Skin Care Tips: ರಾತ್ರಿ ಮಲಗುವ ಮುನ್ನ ನಿಮ್ಮ ತ್ವಚೆಯ ಆರೈಕೆ ಹೀಗಿರಲಿ..!

ರಾತ್ರಿ ಕೆಲವು ನಿಯಮಗಳನ್ನು ಚರ್ಮದ ಆರೈಕೆಗೆ ಅಳವಡಿಸಿಕೊಂಡರೆ ಸೌಂದರ್ಯದ ಹಾನಿ ಆಗುವುದನ್ನು ತಪ್ಪಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಂದರವಾಗಿ (Beautiful) ಕಾಣಬೆಂಕೆಂದರೆ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ದೀರ್ಘ ಕಾಲದವರೆಗೆ ಪಾಲಿಸಬೇಕು. ನಾವು ಹಗಲಿನಲ್ಲಿ (Day Time) ಇಲ್ಲ ಹೊರಗೆ ಎಲ್ಲಾದರೂ ಹೋಗಬೇಕಾದರೆಹೇಗೆಲ್ಲಾ ನಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುತ್ತೆವೋ ಹಾಗೆ ರಾತ್ರಿ ಮಲಗುವ ಮುನ್ನಕಾಳಜಿ (Care) ವಹಿಸುವುದು ಅಷ್ಟೇ ಉತ್ತಮ. ಹಾಗಿದ್ದಲ್ಲಿ ಮಾತ್ರ ನಮ್ಮ ಮುಖದ ಅಂದ, ಹೊಳಪನ್ನು ಕಾಪಾಡಿಕೊಳ್ಳಬಹುದು. ಕೆಲವರು ಹಗಲಿನಲ್ಲಿ ಮಾತ್ರ ಸ್ಕಿನ್ ಆರೈಕೆ (Skin care) ಮಾಡಿ ರಾತ್ರಿಯಲ್ಲಿ ಸುಮ್ಮನಾಗಿ ಬಿಡುತ್ತಾರೆ. ಇದರಿಂದಾಗಿ ಮುಖದಲ್ಲಿ ಮೊಡವೆಗಳು (Pimples) ಇತ್ಯಾದಿ ಸಮಸ್ಯೆ ಉಂಟಾಗಬಹುದು.

ರಾತ್ರಿಯಲ್ಲಿ, ನಾವು ನಿದ್ದೆ ಮಾಡುವಾಗ, ನಮ್ಮ ಚರ್ಮವೂ ಸಹ ವಿಶ್ರಾಂತಿ ಪಡೆಯುತ್ತದೆ ಮತ್ತು ಅದು ಹಾಳಾದ ಭಾಗವನ್ನು ರಿಪೇರಿ ಮಾಡಿಕೊಂಡು ಮತ್ತೆ ಅದೇ ಜಾಗದಲ್ಲಿ ಹೋದ ಚರ್ಮವನ್ನು ಪುನರುತ್ಪಾದಿಸುತ್ತದೆ. ಆದ್ದರಿಂದ ಬೆಳಗ್ಗೆಗಿಂತ ರಾತ್ರಿ ಪರಿಪೂರ್ಣ ರಕ್ಷಣೆಯ ದಿನಚರಿ ಬಹಳ ಅವಶ್ಯಕ. ಅದಕ್ಕಾಗಿ ರಾತ್ರಿ ಕೆಲವು ನಿಯಮಗಳನ್ನು ಚರ್ಮದ ಆರೈಕೆಗೆ ಅಳವಡಿಸಿಕೊಂಡರೆ ಸೌಂದರ್ಯದ ಹಾನಿ ಆಗುವುದನ್ನು ತಪ್ಪಿಸಬಹುದು.

1) ಮಲಗುವ ಮುನ್ನ ಮೇಕಪ್ ರಿಮೂವ್ ಮಾಡಿ

ಮನೆಯ ಹೊರಗಡೆ ಕಾಲೇಜ್, ಆಫೀಸ್, ಶಾಪಿಂಗ್, ಸಿನಿಮಾ, ಯಾವುದಾದರೂ ಶುಭ ಸಮಾರಂಭ ಅಥವಾ ಇನ್ನೆಲ್ಲಿಗಾದರೂ ಹೋದಾಗ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳಲು, ಮುಖದ ಮೇಲಿನ ಮೊಡವೆ ಕಲೆಗಳನ್ನು ಮುಚ್ಚಲು ಮೇಕ್ ಅಪ್ ಮಾಡಿಕೊಳ್ಳುತ್ತಾರೆ. ಹೊರಗಡೆ ಅಲ್ಲಿ ಇಲ್ಲಿ ಸುತ್ತಾಡಿ ನೀವು ಎಷ್ಟೇ ದಣಿದಿದ್ದರೂ ಮನೆಗೆ ಬಂದ ಮೇಲೆ ನಿಮ್ಮ ಮೇಕಪ್‌ನೊಂದಿಗೆ ಮಾತ್ರ ಎಂದಿಗೂ ಮಲಗಬೇಡಿ. ನಿಮ್ಮ ಕಣ್ಣುಗಳಲ್ಲಿರುವ ಕಾಡಿಗೆ, ತುಟಿಗಳ ಮೇಲೆ ಲಿಪ್ ಸ್ಟಿಕ್‌ನ ಸಣ್ಣ ಸಣ್ಣ ಕಲೆ ಗಳಿದ್ದರೂ ಸಹ ಅದನ್ನೂ ತೆಗೆದುಬಿಡಿ. ಮಲಗುವ ಮುನ್ನ ಚೆನ್ನಾಗಿ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದಾಗಿ ನಮ್ಮ ಸ್ಕಿನ್ ಸಲೀಸಾಗಿ ಗಾಳಿ ತೆಗೆದುಕೊಳ್ಳಲು ಸಹಾಯವಾಗುತ್ತದೆ.

ಇದನ್ನೂ ಓದಿ: Blood Donation: ರಕ್ತದಾನ ಮಾಡುವ ಮುನ್ನ ಹಾಗೂ ರಕ್ತದಾನ ಮಾಡಿದ ಬಳಿಕ ತಪ್ಪದೇ ಈ ಕೆಲಸ ಮಾಡಿ

2) ಹೆಚ್ಚು ಹೆಚ್ಚು ನೀರು ಸೇವನೆ

ನಮ್ಮ ಚರ್ಮದ ಆರೈಕೆಯಲ್ಲಿ ನೀರಿನ ಪಾತ್ರ ಬಹಳ ದೊಡ್ಡದು. ಹೆಚ್ಚು ಹೆಚ್ಚು ನೀರಿನ ಸೇವನೆ ನಮ್ಮ ಅಂದವಲ್ಲದೇ ಆರೋಗ್ಯಕ್ಕೆ ಒಳ್ಳೆಯದು. ಪಾರ್ಟಿ ಅಥವಾ ಬೇರೆ ಬೇರೆ ಸಮಯದಲ್ಲಿ ಆಲ್ಕೋಹಾಲ್, ಕಾಕ್‌ಟೇಲ್‌ಗಳ ಸೇವನೆಯು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಅದರ ಪರಿಣಾಮವು ಚರ್ಮದ ಮೇಲೆ ಬೀರುತ್ತದೆ. ಆಲ್ಕೋಹಾಲ್ ಚರ್ಮದ ರಂಧ್ರಗಳನ್ನು ಹಿಗ್ಗಿಸುತ್ತದೆ, ಇದು ಬ್ಲ್ಯಾಕ್‌ಹೆಡ್‌ಗಳು, ವೈಟ್‌ಹೆಡ್‌ಗಳಿಗೆ ಕಾರಣವಾಗುತ್ತದೆ. ಹೀಗಾಗಿ ಆಲ್ಕೋಹಾಲ್ ಸೇವಿಸಿದ್ದಲ್ಲಿ ಮಲಗುವ ಮುನ್ನ ಹೆಚ್ಚು ನೀರು ಕುಡಿಯಲು ಮರೆಯಬೇಡಿ.

3) ಫೇಸ್ ಸೀರಮ್ ಬಳಸಿ

ಫೇಸ್ ಸೀರಮ್‌ಗಳು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿವೆ. ಇವುಗಳನ್ನು ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ದಿನಕ್ಕೆ 2 ಬಾರಿ ಮುಖಕ್ಕೆ ಹಚ್ಚಿಕೊಳ್ಳಬೇಕು. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತಹ ಸೂಕ್ತವಾದ ಸೀರಮ್ ಅನ್ನು ಆರಿಸಿಕೊಳ್ಳುವುದು ಅಗತ್ಯ. ಫೇಸ್ ಸೀರಮ್‌ಗಳು ನಮ್ಮ ಚರ್ಮವನ್ನು ತಾಜಾ ಮತ್ತು ಕಾಂತಿಯುತವಾಗಿರಿಸುತ್ತವೆ.. ವಿಟಮಿನ್ ಸಿ (Vitamin C) ಜೊತೆಗೆ ಹೈಲುರಾನಿಕ್ ಆಮ್ಲ ಹೊಂದಿರುವ ಮುಖದ ಸೀರಮ್‌ಗಳು ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಬೆಳಗ್ಗೆ ಮಾತ್ರವಲ್ಲದೇ ಮಲಗುವ ಮುನ್ನ ಕೂಡ ಹಚ್ಚಿಕೊಳ್ಳುವುದು ಉತ್ತಮ.

ಇದನ್ನೂ ಓದಿ: Corona 3rd wave: ಮನೆ ಮನೆಗಳಲ್ಲೂ ಕಾಡ್ತಿದೆ ಕೊರೋನಾ ಭೀತಿ.. ನೆಗಡಿ, ಕೆಮ್ಮಿಗೆ ಸಿಕ್ಕ ಸಿಕ್ಕ ಮಾತ್ರೆ ತಿನ್ನಬೇಡಿ!

4) ಮುಖದ ಕ್ರೀಮ್

ಫೇಸ್ ಸೀರಮ್ ಮತ್ತು ಕ್ರೀಮ್ ತ್ವಚೆಯ ಆರೈಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತೇವೆ. ಫೇಸ್ ಸೀರಮ್ ತೇವಾಂಶವನ್ನು ಒದಗಿಸಿದರೆ, ಫೇಸ್ ಕ್ರೀಮ್ ತೇವಾಂಶವನ್ನು ಲಾಕ್ ಮಾಡುತ್ತದೆ. ಸೌಂದರ್ಯ ಮಾರುಕಟ್ಟೆಯಲ್ಲಿ ಲಭಿಸುವ ಮುಖದ ಕ್ರೀಮ್‌ಗಳ ಸಮೃದ್ಧಿಯಿಂದ ತುಂಬಿದ್ದರೂ, ಕುಂಕುಮಡಿ ತೈಲಂ ಆಧಾರಿತ ಕ್ರೀಮ್‌ಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ. ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದ್ದು, ಶುಷ್ಕ ಮತ್ತು ಸೂಕ್ಷ್ಮ ಚರ್ಮಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿದೆ. ಮಲಗುವ ಮುನ್ನ ಮೇಕಪ್ ತೆಗೆದು ಇವುಗಳನ್ನೆಲ್ಲಾ ಹಚ್ಚಿಕೊಳ್ಳುವುದರಿಂದ ಮೊಡವೆ ಮತ್ತು ಕಲೆಗಳ ಸಾಧ್ಯತೆಗಳನ್ನು ತಳ್ಳಿಹಾಕುವುದಲ್ಲದೇ ತ್ವಚೆಯ ಹೊಳಪನ್ನು ಹೆಚ್ಚಿಸಿ ನಮ್ಮನ್ನು ಸುಂದರವಾಗಿಸುತ್ತದೆ. ಮೇಲಿನ ಕ್ರಮಗಳ ಜತೆಗೆ ಅಲೊವೇರಾ ಜೆಲ್, ಫೇಸ್ ಕ್ಲೆನ್ಸರ್, ಟೋನರ್‌ಗಳನ್ನು ಸಹ ಮಲಗುವಾಗ ಉಪಯೋಗಿಸಬಹುದು. ಇದರೊಟ್ಟಿಗೆ ಉತ್ತಮ ಆಹಾರ ಕ್ರಮ ಕೂಡ ಚರ್ಮದ ಆರೋಗ್ಯಕ್ಕೆ ಸಹಕರಿಸುತ್ತದೆ.
Published by:Latha CG
First published: