• Home
  • »
  • News
  • »
  • lifestyle
  • »
  • Eye Health Care: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!

Eye Health Care: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚು ಮೊಬೈಲ್ ನೋಡುವುದು ಒಣ ಕಣ್ಣುಗಳು ಮತ್ತು ಕಣ್ಣಲ್ಲಿ ನೀರು ಬರುವುದು ಕಾರಣ ಆಗುತ್ತದೆ. ಕಣ್ಣಿಗೆ ಹಾಕುವ ಹನಿಗಳು ಮತ್ತು ಔಷಧಿಗಳು ಕಣ್ಣುಗಳ ಸಮಸ್ಯೆಗೆ ಪರಿಹಾರ ಆಗಿದೆ. ಆದರೆ ಈ ಸಮಸ್ಯೆ ತಪ್ಪಿಸಲು ಮತ್ತು ಅದನ್ನು ಮೂಲದಿಂದ ತೆಗೆದು ಹಾಕಲು ಜೀವನಶೈಲಿಯಲ್ಲಿ ಬದಲಾವಣೆ ತರುವುದು ತುಂಬಾ ಮುಖ್ಯ.

ಮುಂದೆ ಓದಿ ...
  • Share this:

    ಇಂದಿನ ದಿನಗಳಲ್ಲಿ ತುಂಬಾ ಜನರು (People) ಕಣ್ಣುಗಳ (Eyes) ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಹಿರಿಯರಿಂದ ಹಿಡಿದು ಮಕ್ಕಳವರೆಗೆ (Children’s) ಎಲ್ಲರಿಗೂ ವಯಸ್ಸಾಗುವ (Age) ಮೊದಲೇ ಕನ್ನಡಕ ಹಾಕಿಕೊಳ್ಳುವಂತೆ ಆಗಿದೆ. ಸ್ವಲ್ಪ ಮಟ್ಟಿಗೆ ಇದು ಫ್ಯಾಶನ್ (Fashion) ಕೂಡ ಆಗಿರಬಹುದು. ಕೆಲವರು ಫ್ಯಾಷನ್ ಗಾಗಿ ಕನ್ನಡಕ ಹಾಕುತ್ತಾರೆ. ಆದರೆ ಹೆಚ್ಚಿನ ಜನರಿಗೆ ಕನ್ನಡಕ ಬರಲು ಹಲವು ಕಾರಣಗಳು ಇವೆ. ವ್ಯಕ್ತಿಯ ಅನಾರೋಗ್ಯಕರ ಜೀವನಶೈಲಿ ಮತ್ತು ಹೆಚ್ಚು ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಪರದೆ ಹೆಚ್ಚು ನೋಡುತ್ತಾ ಸಮಯ ಕಳೆಯುವ ಅಭ್ಯಾಸವೂ ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದೆ. ಹೀಗಾಗಿ ವಯಸ್ಸಾಗುವ ಮೊದಲೇ ಕನ್ನಡಕ ಬರುತ್ತದೆ.


    ಕಣ್ಣುಗಳ ಅಸ್ವಸ್ಥತೆಗೆ ಕಾರಣಗಳು


    ಹೆಚ್ಚು ಮೊಬೈಲ್ ನೋಡುವುದು ಒಣ ಕಣ್ಣುಗಳು ಮತ್ತು ಕಣ್ಣಲ್ಲಿ ನೀರು ಬರುವುದು ಕಾರಣ ಆಗುತ್ತದೆ. ಕಣ್ಣಿಗೆ ಹಾಕುವ ಹನಿಗಳು ಮತ್ತು ಔಷಧಿಗಳು ಕಣ್ಣುಗಳ ಸಮಸ್ಯೆಗೆ ಪರಿಹಾರ ಆಗಿದೆ. ಆದರೆ ಈ ಸಮಸ್ಯೆ ತಪ್ಪಿಸಲು ಮತ್ತು ಅದನ್ನು ಮೂಲದಿಂದ ತೆಗೆದು ಹಾಕಲು ಜೀವನಶೈಲಿಯಲ್ಲಿ ಬದಲಾವಣೆ ತರುವುದು ತುಂಬಾ ಮುಖ್ಯ.


    ಮೊಬೈಲ್ ಮತ್ತು ಟಿವಿ, ಲ್ಯಾಪ್ ಟಾಪ್ ಪರದೆಯನ್ನು ದೀರ್ಘಕಾಲ ನೋಡುವ ಅಭ್ಯಾಸ ನಿಯಂತ್ರಿಸುವುದು ತುಂಬಾ ಅವಶ್ಯಕ. ಇಂದು ನಾವು ಕಣ್ಣುಗಳ ಅಸ್ವಸ್ಥತೆ ತಡೆಯುವ ಕೆಲವು ಆಹಾರಗಳ ಪಟ್ಟಿಯ ಬಗ್ಗೆ ಹೇಳಲಿದ್ದೇವೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಆ ಆಹಾರ ಪದಾರ್ಥಗಳು ನಿಮ್ಮ ದೃಷ್ಟಿ ನ್ಯೂನ್ಯತೆ ತಡೆಯಲು ಸಹಾಯ ಮಾಡುತ್ತದೆ. ಹಾಗಾದರೆ ನಿಮ್ಮ ದೃಷ್ಟಿ ನ್ಯೂನ್ಯತೆ ಹೆಚ್ಚಿಸಲು ಸಹಾಯ ಮಾಡುವ ಅಂತಹ ಕೆಲವು ಆಹಾ  ರಗಳ ಬಗ್ಗೆ ತಿಳಿಯೋಣ


    ಮೊಟ್ಟೆ ಸೇವನೆ ಮಾಡುವುದು


    ಮೊಟ್ಟೆ ಸೇವನೆ ಮಾಡುವುದು ದೃಷ್ಟಿ ನ್ಯೂನ್ಯತೆ ಕಡಿಮೆ ಮಾಡಲು ಉತ್ತಮ ಆಯ್ಕೆ ಆಗಿದೆ. ಏಕೆಂದರೆ ಮೊಟ್ಟೆಗಳಲ್ಲಿ ವಿಟಮಿನ್ ಎ, ಜಿಯಾಕ್ಸಾಂಥಿನ್ ಮತ್ತು ಸತುವು ಸಮೃದ್ಧವಾಗಿದೆ. ಇದು ನಮ್ಮ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಮುಖ್ಯವಾಗಿದೆ. ವಿಟಮಿನ್ ಎ ಕಾರ್ನಿಯಾ ಆರೋಗ್ಯ ಕಾಪಾಡುತ್ತದೆ.


    ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆ ಹೇಳುವ ಪ್ರಕಾರ, ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಪೊರೆ ಮತ್ತು ಇತರ ಗಂಭೀರ ಸಮಸ್ಯೆಗಳಾದ ವಯಸ್ಸಾದ ಸಮಸ್ಯೆ ಬೆಳವಣಿಗೆಯ ಸಾಧ್ಯತೆ ಕಡಿಮೆ ಮಾಡುತ್ತದೆ. ಅಲ್ಲದೆ ಸತುವು ರೆಟಿನಾವನ್ನು ಆರೋಗ್ಯವಾಗಿಡಲು ಸಹಕಾರಿ. ಮತ್ತು ರಾತ್ರಿ ಕಣ್ಣುಗಳ ಅಸ್ವಸ್ಥತೆ ತಡೆಯಲು ಸಹಾಯ ಮಾಡುತ್ತದೆ.


    ನೀವು ಯಾವುದೇ ಆಹಾರ ಪದಾರ್ಥಗಳ ರೂಪದಲ್ಲಿ ನಿಮ್ಮ ಆಹಾರದಲ್ಲಿ ಮೊಟ್ಟೆ ಸೇರಿಸಬಹುದು. ಆದರೆ ಮೊಟ್ಟೆಯನ್ನು ಕುದಿಸಿ ನಂತರ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.


     ಕ್ಯಾರೆಟ್ ಸೇವನೆ ಮಾಡುವ ಅಭ್ಯಾಸ


    ಕ್ಯಾರೆಟ್ ಸೇವನೆ ದೃಷ್ಟಿ ಹೆಚ್ಚಿಸಲು ಪ್ರಯೋಜನಕಾರಿ ಆಗಿದೆ. ಏಕೆಂದರೆ ಕ್ಯಾರೆಟ್‌ನಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧ ಆಗಿದೆ. ಈ ಕಾರಣಕ್ಕಾಗಿ ಕ್ಯಾರೆಟ್‌ ಬಣ್ಣವೂ ಕಿತ್ತಳೆ ಬಣ್ಣದ್ದಾಗಿದೆ. ಆಹಾರ ಪೂರಕಗಳ ಕಚೇರಿ ಪ್ರಕಾರ, ವಿಟಮಿನ್ ಎ ದೃಷ್ಟಿ ಹೆಚ್ಚಿಸಲು ಸಹಕಾರಿ ಆಗಿದೆ.


    ಅಲ್ಲದೆ, ಇದರಲ್ಲಿ ಕಂಡು ಬರುವ ಸಂಯುಕ್ತವು ರೆಟಿನಾ ಬೆಳಕನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಕ್ಯಾರೆಟ್ ನ್ನು ಸೇರಿಸಲು, ನೀವು ಅದನ್ನು ಸಲಾಡ್ ರೂಪದಲ್ಲಿ ಸೇವನೆ ಮಾಡಬಹುದು. ಜೊತೆಗೆ ಕ್ಯಾರೆಟ್ ಜ್ಯೂಸ್ ಸಹ ಸೇವನೆ ಮಾಡಬಹುದು. ಇದು ಪ್ರಯೋಜನಕಾರಿ ಆಗಿದೆ.


    ಹೆಚ್ಚು ನೀರು ಕುಡಿಯಿರಿ


    ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಹಾಗೇ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ತಪ್ಪಿಸಲು ಹೆಚ್ಚು ನೀರನ್ನು ಸೇವಿಸುವುದು ತುಂಬಾ ಅಗತ್ಯವಾಗಿದೆ. ಏಕೆಂದರೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯು ಕಣ್ಣುಗಳು ಒಣಗಲು ಕಾರಣವಾಗುತ್ತದೆ. ಹಾಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.


    ಎಲೆಗಳ ತರಕಾರಿ ಸೇವನೆ ಮಾಡುವುದು


    ಎಲೆಗಳ ತರಕಾರಿಗಳು ಆರೋಗ್ಯಕರ. ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಪ್ರಕಾರ ಹಸಿರು ಎಲೆಗಳ ತರಕಾರಿ, ಸಿಹಿ ಆಲೂಗಡ್ಡೆ ಮತ್ತು ಬೀಜಗಳಲ್ಲಿ ಕಂಡು ಬರುವ ಪೌಷ್ಟಿಕಾಂಶದ ಅಂಶಗಳು ಮತ್ತು ವಿಟಮಿನ್ ಇ ನಿಮ್ಮ ದೃಷ್ಟಿ ಹೆಚ್ಚಿಸತ್ತದೆ.


    ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


    ಸೋಯಾಬೀನ್


    ಸೋಯಾಬೀನ್ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಮತ್ತು ದೇಹಕ್ಕೆ ಅಗತ್ಯವಾದ ಕೊಬ್ಬಿನಾಮ್ಲ ಹೊಂದಿದೆ. ಆರೋಗ್ಯ ಇಲಾಖೆಯ ಪ್ರಕಾರ ಕಣ್ಣಿನ ದೃಷ್ಟಿ ಕಾಪಾಡಲು ಮತ್ತು ಕಣ್ಣಿನ ಸಮಸ್ಯೆ ತಪ್ಪಿಸಲು ಕೊಬ್ಬಿನಾಮ್ಲ ಅವಶ್ಯಕ.

    Published by:renukadariyannavar
    First published: