Health Tips: ಮಾಸ್ಕ್ ಧರಿಸುವುದರಿಂದ ತಲೆನೋವು ಬರ್ತಿದೆಯಾ? ಹಾಗಾದ್ರೆ ಇದನ್ನ ಓದಿ

Headache From Mask: ನೆಗಡಿ, ಕೆಮ್ಮು, ಆಸ್ತಮಾ, ಅಲರ್ಜಿ, ಮತ್ತು ಚರ್ಮದ ದದ್ದುಗಳು ಇರುವ ಜನರು  ಮಾಸ್ಕ್​ ಧರಿಸುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ವೈದ್ಯರು  ಹೇಳುತ್ತಾರೆ ಅಂತಹವರು ಸ್ವಲ್ಪ ಕಷ್ಟವಾಗಿದ್ದರೂ  ಮಾಸ್ಕ್​ ಧರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರೋನಾ ವೈರಸ್‌(Coronavirus) ಜನರ ಬದುಕನ್ನು ಬದಲಾಯಿಸಿರುವುದು ಸತ್ಯ. ಸಧ್ಯ ಲಸಿಕೆ ಬಂದಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನವಾಗಿದೆ. ಈ ಲಸಿಕೆ ಕೊರೊನಾದಿಂದ ನಮ್ಮನ್ನ ರಕ್ಷಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ವ್ಯಾಕ್ಸಿನೇಷನ್ ನಂತರವೂ ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರ(Social Distance), ವಿಶೇಷವಾಗಿ ಮಾಸ್ಕ್ ಧರಿಸುವುದು ಕಡ್ಡಾಯ. ಯಾವುದೇ ಕಾರಣಕ್ಕೂ ಈ ನಿಯಮಗಳನ್ನು ಮೀರಬಾರದು. ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರಿಗೂ ಸುಲಭ. ಆದರೆ ಕೆಲವರಿಗೆ ದೀರ್ಘಕಾಲದವರೆಗೆ ಮಾಸ್ಕ್(Mask) ಧರಿಸುವುದು ತುಂಬಾ ಕಷ್ಟ. ಮಾಸ್ಕ್​ಗಳಿಂದ ತಲೆನೋವು(Headache) ಉಂಟಾಗುತ್ತದೆ.  ಹಾಗಾದ್ರೆ ನಿಮಗೂ ಮಾಸ್ಕ್​ನಿಂದ ತಲೆನೋವು ಉಂಟಾಗುತ್ತದೆ ಅಂದ್ರೆ ಇಲ್ಲಿದೆ ಕೆಲ ಮಾಹಿತಿಗಳು..  

ಮಾಸ್ಕ್​ಗಳು ತಲೆನೋವಿಗೆ ಕಾರಣವಾಗುತ್ತದೆ

ವೈರಸ್‌ನಿಂದ ಅನೇಕ ಜನರನ್ನು ರಕ್ಷಿಸುವಲ್ಲಿ ಮಾಸ್ಕ್​ಗಳು ಬಹಳ ಸಹಾಯಕವಾಗಿವೆ. ಆದರೆ ಈಗ ಅನೇಕ ಜನರು  ಮಾಸ್ಕ್​ನಿಂದ ತಲೆನೋವನ್ನು  ಬರುತ್ತಿದೆ ಎಂದು ದೂರುತ್ತಿದ್ದಾರೆ.  ಹಲವಾರು ಜನರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ದೀರ್ಘಕಾಲದವರೆಗೆ  ಮಾಸ್ಕ್​ ಧರಿಸಿದ ನಂತರ ಅನೇಕ ಜನರು ತಲೆನೋವು,  ಸುಸ್ತು, ನಿರ್ಜಲೀಕರಣ ಮತ್ತು ಗೊಂದಲಗಳು ಉಂಟಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇಂತಹ ಆರೋಗ್ಯ ಸಮಸ್ಯೆಗಳು ಉದ್ಭವಿಸಲು ಹಲವು ಕಾರಣಗಳಿವೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ಚರ್ಮದ ಸಮಸ್ಯೆಗಳಿಗೆ ಪರಿಹಾರ ಬೇಕಾ? ಹಾಗಾದ್ರೆ ದಾಳಿಂಬೆ ಹಣ್ಣು ತಿನ್ನಿ

ನೆಗಡಿ, ಕೆಮ್ಮು, ಆಸ್ತಮಾ, ಅಲರ್ಜಿ, ಮತ್ತು ಚರ್ಮದ ದದ್ದುಗಳು ಇರುವ ಜನರು  ಮಾಸ್ಕ್​ ಧರಿಸುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ವೈದ್ಯರು  ಹೇಳುತ್ತಾರೆ ಅಂತಹವರು ಸ್ವಲ್ಪ ಕಷ್ಟವಾಗಿದ್ದರೂ  ಮಾಸ್ಕ್​ ಧರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಾಸ್ಕ್​ಗಳು ಳು ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತವೆ ಎಂಬುದು ಸಾಬೀತಾಗಿದೆ. ಆದ್ದರಿಂದ ಅವುಗಳನ್ನು ಧರಿಸುವುದು ಕಡ್ಡಾಯ.

ಮಾಸ್ಕ್​ನಿಂದ ತಲೆನೋವು ಬರಲು ಕಾರಣವೇನು?

ಬಿಗಿಯಾದ ಮಾಸ್ಕ್​ ಅನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಟೆಂಪೊರೊಮ್ಯಾಂಡಿಬ್ಯುಲರ್ ಜಂಟಿ (ಟಿಎಂಜೆ) ಯಲ್ಲಿ ನೋವು ಉಂಟಾಗಬಹುದು. ಇದು ನಿಮ್ಮ ಕೆಳ ದವಡೆಯು ನಿಮ್ಮ ತಲೆಬುರುಡೆಯ ಉಳಿದ ಭಾಗವನ್ನು ಸಂಪರ್ಕಿಸುತ್ತದೆ. ಮಾಸ್ಕ್​ ಧರಿಸುವಾಗ ನಿಮ್ಮ ದವಡೆ ಚಲಿಸಲು ಸಹಾಯ ಮಾಡುವ ಸ್ನಾಯುಗಳು ಮತ್ತು ಅಂಗಾಂಶಗಳು  ಹೆಚ್ಚು ಒತ್ತಡಕ್ಕೊಳಗಾಗುತ್ತವೆ.ಮಾಸ್ಕ್​ ಈ ಸ್ನಾಯುಗಳ ಮತ್ತು ಅಂಗಾಂಶಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಇದು ದವಡೆಯ ನರಗಳ ಮೇಲೆ ಪರಿಣಾಮ ಬೀರುತ್ತದೆ. ಈ ನರಗಳು ಮೆದುಳಿಗೆ ನೋವಿನ ಸಂಕೇತವನ್ನು ಕಳಿಸುತ್ತದೆ. ಅದಕ್ಕಾಗಿಯೇ ಮಾಸ್ಕ್​ ಧರಿಸುವುದು ತಲೆನೋವಿಗೆ ಕಾರಣವಾಗಬಹುದು ಎನ್ನಲಾಗುತ್ತದೆ.

ಮಾಸ್ಕ್​ನಿಂದ ಉಂಟಾಗುವ ತಲೆನೋವಿಗೆ ಪರಿಹಾರ ಇಲ್ಲಿದೆ 

ಈ ಸಮಸ್ಯೆಯನ್ನು ತಪ್ಪಿಸಲು ಬಿಗಿಯಾದ ಮಾಸ್ಕ್​ಗಳನ್ನು ಧರಿಸಬೇಡಿ. ಬಿಗಿಯಾದ ಮುಖವಾಡಗಳು ನಿಮ್ಮ ಕಿವಿಗಳ ಮೇಲೆ ಒತ್ತಡ ಹೇರುತ್ತವೆ. ಇದು ಹತ್ತಿರದ ನಿಮ್ಮ ನರಗಳನ್ನು ನೋಯಿಸುತ್ತದೆ.  ಕರೋನಾ ವೈರಸ್ ಹೆಚ್ಚು ಪ್ರಚಲಿತವಿರುವ ಸ್ಥಳಗಳನ್ನು ಹೊರತುಪಡಿಸಿ ಎಲ್ಲಿಯಾದರೂ ಬಿಗಿಯಾದ ಮುಖವಾಡಗಳನ್ನು ಧರಿಸಬೇಡಿ.

ನಿಮ್ಮ ದವಡೆ ಮತ್ತು ಹಲ್ಲುಗಳ ಬಗ್ಗೆ ವಿಶೇಷ ಗಮನ ಕೊಡಿ. ಒತ್ತಡ ಮತ್ತು ಆತಂಕವು ನಿಮ್ಮ ದವಡೆಯ ಸ್ನಾಯುಗಳು ಮತ್ತು ಹಲ್ಲುಗಳನ್ನು ಬಿಗಿಗೊಳಿಸಬಹುದು.  ಕುಳಿತುಕೊಳ್ಳುವ ಅಥವಾ ನಿಲ್ಲುವ ನಿಮ್ಮ ಭಂಗಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಆಲೂಗೆಡ್ಡೆ ಜ್ಯೂಸ್ ಸೇವನೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

ನಿಮ್ಮ ದೇಹದಲ್ಲಿನ ಯಾವುದೇ ಸ್ನಾಯುವಿನ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಿ. ಟೆಂಪೊ ರೊಮಾಂಡಿಬುಲರ್ ಕೀಲು ನೋವು ಕೂಡ ಕೆಟ್ಟ ಭಂಗಿಯಿಂದ ಉಂಟಾಗಬಹುದು. ಭಂಗಿಯು ಸ್ನಾಯುವಿನ ಒತ್ತಡವನ್ನು ಹೆಚ್ಚಿಸುತ್ತದೆ. ಮೃದುವಾದ ಕುತ್ತಿಗೆಯ ವ್ಯಾಯಾಮಗಳನ್ನು ಸಹ ಮಾಡಿ. ಧ್ಯಾನ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ.
Published by:Sandhya M
First published: