Workout And Diet: ಮ್ಯಾನ್ ವರ್ಸಸ್ ವೈಲ್ಡ್ ಶೋನ ಬೇರ್ ಗ್ರಿಲ್ಸ್ ಡಯೆಟ್, ಜೀವನಶೈಲಿ ಹೀಗಿದೆ

ಮ್ಯಾನ್ ವರ್ಸಸ್ ವೈಲ್ಡ್ ಶೋನ ಹೆಸರಾಂತ ಬೇರ್ ಗ್ರಿಲ್ಸ್

ಮ್ಯಾನ್ ವರ್ಸಸ್ ವೈಲ್ಡ್ ಶೋನ ಹೆಸರಾಂತ ಬೇರ್ ಗ್ರಿಲ್ಸ್

ಬೇರ್ ಗ್ರಿಲ್ಸ್ ಸಾಹಸಮಯ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಬೇರ್ ಗ್ರಿಲ್ಸ್ ಲೈವ್ ಕೀಟ, ಚೇಳು, ಹಾವು ತಿನ್ನುವುದನ್ನು ನೋಡಿರಬಹುದು. ಕಾಡಿನಲ್ಲಿ ಶೂಟ್ ಮತ್ತು ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬೇರ್ ಗ್ರಿಲ್ಸ್ ಯಾವ ಆಹಾರ ಮತ್ತು ವ್ಯಾಯಾಮ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

ಅತ್ಯಂತ ಜನಪ್ರಿಯ (Famous) ಶೋ (Show) 'ಮ್ಯಾನ್ ವರ್ಸಸ್ ವೈಲ್ಡ್' (Man vs Wild) ನಿಂದ ವಿಶ್ವಾದ್ಯಂತ ಹೆಸರಾಗಿರುವ ಬೇರ್ ಗ್ರಿಲ್ಸ್ (Bear Grylls) ಹೆಸರು ಎಲ್ಲರಿಗೂ ಚಿರಪರಿಚಿತವಾಗಿದೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಪ್ರಧಾನಿ ಮೋದಿ, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿದಂತೆ ಹಾಲಿವುಡ್ ಸೆಲೆಬ್ರಿಟಿಗಳು ಬೇರ್ ಗ್ರಿಲ್ಸ್ ಅವರ ಶೋನಲ್ಲಿ ಭಾಗಿಯಾಗಿದ್ದಾರೆ. ಬೇರ್ ಗ್ರಿಲ್ಸ್ ಸಾಹಸಮಯ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಬೇರ್ ಗ್ರಿಲ್ಸ್ ಲೈವ್ ಕೀಟ, ಚೇಳು, ಹಾವು ತಿನ್ನುವುದನ್ನು ನೋಡಿರಬಹುದು. ಬೇರ್ ಗ್ರಿಲ್ಸ್ ಇತ್ತೀಚೆಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಅವರು ತಮ್ಮ ಡಯಟ್ ಮತ್ತು ವರ್ಕೌಟ್ ಬಗ್ಗೆ ಹೇಳಿದ್ದಾರೆ.


ಕಾಡಿನಲ್ಲಿ ಶೂಟ್ ಮಾಡುವ ಮತ್ತು ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬೇರ್ ಗ್ರಿಲ್ಸ್, ಅವರು ಸಾಮಾನ್ಯ ದಿನಗಳಲ್ಲಿ ಯಾವ ಆಹಾರ ಮತ್ತು ವ್ಯಾಯಾಮ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಯೋಣ.


ಬೇರ್ ಗ್ರಿಲ್ಸ್ ಬಗ್ಗೆ ಮಾಹಿತಿ


ಬೇರ್ ಗ್ರಿಲ್ಸ್ ಅವರ ನಿಜವಾದ ಹೆಸರು ಎಡ್ವರ್ಡ್ ಮೈಕೆಲ್ ಗ್ರಿಲ್ಸ್. ಅವರು ಲಂಡನ್ನಲ್ಲಿ 7 ಜೂನ್ 1974 ರಂದು ಜನಿಸಿದರು. ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಅಮೇರಿಕನ್ ಭಾಷೆ ಮಾತನಾಡುತ್ತಾರೆ. ಬಾಲ್ಯದಲ್ಲಿ ಬೇರ್ ಗ್ರಿಲ್ಸ್ ಸ್ಕೈಡೈವಿಂಗ್ ಕಲಿತರು. ಮತ್ತು ಕರಾಟೆಯಲ್ಲಿ ಕಪ್ಪು ಬೆಲ್ಟ್ ಪಡೆದರು. ಬೇರ್ ಗ್ರಿಲ್ಸ್ ಮೂರು ವರ್ಷ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ


ಬೇರ್ ಗ್ರಿಲ್ಸ್ ಯಾವ ರೀತಿಯ ಆಹಾರ ಸೇವನೆ ಮಾಡುತ್ತಾರೆ?


ಬ್ಯುಸಿನೆಸ್‌ ಇನ್ಸೈಡರ್ ಪ್ರಕಾರ, ಬೇರ್ ಗ್ರಿಲ್ಸ್ ಮೊದಲು ಸಸ್ಯಾಹಾರಿಯಾಗಿದ್ದರು. ಈಗ ಅವರು ಎಂದಿಗೂ ತರಕಾರಿ ಸೇವಿಸಲ್ಲ. ಯಾವಾಗಲೂ ಮಾಂಸಾಹಾರ ಸೇವನೆ ಮಾಡುತ್ತಾರೆ. ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.


ಸಂದರ್ಶನದಲ್ಲಿ ಬೇರ್ ಗ್ರಿಲ್ಸ್, ನಾನು ಮಾಂಸಾಹಾರ ಸೇವನೆ ಮಾಡಲು ಪ್ರಾರಂಭಿಸಿದ ನಂತರ ಕೆಂಪು ಮಾಂಸ, ಡೈರಿ ಉತ್ಪನ್ನ ಮತ್ತು ಹಣ್ಣು ಸೇವಿಸುತ್ತೇನೆ. ಒಣ ಹಣ್ಣು, ಧಾನ್ಯ, ಗೋಧಿ ಮತ್ತು ತರಕಾರಿ ಸೇವನೆಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಮಾಂಸಾಹಾರ, ಮೊಟ್ಟೆ, ಡೈರಿ ಉತ್ಪನ್ನ, ಬೆಣ್ಣೆ ಮತ್ತು ಹಣ್ಣು ತಿನ್ನುವುದಾಗಿ ಹೇಳಿದ್ದಾರೆ.


ಪ್ರತಿ ದಿನವೂ ಯಕೃತ್ತಿನ ಮಾಂಸ, ವಾರಕ್ಕೆ ಒಂದು ಅಥವಾ ಎರಡು ಬಾರಿ ಪಿಜ್ಜಾ, ಕರಿದ ಪದಾರ್ಥ  ಸೇವಿಸುತ್ತೇನೆ. ಎಮ್ಮೆಯ ಅಪಧಮನಿ ರಕ್ತ ಕುಡಿದಿದ್ದೇನೆ. ಹಸಿ ಯಕೃತ್ತು ಮತ್ತು ಹಸಿ ಹೃದಯ ಸೇವಿಸಿದ್ದಾಗಿ ಹೇಳಿದ್ದಾರೆ. ಆದರೆ ಈಗ ಅವರು ಹಸಿ ಮಾಂಸ ತಿನ್ನುವುದಿಲ್ಲ. ಬೇಯಿಸಿದ ಆಹಾರ ಮಾತ್ರ ತಿನ್ನುತ್ತಾರೆ.


COVID-19 ಇದ್ದಾಗ ಬಹಳಷ್ಟು ಜ್ಯೂಸ್ ಮತ್ತು ತರಕಾರಿ ಸೇವಿಸಿದೆ. ಇದರಿಂದ ಮೂತ್ರಪಿಂಡಗಳಲ್ಲಿ ನೋವುಂಟಾಗಿತ್ತು. ಈ ಸಮಸ್ಯೆ ನಿರ್ಜಲೀಕರಣ ಅಥವಾ ಸೋಡಿಯಂಯುಕ್ತ ಹೆಚ್ಚಿನ ಆಹಾರ ಸೇವನೆಯಿಂದ ಉಂಟಾಗುತ್ತದೆ. ತರಕಾರಿ ಹೆಚ್ಚು ಸೇವನೆ ಮಾನವ ದೇಹಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಗ್ರಿಲ್ಸ್.


ಬರ್ಗರ್‌ನಲ್ಲಿ ಚೀಸ್, ಮೊಟ್ಟೆ, ಒಂದು ಚಮಚ ಮೂಳೆ ಮಜ್ಜೆ, ಗ್ರೀಕ್ ಮೊಸರು, ಜೇನುತುಪ್ಪ ಮತ್ತು ಹಣ್ಣು ಗ್ರಿಲ್ಸ್ ತಿನ್ನುತ್ತಾರೆ. ನಂತರ ಕಿತ್ತಳೆ ರಸ ಸೇವಿಸುತ್ತಾರೆ.


ತಾಲೀಮು ಹೇಗಿದೆ?


48 ವರ್ಷದ ಬೇರ್ ಗ್ರಿಲ್ಸ್ ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಕಾರ್ಡಿಯೋ, ಟೆನ್ನಿಸ್, ವಾರದಲ್ಲಿ ಮೂರು ದಿನ 30-40 ನಿಮಿಷಗಳ ತೂಕದ ತರಬೇತಿ ಮಾಡುತ್ತಾರೆ. ಬೆಳಿಗ್ಗೆ 15 ನಿಮಿಷ ವಾರಕ್ಕೊಮ್ಮೆ ಯೋಗ ಮಾಡ್ತಾರೆ. 500 ಮೀಟರ್ ಓಟ, 25 ಪುಲ್-ಅಪ್‌ಗಳು, 50 ಪ್ರೆಸ್-ಅಪ್‌ಗಳು, 75 ಸ್ಕ್ವಾಟ್‌ಗಳು ಮತ್ತು 100 ಸಿಟ್-ಅಪ್‌ ಮಾಡುತ್ತಾರೆ.


ಕಾಡಿನಲ್ಲಿ ನಡೆಯುವುದು, ಬೆನ್ನಿನ ಮೇಲೆ ಭಾರ ಹೊತ್ತು ನಡೆಯುವುದರಿಂದ ನನ್ನ ವ್ಯಾಯಾಮ ಮತ್ತು ಜೀವನಕ್ರಮ ಮೂಳೆ ಮತ್ತು ಸ್ನಾಯುಗಳನ್ನು ಬಲವಾಗಿಸುತ್ತದೆ.


ದಿನನಿತ್ಯ ಮಾಂಸಾಹಾರ ಸೇವನೆ ಸರಿಯೇ?


ಹೆಚ್ಚು ನಾನ್ ವೆಜ್ ಸೇವನೆಯಿಂದ ಗ್ಯಾಸ್ ಸಂಬಂಧಿತ ಸಮಸ್ಯೆ, ನಿರ್ಜಲೀಕರಣ, ಬರುತ್ತೆ ಎಂಬುದು ತಜ್ಞರ ಅಭಿಪ್ರಾಯ. ತರಕಾರಿ ಸೇವನೆ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ, ಸಾವಿನ ಅಪಾಯ ಮತ್ತು ಇತರ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆಎಂದು ಸಂಶೋಧನೆ ಹೇಳಿದೆ.


ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು


ತರಕಾರಿಗಳು ಉತ್ತಮ ಮಾನಸಿಕ ಆರೋಗ್ಯ, ನಿದ್ರೆ, ಶಕ್ತಿ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತರಕಾರಿಗಳು, ಧಾನ್ಯಗಳು ಮತ್ತು ಬೀಜಗಳನ್ನು ಒಳಗೊಂಡಿರುವ ಆಹಾರ ತಿನ್ನುವುದು ತುಂಬಾ ಒಳ್ಳೆಯದು.

top videos
    First published: