ಫೇಸ್​ಬುಕ್ ಬಳಸಿದರೆ ವಯೋವೃದ್ಧರ ಒಂಟಿತನ ಕಡಿಮೆ ಆಗುತ್ತಂತೆ!

news18
Updated:May 3, 2018, 7:47 PM IST
ಫೇಸ್​ಬುಕ್ ಬಳಸಿದರೆ ವಯೋವೃದ್ಧರ ಒಂಟಿತನ ಕಡಿಮೆ ಆಗುತ್ತಂತೆ!
news18
Updated: May 3, 2018, 7:47 PM IST
ನ್ಯೂಸ್ 18 ಕನ್ನಡ

ಫೇಸ್​ಬುಕ್ ಸೇರಿದಂತೆ ಇತರೆ  ಸಾಮಾಜಿಕ ಜಾಲತಾಣ ಹದಿಹರೆಯದವರು, ಮಧ್ಯ ವಯಸ್ಕರು ಮತ್ತು ಹಿರಿಯರೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿದೆ. ಇದೀಗ ಫೇಸ್​ಬುಕ್ ಬಳಸುವುದರಿಂದ ವಯೋವೃದ್ಧರ ಒಂಟಿತನ ದೂರ ಮಾಡಬಹುದೆಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಫೇಸ್​ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಬಳಕೆಯು ಹಿರಿ ವಯಸ್ಸಿನವರ ಏಕಾಂಗಿತನವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು 'ಜರ್ನಲ್ ನ್ಯೂ ಮೀಡಿಯಾ ಆ್ಯಂಡ್​ ಸೊಸೈಟಿ' ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ವಯಸ್ಸಾದವರು ಸಾಮಾಜಿಕ ಜಾಲತಾಣವನ್ನು ಬಳಸುವುದು ತುಂಬಾ ವಿರಳ, ಇದನ್ನು ಬಳಸುವುದರಿಂದ ಏಕಾಂತನವನ್ನು ಹೋಗಲಾಡಿಸಬಹುದು ಎಂದು ಅಮೆರಿಕ ವಿಶ್ವವಿದ್ಯಾಲಯದ ಪ್ರೊಫೆಸರ್ ಎಸ್. ಶ್ಯಾಮಸುಂದರ್​ ಹೇಳಿದ್ದಾರೆ.

60 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ 200 ಮಂದಿಯನ್ನು ಬಳಸಿ ಈ ಅಧ್ಯಯನ ನಡೆಸಲಾಗಿದೆ. ಫೇಸ್​ಬುಕ್​​ನಲ್ಲಿ ಒಂದು ವರ್ಷದ ಕಾಲ ಸ್ನೇಹಿತರನ್ನಾಗಿಸಿ ಸಂಶೋಧಕರು ಅಧ್ಯಯನ ನಡೆಸಿದಾಗ, ವಯೋವೃದ್ಧರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 'ಈ ವೇಳೆ ಫೇಸ್​ಬುಕ್​ನಲ್ಲಿ ವೈಯಕ್ತಿಕ ಕಥೆಗಳ ಪೋಸ್ಟ್​ಗಳನ್ನು ಹೆಚ್ಚಾಗಿ ಹಾಕಿರುವುದು ಕಂಡು ಬಂದಿದೆ. ಸಾಮಾಜಿಕ ತಾಣಗಳ ಮೇಲೆ ಹೆಚ್ಚಿನ ನಿಯಂತ್ರಣ ಕೂಡ ಅವರು ಹೊಂದಿದ್ದರು' ಎಂದು ಸುಂದರ್ ತಿಳಿಸಿದ್ದಾರೆ.

'ಫೇಸ್​ಬುಕ್​ ಬಳಕೆ ಹೆಚ್ಚಿಸಿಕೊಂಡಿರುವ ವಯೋವೃದ್ಧರಿಗೆ ಸಾಮಾಜಿಕ ತಾಣದ ಬಳಕೆಯು ಹೊಸ ಅನುಭವ ನೀಡಿದೆ. ಹೆಚ್ಚಿನ ಹಿರಿಯರು ಕೂಡ ಸಾಮಾಜಿಕ ತಾಣಗಳನ್ನು ಬಳಸಲು ಉತ್ಸುಕರಾಗಿದ್ದಾರೆ' ಎಂದು ಅಧ್ಯಯನ ತಂಡದಲ್ಲಿದ್ದ ಸಿಂಗಪುರ್ ವಿಶ್ವವಿದ್ಯಾಲಯದ ಯುನ್ ಹ್ವಾ ಜಂಗ್ ತಿಳಿಸಿದ್ದಾರೆ.

ಸದ್ಯ ಫೇಸ್​ಬುಕ್ ವಯೋವೃದ್ಧರ ನೆಚ್ಚಿನ ಸಮಾಜಿಕ ಜಾಲತಾಣವಾಗಿ ಮಾರ್ಪಟ್ಟಿದೆ. ಬೆಳೆಯುತ್ತಿರುವ ಬಳಕೆದಾರರ ಅಗತ್ಯತೆಗಳನ್ನು ಪೂರೈಸುವತ್ತ ಸಾಮಾಜಿಕ ತಾಣ ಸಂಸ್ಥೆಗಳು ಗಮನಹರಿಸಬೇಕೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
First published:May 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...