• Home
  • »
  • News
  • »
  • lifestyle
  • »
  • Glowing Skin: ಮುಖದ ಸುಕ್ಕು ಮತ್ತು ಕಲೆ ಹೋಗಲಾಡಿಸಲು ಚಿಯಾ ಬೀಜಗಳ ಫೇಶಿಯಲ್ ಮಾಡಿ

Glowing Skin: ಮುಖದ ಸುಕ್ಕು ಮತ್ತು ಕಲೆ ಹೋಗಲಾಡಿಸಲು ಚಿಯಾ ಬೀಜಗಳ ಫೇಶಿಯಲ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಯಾ ಬೀಜಗಳು ತೂಕ ಇಳಿಕೆ ಮತ್ತು ನಿಯಂತ್ರಣದಲ್ಲಿ ಮುಂಚೂಣಿಯಲ್ಲಿವೆ. ಈ ಸಸ್ಯ ಆಧಾರಿತ ಬೀಜವನ್ನು ಸೂಪರ್‌ ಫುಡ್ ಎಂದು ಕರೆಯುತ್ತಾರೆ. ಇದು ಹೃದಯದ ಆರೋಗ್ಯ ಮತ್ತು ದೇಹದ ಚಯಾಪಚಯ ಕ್ರಿಯೆಗೆ ಪ್ರಯೋಜನಕಾರಿ ಆಗಿದೆ. ಹಾಗೆಯೇ ಚರ್ಮಕ್ಕೆ ಅಗತ್ಯವಾದ ಬೀಜ ಆಗಿದೆ. ಇದರ ಫೇಸಿಯಲ್ ಚರ್ಮದ ಸಮಸ್ಯೆ ನಿವಾರಣೆ ಆಗುತ್ತದೆ.

ಮುಂದೆ ಓದಿ ...
  • Share this:

    ಪರಿಸರ ಮಾಲಿನ್ಯ (Environment Pollution) ಮತ್ತು ಸೂರ್ಯನ (Sun) ಹಾನಿಕಾರಕ ಕಿರಣಗಳು, ಧೂಳು, ಗಾಳಿ, ಚರ್ಮವನ್ನು (Skin) ಹೆಚ್ಚು ಹಾನಿ (Damage) ಉಂಟು ಮಾಡುತ್ತದೆ. ಇದು ತ್ವಚೆಯ ಮೇಲೆ ಕಲೆಗಳು ಮಾತ್ರವಲ್ಲದೆ ಅಕಾಲಿಕವಾಗಿ ತ್ವಚೆಯ ಮೇಲೆ ಸುಕ್ಕು ಉಂಟಾಗುತ್ತವೆ. ಈ ಎರಡೂ ಅಂಶಗಳು ಕಾಲಜನ್ ಉತ್ಪಾದನೆ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಅಂತಹ ಅನೇಕ ಬೀಜಗಳಿವೆ. ಇವುಗಳು ಚರ್ಮಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶ ಪೂರೈಸುತ್ತದೆ. ಚಿಯಾ ಬೀಜಗಳು ಇವುಗಳಲ್ಲಿ ಮುಂಚೂಣಿಯಲ್ಲಿವೆ. ಈ ಸಸ್ಯ ಆಧಾರಿತ ಬೀಜವನ್ನು ಸೂಪರ್‌ ಫುಡ್ ಎಂದು ಕರೆಯುತ್ತಾರೆ. ಇದು ಹೃದಯದ ಆರೋಗ್ಯ, ದೇಹದ ಚಯಾಪಚಯ ಕ್ರಿಯೆಗೆ ಪ್ರಯೋಜನಕಾರಿ ಆಗಿದೆ.


    ಹಾಗೆಯೇ ಚರ್ಮಕ್ಕೆ ಅಗತ್ಯವಾದ ಬೀಜ ಆಗಿದೆ. ಇದರ ನಿಯಮಿತ ಸೇವನೆ, ತ್ವಚೆಯ ಮೇಲೆ ಹಚ್ಚಿದರೆ ಆಗ ಎಲ್ಲಾ ಚರ್ಮದ ಸಮಸ್ಯೆ ನಿವಾರಣೆ ಆಗುತ್ತದೆ.


    ಚಿಯಾ ಬೀಜಗಳು ತ್ವಚೆಯ ಹೊಳಪಿಗೆ ಸೂಪರ್‌ ಫುಡ್ ಆಗಿದೆ


    ಚಿಯಾ ಬೀಜಗಳು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಗುಣಲಕ್ಷಣ ಹೊಂದಿವೆ. ಇದು ಒಮೆಗಾ 3 ಕೊಬ್ಬಿನಾಮ್ಲ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್ ಹೊಂದಿದೆ. ಇದರಲ್ಲಿ ಪೊಟ್ಯಾಸಿಯಮ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಸಮೃದ್ಧ ಆಗಿದೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿಂದಾಗಿ ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ಇದು ತ್ವಚೆಗೆ ಸೂಪರ್ ಫುಡ್ ಕೂಡ ಆಗಿದೆ.


    ಸುಕ್ಕು ತಡೆಯಲು ಸಹಕಾರಿ


    ಚಿಯಾ ಬೀಜಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಇದು ಕಾಲಜನ್ ಇರುವಿಕೆಯಿಂದಾಗಿದೆ. ಇದು ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲ ಹೊಂದಿದೆ. ನಮ್ಮ ದೇಹದ ರಕ್ತ ಕಣಗಳು, ಅಂಗಾಂಶಗಳು, ಸ್ನಾಯುಗಳು, ಕಾಲಜನ್ ಉತ್ಪಾದನೆ ಮತ್ತು ಚರ್ಮದ ಹಾನಿಯ ರಕ್ಷಣೆಗೆ ಇವುಗಳು ಅವಶ್ಯಕ.


    ಕಾಲಜನ್ ಇರುವ ಕಾರಣ ಚರ್ಮದ ಸ್ಥಿತಿಸ್ಥಾಪಕತ್ವ ಹಾಗೇ ಉಳಿಯುತ್ತದೆ. ಇದರಿಂದ ಚರ್ಮವು ಹೊಳೆಯುವ ಮತ್ತು ಸ್ಪಷ್ಟ ಆಗಿರುತ್ತದೆ.


    ಚಿಯಾ ಬೀಜಗಳಿಂದ ತಯಾರಿಸಿದ ಫೇಸಿಯಲ್


    ಚಿಯಾ ಬೀಜಗಳ ಸಾರಭೂತ ತೈಲ ಫೇಸಿಯಲ್


    ಉರಿಯೂತ ನಿವಾರಕ ಆಗಿರುವುದರಿಂದ ಸಾರಭೂತ ತೈಲವು ಚಿಯಾ ಬೀಜಗಳ ಗುಣಲಕ್ಷಣ ದ್ವಿಗುಣಗೊಳಿಸುತ್ತದೆ. ಒಂದು ಟೀ ಸ್ಪೂನ್ ಚಿಯಾ ಬೀಜ ತೆಗೆದುಕೊಳ್ಳಿ. ಗ್ರೈಂಡರ್ನಲ್ಲಿ ರುಬ್ಬಿ ಪುಡಿ ಮಾಡಿ. ಎರಡು ಚಮಚ ಪುದೀನಾ ಸಾರಭೂತ ತೈಲ ಅಥವಾ ಲ್ಯಾವೆಂಡರ್ ಎಣ್ಣೆ ಮಿಶ್ರಣ ಮಾಡಿ. ನಂತರ ಮುಖಕ್ಕೆ ಅನ್ವಯಿಸಿ, ನಾರ್ಮಲ್ ನೀರಿನಿಂದ ತೊಳೆಯಿರಿ.


    ಕೆಲವು ಹರ್ಬಲ್ ಫೇಸ್ ವಾಶ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ. ಮತ್ತು ಜೆಲ್ ಅನ್ನು ಅನ್ವಯಿಸಿ. ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.


    ಚಿಯಾ ಬೀಜಗಳ ಅಲೋವೆರಾ ಜೆಲ್ ಮಾಸ್ಕ್


    ವಿಟಮಿನ್ ಸಿ ಸಮೃದ್ಧವಾಗಿರುವ ಅಲೋವೆರಾ ಮುಖ ಒಳಗಿನಿಂದ ಸ್ವಚ್ಛಗೊಳಿಸುತ್ತದೆ. ಮತ್ತು ಚರ್ಮದ ಸಮಸ್ಯೆ ತೆಗೆದು ಹಾಕುತ್ತದೆ. ಅಲೋವೆರಾ ತುಂಡನ್ನು ಚೆನ್ನಾಗಿ ತೊಳೆಯಿರಿ. ಜೆಲ್ ಅನ್ನು ಕತ್ತರಿಸಿ. ಅದರಲ್ಲಿ 2 ಚಮಚ ಚಿಯಾ ಬೀಜಗಳ ಪುಡಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ಮುಖ ತೊಳೆಯಿರಿ.


    ಚಿಯಾ ಬೀಜಗಳ ಜೇನುತುಪ್ಪದ ಫೇಸಿಯಲ್


    ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಹೊಂದಿರುವ ಜೇನುತುಪ್ಪವು ಚರ್ಮದ ಹಾನಿ ಗುಣಪಡಿಸುತ್ತದೆ. ಮೊಡವೆಗಳು ಮತ್ತು ಕಲೆಗಳನ್ನು ಹೋಗಲಾಡಿಸುವಲ್ಲಿ ಇದು ಮಾಸ್ಟರ್ ಆಗಿದೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಎರಡು ಟೇಬಲ್ಸ್ಪೂನ್ ಚಿಯಾ ಬೀಜಗಳ ಪುಡಿಯನ್ನು ಚಮಚ ಜೇನುತುಪ್ಪದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ 1 ಚಮಚ ನಿಂಬೆ ರಸ ಕೂಡ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಮತ್ತು ಚರ್ಮಕ್ಕೆ ಅನ್ವಯಿಸಿ. ಅರ್ಧ ಗಂಟೆಯ ನಂತರ ತೊಳೆಯಿರಿ.

    Published by:renukadariyannavar
    First published: