• Home
 • »
 • News
 • »
 • lifestyle
 • »
 • Eye Care: ಶವರ್‌ ವೇಳೆ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸ್ತೀರಾ? ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು ಎಚ್ಚರ!

Eye Care: ಶವರ್‌ ವೇಳೆ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸ್ತೀರಾ? ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು ಎಚ್ಚರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ನಾನ (Shower) ಮಾಡುವಾಗ ಮಸೂರಗಳನ್ನು ಧರಿಸುವುದರಿಂದ ಅಕಂತಮೊಯಿಬಾ ಕೆರಟೈಟಿಸ್ ಎಂದು ಕರೆಯಲ್ಪಡುವ ಅತ್ಯಂತ ನೋವಿನ ಮತ್ತು ಗಂಭೀರವಾದ ಕಣ್ಣಿನ ಅನಾರೋಗ್ಯ ಉಂಟಾಗಬಹುದು.

 • Share this:

  ನೀವು ದುರ್ಬಲ ಕಣ್ಣಿನ ದೃಷ್ಟಿ (Eye Sight) ಹೊಂದಿದ್ದು ಕಾಂಟಾಕ್ಟ್‌ ಲೆನ್ಸ್‌ (Contact Lenses) ಬಳಸುತ್ತಿದ್ದರೆ ನೀವು ಆದಷ್ಟು ಕೇರ್‌ ಫುಲ್‌ ಆಗಿಯೇ ಇರಬೇಕು. ಅದರ ಸ್ವಚ್ಛತೆಯಿಂದ ಹಿಡಿದು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಅರಿತಿರಬೇಕು. ಅಂದಹಾಗೆ ನೀವು ನಿಮ್ಮ ಲೆನ್ಸ್‌ ಹಾಕಿಕೊಂಡೇ ಸ್ನಾನ ಮಾಡಲು ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರೆ ಅದನ್ನು ಈ ಕೂಡಲೇ ನಿಲ್ಲಿಸಿ. ಹೌದು, ಸ್ನಾನಕ್ಕೆ ಹೋಗುವ ಮೊದಲು ಯಾವಾಗಲೂ ನಿಮ್ಮ ಲೆನ್ಸ್‌ ಗಳನ್ನು ತೆಗೆಯಬೇಕು. ಏಕೆಂದರೆ ಸ್ನಾನ (Shower) ಮಾಡುವಾಗ ಮಸೂರಗಳನ್ನು ಧರಿಸುವುದರಿಂದ ಅಕಂತಮೊಯಿಬಾ ಕೆರಟೈಟಿಸ್ ಎಂದು ಕರೆಯಲ್ಪಡುವ ಅತ್ಯಂತ ನೋವಿನ ಮತ್ತು ಗಂಭೀರವಾದ ಕಣ್ಣಿನ ಅನಾರೋಗ್ಯ ಉಂಟಾಗಬಹುದು.


  ಅಕಂತಮೊಯಿಬಾ ಕೆರಟೈಟಿಸ್ ಎಂದರೇನು?


  ಅಂದಹಾಗೆ, ಅಕಂತಮೊಯಿಬಾ ಸ್ವಾಭಾವಿಕವಾಗಿ ಸಂಭವಿಸುವ, ಮುಕ್ತ-ಜೀವಂತ ಅಮೀಬಾ. ಇದು ಟ್ಯಾಪ್ ನೀರು, ಒಳಚರಂಡಿ ವ್ಯವಸ್ಥೆಗಳು, ಮಣ್ಣು, ಈಜುಕೊಳಗಳು, ಬಿಸಿನೀರಿನ ತೊಟ್ಟಿಗಳು ಮತ್ತು ಸೌನಾಗಳಂತಹ ಮೂಲಗಳಲ್ಲಿ ವಾಸಿಸುತ್ತದೆ.


  ಕಣ್ಣಿನ ವೈದ್ಯರಾದ ಟೀನಾ ಪಟೇಲ್ ಹೇಳುವ ಪ್ರಕಾರ ಸಾಮಾನ್ಯವಾಗಿ, ಅಕಾಂತಮೊಯಿಬಾ ಆದಾಗ ಯಾವುದೇ ಹಾನಿ ಉಂಟಾಗುವುದಿಲ್ಲ. ಆದಾಗ್ಯೂ, ಕಲುಷಿತ ನೀರು ಕಣ್ಣಿನ ಸಂಪರ್ಕಕ್ಕೆ ಬಂದರೆ ನಿಮಗೆ ಅಕಂತಮೊಯಿಬಾ ಕೆರಟೈಟಿಸ್ ಉಂಟಾಗಬಹುದು.


  ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು


  ಈ ಅಮೀಬಾ ಕಾರ್ನಿಯಾಕ್ಕೆ ಸೋಂಕು ತಗುಲಿಸಿದಾಗ, ಅದು ಅಕಾಂತಮೋಬಾ ಕೆರಟೈಟಿಸ್‌ಗೆ ಕಾರಣವಾಗಬಹುದು. ಶವರ್‌ನಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದು ಈ ಅಪರೂಪದ ಸ್ಥಿತಿಯಿಂದ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿದೆ.


  ಲಂಡನ್‌ ನ 54 ವರ್ಷದ ಮೇರಿ ಮೇಸನ್‌ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿಯೇ ಸ್ನಾನ ಮಾಡುವ ಅಭ್ಯಾಸ ಹೊಂದಿದ್ದರು. ಆದರೆ ಇದರಿಂದಾಗಿಯೇ ಅಕಾಂತಮೊಯಿಬಾ ತನ್ನ ಕಣ್ಣನ್ನು ಪ್ರವೇಶಿಸಿದೆ ಎಂದು ಅವರು ನಂಬುತ್ತಾರೆ. ಅವರು ತನ್ನ ಆರಂಭಿಕ ರೋಗಲಕ್ಷಣಗಳ ಬಗ್ಗೆ ಮಾತನಾಡುತ್ತಾ, "ನನ್ನ ಕಣ್ಣಿನಲ್ಲಿ ಸ್ವಲ್ಪ ಮರಳು ಅಥವಾ ಗ್ರಿಟ್‌ನಂಥದ್ದು ಏನೋ ಇದೆ ಅನ್ನುವ ರೀತಿ ಅನುಭವವಾಗುತ್ತಿತ್ತು. ಅದು ಕಣ್ಣನ್ನು ಉಜ್ಜಿದಾಗ ಹೋಗುತ್ತದೆ ಎಂದು ಭಾವಿಸಿದ್ದೆ . ಆದರೆ ಹಾಗೆ ಆಗುವುದಿಲ್ಲ ಎಂದು ಹೇಳುತ್ತಾರೆ.


  ಇದನ್ನೂ ಓದಿ:  Breast Cancer: ಸ್ತನ ಕ್ಯಾನ್ಸರ್ ನಂತರವೂ ಆರೋಗ್ಯವಾಗಿರಲು ಈ ಬದಲಾವಣೆಗಳನ್ನು ಮಾಡಿಕೊಳ್ಳಿ!


  ನಂತರ ಕಣ್ಣಿನ ಮೈದ್ಯರು ಮೇನಸ್‌ ಗೆ ಅಕಂಥಾಮೊಯಿಬಾ ಕೆರಟೈಟಿಸ್ ಇದೆ ಎಂದು ಗುರುತಿಸಿದರು. ವಿವಿಧ ಔಷಧಿಗಳು, ಕಣ್ಣಿನ ಡ್ರಾಪ್ಸ್‌ ಮತ್ತು ಮೂರು ಕಾರ್ನಿಯಾ ಕಸಿಗಳೊಂದಿಗೆ ಚಿಕಿತ್ಸೆ ನೀಡಿದರು. ಆದಾಗ್ಯೂ, ಅವ್ಯಾವವೂ ಕೆಲಸ ಮಾಡಲಿಲ್ಲ.


  ಸಾಕಷ್ಟು ಸಲ ಆಸ್ಪತ್ರೆ ಗೆ ಹೋಗಿದ್ದು, ಕಣ್ಣಿನ ಡ್ರಾಪ್ಸ್‌ ಹಾಕಿದ್ದು ಆಯಿತು. ಆದರೂ ಇನ್ನೂ ನೋವಿತ್ತು ಎಂದು ಅವರು ತಿಳಿಸಿದ್ದಾರೆ. ಐದು ವರ್ಷಗಳ ನಂತರ, ಅಂತಿಮವಾಗಿ ಆಕೆಯ ಎಡಗಣ್ಣನ್ನು ತೆಗೆದುಹಾಕಲಾಯಿತು. ದೃಷ್ಟಿ ಹೋದ ನಂತರ ಕಷ್ಟ ಪಡುತ್ತಿರುವ ಅವರು, ಎಡಭಾಗದ ದೃಷ್ಟಿ ಇಲ್ಲದ ಕಾರಣದಿಂದ ಬೀದಿಯಲ್ಲಿ ನಡೆಯುವುದೂ ನನಗೆ ಕಷ್ಟವಾಗುತ್ತದೆ ಎನ್ನುತ್ತಾರೆ.


  ಅಕಂತಮೊಯಿಬಾ ಕೆರಟೈಟಿಸ್‌ನ ಲಕ್ಷಣಗಳು


  ಅಕಂತಮೋಬಾ ಕೆರಟೈಟಿಸ್‌ನ ಲಕ್ಷಣಗಳು ಇತರ ಸಾಮಾನ್ಯ ಕಣ್ಣಿನ ಸೋಂಕುಗಳಿಗೆ ಹೋಲುತ್ತವೆ. ಆದ್ದರಿಂದ, ಇವುಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳಲ್ಲಿ ಯಾವುದನ್ನಾದರೂ ನೀವು ಅನುಭವಿಸಿದರೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಅದರ ಪ್ರಮುಖ ಲಕ್ಷಣಗಳು ಹೀಗಿವೆ.


  ಇದನ್ನೂ ಓದಿ:  Health: ತಂಪು ಪಾನೀಯಗಳ ಅತಿಯಾದ ಸೇವನೆ, ಹಲ್ಲುಗಳನ್ನೇ ಕಳೆದುಕೊಂಡ ಹರೆಯದ ಯುವತಿ!


  -ಕೆಂಪು ಕಣ್ಣುಗಳು


  -ಬೆಳಕಿಗೆ ಹೆಚ್ಚಿದ ಸಂವೇದನೆ


  -ತೀವ್ರ ಕಣ್ಣಿನ ನೋವು


  -ಮಂದ ದೃಷ್ಟಿಕಣ್ಣಿನಲ್ಲಿ ಏನೋ ವಸ್ತು ಇರುವಂತಹ ನಿರಂತರ ಭಾವನೆ


  -ಅತಿಯಾದ ಕಣ್ಣೀರು ಬರುವುದು


  ಅಕಾಂತಮೊಯಿಬಾ ಕೆರಟೈಟಿಸ್, ಕಾರ್ನಿಯಾ ಎಂದು ಕರೆಯಲ್ಪಡುವ ಕಣ್ಣಿನ ಪಾರದರ್ಶಕ ಹೊರಕವಚಕ್ಕೆ ಸೋಂಕು ತಗುಲಿಸುತ್ತದೆ. ಕಣ್ಣಿನಲ್ಲಿ ತೀವ್ರವಾದ ನೋವಿನ ಹೊರತಾಗಿ, ಇದು ದೃಷ್ಟಿಹೀನತೆ, ಸಂಭವನೀಯ ದೃಷ್ಟಿ ನಷ್ಟ ಅಥವಾ ಚಿಕಿತ್ಸೆ ನೀಡದಿದ್ದರೆ ಕುರುಡುತನಕ್ಕೆ ಕಾರಣವಾಗಬಹುದು.


  ತೀವ್ರತರವಾದ ಪ್ರಕರಣಗಳಲ್ಲಿ, ಕಾರ್ನಿಯಲ್ ಕಸಿ ಅಗತ್ಯವಾಗಬಹುದು ಎಂದು ವೈದ್ಯರು ಗಮನಿಸುತ್ತಾರೆ. ಹಾಗಾಗಿ ಮೇಲಿನ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ ತಕ್ಷಣವೇ ರೋಗಿಗಳು ತಮ್ಮ ಕಣ್ಣಿನ ವೈದ್ಯರನ್ನು ಸಂಪರ್ಕಿಸಬೇಕು.

  Published by:Precilla Olivia Dias
  First published: