Beauty Tips: ಮುಖ ಸುಕ್ಕು ಕಟ್ಟಿದ್ಯಾ, ಚಿಂತೆ ಯಾಕೆ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ

ಮುಖದ ಹತ್ತಿರದ ಚರ್ಮ ತುಂಬಾ ನಾಜೂಕಾಗಿರುತ್ತದೆ. ಕಣ್ಣಿನ ಕೆಳ ಭಾಗದಲ್ಲಿ ಚರ್ಮದ ಲೇಯರ್ ತುಂಬಾ ತೆಳುವಾಗಿ ಇರುತ್ತದೆ. ಆದ್ದರಿಂದ ದೇಹದ ಇತರೆ ಭಾಗಗಳಿಗಿಂತ ಹೆಚ್ಚು ಬೇಗನೇ ಕಣ್ಣಿನ ಕೆಳಭಾಗದಲ್ಲಿ ನೆರಿಗೆಗಳು ಬೀಳುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಯಸ್ಸಾಗುತ್ತ (age) ಹೋದಂತೆ ಮುಖದ (Face) ಮೇಲೆ ನೆರಿಗೆ (wrinkles) ಬೀಳುವುದು, ಚರ್ಮ ಸುಕ್ಕುಗಟ್ಟುವುದು ಸಾಮಾನ್ಯವಾಗಿ ಬಿಡುತ್ತದೆ. 40 ವರ್ಷ ವಯಸ್ಸಿನ ನಂತರ ಈ ರೀತಿಯ ಸಮಸ್ಯೆ(problem) ಆಗುವುದು ಸಾಮಾನ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ 20 ರಿಂದ 30 ವರ್ಷಕ್ಕೆ ಚರ್ಮದ ಮೇಲೆ ನೆರಿಗೆಯಾಗುವುದು, ಸುಕ್ಕುಗಟ್ಟುವ ಸಮಸ್ಯೆ ಮಹಿಳೆಯರಲ್ಲಿ(ladies) ಶುರುವಾಗಿದೆ. ಇದು ಸಾಮಾಮುಖದ ಮೇಲಿನ ನೆರಿಗೆಗಳಿಗೆ ಬೈ ಬೈ ಹೇಳಲು ಈ ಟಿಪ್ಸ್ ಅನುಸರಿಸಿನ್ಯವಾಗಿ ಪ್ರೊಟಿನ್ (protein) ಸಮೂಹವಾಗಿರುವ ಕೊಲಾಜನ್ ದೇಹದಲ್ಲಿ(body) ಕಡಿಮೆಯಾದರೆ ಇಂಥಹ ಸಮಸ್ಯೆ ಹೆಚ್ಚು ಕಾಡುತ್ತದೆ. ಹೆಚ್ಚುತ್ತಿರುವ ವಯಸ್ಸಿನ ಜತೆಗೆ ಕೊಲಾಜನ್ ಪ್ರೊಟೀನ್ ಸಮೂಹ ಸ್ವಾಭಾವಿಕವಾಗಿ ಕಡಿಮೆ ಆಗುತ್ತ ಹೋಗುತ್ತದೆ. ಇದರಿಂದಾಗಿ ಮುಖದ ಮೇಲೆ, ಹಣೆಯ ಮೇಲ್ಭಾಗ, ಕಣ್ಣಿನ ಕೆಳಗೆ ನೆರಿಗೆಗಟ್ಟಲು ಶುರುವಾಗುತ್ತದೆ.

    ಸಾಮಾನ್ಯವಾಗಿ ಮನುಷ್ಯ ಆರೋಗ್ಯವಾಗಿರಲು ಒಳ್ಳೆಯ ಆಹಾರ ಸೇವನೆ, ಡಯಟ್, ಯೋಗ, ವ್ಯಾಯಾಮ, ಕ್ರೀಡೆ ಹೀಗೆ ಚಟುವಟಿಕೆಯಿಂದಿರುವ ಕೆಲಸಗಳನ್ನು ಮಾಡುತ್ತ ದೇಹದ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಅಲ್ಲದೇ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಚೆನ್ನಾಗಿ ನಿದ್ದೆಯನ್ನೂ ಮಾಡಬೇಕು. ಅದಾಗ್ಯೂ ಮುಖದ ಮೇಲೆ, ಹಣೆಯ ಮೇಲೆ ನೆರಿಗೆಗಳು ಕೆಲವೊಮ್ಮೆ ನಿದ್ರಾಹೀನತೆ, ಡಿಹೈಡ್ರೇಷನ್, ಸುಸ್ತು, ಒತ್ತಡ, ಕರಿದ ಪದಾರ್ಥಗಳ ಸೇವನೆಯಿಂದ ಬರುತ್ತದೆ.

    ಮುಖದ ಹತ್ತಿರದ ಚರ್ಮ ತುಂಬಾ ನಾಜೂಕಾಗಿರುತ್ತದೆ. ಕಣ್ಣಿನ ಕೆಳ ಭಾಗದಲ್ಲಿ ಚರ್ಮದ ಲೇಯರ್ ತುಂಬಾ ತೆಳುವಾಗಿ ಇರುತ್ತದೆ. ಆದ್ದರಿಂದ ದೇಹದ ಇತರೆ ಭಾಗಗಳಿಗಿಂತ ಹೆಚ್ಚು ಬೇಗನೇ ಕಣ್ಣಿನ ಕೆಳಭಾಗದಲ್ಲಿ ನೆರಿಗೆಗಳು ಬೀಳುತ್ತವೆ. ಹೀಗೆ ಮುಖದ ಮೇಲೆ ಬೀಳುವ ನೆರಿಗೆಗಳಿಂದಾಗಿ ಹೆಚ್ಚು ಚಿಂತೆ, ಆತಂಕ ಪಡುವುದು ಬೇಡ. ತುಂಬಾ ದುಡ್ಡು ಖರ್ಚು ಮಾಡಿ ಚಿಕಿತ್ಸೆ ಪಡೆಯುವ ಅವಶ್ಯಕತೆ ಇಲ್ಲ. ಹಾಗಿದ್ದರೆ ಮುಖದ ಮೇಲೆ ಬೀಳುವ ನೆರಿಗೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂಬ ಕೆಲವು ಸಲಹೆಗಳು ಇಲ್ಲಿವೆ.

    ಮುಖದ ಮೇಲಿನೆ ನೆರಿಗೆಗಳಿಂದ ಮುಕ್ತಿ

    ಬ್ರೊಕೊಲಿ:

    ಬ್ರೊಕೊಲಿಯಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದ ಮುಖದ ಮೇಲೆ ಬೀಳುವ ನೆರಿಗೆಗಳು ಕಡಿಮೆಯಾಗುತ್ತವೆ. ನೀವು ತಿನ್ನುವ ಆಹಾರ ಮತ್ತು ಡಯಟ್ ನಲ್ಲಿ ಬ್ರೊಕೊಲಿಯನ್ನು ನಿಯಮಿತವಾಗಿ ಸೇರಿಸಿಕೊಳ್ಳಿ. ಬ್ರೊಕೊಲಿಯನ್ನು ನಿಯಮಿತವಾಗಿ ಸೇವಿಸಿ. ಮತ್ತು ಹಣ್ಣುಗಳು ಮತ್ತು ತಾಜಾ ತರಕಾರಿ ಸೇವನೆಯನ್ನು ರೂಢಿಸಿಕೊಳ್ಳಿ.

    ಇದನ್ನೂ ಓದಿ: ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆ ಆಗಿದ್ರೆ ಇವುಗಳನ್ನು ತಿನ್ನಬೇಕಂತೆ

    ನಿಂಬೆ ಎಣ್ಣೆ:

    ಈಗಾಗಲೇ ನಿಮ್ಮ ಮುಖದ ಮೇಲೆ ನೆರಿಗೆಗಳು ಬಂದಿವೆಯಾದರೆ ನೀವು ನಿಂಬೆ ಎಣ್ಣೆಯನ್ನು ಬಳಸಿರಿ. ಇದರ ಬಳಕೆಯಿಂದ ನೆರಿಗೆಗಳಿಗೆ ನೀವು ಗುಡ್ ಬೈ ಹೇಳಬಹುದು. ನಿಂಬೆ ಎಣ್ಣೆಯನ್ನು ಹತ್ತಿಯ ಮೇಲೆ ಸವರಿ ಅದನ್ನು ನೆರಿಗೆಗಟ್ಟಿದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಬೇಕು. ವಾರದಲ್ಲಿ ಎರಡು ಮೂರು ಬಾರಿ ಈ ರೀತಿ ಮಾಡಿರಿ.

    ದಾಲ್ಚಿನ್ನಿ:

    ದಾಲ್ಚಿನ್ನಿಯನ್ನು ಬಳಕೆ ಮಾಡುವುದರಿಂದಲೂ ನೆರಿಗೆಗಳನ್ನು ಹೋಗಲಾಡಿಸಬಹುದು. ದಾಲ್ಚಿನ್ನಿ ಬಳಕೆಯಿಂದ ದೇಹದಲ್ಲಿ ಕೊಲಾಜನ್ ಅಂಶ ಹೆಚ್ಚುತ್ತದೆ. ತ್ವಚೆಗೆ ಹೈಡ್ರೇಷನ್ ಸಿಗುತ್ತದೆ. ದಾಲ್ಚಿನ್ನಿ ಮತ್ತು ಜೇನುತುಪ್ಪದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿರಿ.

    ಸೌತೆಕಾಯಿ:

    ಕಣ್ಣಿನ ಕೆಳಗೆ ನೆರಿಗೆಗಳಾಗಿದ್ದರೆ ಸೌತೆಕಾಯಿಯನ್ನು ಹಚ್ಚುವುದು ಬೆಸ್ಟ್. ಮೊಸರಿನಲ್ಲಿ ಸೌತೆಕಾಯಿ ರಸವನ್ನು ಹಿಂಡಿ ಪೇಸ್ಟ್ ಮಾಡಿಕೊಳ್ಳಿ. ನಂತರ ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಮಾಡಿದರೆ ನೆರಿಗೆಗಳು ಮಾಯವಾಗುತ್ತವೆ.

    ತೆಂಗಿನ ಎಣ್ಣೆ:

    ತೆಂಗಿನ ಎಣ್ಣೆಗೆ ಚಿಟಿಕೆಯಷ್ಟು ಅರಿಶಿಣ ಪುಡಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ನ್ನು ನೆರಿಗೆಯಿರುವ ಜಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.

    ಮೊಸರು, ಸೌತೆಕಾಯಿ, ಗುಲಾಬಿ ನೀರು:

    ಒಂದು ಚಮಚ ಮೊಸರಿಗೆ ಒಂದೆರಡು ಹನಿ ಗುಲಾಬಿ ನೀರು ಮತ್ತು ಸೌತೆಕಾಯಿ ರಸವನ್ನು ಹಾಕಿ ಪೇಸ್ಟ್ ಮಾಡಿಕೊಂಡು ನೆರಿಗೆಯಿರುವ ಜಾಗಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಕೂಡ ನುಣುಪಾಗುತ್ತದೆ.
    Published by:renukadariyannavar
    First published: