Beta Carotene: ಕಣ್ಣಿನ ಕಾಯಿಲೆ ಮತ್ತು ಕ್ಯಾನ್ಸರ್‌ ತಡೆಯುವ ಬೀಟಾ ಕ್ಯಾರೋಟಿನ್ ಪ್ರಯೋಜನಗಳು ಹೀಗಿವೆ

ನಮ್ಮ ದೈನಂದಿನ ಆಹಾರದಲ್ಲಿ ಕಿತ್ತಳೆ, ಕೆಂಪು, ಹಳದಿ ಅಥವಾ ಹಸಿರು ಮುಂತಾದ ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ ತಿನ್ನುತ್ತೇವೆ. ಅವುಗಳಲ್ಲಿ ಇರುವ ಅನೇಕ ವಿಧದ ಜೀವಸತ್ವಗಳು, ಖನಿಜಗಳು ನಮ್ಮ ಆಹಾರವನ್ನು ಪೌಷ್ಟಿಕವಾಗಿಸುತ್ತವೆ. ಜೊತೆಗೆ ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯದ (Health) ವಿಚಾರ ಬಂದಾಗ ಯಾವ ಪದಾರ್ಥ (Ingredient) ತಿನ್ನಬೇಕು? ಯಾವ ಪದಾರ್ಥ ತಿನ್ನಬಾರದು ಎಂಬುದರ ಬಗ್ಗೆ ಸೂಕ್ತ ಗಮನಹರಿಸುವುದು ಮುಖ್ಯವಾಗುತ್ತದೆ. ಆಹಾರದ (Food) ಪ್ರಸ್ತಾಪ ಬಂದಾಗಲೆಲ್ಲ, ನಮ್ಮ ದೇಹಕ್ಕೆ (Body) ಯಾವ ಪೋಷಕಾಂಶಗಳು ಅತ್ಯಗತ್ಯ ಎಂದು ತಿಳಿಯಲು ಪ್ರತಿಯೊಬ್ಬರು ಬಯಸುತ್ತಾರೆ. ಬೀಟಾ ಕ್ಯಾರೋಟಿನ್ ಅಂತಹ ಪ್ರೊವಿಟಮಿನ್ ಆಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕಣ್ಣು ಮತ್ತು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ ಆಗಿದೆ. ಬೀಟಾ ಕ್ಯಾರೋಟಿನ್ ಪದಾರ್ಥಗಳ ಸೇವನೆ ಸಾಕಷ್ಟು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಬೀಟಾ ಕ್ಯಾರೋಟಿನ್ ವಾಸ್ತವವಾಗಿ ಪ್ರೊವಿಟಮಿನ್ ಆಗಿದ್ದು, ವಿಟಮಿನ್ ಎ ಯ ಆರಂಭಿಕ ರೂಪವಾಗಿದೆ.

    ಪೌಷ್ಟಿಕ ಆಹಾರ

    ನಮ್ಮ ದೈನಂದಿನ ಆಹಾರದಲ್ಲಿ ಕಿತ್ತಳೆ, ಕೆಂಪು, ಹಳದಿ ಅಥವಾ ಹಸಿರು ಮುಂತಾದ ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ ತಿನ್ನುತ್ತೇವೆ. ಅವುಗಳಲ್ಲಿ ಇರುವ ಅನೇಕ ವಿಧದ ಜೀವಸತ್ವಗಳು, ಖನಿಜಗಳು ನಮ್ಮ ಆಹಾರವನ್ನು ಪೌಷ್ಟಿಕವಾಗಿಸುತ್ತವೆ. ಜೊತೆಗೆ ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

    ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳಲ್ಲಿ 24 ವಿಧದ ಕ್ಯಾರೊಟಿನಾಯ್ಡ್ಗಳು ಅಥವಾ ಪ್ರೊ ವಿಟಮಿನ್ಗಳು ಪ್ರಮುಖವಾಗಿವೆ. ಇವುಗಳನ್ನು ವಿಟಮಿನ್ ಎ ನಿರ್ಮಾಪಕ ಮತ್ತು ಸಸ್ಯದ ಬಣ್ಣಗಳ ಮೂಲ ಮೂಲವೆಂದು ಹೇಳಲಾಗಿದೆ.

    ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

    ಈ ಕ್ಯಾರೊಟಿನಾಯ್ಡ್‌ಗಳು ಕಣ್ಣಿನ ಕಾಯಿಲೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗೆ  ಪ್ರಯೋಜನಕಾರಿ. ಆಹಾರ ಕ್ರಮಕ್ಕೆ ಗಮನ ಕೊಡುವುದು ಅವಶ್ಯಕ ಆಗಿದೆ. ಏಕೆಂದರೆ ಈ ಕ್ಯಾರೊಟಿನಾಯ್ಡ್ಗಳ ಕೊರತೆ ಮಾತ್ರವಲ್ಲದೆ ಹೆಚ್ಚಿನ ಕಾರಣದಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

    ಬೀಟಾ ಕೆರೋಟಿನ್

    ಬೀಟಾ-ಕ್ಯಾರೋಟಿನ್ ನಮಗೆ ಉಪಯುಕ್ತ ಪ್ರಮುಖ ಕ್ಯಾರೊಟಿನಾಯ್ಡ್ಗಳಲ್ಲಿ ಒಂದು. ಬೀಟಾ-ಕ್ಯಾರೋಟಿನ್ ಸಸ್ಯಗಳು ಮತ್ತು ಹಣ್ಣುಗಳಲ್ಲಿ ವಿಶೇಷವಾಗಿ ಕ್ಯಾರೆಟ್ಕಂ ಡು ಬರುವ ಕೆಂಪು, ಕಿತ್ತಳೆ ಮತ್ತು ಹಳದಿ ವರ್ಣ ದ್ರವ್ಯವಾಗಿದೆ. ಇದನ್ನು ಹಣ್ಣುಗಳು ಮತ್ತು ತರಕಾರಿಗಳ ಮೂಲಕ ಮಾತ್ರ ಪಡೆಯಬಹುದು. ಹಳದಿ ಅಥವಾ ಕಿತ್ತಳೆ ಹಣ್ಣುಗಳು ಮತ್ತು ತರಕಾರಿಗಳಾದ ಕ್ಯಾರೆಟ್, ಕೊತ್ತಂಬರಿ, ಕಿತ್ತಳೆ, ಮಾಗಿದ ಮಾವು ಮತ್ತು ಪಪ್ಪಾಯಿಗಳಲ್ಲಿ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ.

    ಹಾಗಾಗಿ ಎಲ್ಲಾ ತರಹದ ಹಣ್ಣು, ಹಸಿರು ಸೊಪ್ಪುಗಳನ್ನು ತಿನ್ನುವ ಹವ್ಯಾಸ ಮಕ್ಕಳಲ್ಲಿ ಮೊದಲಿನಿಂದಲೂ ಬೆಳೆಸಬೇಕು. ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತು ಪಡಿಸುತ್ತದೆ. ಹಾಗಾಗಿ ಮಾಂಸಾಹಾರಿಗಳೂ ಹಣ್ಣು, ತರಕಾರಿ ಸೇವಿಸಬೇಕು.

    ಇದು ಹೇಗೆ ಪ್ರಯೋಜನಕಾರಿಯಾಗಿದೆ

    ಬೀಟಾ-ಕ್ಯಾರೋಟಿನ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್ ಅಂಶಗಳು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವಲ್ಲಿ ಸಹಾಯಕವಾಗಿವೆ. ದೇಹವನ್ನು ಹಾನಿ ಮಾಡುವ ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ. ಇದು ದೃಷ್ಟಿಗೆ ತುಂಬಾ ಪ್ರಯೋಜನಕಾರಿ. ಮತ್ತು ಇದರ ಕೊರತೆಗೆ ಮಕ್ಕಳಲ್ಲಿ ರಾತ್ರಿ ಕುರುಡುತನದ ಸಮಸ್ಯೆ ಕಾಡುತ್ತದೆ.

    ಬೀಟಾ ಕ್ಯಾರೋಟಿನ್ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ನಿಯಮಿತ ಸೇವನೆಯು ರಕ್ತದೊತ್ತಡ ಸಮತೋಲನಗೊಳಿಸುತ್ತದೆ. ಮತ್ತು ಇದು ಹೃದಯ ಕಾಯಿಲೆಗಳಿಂದ ರಕ್ಷಿಸುತ್ತದೆ. ಇದರೊಂದಿಗೆ, ವಿಟಮಿನ್ ಸಿ ಮತ್ತು ಇ ಜೊತೆಗೆ, ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ. ವಿಟಮಿನ್ ಎ ಯ ಪ್ರೊವಿಟಮಿನ್ ಆಗಿದ್ದು,

    ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

    ಬೀಟಾ ಕ್ಯಾರೋಟಿನ್ ಚರ್ಮವನ್ನು ಬಿಸಿಲು, ಸಿರೋಸಿಸ್ ಮತ್ತು ವಿಟಲಿಗೋದಂತಹ ಸಮಸ್ಯೆಗಳಿಂದ ರಕ್ಷಣೆ ಮಾಡುತ್ತದೆ. ಸಾಮಾನ್ಯವಾಗಿ, ಆರೋಗ್ಯಕರ ಆಹಾರದಿಂದ ದೇಹವು ಸಾಕಷ್ಟು ಪ್ರಮಾಣದ ಬೀಟಾ ಕ್ಯಾರೋಟಿನ್ ಪಡೆಯುತ್ತದೆ. ಇದು ಪೂರಕ ರೂಪದಲ್ಲಿ ಲಭ್ಯವಿದ್ದರೂ, ವೈದ್ಯರ ಸಲಹೆಯಿಲ್ಲದೆ ಅದರ ಸೇವನೆ ಹಾನಿಕಾರಕ ಆಗಿದೆ.
    Published by:renukadariyannavar
    First published: