Sleep: ಕೆಲಸದ ಸಮಯದಲ್ಲಿ ನಿದ್ರೆ ಬರುತ್ತಿದ್ರೆ ಈ ಟಿಪ್ಸ್​ ಫಾಲೋ ಮಾಡಿ

ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನಿಮಗೆ ನಿದ್ರೆ ಬಂದರೆ ಅದನ್ನು ತಪ್ಪಿಸಲು ಇಲ್ಲಿವೆ ಕೆಲವು ಮಾರ್ಗಗಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧ್ಯಾಹ್ನದ(Afternoon) ಹೊತ್ತು, ಊಟವಾಗಿರುತ್ತದೆ, ಕಿಟಕಿಯ(Window) ಹೊರಗಡೆ ಸ್ವಲ್ಪ ಬಿಸಿಲು ಮತ್ತು ಕಚೇರಿಯಲ್ಲಿ ಎಸಿಯ ತಂಪಾದ ವಾತಾವರಣದಲ್ಲಿ ಒಂದೇ ಕಡೆಯಲ್ಲಿ ಕೂತು ತಮ್ಮ ಕಣ್ಣುಗಳನ್ನು(Eyes) ಸ್ವಲ್ಪವೂ ಮಿಟುಕಿಸದೆ ಕೆಲಸ ಮಾಡುತ್ತಿರುವಾಗ ಕಣ್ಣಿಗೆ ಸ್ವಲ್ಪ ಸುಸ್ತು ಅನ್ನಿಸಿ ನಿದ್ದೆ(Sleep) ಬರುವುದು ಸಹಜವಾದ ವಿಷಯ. ಹೀಗೆ ಅನೇಕರು ಬೆಳಗ್ಗೆಯ(Morning) ಸಮಯದಲ್ಲಿ ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ ಸಹ ಮಧ್ಯಾಹ್ನದ ಹೊತ್ತಿನಲ್ಲಿ ಸ್ವಲ್ಪ ನಿದ್ದೆಗೆ ಬೇಡ ಬೇಡ ಎಂದರೂ ಜಾರುವುದನ್ನು ನಾವು ನೋಡಿರುತ್ತೇವೆ.

ಬಹಳಷ್ಟು ಜನರು ಕಚೇರಿ ಸಮಯದಲ್ಲಿ, ಅದರಲ್ಲೂ ಮಧ್ಯಾಹ್ನದ ಹೊತ್ತಿನಲ್ಲಿ ತೂಕಡಿಸುವುದನ್ನು ನಾವು ನೋಡಿರುತ್ತೇವೆ, ಮಧ್ಯಾಹ್ನದ ಒಂದೆರಡು ಗಂಟೆಗಳು ಅರೆ ನಿದ್ರೆಯ ಅವಸ್ಥೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದಕ್ಕೆ ಅನೇಕ ಕಾರಣಗಳಿವೆ, ಮುಖ್ಯವಾಗಿ ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದೆ ಇದ್ದರೆ ನಮಗೆ ದಿನವಿಡೀ ನಿದ್ರೆ ಬರುತ್ತದೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಆಲಸ್ಯ ಮತ್ತು ತುಂಬಾ ಸಮಯದವರೆಗೆ ಒಂದೇ ಸ್ಥಳದಲ್ಲಿ ಕೂತು ಗಂಟೆಗಟ್ಟಲೆ ಕಂಪ್ಯೂಟರ್ ಪರದೆಯನ್ನು ಕಣ್ಣು ಮಿಟುಕಿಸದೆ ನೋಡುತ್ತಾ ಕೆಲಸ ಮಾಡುತ್ತಿದ್ದಾಗ ಸಹ ಕಣ್ಣಿಗೆ ಆಯಾಸ ಅನ್ನಿಸಿ ನಿದ್ರೆ ಬರುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ: Weight Loss Tips: ತೂಕ ಇಳಿಸಲು ಈ ಡಿಟಾಕ್ಸ್ ಡ್ರಿಂಕ್ಸ್ ಟ್ರೈ ಮಾಡಿ

ಈ ರೀತಿಯಾಗಿ ಮಧ್ಯಾಹ್ನದ ನಿಮ್ಮ ನಿದ್ರೆ ಕಚೇರಿಯ ಕೆಲಸದ ಮೇಲೆ ಭಾರಿ ಪರಿಣಾಮ ಬೀರಬಹುದು. ನಿಮ್ಮ ಮೇಲಾಧಿಕಾರಿಗಳಿಂದ ನಿಮಗೆ ಎಚ್ಚರಿಕೆಗಳು ಸಹ ಸಿಗಬಹುದಾದ ಎಲ್ಲಾ ಅವಕಾಶಗಳು ಇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆದ್ದರಿಂದ, ಆರೋಗ್ಯಕರ ದೇಹ ಕಾಪಾಡಿಕೊಳ್ಳಲು ಮತ್ತು ಮರುದಿನದ ವೇಳಾಪಟ್ಟಿಯನ್ನು ಸರಿಯಾಗಿ ನಿಭಾಯಿಸಲು ರಾತ್ರಿ ಹೊತ್ತು ಸುಮಾರು 7 ರಿಂದ 8 ಗಂಟೆಗಳ ಕಾಲ ಮಲಗುವುದು ತುಂಬಾನೇ ಮುಖ್ಯವಾಗಿರುತ್ತದೆ. ಆದರೆ ಶಿಫಾರಸು ಮಾಡಿದ ಗಂಟೆಗಳ ಕಾಲ ಮಲಗಿದ ನಂತರವೂ, ಈ ಸಮಸ್ಯೆ ಮುಂದುವರಿದರೆ, ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನೀವು ಮನೆಯಲ್ಲಿದ್ದು ಮಧ್ಯಾಹ್ನದ ಹೊತ್ತಿನಲ್ಲಿ ಮಲಗಿದರೆ ಯಾರು ಏನು ಅನ್ನುವುದಿಲ್ಲ. ಆದರೆ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನಿಮಗೆ ನಿದ್ರೆ ಬಂದರೆ ಅದನ್ನು ತಪ್ಪಿಸಲು ಇಲ್ಲಿವೆ ಕೆಲವು ಮಾರ್ಗಗಳು.

1. ಕಚೇರಿಯಲ್ಲಿ ಕೆಲವು ನಿಮಿಷಗಳ ಕಾಲ ನಡೆದಾಡಿ

ಕಚೇರಿ ಸಮಯದಲ್ಲಿ ನಿದ್ದೆ ಬಂದರೆ ಕಚೇರಿ ಆವರಣದಲ್ಲಿ ಅಥವಾ ಕ್ಯಾಂಟೀನ್ ಪ್ರದೇಶದಲ್ಲಿ ಸ್ವಲ್ಪ ದೂರ ನಡೆದಾಡಿ. ಜನರು ಸಾಮಾನ್ಯವಾಗಿ ಕೆಲಸದ ಸಮಯದಲ್ಲಿ ನಿದ್ರೆಯನ್ನು ತಡೆಯಲು ಕಾಫಿ ಕುಡಿಯುತ್ತಾರೆ. ಆದರೆ ಕೆಲವು ನಿಮಿಷಗಳ ಕಾಲ ನಡೆಯುವುದು ನಿಮ್ಮ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ನಡಿಗೆಯು ನಿಮ್ಮ ಮೆದುಳಿನಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸುವುದರಿಂದ ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

2. ಸಾಕಷ್ಟು ಬೆಳಕಿರುವ ಜಾಗದಲ್ಲಿ ಕೂತು ಕೆಲಸ ಮಾಡಿ

ಕಚೇರಿಯಲ್ಲಿ ನಿದ್ರೆ ಬರಲು ಒಂದು ಪ್ರಮುಖವಾದ ಕಾರಣವೆಂದರೆ ನಿಮ್ಮ ಸುತ್ತಲೂ ಸರಿಯಾದ ಬೆಳಕಿನ ಕೊರತೆ ಇರುವುದು. ಸೂರ್ಯನ ಬೆಳಕು ಹೆಚ್ಚಾಗಿ ಬೀಳುವ ಜಾಗದಲ್ಲಿ ಅಥವಾ ಕಿಟಕಿಯ ಬಳಿ ಕುಳಿತು ಕೆಲಸ ಮಾಡಿರಿ. ಕಡಿಮೆ ಬೆಳಕಿನಲ್ಲಿ ಕೂತು ಕೆಲಸ ಮಾಡುವುದರಿಂದ ನಿಮಗೆ ನಿದ್ರೆ ಬರಬಹುದು.

3. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಬಿಡಿ

ನಿದ್ರೆ ಬಂದಾಗ ದೀರ್ಘವಾಗಿ ಉಸಿರಾಡುವುದು ನಿಮ್ಮ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹೃದಯ ಮತ್ತು ಮನಸ್ಸಿಗೆ ಪರಿಹಾರವನ್ನು ನೀಡುತ್ತದೆ. ಆಮ್ಲಜನಕವನ್ನು ಮಾನವ ದೇಹದಲ್ಲಿ ಶಕ್ತಿಯ ಮಟ್ಟಗಳ ನಿಯಂತ್ರಕವೆಂದು ಪರಿಗಣಿಸುವುದರಿಂದ ಇದು ನಿಮ್ಮ ದೇಹದಲ್ಲಿ ತಾಜಾತನ ತರುತ್ತದೆ ಮತ್ತು ನಿದ್ರೆಯನ್ನು ಹೋಗಲಾಡಿಸುತ್ತದೆ.

ಇದನ್ನೂ ಓದಿ: Health Tips: ಪೈನಾಪಲ್ ಸೇವನೆಯಿಂದ ಕಡಿಮೆಯಾಗುತ್ತೆ ಮೊಡವೆ ಸಮಸ್ಯೆ, ಮಾನಸಿಕ ಒತ್ತಡ

4. ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಿ

ಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ, ನಿದ್ರೆಯ ಅವಧಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಕಣ್ಣುಗಳ ಮೇಲೂ ಸಹ ಪರಿಣಾಮ ಬೀರುತ್ತದೆ. ಈ ಪರದೆಯಿಂದ ಹೊರಸೂಸುವ ಕಿರಣಗಳು ನಿಮ್ಮ ಕಣ್ಣುಗಳನ್ನು ಹಾನಿಮಾಡುತ್ತವೆ. ಯಾವುದೇ ಎಲೆಕ್ಟ್ರಾನಿಕ್ ಸಾಧನದಲ್ಲಿ ಕೆಲಸ ಮಾಡುವಾಗ ಉತ್ತಮ ಗುಣಮಟ್ಟದ ಲೆನ್ಸ್‌ ಬಳಸಿ.
Published by:Latha CG
First published: