Around Eyebrow Pimple: ಹುಬ್ಬುಗಳ ಮೇಲೆ ಪದೇ ಪದೇ ಗುಳ್ಳೆ ಆಗ್ತಿದೆಯಾ? ಇಲ್ಲಿದೆ ನೋಡಿ ಸರಳ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹುಬ್ಬುಗಳ ಮೇಲೆ ಹಠಾತ್ ಮೊಡವೆಗಳು ಉಂಟಾದರೆ ಅದು ನೋವಿನ ಜೊತೆಗೆ ಮುಖದ ಅಂದವನ್ನು ಹಾಳು ಮಾಡುತ್ತದೆ. ಜೊತೆಗೆ ಕಲೆಗಳು ಉಂಟಾಗುತ್ತವೆ. ಇದು ಮುಖದ ನೋಟವನ್ನೇ ಬದಲಾಯಿಸಿ ಬಿಡುತ್ತದೆ.

  • Share this:

    ಮುಖದ (Face) ಮೇಲೆ ಮೊಡವೆಗಳಾಗುವುದು (Acne) ಸಾಮಾನ್ಯ ಸಂಗತಿ. ಅದೇ ಕೆಲವೊಮ್ಮೆ ಐಬ್ರೋ (Eyebrow) ಸುತ್ತ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಇದು ತುಂಬಾ ನೋವುಂಟು ಮಾಡುತ್ತದೆ. ಅದು ಕಣ್ಣಿನ ಮೇಲ್ಭಾಗದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಉಂಟಾಗುವ ನೋವು ಕಾಡುತ್ತದೆ. ಮೊಡವೆಗಳು ಹದಿಹರೆಯದಲ್ಲಿ ಹೆಚ್ಚು. ಹಣೆ, ಗಲ್ಲ ಮತ್ತು ಕೆನ್ನೆ ಭಾಗದಲ್ಲಿ ಮೊಡವೆ ಆಗುತ್ತವೆ. ಮೊಡವೆಗಳು ಯಾವಾಗ ಬೇಕಾದರೂ ಆಗುತ್ತವೆ. ಹುಬ್ಬುಗಳ ಮೇಲೆ ಹಠಾತ್ ಮೊಡವೆಗಳು ಉಂಟಾದರೆ ಅದು ನೋವಿನ ಜೊತೆಗೆ ಮುಖದ ಅಂದವನ್ನು (Beauty) ಹಾಳು ಮಾಡುತ್ತದೆ. ಜೊತೆಗೆ ಕಲೆಗಳು ಉಂಟಾಗುತ್ತವೆ. ಇದು ಮುಖದ ನೋಟವನ್ನೇ ಬದಲಾಯಿಸಿ ಬಿಡುತ್ತದೆ.


    ಹುಬ್ಬುಗಳ ಮೇಲಿನ ಮೊಡವೆಗಳಿಗೆ ಕಾರಣಗಳು ಏನು?


    ಕೂದಲು ಬೆಳೆಯುವುದು ಗುಳ್ಳೆಗೆ ಕಾರಣ


    ಇಂಗ್ರೋನ್ ಕೂದಲು ಬೆಳೆಯುತ್ತದೆ. ಇದರಿಂದ ಚರ್ಮದಲ್ಲಿ ಬ್ಯಾಕ್ಟೀರಿಯಾ ಉಂಟಾಗುತ್ತವೆ. ಇಂಗ್ರೋನ್ ಕೂದಲು ಹುಬ್ಬುಗಳು ಮತ್ತು ಹಣೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಆಗ ಮೊಡವೆ ಸಮಸ್ಯೆ ಉಂಟಾಗುತ್ತದೆ.


    ಕೂದಲಿನ ಸಮಸ್ಯೆ ಹೋಗಲಾಡಿಸಲು ವಾರಕ್ಕೆ ಎರಡು ಬಾರಿ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಿ. ಇದು ಸಣ್ಣ ಕೂದಲಿನ ಸಂಖ್ಯೆ ಕಡಿಮೆ ಮಾಡುತ್ತದೆ. ಇದು ಮೊಡವೆಗಳ ಸಮಸ್ಯೆ ಕಡಿಮೆ ಮಾಡುತ್ತದೆ.


    ಹುಬ್ಬುಗಳ ಮೇಲೆ ಕೊಳಕು ಇರುವುದು ಗುಳ್ಳೆಗೆ ಕಾರಣ


    ಹೆಚ್ಚಿನವರು ಮೇಕಪ್ ತೆಗೆದ ನಂತರ ಹುಬ್ಬು ಸ್ವಚ್ಛಗೊಳಿಸಲ್ಲ. ಆಗ ಹುಬ್ಬುಗಳ ಬಳಿ ಇರುವ ಪೌಡರ್, ಬೇಸ್ ಮತ್ತು ಅಡಿಪಾಯ ಹಾಗೇ ಉಳಿಯುತ್ತದೆ. ಅದರ ಶುಚಿತ್ವದ ಕೊರತೆಯಿಂದ ಈ ಸ್ಥಳದಲ್ಲಿ ಸೋಂಕು ಬೆಳೆಯುತ್ತದೆ.


    ಇದು ಸಣ್ಣ ಮೊಡವೆ ಉಂಟು ಮಾಡುತ್ತದೆ. ಅದಕ್ಕಾಗಿ ಹುಬ್ಬುಗಳ ನೈರ್ಮಲ್ಯ ಕಾಪಾಡಿ. ಮತ್ತು ಪ್ರತಿದಿನ ರೋಸ್ ವಾಟರ್ ನಿಂದ ಹುಬ್ಬುಗಳನ್ನು ಸ್ವಚ್ಛಗೊಳಿಸಿ.




    ಡ್ಯಾಂಡ್ರಫ್ ನಿಂದಲೂ ಗುಳ್ಳೆಗಳು ಆಗುತ್ತವೆ  


    ಚಳಿಗಾಲದಲ್ಲಿ ತಲೆಹೊಟ್ಟು ಒಣಗಿ ಅದು ತಲೆ ಬಾಚಿದಾಗ ಉದುರುತ್ತದೆ. ಇದು ಹುಬ್ಬುಗಳ ಮಧ್ಯೆ ಸೇರಿದರೆ ಗುಳ್ಳೆಗಳು ಉಂಟಾಗುತ್ತವೆ.


    ಥ್ರೆಡ್ಡಿಂಗ್ ಮಾಡುವುದು ಗುಳ್ಳೆಗೆ ಕಾರಣ


    ಕಣ್ಣುಗಳ ಸುತ್ತಲಿನ ಚರ್ಮವು ಸೂಕ್ಷ್ಮ ಮತ್ತು ಸಡಿಲವಾಗಿದ್ದರೆ ಅದು ಥ್ರೆಡ್ಡಿಂಗ್ ವೇಳೆ ನೋವುಂಟಾಗಲು ಕಾರಣವಾಗುತ್ತದೆ. ಆಗ ಗುಳ್ಳೆ, ಕೆಂಪು ದದ್ದು ಉಂಟಾಗುತ್ತವೆ. ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ.


    ಆಗ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹುಬ್ಬುಗಳಿಂದ ಕೂದಲನ್ನು ತೆಗೆಯುವ ಮೊದಲು ಚರ್ಮದ ಎಫ್ಫೋಲಿಯೇಶನ್ ಮಾಡಿ. ಅಲೋವೆರಾ ಜೆಲ್ ಹಚ್ಚಿರಿ.


    ಸಾಂದರ್ಭಿಕ ಚಿತ್ರ


    ಮೇಕಪ್ ಉತ್ಪನ್ನಗಳ ಅತಿಯಾದ ಬಳಕೆ


    ಮೇಕಪ್ ಅತಿಯಾಗಿ ಮಾಡುವುದು, ಯಾವಾಗಲೂ ಹುಬ್ಬಿಗೆ ಮೇಕಪ್ ಹಾಕುವುದು, ಗುಳ್ಳೆ ಸಮಸ್ಯೆಗೆ ಕಾರಣ. ಮೇಕಪ್ ಅನ್ನು ತೆಗೆದು ಹಾಕುವಾಗ ಹುಬ್ಬುಗಳನ್ನು ಮರೆಯುತ್ತೇವೆ. ಇದು ಗುಳ್ಳೆಗೆ ಕಾರಣವಾಗುತ್ತದೆ.


    ಹುಬ್ಬಿನ ಮೇಲಾಗುವ ಗುಳ್ಳೆಗಳನ್ನು ತಪ್ಪಿಸುವ ಮಾರ್ಗಗಳು ಹೀಗಿವೆ


    ಪ್ರತಿ ರಾತ್ರಿ ಮಲಗುವ ಮೊದಲು ಮೇಕಪ್ ಅನ್ನು ಸರಿಯಾಗಿ ತೆಗೆದು ಹಾಕಿ. ಮುಖ ಮತ್ತು ಹುಬ್ಬನ್ನು ಸ್ವಚ್ಚಗೊಳಿಸಿ. ನೀವು ಮೇಕಪ್ ವೇಳೆ ಬಳಸುವ ಹುಬ್ಬು ಬ್ರಶ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಕೆಲವೊಮ್ಮೆ ಕೊಳಕು ಹುಬ್ಬು ಬ್ರಷ್‌ಗಳು ನಿಮ್ಮ ಹುಬ್ಬುಗಳ ಮೇಲೆ ಮೊಡವೆ ಉಂಟು ಮಾಡುತ್ತವೆ.


    ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರ ತೂಕ ಎಷ್ಟಿರಬೇಕು? ಅವರ ಜೀವನಶೈಲಿ ಹೇಗಿರಬೇಕು?


    ಮುಖದ ಮೇಲೆ ಪೌಡರ್ ಬೇಸ್ ಮೇಕಪ್ ಅನ್ನು ಅನ್ವಯಿಸಿ. ಅದು ಹೆಚ್ಚುವರಿ ಎಣ್ಣೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಮುಖದ ಮೇಲಿನ ಮೊಡವೆಗಳನ್ನು ತೆಗೆದು ಹಾಕಲು, ಟೀ ಟ್ರೀ ಎಣ್ಣೆಯನ್ನು ಹತ್ತಿ ಸ್ವ್ಯಾಬ್‌ ನೆನೆಸಿ ಮತ್ತು ಹುಬ್ಬುಗಳ ಮೇಲೆ ಹಚ್ಚಿ.


    ಅಲೋವೆರಾ ಜೆಲ್ ಅನ್ನು ಅನ್ವಯಿಸಿ. ರೋಸ್ ವಾಟರ್ ಅನ್ನು ಸೇರಿಸಬಹುದು. ಇದು ಚರ್ಮಕ್ಕೆ ಪೋಷಣೆ ನೀಡುತ್ತದೆ. ಹುಬ್ಬುಗಳ ಮೇಲೆ ರೋಸ್ಮರಿ ಎಣ್ಣೆ ಹಚ್ಚಿ.

    Published by:renukadariyannavar
    First published: