಾವಣಗೆರೆ ಬೆಣ್ಣೆ ದೋಸೆ ಎಂದರೆ ಅದೇನೋ ಪ್ರೀತಿ. ತಿಂಗಳಿಗೆ ಒಮ್ಮೆಯಾದರೂ ತಿನ್ನುತ್ತಾರೆ. ನೀವೇನಾದರೂ ಕನಕಪುರ ಹೋಗುವ ರಸ್ತೆಯ ಬಳಿ ಇದ್ದರೆ ಈ ಸ್ಥಳ ನಿಮಗೆ ಬೆಸ್ಟ್​. ಇಲ್ಲಿನ ಬೆಣ್ಣೆ ದೋಸೆಯನ್ನು ಒಮ್ಮೆ ಸವಿದರೆ ಪದೇ ಪದೇ ನೀವು ಇಲ್ಲಿಗೆ ಹೋಗುತ್ತೀರಿ.

ವಿಳಾಸ: 76, ಕನಕಪುರ ರಸ್ತೆ, ಸಾರಕ್ಕಿ ಗೇಟ್, 1 ನೇ ಹಂತ, ಜೆ.ಪಿ. ನಗರ, ಬೆಂಗಳೂರು, ಕರ್ನಾಟಕ 560078

ಮೊಬೈಲ್ ನಂಬರ್: 098451 14198

ಸಮಯ: 7am–10pm

ದಾವಣಗೆರೆ ಬೆಣ್ಣೆ ದೋಸೆ ಟಿಫನ್ ಸೆಂಟರ್

ಬೆಳಗ್ಗೆ ಮನೆಯಲ್ಲಿ ತಿಂಡಿ ಮಾಡಲು ಮನಸ್ಸಿಲ್ಲ ಎಂದರೆ ನೀವು ಇಲ್ಲಿಗೆ ಹೋಗಿ ಒಂದು ದೋಸೆ ತಿನ್ನಲೇಬೇಕು. ಈ ಜಾಗ ನಿಮ್ಮ ವೀಕೆಂಡ್​ ಆರಂಬಿಸಲು ಸೂಕ್ತ ಎನ್ನಬಹುದು. ಇಲ್ಲಿ ದೋಸೆಗೆ ನೀಡುವ ಚಟ್ನಿ ಬಹಳ ಇಷ್ಟವಾಗುತ್ತದೆ.

ಇದನ್ನೂ ಓದಿ: ಮಸ್ತ್​ ಬಾಳೆ ಎಲೆಯೂಟ ಸವಿಯಲು ಬೆಂಗಳೂರಿನ ಈ ಸ್ಥಳಗಳೇ ಬೆಸ್ಟ್​!

ವಿಳಾಸ: #270, 18ನೇ ಕ್ರಾಸ್, ಸಂಪಿಗೆ ರಸ್ತೆ, ಸಿಇಟಿ ಸಿಗ್ನಲ್, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 560003

ಮೊಬೈಲ್ ನಂಬರ್: 099008 47642

ಸಮಯ: 7am–8:30pm

ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೆ ದೋಸೆ

ಈ ಜಾಗದ ಬಗ್ಗೆ ಹೆಚ್ಚಿನ  ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಹೆಚ್ಚಿ ಆಹಾರ ಪ್ರಿಯರಿಗೆ ದಾವಣಗೆರೆ ಬೆಣ್ಣೆ ದೋಸೆ ಎಂದರೆ ತಕ್ಷಣ ಈ ಶ್ರೀ ಗುರು ಕೊಟ್ಟೂರೇಶ್ವರ ಸೆಂಟರ್​ ನೆನಪಾಗುತ್ತದೆ. ಫುಡ್ ಬ್ಲಾಗರ್​ಗಳ ಫೇವರೇಟ್ ಸ್ಥಳ ಇದು ಎನ್ನಬಹುದು. ವಿಳಾಸ: WHQC+H87, ಸುಬ್ಬರಂಗ ಚೆಟ್ಟಿ ರೋಡ್​, ಎನ್​ಆರ್​ ಕಾಲೋನಿ, ಬಸವನಗುಡಿ, ಬೆಂಗಳೂರು, ಕರ್ನಾಟಕ 560004

ಮೊಬೈಲ್​ ನಂಬರ್​: 094483 05384

ಸಮಯ: 7:30am–1:30pm, 4:30–10pm

 ಮಾರುತಿ ದಾವಣಗೆರೆ ಬೆಣ್ಣೆ ದೋಸೆ

ಬೆಂಗಳೂರಿನಲ್ಲಿ ಬೆಣ್ಣೆ ದೋಸೆ ಸಿಗುವ ಅದ್ಭುತ ಸ್ಥಳಗಳಲ್ಲಿ ಇದು ಸಹ ಒಂದು. ಗರಿ ಗರಿಯಾದ ದೋಸೆ ತಿನ್ನಲು ಜನ ಕಾದು ಕುಳಿತಿರುತ್ತಾರೆ. ವೀಕೆಂಡ್​ ಸಮಯದಲ್ಲಿ ಇಲ್ಲಿನ ಕ್ಯೂ ನಿಮಗೆ ರುಚಿ ಹೇಗಿದೆ ಎಂಬುದನ್ನು ಹೇಳುತ್ತದೆ.

ಇದನ್ನೂ ಓದಿ: ದಸರಾ ವೇಳೆ ಮೈಸೂರು ಕಣ್ತುಂಬಿಕೊಳ್ಳಲು ಭರ್ಜರಿ ಪ್ಯಾಕೇಜ್​, ಬುಕ್ಕಿಂಗ್ ಹೇಗೆ? ಇಲ್ಲಿದೆ ಡೀಟೇಲ್ಸ್​

ವಿಳಾಸ: 509/A, ವಾಟರ್ ಟ್ಯಾಂಕ್ ರಸ್ತೆ, 4ನೇ ಬ್ಲಾಕ್, ಬನಶಂಕರಿ 3ನೇ ಹಂತ, ಬನಶಂಕರಿ, ಬೆಂಗಳೂರು, ಕರ್ನಾಟಕ 560085

ಮೊಬೈಲ್ ನಂಬರ್: 090195 63485

ಸಮಯ: ​ 7:30am–12:30pm, 4:30–9:30pm
Published by:Sandhya M
First published: