• Home
  • »
  • News
  • »
  • lifestyle
  • »
  • Skin Care: ತ್ವಚೆಯ ಸಮಸ್ಯೆ ಹೋಗಲಾಡಿಸಲು ಕರ್ಪೂರವನ್ನು ಹೀಗೆ ಬಳಸಿ!

Skin Care: ತ್ವಚೆಯ ಸಮಸ್ಯೆ ಹೋಗಲಾಡಿಸಲು ಕರ್ಪೂರವನ್ನು ಹೀಗೆ ಬಳಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ಪೂರ ನಿಮ್ಮ ತ್ವಚೆಯ ಅನೇಕ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಚರ್ಮದ ಆರೈಕೆಯಲ್ಲಿ ನಿಯಮಿತವಾಗಿ ಕರ್ಪೂರವನ್ನು ಬಳಕೆ ಮಾಡಬಹುದು. ಹಾಗಾದ್ರೆ ಮುಖದ ಚರ್ಮದ ಕಾಂತಿಗೆ ಮತ್ತು ಆರೋಗ್ಯ ಕರ್ಪೂರ ಹೇಗೆ ಮತ್ತು ಯಾವೆಲ್ಲಾ ಪ್ರಯೋಜನ ನೀಡುತ್ತದೆ. ಕರ್ಪೂರವನ್ನು ತ್ವಚೆಗೆ ಬಳಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಇಲ್ಲಿ ನೋಡೋಣ.

ಮುಂದೆ ಓದಿ ...
  • Share this:

    ಪ್ರತೀ ಮನೆಯಲ್ಲಿ (Home) ಕರ್ಪೂರವನ್ನು (Camphor) ಪೂಜೆಗೆ ಬಳಕೆ ಮಾಡ್ತಾರೆ. ಕರ್ಪೂರ ಕೇವಲ ಪೂಜೆಗೆ ಮಾತ್ರವಲ್ಲದೇ ಚರ್ಮ ಮತ್ತು ಆರೋಗ್ಯಕ್ಕೂ (Skin And Health) ಹೆಚ್ಚು ಪ್ರಯೋಜನ (Benefits) ನೀಡುತ್ತದೆ. ಬಹುಶಃ ಕರ್ಪೂರದ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಲಿಕ್ಕಿಲ್ಲ. ಕರ್ಪೂರ ಸಾಕಷ್ಟು ಆರೋಗ್ಯ ಲಾಭ ನೀಡುತ್ತದೆ. ಕರ್ಪೂರ ನಿಮ್ಮ ತ್ವಚೆಯ ಅನೇಕ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಚರ್ಮದ ಆರೈಕೆಯಲ್ಲಿ ನಿಯಮಿತವಾಗಿ ಕರ್ಪೂರವನ್ನು ಬಳಕೆ ಮಾಡಬಹುದು. ಹಾಗಾದ್ರೆ ಮುಖದ ಚರ್ಮದ ಕಾಂತಿಗೆ ಮತ್ತು ಆರೋಗ್ಯ ಕರ್ಪೂರ ಹೇಗೆ ಮತ್ತು ಯಾವೆಲ್ಲಾ ಪ್ರಯೋಜನ ನೀಡುತ್ತದೆ. ಕರ್ಪೂರವನ್ನು ತ್ವಚೆಗೆ ಬಳಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಇಲ್ಲಿ ನೋಡೋಣ.


    ಕರ್ಪೂರ ತ್ವಚೆಗೆ ಯಾವೆಲ್ಲಾ ಲಾಭ ತಂದು ಕೊಡುತ್ತದೆ?


    ತ್ವಚೆಯ ತುರಿಕೆ ನಿವಾರಿಸುತ್ತದೆ


    ಕರ್ಪೂರವು ತುರಿಕೆ ಕಡಿಮೆ ಮಾಡುವ ಗುಣ ಮತ್ತು ಗಾಯದ ಸೋಂಕು ತಡೆಯುವ, ಉರಿಯೂತ ಕಡಿಮೆ ಮಾಡುವ ಗುಣಲಕ್ಷಣ ಹೊಂದಿದೆ. ಈ ಎಲ್ಲಾ ಗುಣಲಕ್ಷಣಗಳು ಚರ್ಮದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.


    ಸುಡುವ ಸಂವೇದನೆ ಕಡಿಮೆ ಮಾಡುತ್ತದೆ


    ಸುಟ್ಟ ಗಾಯದ ಮೇಲೆ ಕರ್ಪೂರ ಹಚ್ಚಿದರೆ, ಅದು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಮತ್ತು ಗಾಯವನ್ನು ಗುಣಪಡಿಸುವ ಪ್ರಕ್ರಿಯೆಯು ತುಂಬಾ ವೇಗವಾಗುತ್ತದೆ. ಕಿರಿಕಿರಿ ಕಡಿಮೆ ಮಾಡುತ್ತದೆ. ಸುಟ್ಟ ಗಾಯ ಗುಣಪಡಿಸಲು ಎಳ್ಳೆಣ್ಣೆ, ಜೇನುತುಪ್ಪ ಮತ್ತು ಕರ್ಪೂರವನ್ನು ಔಷಧದಲ್ಲಿ ಬಳಸುತ್ತಾರೆ.




    ಎಸ್ಜಿಮಾ ಸಮಸ್ಯೆಗೆ ಪರಿಹಾರ ನೀಡುತ್ತದೆ


    ಎಸ್ಜಿಮಾ ಚರ್ಮದ ಕಾಯಿಲೆ ಆಗಿದೆ. ಇದು ತ್ವಚೆಯ ಸಮಸ್ಯೆ. ಚರ್ಮದ ಮೇಲೆ ತುರಿಕೆ, ದದ್ದು ಸಮಸ್ಯೆ ಕಾಡುತ್ತವೆ. ಹವಾಮಾನ ಬದಲಾದಾಗ ಇದು ಹೆಚ್ಚುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಕರ್ಪೂರದ ಬಳಕೆ ಪ್ರಯೋಜನಕಾರಿ ಆಗಿದೆ.


    ಮೊಡವೆ ಹೋಗಲಾಡಿಸುತ್ತದೆ


    ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಸಾಮಾನ್ಯವಾಗಿ ಮೊಡವೆ ಸಮಸ್ಯೆ ಎದುರಿಸುತ್ತಾರೆ. ಆಗ ಕರ್ಪೂರವನ್ನು ಬಳಸಿದರೆ ಸಮಸ್ಯೆ ಕಡಿಮೆ ಆಗುತ್ತದೆ. ಮೊಡವೆಗಳಿಂದ ಉಂಟಾದ ಕಲೆಗಳನ್ನು ತೆಗೆದು ಹಾಕುತ್ತದೆ.


    ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಕರ್ಪೂರ ಬಳಸುವುದು ಹೇಗೆ?


    ಕರ್ಪೂರ ಮತ್ತು ಕ್ಯಾಸ್ಟರ್ ಆಯಿಲ್


    ಒಂದು ಬಟ್ಟಲಿನಲ್ಲಿ 1 ಚಮಚ ಕರ್ಪೂರದ ಪುಡಿ ಹಾಗೂ ಅದಕ್ಕೆ ಎರಡು ಚಮಚ ಕ್ಯಾಸ್ಟರ್ ಆಯಿಲ್ ಹಾಕಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ ಸುಮಾರು 20 ನಿಮಿಷ ಬಿಟ್ಟು ಸರಳ ನೀರಿನಿಂದ ಮುಖ ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಮಾಡಿ.


    ಕರ್ಪೂರ ಮತ್ತು ಬಾದಾಮಿ ಎಣ್ಣೆ


    ಬಟ್ಟಲಿನಲ್ಲಿ ಚಮಚ ಕರ್ಪೂರದ ಪುಡಿ ಮತ್ತು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಮಾಡಿ.


    ಕರ್ಪೂರ ಮತ್ತು ಮುಲ್ತಾನಿ ಮಿಟ್ಟಿ


    ಚಮಚ ಕರ್ಪೂರದ ಪುಡಿ, ಎರಡು ಚಮಚ ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೊಮ್ಮೆ ಮಾಡಿ.


    ಕರ್ಪೂರ ಮತ್ತು ತೆಂಗಿನ ಎಣ್ಣೆ


    ಚಮಚ ಕರ್ಪೂರದ ಪುಡಿ ಮತ್ತು ಎರಡು ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ಅನ್ವಯಿಸಿ, 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರಕ್ಕೊಮ್ಮೆ ಮಾಡಿ.


    ಇದನ್ನೂ ಓದಿ: ಶುಂಠಿ ಸೇವನೆಯ ಈ ಪ್ರಯೋಜನಗಳ ಬಗ್ಗೆ ತಿಳಿಯಿರಿ, ಅನೇಕ ಸಮಸ್ಯೆಗಳಿಗೆ ರಾಮಬಾಣ ಈ ಶುಂಠಿ!


    ಕರ್ಪೂರ ಮತ್ತು ಕಡಲೆಹಿಟ್ಟು


    ಚಮಚ ಕರ್ಪೂರದ ಪುಡಿ, ಎರಡು ಚಮಚ ಕಡಲೆಹಿಟ್ಟು ಮತ್ತು 2 ಚಮಚ ತೆಂಗಿನೆಣ್ಣೆ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ. ಅರ್ಧ ಘಂಟೆ ಬಿಟ್ಟು, ಮಸಾಜ್ ಮಾಡುತ್ತಾ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಮಾಡಿ.

    Published by:renukadariyannavar
    First published: