Friendship: ಸ್ನೇಹ ಕಳೆದುಕೊಳ್ಳದೆ ಗೆಳೆಯರ ಬಳಿ ಸಾಲ ಕೇಳುವುದು ಹೇಗೆ? ಹೀಗೆ ಮಾತಾಡಿ

ಹಾಗಾದರೆ ಸ್ನೇಹಕ್ಕೆ ಯಾವುದೇ ರೀತಿ ಚ್ಯುತಿ ಬರದಂತೆ ಸಾಲ ಪಡೆಯುವುದು ಮತ್ತು ಕೊಡುವ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಲ(Loan) ಕೇಳಿ ಸ್ನೇಹ(Friendship) ಕಳೆದುಕೊಳ್ಳಬೇಡಿ ಅನ್ನೋ ಮಾತನ್ನು ಕೇಳಿರುತ್ತೀವಿ. ಹಲವು ಅಂಗಡಿಗಳಲ್ಲೂ ಇದನ್ನು ಬರೆದಿರುತ್ತಾರೆ. ಹೀಗೆ ಹಣದ ವಿಚಾರ ಬಂದ್ರೆ ಅತ್ಯಾಪ್ತರು ಸಹ ದೂರವಾಗಿ ಬಿಡ್ತಾರೆ. ಇನ್ನೂ ಅದೆಷ್ಟೋ ಸಂಬಂಧಗಳು(Relationship), ಗೆಳೆತನ(Friendship) ದುಡ್ಡಿನ ವಿಚಾರಕ್ಕೆ ದೂರವಾಗಿರುವ ಸುಮಾರು ಉದಾಹರಣೆಗಳು ನಮ್ಮ ಸುತ್ತ-ಮುತ್ತಲೂ ನಡೆಯುತ್ತವೆ. ಜೀವನದಲ್ಲಿ(Life) ಕೆಲವು ಅಗತ್ಯ ಸಂದರ್ಭದಲ್ಲಿ ಹಣದ ಕೊರತೆಯುಂಟಾದರೆ ಸಾಲ ಪಡೆಯುವ ಯೋಚನೆ ಹುಟ್ಟಿಕೊಳ್ಳುವುದು ಸಹಜ. ದೊಡ್ಡ ಮೊತ್ತದ ಹಣ ಆದರೆ ಬ್ಯಾಂಕ್(Bank) ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುತ್ತದೆ. ಕಡಿಮೆ ಮೊತ್ತದ ಸಾಲವಾದರೆ ನಮ್ಮ ಸ್ನೇಹಿತರು, ಹಿತೈಷಿಗಳ ಬಳಿ ತೆಗೆದುಕೊಳ್ಳುತ್ತೇವೆ.

“ಯಾರಾದರೂ ಗೆಳೆಯರು ಸಾಲ ಕೇಳಿದ್ರೆ ಇಲ್ಲಾ ಅನ್ನಲು ಮನಸ್ಸಾಗುವುದಿಲ್ಲ. ಸುಲಭವಾಗಿ ಹಣವಿಲ್ಲಅಂತಾ ಹೇಳಲು ಆಗದಿರುವ ಸಮಯದಲ್ಲಿ ತೊಂದರೆ ಇದ್ದರೂ ಸಹ ಸ್ನೇಹಿತರಿಗೆ ಹಣಕಾಸಿನಲ್ಲಿ ನೆರವಾಗಲು ಮನಸ್ಸು ಮಾಡುತ್ತೇವೆ. ಆದರೆ ಅದಕ್ಕೆ ಪ್ರತಿಯಾಗಿ ಅದೇ ಸ್ನೇಹಿತ ಕೊಟ್ಟ ಗಡುವಿನಲ್ಲಿ ಹಣ ಮರಳಿಸಿದರೆ ಸ್ನೇಹ ಚೆಂದವಾಗಿರುತ್ತದೆ.

ಅದೇ ಕೊಟ್ಟ ಹಣ ವಾಪಸ್ ಬರದೇ ಇದ್ದಲ್ಲಿ ಸ್ನೇಹಿತನ ಮೇಲೇ ಅಸಡ್ಡೆ ಶುರುವಾಗುತ್ತದೆ. ಹಣ ಮರಳಿಸು ಎಂಬ ಮಾತುಕತೆ ಆಗಾಗ ನಡೆಯುತ್ತಿರುತ್ತದೆ.ನಿನ್ನ ಹಣ ತೆಗೆದುಕೊಂಡು ಓಡಿಹೋಗಲ್ಲ, ಹಣದಂತಹ ಸಣ್ಣ ವಿಷಯಗಳಿಗಿಂತ ನಮ್ಮ ಸ್ನೇಹ ದೊಡ್ಡದಲ್ಲವೇ..? ಇಂತ ಮಾತುಗಳು ಕೇಳಿ ಬರ್ತವೆ. ಇವೆಲ್ಲಾ ವಿಕೋಪಕ್ಕೆ ಹೋದಾಗ ಅದೆಷ್ಟೋ ವರ್ಷದ ಸ್ನೇಹ ಸಾಲದ ವಿಚಾರಕ್ಕೆ ಬಲಿಯಾಗುತ್ತದೆ.

ಸ್ನೇಹದ ಮಧ್ಯೆ ಸಾಲ ಬರಬಾರದು ಅಂತೇನಿಲ್ಲ. ಆದರೆ ಇಬ್ಬರ ನಡುವಿನ ಹಣಕಾಸಿನ ವಿಚಾರ ಶುದ್ಧವಾಗಿರಬೇಕು. ಇಬ್ಬರೂ ಸ್ನೇಹವನ್ನು ಹಾಳು ಮಾಡಿಕೊಳ್ಳದೆ ಕೊಡುವ ಮತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಇದರಿಂದ ಸ್ನೇಹ ಸಾಲಕ್ಕೆ ಬಲಿಯಾಗುವುದಿಲ್ಲ.

ಇದನ್ನೂ ಓದಿ: Health Tips: ಡೇಂಜರ್ ಫಾರ್ ಹೆಲ್ತ್ ಆಗ್ತಿದೆ Work From Home! ಬೆನ್ನು, ಕುತ್ತಿಗೆ ನೋವಿಗೆ ಇಲ್ಲಿದೆ ಸೂಪರ್ ಟಿಪ್ಸ್

ಹಾಗಾದರೆ ಸ್ನೇಹಕ್ಕೆ ಯಾವುದೇ ರೀತಿ ಚ್ಯುತಿ ಬರದಂತೆ ಸಾಲ ಪಡೆಯುವುದು ಮತ್ತು ಕೊಡುವ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

ಸ್ನೇಹಕ್ಕೆ ಚ್ಯುತಿ ಬಾರದಂತೆ ಸಾಲ ಪಡೆಯುವ ಮತ್ತು ಕೊಡುವ ಕ್ರಮ ಹೀಗಿರಲಿ

1) ಸ್ಪಷ್ಟವಾದ ಟೈಮ್‌ಲೈನ್‌ಗಳನ್ನು ಹೊಂದಿಸಿ

ನಿಮಗೆ ಸಾಲ ನೀಡಲು ನಾನು ಸಂತೋಷ ಪಡುತ್ತೇನೆ, ಆದರೆ ನನಗೆ ನಿರ್ದಿಷ್ಟ ದಿನಾಂಕದೊಳಗೆ ಹಣವನ್ನು ಹಿಂತಿರುಗಿಸಬೇಕು ಎಂಬ ಗಡುವು ನೀಡಿ. ನಿಮ್ಮ ಫೋನ್ ಕ್ಯಾಲೆಂಡರ್‌ನಲ್ಲಿ ದಿನಾಂಕವನ್ನು ಗುರುತಿಸಿ ಮತ್ತು ಅವರೊಂದಿಗೆ ಈವೆಂಟ್ ಅನ್ನು ಹಂಚಿಕೊಳ್ಳಿ. ಕೆಲವು ಕಾರಣಗಳಿಂದ ಅವರು ಹಣವನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ, ನಿಮ್ಮೊಂದಿಗೆ ಸ್ಪಷ್ಟವಾಗಿ ಮಾತುಕತೆ ನಡೆಸುವಂತೆ ಮೊದಲೇ ತಿಳಿಸಿರಿ.

2) ನಿಮ್ಮ ಅಗತ್ಯಗಳಿಗೆ ಮೊದಲ ಆದ್ಯತೆ

ಸ್ನೇಹಿತರು ಹಣ ಕೇಳಿದರೆ ನಿಮ್ಮ ಕೈಯಲ್ಲಿ ಇದ್ದರೆ ಕೊಡಿ. ಆಗದಿದ್ದಲ್ಲಿ ನಿಮ್ಮ FD ಅನ್ನು ನಿಲ್ಲಿಸಿ ಅಥವಾ ಇನ್ಯಾವುದೋ ಉಳಿತಾಯ ಖಾತೆಯನ್ನು ಮುರಿದು ನೀಡಬೇಕೆಂದಿಲ್ಲ. ಸ್ನೇಹಿತರು ನಿಮ್ಮಿಂದ ಎಷ್ಟು ಹಣ ನೀರಿಕ್ಷಿಸುತ್ತಿದ್ದಾರೆ ಕೇಳಿಕೊಳ್ಳಿ. ನಿಮ್ಮ ಅಗತ್ಯತೆಗಳನ್ನು ನಿರ್ಲಕ್ಷಿಸುವುದು ಬೇಡ.

3) ಭರವಸೆ

ಹಣದ ವಿಚಾರದಲ್ಲಿ ಯಾವುದೇ ರೀತಿಯ ಅಸಮಾಧಾನವು ನನ್ನ ಮತ್ತು ನಿನ್ನ ಸಂಬಂದವನ್ನು ಹಾಳು ಮಾಡಬಾರದೆಂದು ಮೊದಲೇ ವಿವರಿಸಿರಿ. ಕೆಲವು ಮೌಖಿಕ ಒಪ್ಪಂದಗಳು ನಮ್ಮ ಸ್ನೇಹವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪರಸ್ಪರ ಭರವಸೆಗಳು ಸ್ನೇಹವನ್ನು ಗಟ್ಟಿಗೊಳಿಸುತ್ತದೆ.

ಇದನ್ನೂ ಓದಿ: Wedding Jewelry: ಕೃಷ್ಣನ ಪಚ್ಚೆಯ ಪೆಂಡೆಂಟ್​ನಿಂದ, ಬಂಗಾರದ ಚೋಕರ್​ವರೆಗೆ- ಮದುವೆ ಮನೆಗೆ ಹೊಸಾ ಬಗೆಯ ಆಭರಣಗಳು

4) ಹಣ ಮರಳಿ ಕೇಳುವುದು ತಪ್ಪಲ್ಲ

ಪ್ರತಿಯೊಬ್ಬರಿಗೂ, ಅನಿರೀಕ್ಷಿತ ವೆಚ್ಚದಂತ ಖರ್ಚುಗಳಿರುತ್ತವೆ. ನಿಮ್ಮ ಹಣವನ್ನು ಕೇಳುವಾಗ ದುಃಖಿಸಬೇಡಿ ಅಥವಾ ಕ್ಷಮೆಯಾಚಿಸಬೇಡಿ. ನೀನು ನನಗೆ ನೀಡಿದ ಗಡುವಿನಲ್ಲಿ ನನಗೆ ಹಣ ನೀಡಿದರೆ ನಿನ್ನ ಮೇಲಿನ ಗೌರವ ಹೆಚ್ಚುತ್ತದೆ ಎಂದು ಮೃದುವಾಗಿ ತಿಳಿಸಿ ಹೇಳಿ.

ವ್ಯವಹಾರ ಮತ್ತು ಸಂಬಂಧಗಳು ಬೇರೆಯಾಗಿದ್ದರೆ ಉತ್ತಮ. ಹಣಕ್ಕಾಗಿ ಪ್ರೀತಿ, ಸ್ನೇಹ ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. ಯಾರೊಂದಿಗೆ ಆಗಲಿ ಸಾಲದ ವಿಚಾರ ಶುದ್ಧವಾಗಿರಬೇಕು.
Published by:Latha CG
First published: