ಮನೆಯಿಂದ ಜಿರಳೆ, ಹಲ್ಲಿಗಳನ್ನು ಓಡಿಸಬೇಕೆ? ಇಲ್ಲಿದೆ ನೋಡಿ ಸುಲಭ ಉಪಾಯ

ಹಲ್ಲಿ, ಜಿರಲೆಗಳನ್ನು ಹೋಗಲಾಡಿಸಲು ಅನೇಕ ಔಷಧಿಗಳಿದ್ದರೂ, ಅವುಗಳನ್ನು ಬಳಸಿ ಈ ಕೀಟಗಳನ್ನು ಸಂಪೂರ್ಣವಾಗಿ ಓಡಿಸುವುದು ಪ್ರಯಾಸದ ಕೆಲಸ.

zahir | news18
Updated:May 17, 2019, 9:47 PM IST
ಮನೆಯಿಂದ ಜಿರಳೆ, ಹಲ್ಲಿಗಳನ್ನು ಓಡಿಸಬೇಕೆ? ಇಲ್ಲಿದೆ ನೋಡಿ ಸುಲಭ ಉಪಾಯ
@Khoobsurati.com
zahir | news18
Updated: May 17, 2019, 9:47 PM IST
ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸಮಾನ್ಯ. ಆದರೆ ಇದನ್ನು ಸಾಮಾನ್ಯ ಸಮಸ್ಯೆ ಎನ್ನುವಂತಿಲ್ಲ. ಏಕೆಂದರೆ ಹಲ್ಲಿಗಳು, ಜಿರಲೆಗಳು ಹೆಚ್ಚಾದಂತೆ ಅಪಾಯ ಕೂಡ ಹೆಚ್ಚಾಗುತ್ತದೆ. ಮನೆಯಲ್ಲಿರಿಸಿದ ಆಹಾರಗಳ ಮೇಲೆ ಇಂತಹ ವಿಷಕಾರಿ ಕೀಟಗಳು ಒಡಾಡುವುದರಿಂದ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇತ್ತೀಚಿನ ದಿನಗಳಲ್ಲಿ ಮನೆಯ ಪ್ರತಿಯೊಂದು ಕೋಣೆಗಳನ್ನು ಹಲ್ಲಿ ಮತ್ತು ಜಿರಲೆಗಳನ್ನು ತಮ್ಮದೇ ವಾಸಸ್ಥಾನ ಆಗಿಸುತ್ತಿರುವುದು ಹಲವರ ನಿದ್ದೆಗೆಡಿಸಿದೆ. ಇನ್ನು ಕೆಲವರಿಗೆ ಹಲ್ಲಿ ಅಂದರೆ ಸಾಕು ಹೃದಯ ಬಡಿತ ಹೆಚ್ಚಾಗುತ್ತದೆ. ಹಲ್ಲಿ, ಜಿರಳೆಗಳನ್ನು ಹೋಗಲಾಡಿಸಲು ಅನೇಕ ಔಷಧಿಗಳಿದ್ದರೂ, ಅವುಗಳನ್ನು ಬಳಸಿ ಈ ಕೀಟಗಳನ್ನು ಸಂಪೂರ್ಣವಾಗಿ ಓಡಿಸುವುದು ಪ್ರಯಾಸದ ಕೆಲಸ. ಆದರೆ ಕೆಲವೊಂದು ಸುಲಭ ಉಪಾಯಗಳನ್ನು ನೀವು ಮಾಡಿದ್ದಲ್ಲಿ ಹಲ್ಲಿ, ಜಿರಳೆಗಳನ್ನು ಮನೆಯಿಂದ ಓಡಿಸಬಹುದು. ಅಂತಹ ಸರಳ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.

- ಹಲ್ಲಿಗಳಿಗೆ ಮೊಟ್ಟೆಯ ವಾಸನೆ ಆಗಿ ಬರುವುದಿಲ್ಲ. ಹೀಗಾಗಿ ಮನೆಯಿಂದ ಹಲ್ಲಿಗಳನ್ನು ಓಡಿಸಲು ನೀವು ಮೊಟ್ಟೆ ಚಿಪ್ಪಿನ ಮೊರೆ ಹೋಗಬಹುದು.  ಮೊಟ್ಟೆಯ ವಾಸನೆಯನ್ನು ಕೂಡಿರುವ ಮೊಟ್ಟೆ ಚಿಪ್ಪುಗಳನ್ನು ಮನೆಯ ಮೂಲೆ ಮೂಲೆಗಳಲ್ಲಿ ಮತ್ತು ಬಾಗಿಲು ಹಾಗೂ ಕಿಟಕಿಗಳ ಹತ್ತಿರ ಇರಿಸಿದರೆ ಹಲ್ಲಿಗಳು ಒಳ ಪ್ರವೇಶಿಸುವುದಿಲ್ಲ.

- ಬೆಳ್ಳುಳ್ಳಿಯ ಪರಿಮಳದಿಂದ ಕೂಡ ಹಲ್ಲಿಗಳು ದೂರವಿರುತ್ತದೆ. ಹಾಗಾಗಿ ಹಲ್ಲಿಗಳು ಕಂಡು ಬರುವ ಜಾಗದಲ್ಲಿ ಬೆಳ್ಳುಳ್ಳಿ ಮೊಗ್ಗುಗಳನ್ನು ಇರಿಸಿದರೆ ಹಲ್ಲಿಗಳು ಹೊರ ಹೋಗುತ್ತದೆ.

- ತಂಬಾಕು ಮತ್ತು ಕಾಫಿ ಪುಡಿಯ ಮಿಶ್ರಣವನ್ನು ಬಳಸಿ ಸಹ ಹಲ್ಲಿಗಳನ್ನು ಸಂಪೂರ್ಣ ತೊಡೆದು ಹಾಕಬಹುದು. ತಂಬಾಕು ಪುಡಿ ಹಾಗೂ ಕಾಫಿ ಪುಡಿಯನ್ನು ಮಿಶ್ರಣಗೊಳಿಸಿ ಸಣ್ಣ ಪುಟ್ಟ ಮಾತ್ರೆಗಳನ್ನಾಗಿಸಿ, ಇದಕ್ಕೆ ಬೆಂಕಿ ಕಡ್ಡಿಯ ಮದ್ದನ್ನು ಸೇರಿಸಿ ಹಲ್ಲಿಗಳಿರುವ ಸ್ಥಳದಲ್ಲಿರಿಸಿ. ಈ ಮಿಶ್ರಣ ಹಲ್ಲಿಗಳಿಗೆ ಪ್ರಾಣಾಂತಿಕವಾಗಿವೆ.

- ಈರುಳ್ಳಿ ವಾಸನೆಯಿರುವೆಡೆ ಹಲ್ಲಿಗಳು ಬರುವುದಿಲ್ಲ. ಅದಕ್ಕಾಗಿ ಈರುಳ್ಳಿಯ ರಸವನ್ನು ತೆಗೆದು ಸ್ಪ್ರೇ ಮಾಡಿಕೊಳ್ಳಿ. ಇದರಿಂದ ಹಲ್ಲಿಗಳು ಮನೆಯೊಳಗೆ ಇರುವುದಿಲ್ಲ.- ನಾಫ್ಥಲೇನ್ ಗುಳಿಗೆ (ಡಾಂಬರ್ ಗುಳಿಗೆ)ಯನ್ನು ಇಟ್ಟರೂ ಕೀಟಗಳು ಮತ್ತು ಹಲ್ಲಿಗಳು ಮನೆಯಿಂದ ಹೊರಹೋಗುತ್ತದೆ. ಇದನ್ನು ಕೋಣೆಗಳಲ್ಲಿ, ಅಡುಗೆ ಮನೆಯಲ್ಲಿರಿಸಿ. ಅದರ ವಾಸನೆಯಿಂದ, ಕೀಟಗಳು, ಜಿರಳೆಗಳು ಮತ್ತು ಹಲ್ಲಿಗಳು ದೂರವಿರುತ್ತವೆ.

- ಮನೆಯ ಮೂಲೆಗಳಲ್ಲಿ ಕಾಫಿ ಬೀಜಗಳನ್ನು ಇಡುವುದರಿಂದ ಸಹ ಹಲ್ಲಿ ಮತ್ತು ಜಿರಳೆಗಳು ಹೊರ ಹೋಗುತ್ತವೆ.

ಇದನ್ನೂ ಓದಿ: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ