• Home
  • »
  • News
  • »
  • lifestyle
  • »
  • Rice Face Pack: ಅನ್ನದಿಂದ ಟ್ಯಾನ್ ನಿವಾರಣೆ, ಸಿಂಪಲ್ ಆಗಿ ಫೇಸ್ ಪ್ಯಾಕ್ ಮಾಡಿಕೊಳ್ಳಿ

Rice Face Pack: ಅನ್ನದಿಂದ ಟ್ಯಾನ್ ನಿವಾರಣೆ, ಸಿಂಪಲ್ ಆಗಿ ಫೇಸ್ ಪ್ಯಾಕ್ ಮಾಡಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಮನೆಯ ಪದಾರ್ಥಗಳಿಂದಲೇ ನಿಮ್ಮ ತ್ವಚೆ ಮತ್ತು ಕೂದಲನ್ನು ಸರಿ ಮಾಡಿಕೊಳ್ಳಬಹುದು. ಬೇಯಿಸಿದ ಅನ್ನವನ್ನು ಒಮ್ಮೆ ಬಳಸಿ ನೋಡಿ. ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿನ ಹೊಳಪು ಕಂಡು ಬರುತ್ತದೆ.

  • Share this:

    ಮನೆಯಲ್ಲಿ (Home) ಅಕ್ಕಿಗೆ (Rice) ಹುಳು ಹಿಡಿದರೆ, ಅನ್ನ ಬೇಯಿಸಿದ್ದು ಹೆಚ್ಚಾಗಿ ಉಳಿದಿದ್ದರೆ ಸಾಮಾನ್ಯವಾಗಿ ಎಲ್ಲರೂ ಎಸೆಯುತ್ತಾರೆ. ಕೆಟ್ಟಿರುವ ಅಕ್ಕಿ ಮತ್ತು ಅನ್ನದಿಂದ ಏನು ಮಾಡುವುದು ಎಂದು ಒಂದು ಕ್ಷಣವೂ ಯೋಚಿಸದೇ ವೇಸ್ಟ್ ಎಂದು ಬಿಸಾಡುತ್ತಾರೆ. ನೀವು ಕೂಡ ಅದೇ ತಪ್ಪು (Mistake) ಮಾಡುತ್ತಿದ್ದೀರಿ ಎಂದಾದರೆ, ಹೀಗೆ ಮಾಡಬೇಡಿ. ಯಾಕೆಂದರೆ ಇದರಿಂದ ನೀವು ನಿಮ್ಮ ತ್ವಚೆಗೆ (Skin) ಫೇಸಿಯಲ್ (Facial) ಮಾಡಿಕೊಳ್ಳಬಹುದು. ಅಕ್ಕಿ ಮತ್ತು ಅನ್ನ ನಿಮ್ಮ ಚರ್ಮದ ಬಣ್ಣ ಮತ್ತು ಹೊಳಪು ಹೆಚ್ಚಿಸಲು ಸಹಕಾರಿ. ನಿಮಮ ತ್ವಚೆಯಲ್ಲಿರುವ ಟ್ಯಾನಿಂಗ್ ತೊಡೆದು ಹಾಕಿ, ಹೊಳಪು ಹೆಚ್ಚಿಸಲು ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ.


    ಬೇಯಿಸಿದ ಅನ್ನವನ್ನು ಕೂದಲಿನ ಆರೈಕೆಗಾಗಿ ಬಳಸುತ್ತಾರೆ


    ಇದು ಮೈಬಣ್ಣವನ್ನು ಹೆಚ್ಚಿಸುವುದು ಮಾತ್ರವಲ್ಲದೆ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೆಗೆದು ಹಾಕುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಕೆಲವರು ಬೇಯಿಸಿದ ಅನ್ನವನ್ನು ಕೂದಲಿನ ಆರೈಕೆಗಾಗಿ ನೈಸರ್ಗಿಕ ಕಂಡಿಷನರ್ ಆಗಿ ಬಳಸುತ್ತಾರೆ.


    ಪ್ರಪಂಚದಾದ್ಯಂತದ ಮಹಿಳೆಯರು ತಮ್ಮ ಸೌಂದರ್ಯಕ್ಕೆ ಮತ್ತು ಅದನನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕೆಂದು ಹುಡುಕಾಡುತ್ತಾರೆ. ತಿಳಿದುಕೊಂಡು, ನಂತರ ಅದನ್ನು ಟ್ರೈ ಮಾಡುತ್ತಾರೆ. ಮಹಿಳೆಯರು ಯಾವಾಗಲೂ ತಮ್ಮ ಮುಖದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ.


    ಇದನ್ನೂ ಓದಿ: ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ಕ್ರೀಂ ಮಾತ್ರವಲ್ಲ, ಆರೋಗ್ಯಕರ ಪಾನೀಯವನ್ನೂ ಸೇವಿಸಿ


    ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಒತ್ತಡದ ಜೀವನ ಮತ್ತು ಅನಾರೋಗ್ಯಕರ ಜೀವನಶೈಲಿ, ಆಹಾರ ಸೇವನೆಯಿಂದ ತ್ವಚೆ ಹಾಳಾಗುತ್ತ ಹೋಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಮಹಿಳೆಯರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳನ್ನು ತೆಗೆದುಕೊಂಡು ಬಂದು ತಮ್ಮ ಹೊಳಪನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.


    ಇಷ್ಟೆಲ್ಲಾ ಮಾಡಿದರೂ ತ್ವಚೆಯ ಹೊಳಪು ಸರಿಯಾಗಿ ಇರುವುದಿಲ್ಲ. ಆಗ ಚರ್ಮದ ಸಮಸ್ಯೆ ಹೆಚ್ಚುತ್ತ ಹೋಗುತ್ತದೆ. ಮತ್ತೊಂದೆಡೆ ಅದು ಇತರ ಸಮಸ್ಯೆಗಳನ್ನು ಜನರು ಅನುಭವಿಸುವಂತೆ ಮಾಡುತ್ತದೆ. ಮಾರುಕಟ್ಟೆಯ ವಸ್ತುಗಳ ದುಷ್ಪರಿಣಾಮಗಳನ್ನು ತಿಳಿದ ನಂತರವೂ ಅನೇಕರು ಈ ವಸ್ತುಗಳನ್ನು ಮತ್ತೆ ಮತ್ತೆ ಬಳಸುತ್ತಾರೆ.


    ಮತ್ತೊಂದೆಡೆ ನೀವು ಮನೆಯ ಪದಾರ್ಥಗಳಿಂದಲೇ ನಿಮ್ಮ ತ್ವಚೆ ಮತ್ತು ಕೂದಲನ್ನು ಸರಿ ಮಾಡಿಕೊಳ್ಳಬಹುದು. ಬೇಯಿಸಿದ ಅನ್ನವನ್ನು ಒಮ್ಮೆ ಬಳಸಿ ನೋಡಿ. ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿನ ಹೊಳಪು ಕಂಡು ಬರುತ್ತದೆ.


    ಅಕ್ಕಿಯಿಂದ ಮಾಡಿದ ಫೇಸ್ ಪ್ಯಾಕ್


    ಬೇಸಿಗೆಯಲ್ಲಿ ಹೆಚ್ಚುವರಿ ತೇವಾಂಶವಿರುವ ಫೇಸ್ ಪ್ಯಾಕ್ ಬಹಳ ಮುಖ್ಯ. ಇದು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಎಣ್ಣೆಯುಕ್ತ ಚರ್ಮಕ್ಕೆ ಪರಿಹಾರ ನೀಡುತ್ತದೆ. ಅದೇ ಸಮಯದಲ್ಲಿ ಫೇಸ್ ಪ್ಯಾಕ್ ಮಾಡಲು ಬೇಯಿಸಿದ ಅನ್ನವನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಮತ್ತು ಅದರಲ್ಲಿ ನಿಂಬೆ ರಸ ಮತ್ತು ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ.


    ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಮುಖದ ಮೇಲೆ ಅನ್ವಯಿಸಿ. 15 ನಿಮಿಷಗಳ ನಂತರ ಮುಖ ತೊಳೆಯುವ ಮೂಲಕ ಅದನ್ನು ತೆಗೆದು ಹಾಕಿ. ಮತ್ತು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.


    ನೈಸರ್ಗಿಕವಾಗಿ ಮುಖ ಹೊಳೆಯಲು ಬೇಯಿಸಿದ ಅಕ್ಕಿ


    ಬೇಯಿಸಿದ ಅಕ್ಕಿಯನ್ನು ನೈಸರ್ಗಿಕ ಫೇಸ್ ವಾಶ್ ಆಗಿಯೂ ಬಳಸಬಹುದು. ಇದಕ್ಕಾಗಿ ಅಕ್ಕಿಯನ್ನು ಪೇಸ್ಟ್ ಮಾಡಿ ಮತ್ತು ಅದರಲ್ಲಿ ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿ ಮಿಶ್ರಣ ಮಾಡಿ. ಪೇಸ್ಟ್ ಅನ್ನು ಸ್ವಲ್ಪ ದಪ್ಪವಾಗಿ ಮಾಡಿಕೊಳ್ಳಿ.


    ಮುಖದ ಮೇಲೆ ಸುಲಭವಾಗಿ ಅನ್ವಯಿಸಿ. ಈಗ ವೃತ್ತಾಕಾರವಾಗಿ ಉಜ್ಜಿ ಸ್ವಚ್ಛಗೊಳಿಸಿ. ಚರ್ಮವು ಹೆಚ್ಚುವರಿ ಎಣ್ಣೆಯುಕ್ತವಾಗಿದ್ದರೆ ಫೇಸ್ ವಾಶ್‌ಗಾಗಿ ಈ ವಿಧಾನವನ್ನು ಪ್ರತಿದಿನ ಪ್ರಯತ್ನಿಸಬಹುದು.


    ಟ್ಯಾನಿಂಗ್ ಮತ್ತು ಡೆಡ್ಲಿ ಸ್ಕಿನ್  ತೆಗೆದು ಹಾಕುವುದು ಹೇಗೆ?


    ಬೇಯಿಸಿದ ಅಕ್ಕಿಯನ್ನು ಸ್ಕ್ರಬ್ ಮಾಡಲು ಸಹ ಬಳಸಬಹುದು. ಅಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಮತ್ತು ಅದರಲ್ಲಿ ಕಾಫಿ ಪುಡಿಯನ್ನು ಮಿಶ್ರಣ ಮಾಡಿ. ಮೇಲೆ ಟೊಮೆಟೊ ರಸವನ್ನು ಕೂಡ ಸೇರಿಸಿ. ಈಗ ಇದನ್ನು ಮುಖಕ್ಕೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ.


    5 ನಿಮಿಷಗಳ ನಂತರ ಪ್ರತಿದಿನ ಮುಖದ ಮೇಲೆ ನೀರನ್ನು ಸಿಂಪಡಿಸಿ. ನಂತರ ಮುಖದ ಎಲ್ಲಾ ಕೊಳೆಯನ್ನು ತೆಗೆದು ಹಾಕಲು ವೃತ್ತಾಕಾರದ ಚಲನೆಯಲ್ಲಿ ಉಜ್ಜಿರಿ. ಅದರ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದರೊಂದಿಗೆ ಸ್ಕ್ರಬ್ ಮಾಡಿದ ನಂತರ ಮುಖದಲ್ಲಿ ವಿಭಿನ್ನ ಹೊಳಪು ಕಾಣುತ್ತದೆ.


    ಕೈ ಮತ್ತು ಕಾಲುಗಳ ಟ್ಯಾನಿಂಗ್ ತೆಗೆದು ಹಾಕುವುದು ಹೇಗೆ


    ಕೈಗಳು ಮತ್ತು ಪಾದಗಳು ಬಿಸಿಲಿನಲ್ಲಿ ಟ್ಯಾನಿಂಗ್ ಗೆ ಒಳಗಾಗುತ್ತವೆ. ಬೇಯಿಸಿದ ಅಕ್ಕಿ ಪೇಸ್ಟ್ ಅನ್ನು ಫ್ರಿಜ್ನಲ್ಲಿ ಸ್ವಲ್ಪ ಸಮಯದವರೆಗೆ ಇರಿಸಿ. 20 ನಿಮಿಷಗಳ ನಂತರ ಅದನ್ನು ಹೊರ ತೆಗೆದು ಅದರಲ್ಲಿ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ.


    ಇದನ್ನೂ ಓದಿ: ಮಲೇರಿಯಾ ನಿವಾರಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಈ ಆಯುರ್ವೇದ ಗಿಡಮೂಲಿಕೆಗಳು!


    ಈಗ ಅದನ್ನು ಕೈ ಮತ್ತು ಪಾದಗಳಿಗೆ ಅನ್ವಯಿಸಿ. ಸ್ನಾನ ಮಾಡುವ ಮೊದಲು ಅನ್ವಯಿಸಿಕೊಳ್ಳಿ. 15 ನಿಮಿಷಗಳ ನಂತರ ಕೈಗಳನ್ನು ಉಜ್ಜಿ ನಂತರ ತೊಳೆಯಿರಿ. ಒಂದು ದಿನ ಬಿಟ್ಟು ಒಂದು ದಿನ ಈ ವಿಧಾನವನ್ನು ಪ್ರಯತ್ನಿಸಬಹುದು.

    Published by:renukadariyannavar
    First published: