ಪಾದ್ರಿಯಾಗಬೇಕೆಂದು ಕನಸು ಕಂಡಿದ್ದ ಯುವಕನಿಗೆ ಆಗಿದ್ದು ಹೊಸ ಅನುಭವ

1993 ರ ಘಟನೆ ಸಂಬಂಧ ಹತ್ತು ವರ್ಷಗಳ ನಂತರ ಅಂದರೆ 2013ರಲ್ಲಿ ದೂರು ನೀಡಲು ತೀರ್ಮಾನಿಸಿದೆ. ಅಂದು ನಾನು ಕಾರ್ಯ ನಿರ್ವಹಿಸಿದ ಚರ್ಚ್​ ಅಧಿಕಾರಿಗಳಿಗೆ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಔಪಚಾರಿಕ ದೂರನ್ನು ನೀಡಿದೆ.

news18
Updated:November 19, 2018, 4:54 PM IST
ಪಾದ್ರಿಯಾಗಬೇಕೆಂದು ಕನಸು ಕಂಡಿದ್ದ ಯುವಕನಿಗೆ ಆಗಿದ್ದು ಹೊಸ ಅನುಭವ
.
  • Advertorial
  • Last Updated: November 19, 2018, 4:54 PM IST
  • Share this:
ಹದಿಹರೆಯದಲ್ಲಿ ಎಲ್ಲರೂ ಮೋಜು ಮಸ್ತಿಯ ಕನಸು ಕಾಣುತ್ತಿದ್ದರೆ ಆ ಯುವಕ ಚರ್ಚ್​ವೊಂದರ ಪಾದ್ರಿಯಾಗಬೇಕೆಂದು ಬಯಸಿದ್ದನು. ಅದಕ್ಕಾಗಿ ಚರ್ಚ್​ನ ನಿಯಮಗಳ ಪ್ರಕಾರ ಶಿಕ್ಷಣವನ್ನು ಪಡೆಯಲು ಪ್ರಾರಂಭಿಸಿದ. ಚರ್ಚ್​​ನ ಉಸ್ತುವಾರಿ ವಹಿಸಿಕೊಳ್ಳಲು ಏನೇನು ಮಾಡಬೇಕೆಂದು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡನು. ಆದರೆ ಅದರ ನಡುವೆ ಅವನಿಗೆ ಸಿಕ್ಕಿದ್ದು ಹೊಸ ಅನುಭವವಾಗಿತ್ತು. ಆ ಅನುಭವ ಆತನನ್ನು ಜೀವನದುದ್ದಕ್ಕೂ ಕಾಡ ತೊಡಗಿತು. ಎಲ್ಲಿಯವರಗೆ ಅಂದರೆ ತನ್ನ ನಿರ್ಧಾರವೇ ತಪ್ಪು ಎಂಬ ಭಾವಿಸುವ ತನಕ.

ಅದು 1993. ನನಗೆ ಆಗ ವಯಸ್ಸು 17 ವರ್ಷ. ಈ ವಯಸ್ಸಿನಲ್ಲಿ ನಾನು ಪಾದ್ರಿ ಆಗಬೇಕೆಂದು ಕನಸು ಕಂಡಿದ್ದೆ. ಅದಕ್ಕಾಗಿ ನಮ್ಮೂರ ಹತ್ತಿರದಲ್ಲೇ ಇದ್ದ ಒಂದು ಚರ್ಚಿನ ಕೆಲ ಯುವಕರೊಂದಿಗೆ ಸ್ನೇಹವನ್ನು ಸಂಪಾದಿಸಿದ್ದೆ. ಅವರ ಮುಖಾಂತರ ನನಗೆ ಇಬ್ಬರು ಪಾದ್ರಿಗಳ ಪರಿಚಯವಾಗಿತ್ತು. ಒಂದು ದಿನ ಈ ಇಬ್ಬರು ಫಾದರ್​​ಗಳು ನನ್ನನ್ನು ಕರೆಸಿದ್ದರು. ಚರ್ಚ್​​ ಸಂಬಂಧಿತ ವಿಷಯ ಶಿಕ್ಷಣ ಮತ್ತು ಅದರ ತರಬೇತಿಗಳ ಕುರಿತು ಮಾತನಾಡಿದರು. ಈ ವೇಳೆ ಏನೋ ಕಾರ್ಯ ನಿಮಿತ್ತ ಫಾದರ್​ವೊಬ್ಬರು ನಾವಿದ್ದ ಕೋಣೆಯಿಂದ ಹೊರ ಹೋದರು. ಅವರು ನನ್ನೊಂದಿಗೆ ಒಂದಷ್ಟು ವಿಷಯಗಳ ಕುರಿತು ಮಾತನಾಡಿ, ಫಾದರ್ ಆಗಬೇಕೆಂಬ ತನ್ನ ನಿರ್ಧಾರವನ್ನು ಪರೀಕ್ಷಿಸಿದರು.

ಇದೇ ವೇಳೆ ನನ್ನಂತೆಯೇ ಪಾದ್ರಿಯಾಗಬೇಕೆಂದು ಕನಸು ಕಾಣುತ್ತಿದ್ದ ಇತರೆ ವಿದ್ಯಾರ್ಥಿಗಳ ಗುಂಪು ಅಲ್ಲಿಗೆ ಬಂದಿದ್ದರು. ಅವರೊಂದಿಗೆ ನನ್ನನ್ನು ಸೇರಿಸಿಕೊಂಡರು. ಅಂದು ರಾತ್ರಿ ಪಾದ್ರಿ ನಮಗೆಲ್ಲರಿಗೂ ನಗ್ನವಾಗಿ ಕೊಳದಲ್ಲಿ ಸ್ನಾನ ಮಾಡುವಂತೆ ಸೂಚಿಸಿದರು. ಒಂಥರಾ ವಿಚಿತ್ರ ಆದೇಶ ಎಂದು ನನ್ನಂತೆ ನನ್ನ ಗೆಳೆಯರಿಗೂ ಅನಿಸಿತು. ಅದರಲ್ಲೊಬ್ಬ ಇದನ್ನು ವಿರೋಧಿಸಿದನು. ಆದರೆ ಆ ಚರ್ಚ್​ನ ಗುಮಾಸ್ತ ನಮಗೆಲ್ಲಾ ಒಂದು ಎಚ್ಚರಿಕೆಯ ಸೂಚನೆಯನ್ನು ನೀಡಿ ಬಲವಂತದಿಂದ ಸ್ನಾನ ಮಾಡಲು ಹೇಳಿದರು. ಇದನ್ನು ವಿರೋಧಿಸಿದರೆ ನಿಮಗೆ ಲೈಂಗಿಕ ಸಮಸ್ಯೆ ಇದೆಯಂದು ಅರ್ಥ ಎನ್ನಲಾಗಿತ್ತು.

ಪಾದ್ರಿ ಹೇಳಿದಂತೆ ನಾವೆಲ್ಲ ಕೇಳಿದೆವು. ಎಲ್ಲರೂ ಹೊಸಬರರಾಗಿದ್ದರಿಂದ ಖುಷಿಯಿಂದಲೇ ಪರಸ್ಪರ ನೀರು ಎರಚುತ್ತಾ ಸ್ನಾನ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಫಾದರ್ ನಾವು ಸ್ನಾನ ಮಾಡುತ್ತಿದ್ದ ಕೊಳದ ಬಳಿ ಬಂದರು. ಅಲ್ಲದೆ ಅವರು ನಮ್ಮನ್ನು ಸ್ಪರ್ಶಿಸಲು ಪ್ರಾರಂಭಿಸಿದರು. ಈ ವರ್ತನೆಯನ್ನು ನಾನು ಸೇರಿದಂತೆ ಕೆಲವು ವಿದ್ಯಾರ್ಥಿಗಳು ವಿರೋಧಿಸಿದೆವು. ಈ ವೇಳೆ ಹೀಗೆ ಮಾಡುವುದರಿಂದ ಆತ್ಮ ವಿಶ್ವಾಸ ಮತ್ತು ನಂಬಿಕೆ ಹೆಚ್ಚುತ್ತದೆ ಎಂದು ನಮ್ಮನ್ನು ಸಮಾಧಾನಿಸಿದರು. ಇದಾದ ಬಳಿಕ ಪಾದ್ರಿ ಶಿಕ್ಷಣದ ವೇಳೆ ಇದೆಲ್ಲಾ ಮಾಮೂಲು ಎಂಬ ಭಾವನೆಗಳು ನಮ್ಮಲ್ಲೂ ಮೂಡಿತು.

ಹೊಸ ಶಿಕ್ಛಣ-ಹೊಸ ಅನುಭವ

ಎರಡು ತಿಂಗಳ ಕಳೆಯುತ್ತಿದ್ದಂತೆ ನಮ್ಮ ಪಾದ್ರಿ ಶಿಕ್ಷಣ ಪ್ರಾರಂಭವಾಯಿತು. ಆದರೆ ಈ ಬಾರಿ ತರಗತಿಯಲ್ಲಿ ಪಾದ್ರಿಯ ಮತ್ತೊಂದು ಮುಖ ಕೂಡ ನಮಗೆ ಅನಾವರಣವಾಯಿತು. ನಮಗೆ ಪಾಠ ಹೇಳಿಕೊಡುತ್ತಿದ್ದ ಪಾದ್ರಿ ನಮ್ಮನ್ನು ಬೆನ್ನ ಹಿಂದೆಯಿಂದ ಭುಜವನ್ನು ಹಿಡಿದುಕೊಳ್ಳುತ್ತಿದ್ದರು. ಅವರ ಈ ನಡುವಳಿಕೆಯ ಮೇಲೆ ನನಗೂ ನನ್ನ ಒಂದಿಬ್ಬರು ಗೆಳೆಯರಿಗೂ ಅನುಮಾನಗಳಿದ್ದವು. ಅದರಂತೆ ನಾವು ಪ್ರತಿಭಟಿಸಿದರೆ ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದರು. ಇತರೆ ವಿದ್ಯಾರ್ಥಿಗಳ ಎಡೆಯಲ್ಲಿ ನಮ್ಮನ್ನು ತುಚ್ಛವಾಗಿ ಕಾಣುವಂತೆ ಮಾಡುತ್ತಿದ್ದರು.

ಇಂತಹ ಅನುಭವಗಳ ನಡುವೆಯು ನಾನು ಪಾದ್ರಿ ಆಗಲೇಬೆಕೆಂಬ ನಿರ್ಧಾರದೊಂದಿಗೆ ಶಿಕ್ಷಣವನ್ನು ಪೂರೈಸಿದೆ. ಇದಾಗುತ್ತಿದ್ದಂತೆ ಪಟ್ಟಣದ ಹತ್ತಿರದಲ್ಲೇ ಇರುವ ಒಂದು ಚರ್ಚ್​ನಲ್ಲಿ ಪಾದ್ರಿಯೊಬ್ಬರ ಸಹಾಯಕನಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅದೊಂದು ದಿನ ಗುರುಗಳು ನನ್ನೊಂದಿಗೆ ನೀನೇಕೆ ನಿನ್ನನ್ನು ಮಾತ್ರ ಸುಖ ಪಡಿಸಿಕೊಳ್ಳುತ್ತಿರುವೆ ಎಂದು ಪ್ರಶ್ನಿಸಿದರು. ಅವರೇನು ಕೇಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಿರಲಿಲ್ಲ. ನಾನು ಗುರುಗಳಿಗೆ ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸುವಂತೆ ಕೇಳಿದೆ. ನಾವೆಲ್ಲಾ ಯಾಕೆ ನೈಸರ್ಗಿಕ ಲೈಂಗಿಕ ಕ್ರಿಯೆಯತ್ತ ಆಕರ್ಷಿಸುತ್ತಿದ್ದೇವೆ? ಅದೊಂದು ಅಸಂಬಂಧ ಪ್ರಕ್ರಿಯೆ, ನಾವೇನಿದ್ದರೂ ಸಲಿಂಗಕಾಮಿಗಳಾಗಿರಬೇಕು, ಇದರಿಂದ ಪ್ರತಿಯೊಂದನ್ನು ಆನಂದಿಸಬೇಕು ಎಂದು ಯಾವುದೇ ಮುಜುಗರವಿಲ್ಲದೆ ಹೇಳಿದರು. ಇದನ್ನು ಕೇಳಿ ಏನು ಮಾತನಾಡಬೇಕೆಂದು ನನಗೆ ತೋಚಲಿಲ್ಲ.ಇದಾದ ಸ್ವಲ್ಪ ದಿನಗಳ ಬಳಿಕ ಪಾದ್ರಿಯು ನನ್ನದೊಂದಿಗೆ ಅವರ ಮನೆಯಲ್ಲಿ ತಂಗಲು ಹೇಳಿದರು. ಚರ್ಚ್​ನ ವಿಧಿ ವಿಧಾನಗಳ ಕುರಿತು ಅಪಾರ ಆಸಕ್ತಿ ಹೊಂದಿದ್ದ ನಾನು, ಕೆಲ ವಿಷಯಗಳನ್ನು ತಿಳಿದುಕೊಳ್ಳಬಹುದೆಂದು ಒಪ್ಪಿಕೊಂಡೆನು. ಅಂದು ರಾತ್ರಿ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ನಾನು ಸೇವಿಸಿದ ಆಹಾರದಿಂದ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಪಾದ್ರಿ ನನ್ನೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿ ಬೇರೊಂದು ಕೋಣೆಗೆ ಹೋದರು.

ಸ್ವಲ್ಪ ಹೊತ್ತಿನಲ್ಲೇ ನಿದ್ರೆಗೆ ಜಾರಿದೆ. ನಿದ್ದೆಯಿಂದ ಎದ್ದೇಳುತ್ತಿದ್ದಂತೆ ನಾನು ಗಾಬರಿಗೊಂಡೆ. ಅದಾಗಲೇ ಪಾದ್ರಿ ನನ್ನ ಮೈಮೇಲೆರಿದ್ದರು. ನನಗೂ ಅವರು ಏನು ಮಾಡುತ್ತಿದ್ದಾರೆ ಎಂಬುದು ಅರ್ಥವಾಗಿತ್ತು. ಅವರ ಕೈಗಳನ್ನು ಮತ್ತು ದೇಹವನ್ನು ಸರಿಸಲು ಪ್ರಯತ್ನಪಟ್ಟೆ. ನಾನು ಎಷ್ಟೇ ಪ್ರಯತ್ನಿಸಿದರೂ ಅವರ ಬಿಗಿಯಾದ ಹಿಡಿತದಿಂದ ಪಾರಾಗಲು ಸಾಧ್ಯವಾಗಿಲ್ಲ. ನಾನೆಷ್ಟೇ ಕೇಳಿಕೊಂಡರೂ ಪಾದ್ರಿ ಮಾತ್ರ ತನ್ನ ಕಾರ್ಯವನ್ನು ಮುಂದುವರೆಸಿದ್ದರು.

ತನ್ನ ಕಾಮದಾಹವನ್ನು ತೀರಿಸಿಕೊಂಡ ಪಾದ್ರಿಯು ಎದ್ದು ಹೋದರು. ನಾನು ಮಾತ್ರ ಈ ಅಸ್ವಾಭಾವಿಕ ಬಂಧದಿಂದ ವಿಚಲಿತನಾಗಿದ್ದೆ. ಕೆಲ ನಿಮಿಷಗಳ ನಂತರ ಮರಳಿದ ಫಾದರ್, ಡ್ರಾಯರ್ ತೆರೆದು ಹಣ ತೋರಿಸಿ ನಸುನಕ್ಕರು. ಈಗ ನೀನು ನನ್ನ ಸರ್ಕಲ್​ನಲ್ಲಿದ್ದೀಯಾ, ನಿನಗೇನು ಬೇಕಿದೆಯೊ ಕೇಳಿಕೊ, ಯಾವುದೇ ಸಮಸ್ಯೆಯಿದ್ದರೂ ಹೇಳು ಎಂದರು. ಆದರೆ ನಾನು ಕೋಪವನ್ನೆಲ್ಲಾ ಸಹಿಸಿಕೊಂಡು ಅಲ್ಲಿಂದ ಹೊರಟು ಬಂದೆ.

ಈ ಘಟನೆಯು ನನ್ನನ್ನು ತುಂಬಾ ದಿನಗಳವರೆಗೆ ಕಾಡುತ್ತಿತ್ತು. ಪಾದ್ರಿಯೊಬ್ಬರು ಹೀಗೆ ಮಾಡಿದ್ದೂ, ನಾನು ಅದಕ್ಕೆ ಬಲಿಯಾಗಿದ್ದರಿಂದ ಅಪರಾಧಿ ಪ್ರಜ್ಞೆಯಿಂದ ಬಳಲುತ್ತಿದ್ದೆ. ಕೆಲ ತಿಂಗಳ ನಂತರ ಈ ಘಟನೆಯಿಂದ ಹೊರ ಬರಲು ನನ್ನ ಸಹೋದ್ಯೋಗಿಗಳು ಸಹಾಯ ಮಾಡಿದರು. ಕ್ರಮೇಣ ನನ್ನ ಆತ್ಮ ವಿಶ್ವಾಸ ಮರಳಿ ಪಡೆಯುವಲ್ಲಿ ಯಶಸ್ವಿಯಾದೆ. ಆನಂತರ ಆ ಚರ್ಚ್​ನೊಂದಿಗೆ ನಾನು ಯಾವುದೇ ರೀತಿ ಸಂಬಂಧ ಇಟ್ಟುಕೊಂಡಿರಲಿಲ್ಲ. ಆದರೂ ಈ ವಿಷಯವನ್ನು ಮುಚ್ಚಿಡುವುದು ನನಗೆ ಯಾಕೋ ಸರಿ ಕಾಣಲಿಲ್ಲ. ಹೀಗಾಗಿ 1993 ರ ಘಟನೆ ಸಂಬಂಧ ಹತ್ತು ವರ್ಷಗಳ ನಂತರ ಅಂದರೆ 2013ರಲ್ಲಿ ದೂರು ನೀಡಲು ತೀರ್ಮಾನಿಸಿದೆ. ಅಂದು ನಾನು ಕಾರ್ಯ ನಿರ್ವಹಿಸಿದ ಚರ್ಚ್​ ಅಧಿಕಾರಿಗಳಿಗೆ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಔಪಚಾರಿಕ ದೂರನ್ನು ನೀಡಿದೆ.

ಕೇಸ್ ಫ್ಯಾಕ್ಟ್ ಫೈಲ್: ಇದರ ನಡುವೆ ಚಿಲಿ ಚರ್ಚ್ ಪಾದ್ರಿಗಳ ಮೇಲೆ ಲೈಂಗಿಕ ದೌರ್ಜನ್ಯದ ಕುರಿತು ಮಹಿಳೆಯರ ಆರೋಪ ಮಾಡಿದ್ದು ವಿಶ್ವದ ಗಮನ ಸೆಳೆಯಿತು. ಆದರೆ ಪ್ರಕರಣದ ತನಿಖೆಯಲ್ಲಿ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ಬಿಷಪ್ ಡುವಾರ್ಟೆ ತಿಳಿಸಿದರು. ಆದರೆ 2018 ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ವೇಳೆ ಡುವಾರ್ಟೆ ಪಾದ್ರಿಗಳು ಸಲಿಂಗಕಾಮತ್ತ ಆಕರ್ಷಿತರಾಗುತ್ತಿದ್ದು, ಇದೊಂದು ಗಂಭೀರ ಸಮಸ್ಯೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದರು. ಈ ಹೇಳಿಕೆ ಚಿಲಿ ಚರ್ಚ್ ಕುರಿತಾಗಿತ್ತು ಎಂಬುದು ಅಂದು ಊಹಿಸಲಾಗಿತ್ತು.

ಆದರೆ ಕಥೆ ಇಲ್ಲಿಗೆ ಕೊನೆಗೊಂಡಿರಲಿಲ್ಲ!
ಇದೇ ಆರೋಪ ಬಿಷಪ್ ಡುವಾರ್ಟೆ ಮೇಲೆ ಕೇಳಿ ಬಂತು. ಡುವಾರ್ಟೆ ಸಹಾಕರಾಗಿದ್ದ ರಿಯೊ ಅವರು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು. 2010 ರಲ್ಲಿ ಈ ಕುರಿತು ದೂರು ನೀಡಲಾಗಿದ್ದರೂ ಯಾವುದೇ ಉತ್ತರ ಬರಲಿಲ್ಲ.

ಇದೆಲ್ಲವನ್ನು ಗಮನಿಸಿದ ಈ ಫಾದರ್​​ಗೆ  ಸಮಾಜದಲ್ಲಿರುವ ಕಳ್ಳ ಪಾದ್ರಿಗಳಿಂದ ಇಡೀ ಸಮಾಜಕ್ಕೆ ಕಳಂಕ ಉಂಟಾಗುತ್ತಿರುವುದು ಅರಿವಿಗೆ ಬಂದಿದೆ. ಅಲ್ಲದೆ ಇಂತಹ ಲೈಂಗಿಕ ಶೋಷಣೆಗಳನ್ನು ಪ್ರತಿಭಟಿಸದೇ ಇದ್ದರೆ ಮುಂದೆ ಇನ್ನಷ್ಟು ಜನರು ಶೋಷಣೆಗೆ ಒಳಗಾಗಲಿದ್ದಾರೆ. ಹಾಗಾಗಿ ಇಂತಹ ದೌರ್ಜನ್ಯವನ್ನು ಬೆಳಕಿಗೆ ತರುವಂತೆ ಕೇಳಿಕೊಂಡಿದ್ದಾರೆ.

First published:November 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ