• Home
  • »
  • News
  • »
  • lifestyle
  • »
  • Burans Flower And Beauty: ಚರ್ಮದ ಸಮಸ್ಯೆಗೆ ಹೂವಿನಲ್ಲಿದೆ ಮದ್ದು! ಮುಖದ ಹೊಳಪು ಹೆಚ್ಚಿಸೋ ಬುರಾನ್ಶ್!

Burans Flower And Beauty: ಚರ್ಮದ ಸಮಸ್ಯೆಗೆ ಹೂವಿನಲ್ಲಿದೆ ಮದ್ದು! ಮುಖದ ಹೊಳಪು ಹೆಚ್ಚಿಸೋ ಬುರಾನ್ಶ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಟ್ಟದ ಹಣ್ಣುಗಳು ಮತ್ತು ಹೂವುಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಹಾಗಾಗಿ ಸ್ಥಳೀಯ ಜನರು ಈ ವಸ್ತುಗಳನ್ನು ಮನೆಮದ್ದುಗಳಾಗಿ ಬಳಸುತ್ತಾರೆ. ಉತ್ತರಾಖಂಡದಲ್ಲಿ ಕಂಡು ಬರುವ ಬುರಾನ್ಶ್ ಹೂವುಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿವೆ.

  • Share this:

    ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಪ್ರಜ್ಞೆ (Beauty Conscious), ಸೌಂದರ್ಯದ ಕಾಳಜಿ (Care) ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಅದಾಗ್ಯೂ ನಾವು ನಮ್ಮ ಸೌಂದರ್ಯದ ಬಗ್ಗೆ ಕಾಳಜಿ ಮಾಡದೇ ಹೋದರೆ ಅದು ನಮ್ಮ ಸ್ಕಿನ್ ನ್ನು (Skin) ಮಂದವಾಗಿಸುತ್ತದೆ. ಇದರಿಂದ ಯವ್ವನದಲ್ಲೂ ಮುಖ (Face) ಬಾಡಿದಂತೆ ಕಾಣುತ್ತದೆ. ಮೊಡವೆ, ಸುಕ್ಕುಗಳು, ನೆರಿಗೆಗಳು ಮುಖದಲ್ಲಿ ಗೋಚರವಾಗುತ್ತವೆ. ಇದು ಮುಖದ ಅಂದವನ್ನು ಹಾಳು ಮಾಡುತ್ತದೆ. ಅದಾಗ್ಯೂ, ಮುಖದ ಸೌಂದರ್ಯವನ್ನು ಹಾಳು ಮಾಡುವ ಹಲವು ವಿಷಯಗಳಿವೆ. ಜೊತೆಗೆ ಮುಖದ ಸೌಂದರ್ಯ ಹೆಚ್ಚಿಸಲು ಸಾಕಷ್ಟು ಉಪಾಯ ಹಾಗೂ ಮಾರ್ಗಗಳಿವೆ. ಚರ್ಮವು ಮಂದವಾಗಿದೆ, ಡಲ್ ಆಗಿದೆ, ಬಣ್ಣ ಕಳೆ ಗುಂದಿದೆ ಎನ್ನಿಸುತ್ತದೆ.


    ಮುಖದ ಹೊಳಪು ತರಲು ನೈಸರ್ಗಿಕ ವಿಧಾನ


    ಆಗ ಕೆಲವು ಮನೆಮದ್ದುಗಳ ಸಹಾಯದಿಂದ ಮುಖದ ಹೊಳಪು ತರಲು ಪ್ರಯತ್ನ ಮಾಡುವುದು ತುಂಬಾ ಮುಖ್ಯ. ಇಲ್ಲಿ ನಿಮ್ಮ ಮುಖದ ಹೊಳಪು ಹೆಚ್ಚಿಸಲು ಕೆಲವು ವಿಧಾನಗಳು ಇವೆ. ನೀವು ಇವುಗಳನ್ನು ಮಾಡುವ ಮೂಲಕ ನಿಮ್ಮ ಮುಖದ ಬಣ್ಣ ಹಾಗೂ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.


    ಉತ್ತರಾಖಂಡದಲ್ಲಿ ಕಂಡು ಬರುವ ಬುರಾನ್ಶ್ ಹೂವುಗಳು


    ಬೆಟ್ಟದ ಹಣ್ಣುಗಳು ಮತ್ತು ಹೂವುಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಹಾಗಾಗಿ ಸ್ಥಳೀಯ ಜನರು ಈ ವಸ್ತುಗಳನ್ನು ಮನೆಮದ್ದುಗಳಾಗಿ ಬಳಸುತ್ತಾರೆ. ಉತ್ತರಾಖಂಡದಲ್ಲಿ ಕಂಡು ಬರುವ ಬುರಾನ್ಶ್ ಹೂವುಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿವೆ. ಹಿಮಾಲಯದಲ್ಲಿ ವಸಂತ ಕಾಲದಲ್ಲಿ ಅರಳುವ ಈ ಹೂವನ್ನು ಅನೇಕ ಮಹಿಳೆಯರು ಚರ್ಮದ ಆರೈಕೆಗಾಗಿ ಇದನ್ನು ಬಳಸುತ್ತಾರೆ.


    ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?


    ಬುರಾನ್ಶ್ ಹೂವು ಮುಖದ ಹೊಳಪು ಹೆಚ್ಚಿಸುತ್ತದೆ


    ಬುರಾನ್ಶ್ ಹೂವುಗಳನ್ನು ಹಲವು ವಿಧಗಳಲ್ಲಿ ಸೌಂದರ್ಯ ವೃದ್ಧಿಗಾಗಿ ಬಳಸಲಾಗುತ್ತದೆ. ಜೊತೆಗೆ ಆಹಾರವಾಗಿಯೂ ಬಳಸುವುದು ರೂಢಿಯಲ್ಲಿದೆ. ಬುರಾನ್ಶ್ ಹೂವನ್ನು ಚಹಾ, ಚಟ್ನಿ ಅಥವಾ ಇತರ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ಆಳವಾದ ಕೆಂಪು ಹೂವು ಆಂಥೋಸಯಾನಿನ್ ಎಂಬ ಸಂಯುಕ್ತದಲ್ಲಿ ಸಮೃದ್ಧವಾಗಿದೆ.


    ಆಂಥೋಸಯಾನಿನ್‌ಗಳ ಗುಣಲಕ್ಷಣಗಳಿಂದಾಗಿ, ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇದು ಚರ್ಮಕ್ಕೆ ಹೊಳಪು ತರಲು ಸಹಾಯ ಮಾಡುತ್ತದೆ. ಜನರು ಇದನ್ನು ಚಟ್ನಿ, ಶರಬತ್ ಅಥವಾ ಚಹಾದ ರೂಪದಲ್ಲಿ ಸೇವಿಸುತ್ತಾರೆ. ದಾಸವಾಳದ ಹೂವುಗಳಿಂದ ಚಹಾ ಹೇಗೆ ತಯಾರಿಸಬಹುದೋ ಅದೇ ರೀತಿ ಬುರಾನ್ಶ್ ಹೂವುಗಳಿಂದ ಚಹಾ ಮಾಡಿ ಸೇವಿಸಬಹುದು.


    ಬೇಸಿಗೆಯಲ್ಲಿ ಚರ್ಮದ ಕಿರಿಕಿರಿ ಶಮನಗೊಳಿಸುತ್ತದೆ


    ಬೇಸಿಗೆಯಲ್ಲಿ ಸ್ಕಿನ್ ಕೆರಳಿಕೆ ಸಮಸ್ಯೆಗೆ ಪಹಾರಿ ಜನರು ಬುರಾನ್ಶ್ ಹೂವುಗಳಿಂದ ಮಾಡಿದ ಶರಬತ್ ಅನ್ನು ಪ್ರತಿದಿನ ಕುಡಿಯುತ್ತಾರೆ. ಇದಕ್ಕಾಗಿ, ಹೂವುಗಳ ದಳಗಳನ್ನು ಬೇರ್ಪಡಿಸಿ ನಂತರ ಸಿರಪ್ ಅನ್ನು ತಯಾರಿಸುತ್ತಾರೆ. ಇದರ ಸೇವನೆಯಿಂದ ಚರ್ಮದ ಕಿರಿಕಿರಿ ಶಾಂತವಾಗುತ್ತದೆ. ಇದು ಸೂರ್ಯನ ನೇರ ಕಿರಣಗಳ ಹಾನಿಯಿಂದ ರಕ್ಷಿಸುತ್ತದೆ.


    ವಯಸ್ಸಾದ ವಿರೋಧಿಯಾಗಿ ಕೆಲಸ ಮಾಡುತ್ತದೆ


    ಬುರಾನ್ಶ್ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಸಂಗ್ರಹಿಸಿಡಲಾಗುತ್ತದೆ. ಇದನ್ನು ಪೇಸ್ಟ್‌ನಂತೆ ಅಥವಾ ಫೇಸ್ ಪ್ಯಾಕ್‌ ಮಾಡಲು ಬಳಸಬಹುದು. ಬುರಾನ್ಶ್ ಚರ್ಮದ ಹಾನಿ ತಡೆಯಲು ಅತ್ಯಂತ ಪರಿಣಾಮಕಾರಿ ಹೂವು. ಇದು ಉತ್ಕರ್ಷಣ ನಿರೋಧಕ, ಉರಿಯೂತದ,


    ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ, ಇದು ಚರ್ಮದ ಅಲರ್ಜಿಯಿಂದ ರಕ್ಷಿಸುತ್ತದೆ. ವಯಸ್ಸಾದ ವಿರೋಧಿ ಹಾಗೂ ಸುಕ್ಕುಗಳು ಮತ್ತು ನೆರಿಗೆಗಳನ್ನು ತೆಗೆದು ಹಾಕಲು ಸಹಕಾರಿ.


    ಇದನ್ನೂ ಓದಿ: ಥೈರಾಯ್ಡ್ ನಿಯಂತ್ರಣಕ್ಕೆ ಆಯುರ್ವೇದ ವಿಧಾನ! ಇದು ಅತ್ಯಂತ ಪ್ರಯೋಜನಕಾರಿ


    ಇದನ್ನು ನೆನಪಿಡಿ


    ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಬುರಾನ್ಶ್ ಹೂವನ್ನು ಸೇವಿಸುವ ಅಥವಾ ಅನ್ವಯಿಸುವ ಮೊದಲು, ತಜ್ಞರನ್ನು ಸಂಪರ್ಕಿಸಿ. ಬುರಾನ್ಶ್ ಪರ್ವತ ಹೂವು. ಹಾಗಾಗಿ ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಬಳಸುವುದು ಉತ್ತಮ ಎಂಬುದರ ಕುರಿತು ಮಾಹಿತಿ ಪಡೆಯಬೇಕು. ಬೆಟ್ಟದ ಜನರು ಈ ಹೂವಿಗೆ ಒಗ್ಗಿಕೊಂಡಿದ್ದಾರೆ.

    Published by:renukadariyannavar
    First published: