Farting Remedy: ಅತಿಯಾದ ಹೂಸಿಗೆ ಕಾರಣ ಇದಂತೆ, ಹೀಗೆ ಮಾಡಿದ್ರೆ ಸಾಕು ಅದಕ್ಕೆ ಪರಿಹಾರ ಸಿಗುತ್ತೆ

ಫಾರ್ಟಿಂಗ್ ಆರೋಗ್ಯಕರವಾಗಿದೆ, ಏಕೆಂದರೆ ಇದು ನಮ್ಮ ದೇಹದಲ್ಲಿನ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಸ್‌ ಹೊರಬರದೇ ಇದ್ದರೆ ಹೊಟ್ಟೆಯುಬ್ಬರ, ನೋವಿನಂತಹ (Pain) ಲಕ್ಷಣಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಗ್ಯಾಸ್ ಸಮಸ್ಯೆಯು ಸಾಮಾನ್ಯಕ್ಕಿಂತ ಹೆಚ್ಚು ನಿಮ್ಮನ್ನು ಕಾಡುತ್ತಿದ್ದರೆ, ಫಾರ್ಟಿಂಗ್ ನಿಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಫಾರ್ಟಿಂಗ್ (Farting) ಅಥವಾ ಹೂಸು ಬಿಡುವುದು (ಗುದದ್ವಾರದಿಂದ ವಾಯು ವಿಸರ್ಜಿಸುವಿಕೆ ಅಥವಾ ಸಡಿಲಿಸುವಿಕೆ) ಎಂದರೆ ಹೆಚ್ಚಿನ ಜನರಿಗೆ ಮುಜುಗರದ ವಿಚಾರ. ಹೊಟ್ಟೆಯಿಂದ ಹೊರಬರುವ ಗ್ಯಾಸ್‌ (Gas) ಆರೋಗ್ಯಕ್ಕೆ ಉತ್ತಮವಾದರೂ (Healthy), ಇದರ ಶಬ್ದ, ವಾಸನೆ ಮುಜುಗರ ಮತ್ತು ಅಸಹ್ಯವಾಗಿರುವಂತದ್ದು. ಫಾರ್ಟಿಂಗ್ ಆರೋಗ್ಯಕರವಾಗಿದೆ, ಏಕೆಂದರೆ ಇದು ನಮ್ಮ ದೇಹದಲ್ಲಿನ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಸ್‌ ಹೊರಬರದೇ ಇದ್ದರೆ ಹೊಟ್ಟೆಯುಬ್ಬರ, ನೋವಿನಂತಹ (Pain) ಲಕ್ಷಣಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಗ್ಯಾಸ್ ಸಮಸ್ಯೆಯು ಸಾಮಾನ್ಯಕ್ಕಿಂತ ಹೆಚ್ಚು ನಿಮ್ಮನ್ನು ಕಾಡುತ್ತಿದ್ದರೆ, ಫಾರ್ಟಿಂಗ್ ನಿಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಹೈದ್ರಾಬಾದ್‌ನ ಕಾಮಿನೇನಿ ಹಾಸ್ಪಿಟಲ್ಸ್‌ನ ಹಿರಿಯ ಜನರಲ್ ವೈದ್ಯ ಡಾ.ಜೆ.ಸತ್ಯನಾರಾಯಣ ಅವರು ಒಬ್ಬರು ಹೂಸು ಬಿಡಲು ಕಾರಣವೇನು ಮತ್ತು ಅದನ್ನು ಹೇಗೆ ನಿಲ್ಲಿಸಬಹುದು ಎಂಬುದನ್ನು ತಿಳಿಸಿದ್ದಾರೆ.

ಮೊದಲಿಗೆ ಹೂಸು ಹೇಗೆ ಉತ್ಪಾದನೆಯಾಗುತ್ತದೆ ಎಂಬುದನ್ನು ನೋಡುವುದಾದರೆ, ಜೀರ್ಣಕ್ರಿಯೆ ಮತ್ತು ಉಸಿರಾಟದಿಂದ ಸಣ್ಣ ಕರುಳಿನಲ್ಲಿ ಅನಿಲಗಳ ಸಂಗ್ರಹವಾದಾಗ ಅನಿಲ ಅಥವಾ ವಾಯು ಎಂದು ಕರೆಯಲ್ಪಡುವ ಹೂಸು ಬಿಡುಗಡೆಯಾಗುತ್ತದೆ. ಇದು ಹೆಚ್ಚುವರಿ ತೇಗು ಅಥವಾ ಹೂಸಿನ ರೂಪದಲ್ಲಿ ಬಿಡುಗಡೆಯಾಗುತ್ತದೆ.

ವಾಯು ಏಕೆ ಉಂಟಾಗುತ್ತದೆ?
“ಸೂಕ್ತವಾದ ಆಹಾರ ಅಗೆಯುವಿಕೆ, ಕಾರ್ಬೊನೇಟೆಡ್ ಪಾನೀಯಗಳ ಕೊರತೆ ಅಥವಾ ಟೈಪ್ 2 ಡಯಾಬಿಟಿಸ್, ಸೆಲಿಯಾಕ್ ಡಿಸೀಸ್, ಅಥವಾ ಈ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಯಕೃತ್ತಿನ ಕಾಯಿಲೆಗಳು ಅತಿಯಾದ ಹೂಸುಬಿಡುವಿಕೆಗೆ ಕಾರಣವಾಗುತ್ತವೆ" ಎಂದು ವೈದ್ಯರು ತಿಳಿಸಿದ್ದಾರೆ.

ಹೆಚ್ಚಿನ ಹೂಸುಗಳು ವಾಸನೆಯಿಲ್ಲದವು ಮತ್ತು ಇನ್ನೂ ಕೆಲವು ವಾಸನೆಯಿಂದ ಕೂಡಿರುತ್ತವೆ. ಕೆಲವು ಯಾವುದೇ ಸದ್ದನ್ನು ಉಂಟುಮಾಡುವುದಿಲ್ಲ. ಇನ್ನೂ ಕೆಲವರು ಹೂಸು ಬಿಟ್ಟರೆ ಸದ್ದು ಕೇಳಿಸುತ್ತದೆ. ವಾಯು ಸಾಮಾನ್ಯಕ್ಕಿಂತ ಕೆಟ್ಟದಾಗಿದ್ದರೆ, ತಿನ್ನುವ ಆಹಾರದ ಬಗ್ಗೆ ಗಮನವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಹೂಸಿಗೆ ಕಾರಣವಾಗುವ ಇತರೆ ಅಂಶಗಳು
ವೈದ್ಯರಾದ ಸತ್ಯನಾರಾಯಣ್‌ ವಿವರಿಸಿದ ಕಾರಣಗಳ ಜೊತೆಗೆ ಈ ಕೆಳಗಿನ ಕಾರಣಗಳು ಸಹ ಪ್ರಮುಖವಾಗಿ ವಾಯುವಿಗೆ ಕಾರಣವಾಗುತ್ತದೆ.

1. ಅತಿಯಾಗಿ ತಿನ್ನುವುದು
ಆರೋಗ್ಯಕರ ಜೀವನಕ್ಕೆ ಮಿತವಾಗಿ ತಿನ್ನುವುದು ಯಾವಾಗಲೂ ಉತ್ತಮ ಎನ್ನುತ್ತಾರೆ ತಜ್ಞರು. ಕಡಿಮೆ ತಿನ್ನುವುದು ಜೀರ್ಣ ಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ. ಅತಿಯಾದ ಆಹಾರ ಸೇವನೆ ಬೊಜ್ಜು, ಫಾರ್ಟಿಂಗ್‌ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

2. ಆಹಾರವನ್ನು ಜಗಿಯದಿರುವುದು
ಕಡಿಮೆ ತಿನ್ನುವುದರ ಜೊತೆಗೆ, ಸರಿಯಾದ ರೀತಿಯಲ್ಲಿ ಆಹಾರ ತಿನ್ನುವುದು ಉತ್ತಮ. ಆಹಾರವನ್ನು ಚೆನ್ನಾಗಿ ಜಗಿದು, ಅಗೆದು ತಿನ್ನುವುದು ಆರೋಗ್ಯಕ್ಕೆ ಉತ್ತಮ. ಬೇಗನೆ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಗಾಳಿಯು ಪ್ರವೇಶಿಸುವ ಸಾಧ್ಯತೆಗಳಿವೆ, ಇದು ನಿಮ್ಮ ಗ್ಯಾಸ್‌ ಗೆ ನೇರ ಕಾರಣವಾಗುತ್ತದೆ.

3. ಧೂಮಪಾನ
ಹೆಚ್ಚು ಸಿಗರೇಟ್ ಸೇದುವುದು ಕೂಡ ಹೊಟ್ಟೆ ಗ್ಯಾಸ್ ಗೆ ಕಾರಣವಾಗಿದೆ. ಧೂಮಪಾನ ಮಾಡುವವರಲ್ಲಿ ಮಲಬದ್ಧತೆ ಕೂಡ ಹೆಚ್ಚಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ವಾಯು ಹೆಚ್ಚಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Weight Loss: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ದೀರಾ? ಹಾಗಿದ್ರೆ ಇವರ ಕಥೆ ನಿಮಗೆ ಸ್ಪೂರ್ತಿಯಾಗಬಹುದು

4. ಅನಾರೋಗ್ಯಕರ ಆಹಾರ ಪದ್ಧತಿ
ಹೊಟ್ಟೆ ವಾಯುಗೆ ಪ್ರಮುಖವಾಗಿ ನಮ್ಮ ಆಹಾರ ಪದ್ಧತಿಯೇ ಕಾರಣ. ಕೊಬ್ಬಿನ ಆಹಾರಗಳು, ಪಾನೀಯ ಇಂತಹ ಅನಾರೋಗ್ಯಕರ ಆಹಾರ ಪದ್ಧತಿ ಗ್ಯಾಸ್‌ ಗೆ ಕಾರಣವಾಗಿದೆ. ಫ್ರುಕ್ಟೋಸ್ ಮತ್ತು ಸೋರ್ಬಿಟೋಲ್ನಂತಹ ಅನಿಲವನ್ನು ಉಂಟುಮಾಡುವ ಸಿಹಿಕಾರಕಗಳನ್ನು ತಪ್ಪಿಸುವುದು ಉತ್ತಮ.

5. ವೈದ್ಯಕೀಯ ಪರಿಸ್ಥಿತಿಗಳು
ಹೂಸಿಗೆ ಆಹಾರದ ಜೊತೆ ವೈದ್ಯಕೀಯ ಪರಿಸ್ಥಿತಿಗಳು ಸಹ ಕಾರಣವಾಗುತ್ತದೆ. ಉರಿಯೂತದ ಕರುಳಿನ ಕಾಯಿಲೆ, ತಿನ್ನುವ ಅಸ್ವಸ್ಥತೆಗಳು ಮತ್ತು ಕ್ರೋನ್ಸ್ ಕಾಯಿಲೆಗಳು ಸಹ ಅತಿಯಾದ  ಫಾರ್ಟಿಂಗ್‌ಗೆ ಕಾರಣವಾಗುವ ಕೆಲವು ವೈದ್ಯಕೀಯ ಪರಿಸ್ಥಿತಿಗಳಾಗಿವೆ.

ಅತಿಯಾದ ಹೂಸು ಬಿಡುವಿಕೆಯನ್ನು ನಿಲ್ಲಿಸಲು 5 ಮಾರ್ಗಗಳು
1. ನೀರು ಸೇವನೆಯನ್ನು ಹೆಚ್ಚಿಸಿ
ಹಲವಾರು ಆರೋಗ್ಯ ಸಮಸ್ಯೆಗೆ ನೀರು ಸೇವನೆಯೇ ಮದ್ದು. ಇನ್ನೂ ಹೊಟ್ಟೆಯ ವಿಚಾರಕ್ಕೆ ಬಂದರೆ ಸಾಧ್ಯವಾದಷ್ಟು ನೀರು ಕುಡಿಯುವುದು ಉತ್ತಮ. ನೀರಿನ ಜೊತೆಗೆ ಮಜ್ಜಿಗೆ, ಮೊಸರು ಸೇವಿಸಬಹುದು.

2. ಲವಂಗ ಟೀ
ಮಸಾಲಾ ಪದಾರ್ಥ ಲವಂಗ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ರೋಗಗಳ ಹೊರೆಯಿಂದ ರಕ್ಷಿಸುವ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಲವಂಗದ ಟೀ ವಿವಿಧ ಸೋಂಕುಗಳನ್ನು ತಡೆಯುತ್ತದೆ.

ಊಟಕ್ಕೆ ಮೊದಲು ಲವಂಗದಿಂದ ಮಾಡಿದ ಒಂದು ಕಪ್ ಚಹಾವನ್ನು ಕುಡಿಯುವುದರಿಂದ ಅಜೀರ್ಣ ಅಥವಾ ಹೊಟ್ಟೆಯ ಅಸ್ವಸ್ಥತೆ ಮತ್ತು ಉಬ್ಬುವುದು ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು.

ಕಾರ್ಮಿನೇಟಿವ್ ಗುಣಲಕ್ಷಣಗಳನ್ನು ಹೊಂದಿರುವ ಈ ಚಹಾವು ವಾಯು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಹೊಟ್ಟೆಯಲ್ಲಿನ ನೋವನ್ನು ಸಹ ನಿವಾರಿಸುತ್ತದೆ.

3. ಓವಿನ ಕಾಳುಗಳು
ಓವಿನ ಕಾಳುಗಳು ಥೈಮೋಲ್ ಎಂಬ ವಸ್ತುವನ್ನು ಹೊಂದಿರುತ್ತವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಮ್ಲವನ್ನು ಹೊಂದಿದ್ದು, ಇದು ಆಹಾರದಲ್ಲಿನ ವಾಯುವನ್ನು ತಡೆಯುತ್ತದೆ. 1/2 ಚಮಚ ಓವಿನ ಬೀಜಗಳನ್ನು ನೀರಿನಲ್ಲಿ ಕುದಿಸಿ ಪ್ರತಿದಿನ ಕುಡಿಯುವುದರಿಂದ ಗ್ಯಾಸ್‌ ನಿಲ್ಲಿಸಬಹುದು.

ಇದನ್ನೂ ಓದಿ:  Weight Loss Tips: ಹೆರಿಗೆ ನಂತ್ರ ಹೊಟ್ಟೆ ಕೊಬ್ಬು ಕರಗಿಸೋಕೆ ಈ ವ್ಯಾಯಾಮ ಮಾಡಿ ಸಾಕು

4. ಪ್ರೋಬಯಾಟಿಕ್ಕುಗಳು
ಪ್ರೋಬಯಾಟಿಕ್ ಆಹಾರಗಳಾದ ಮೊಸರು ಮತ್ತು ಕೆಫೀರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಉಬ್ಬರ, ಮಲಬದ್ಧತೆ, ಅತಿಸಾರ ಮತ್ತು ಫಾರ್ಟಿಂಗ್‌ನಂತಹ ಹಲವಾರು ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

5. ಕ್ಯಾಮೊಮೈಲ್
ಕ್ಯಾಮೊಮೈಲ್ ಸಸ್ಯದ ಬಾಷ್ಪಶೀಲ ತೈಲಗಳು ಕಾರ್ಮಿನೇಟಿವ್ ಪರಿಣಾಮವನ್ನು ಹೊಂದಿರುತ್ತವೆ, ಇದು ಜೀರ್ಣಾಂಗವ್ಯೂಹದ ಅನಿಲವನ್ನು ಒಡೆಯಲು ಕಾರಣವಾಗುತ್ತದೆ. ಒಂದು ಕಪ್ ಕ್ಯಾಮೊಮೈಲ್ ಚಹಾವು ಹೊಟ್ಟೆಯ ಉಬ್ಬುವಿಕೆಯನ್ನು ಕಡಿಮೆ ಮಾಡಲು ಮತ್ತು ಅನಿಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.

6. ವೈದ್ಯರನ್ನು ಸಂಪರ್ಕಿಸಿ
ಒಂದು ವೇಳೆ ನೀವು ಅಸಹಜವಾಗಿ ಹೂಸು ಬಿಡುತ್ತಿದ್ದೀರಿ ಎಂದು ನೀವು ಭಾವಿಸಿದರೆ ಅಥವಾ ಹೊಟ್ಟೆ ಉಬ್ಬುವುದು ಮತ್ತು ಅಧಿಕ ತೇಗು ಜೊತೆಗೆ ನೀವು ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸಿದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷಿಸಿಕೊಳ್ಳಿ.

ಅತಿಯಾದ ಹೂಸು ಬಿಡುವುದನ್ನು ತಪ್ಪಿಸಲು ಅನುಸರಿಸಬಹುದಾದ ಇತರೆ ಸಲಹೆಗಳು

  • ಅತಿಯಾಗಿ ತಿನ್ನುವುದನ್ನು ತಪ್ಪಿಸಿ, ಸಣ್ಣ ಊಟವನ್ನು ತಿನ್ನಲು ಪ್ರಯತ್ನಿಸಿ

  • ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಿಯಮಿತವಾದ ವ್ಯಾಯಾಮವನ್ನು ಅನುಸರಿಸಬೇಕು.

  • ಗ್ಯಾಸ್‌ ಸಂಗ್ರಹವಾಗುವುದನ್ನು ತಡೆಯಲು. ಕೊಬ್ಬಿನ ಆಹಾರಗಳನ್ನು ತಪ್ಪಿಸಬೇಕು.

  • ಧೂಮಪಾನವನ್ನು ತಪ್ಪಿಸಿ ಮತ್ತು ನಿಮ್ಮ ಧೂಮಪಾನದ ಅಭ್ಯಾಸವನ್ನು ತೊಡೆದುಹಾಕಲು ಚೂಯಿಂಗ್ ಗಮ್ ಅನ್ನು ಅಗೆಯಬಹುದು.


ಇದನ್ನೂ ಓದಿ: Gastric Remedy: ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಹೈರಾಣಾಗಿದ್ರೆ ಈ ಸೂಪರ್ ಟಿಪ್ಸ್ ಟ್ರೈ ಮಾಡಿ

  • ಸೋಡಾ ಅಥವಾ ಬಿಯರ್‌ನಂತಹ ಕಾರ್ಬೊನೇಟೆಡ್ ಪಾನೀಯಗಳ ಬದಲಿಗೆ ಆರೋಗ್ಯಕರ ಪಾನೀಯವನ್ನು ಸೇವಿಸುವುದು ಉತ್ತಮ.

  • ಹೆಚ್ಚು ಸಕ್ಕರೆಯನ್ನು ಸೇವಿಸುವುದನ್ನು ತಪ್ಪಿಸಿ. ದೇಹವು ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಸಾಧ್ಯವಾಗದಿದ್ದಾಗ, ಹೆಚ್ಚುವರಿ ಸಕ್ಕರೆಯು ಕರುಳಿನಲ್ಲಿ ಸಂಗ್ರಹವಾಗುತ್ತದೆ. ಇದರ ಪರಿಣಾಮವಾಗಿ ಗ್ಯಾಸ್ ಉಂಟಾಗಬಹುದು.

Published by:Ashwini Prabhu
First published: