Eye Care Tips: ಚಳಿಗಾಲದಲ್ಲಿ ಕಣ್ಣುಗಳ ರಕ್ಷಣೆಯನ್ನು ಹೀಗೆ ಮಾಡಿ.

Eye Care Tips: ಬೇಸಿಗೆಯಲ್ಲಿ ಹೆಚ್ಚು ನೀರು(water) ಕುಡಿಯುವುದರಿಂದ ದೇಹಕ್ಕೆ ಪ್ರಯೋಜನವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಚಳಿಗಾಲದಲ್ಲಿ ಸಹ ದೇಹದ ಆರೋಗ್ಯದ ದೃಷ್ಟಿಯಿಂದ ಹೆಚ್ಚು ನೀರು ಕುಡಿಯುವುದು ಅಗತ್ಯವಾಗಿರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಳಿಗಾಲ(winter) ಬಂದರೆ ಸಾಕು ಮೂಲೆಯಲ್ಲಿರುವ ಸ್ವೆಟರ್, ಜರ್ಕಿನ್‌, ಉಣ್ಣೆ ಬಟ್ಟೆ ಗಳನ್ನು ಹುಡುಕಿ ಹುಡುಕಿ ತೆಗೆದು ಹಾಕಿಕೊಳ್ಳುತ್ತೇವೆ. ಏಕೆಂದರೆ ಮೈಯನ್ನು ಸಾಧ್ಯವಾದಷ್ಟು ಬಿಸಿಯಾಗಿಟ್ಟುಕೊಳ್ಳಬೇಕೆಂದು, ಆದರೆ ದೇಹದ ಅತ್ಯಂತ ಸೂಕ್ಷ್ಮವಾದ ಅಂಗಗಳಲ್ಲಿ ಒಂದಾದ ಕಣ್ಣುಗಳನ್ನು (eyes) ಮರೆತ್ತು ಬಿಡುತ್ತೇವೆ.
  ಅಷ್ಟೇ ಏಕೆ ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುತ್ತದೇ ಎಂದು ಹೆಚ್ಚಾಗಿ ನಾವೆಲ್ಲಾ ಚರ್ಮ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಈ ಸಮಯದಲ್ಲಿ ಕಣ್ಣುಗಳ ಕಾಳಜಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅದೇ ನಾವು ಮಾಡುವ ದೊಡ್ಡ ತಪ್ಪು. ಚಳಿಗಾಲದಲ್ಲಿ ತುಸು ಹೆಚ್ಚಾಗಿ ಕಣ್ಣಿನ ಕಾಳಜಿ ವಹಿಸಬೇಕು ಎಂಬುದು.( Take Care Of Your Eyes In Winter)  ತಜ್ಞರ ವಾದ ಕೂಡ ಹೌದು. ತಂಪಾದ ಗಾಳಿ ಕೂಡ ಕಣ್ಣುಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಚಳಿಗಾಲದ (winter eyes tips) ಅವಧಿಯಲ್ಲಿ, ಕಣ್ಣುಗಳಲ್ಲಿ ಕಿರಿಕಿರಿ, ಮಸುಕುಗೊಳಿಸುವಿಕೆ ಮತ್ತು ಯಾವುದೇ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕಣ್ಣುಗಳ ರಕ್ಷಣೆಗೆ ನಾವು ನಿಮಗೆ ಒಂದಿಷ್ಟು ಸಲಹೆಗಳನ್ನು ನೀಡಲಿದ್ದೇವೆ ನೋಡಿ. ಹೆಚ್ಚಿನ ಸಮಸ್ಯೆ ಇದ್ದಲ್ಲಿ ತಡಮಾಡದೇ ವೈದ್ಯರನ್ನು(doctor) ಭೇಟಿ ಮಾಡಿ.

  ಕಣ್ಣುಗಳನ್ನು ದೇಹದ ಅತ್ಯಂತ ಸೂಕ್ಷ್ಮವಾದ ಅಂಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ವಿವಿಧ ಸೌಂದರ್ಯವರ್ಧಕಗಳು ಮತ್ತು ಹವಾಮಾನ ಬದಲಾವಣೆಗಳು, ವಿಶೇಷವಾಗಿ ಚಳಿಗಾಲದಲ್ಲಿ, ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಸರಿಯಾದ ಸಮಯದಲ್ಲಿ ಕಾಳಜಿ ವಹಿಸದಿದ್ದರೆ, ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.( Take Care Of Your Eyes In Winter)

  ಬದಲಾಗುತ್ತಿರುವ ಹವಾಮಾನ ಮತ್ತು ಸೌಂದರ್ಯವರ್ಧಕಗಳು, ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು ಸಹ ಕಣ್ಣುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಕಣ್ಣುಗಳಲ್ಲಿ ಕಿರಿಕಿರಿ, ಕಣ್ಣೀರು ಮತ್ತು ಕೆಂಪಾಗುವಿಕೆಯಂತಹ ಸಮಸ್ಯೆಗಳಿರಬಹುದು. ಚಳಿಗಾಲದ ತಿಂಗಳುಗಳಲ್ಲಿ ದೀರ್ಘಕಾಲ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ತಮ್ಮ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

  ನಿಮ್ಮ ಕಣ್ಣುಗಳನ್ನು ಹೀಗೆ ರಕ್ಷಿಸಿಕೊಳ್ಳಿ
  ಚಳಿಗಾಲದಲ್ಲಿ ಅನೇಕರಿಗೆ ಕಣ್ಣಿನ ಶುಷ್ಕತೆಯ ಸಮಸ್ಯೆ ಇರುತ್ತದೆ. ಶೀತ ಹವಾಮಾನ ಮತ್ತು ಗಾಳಿಯಿಂದಾಗಿ, ಕಣ್ಣುಗಳ ನೈಸರ್ಗಿಕ ತೇವಾಂಶವು ಒಣಗುತ್ತದೆ. ( Eye Dryness ) ಈ ಋತುವಿನಲ್ಲಿ ಸದಾ ಬೆಚ್ಚಗಿರಲು ಸಲಹೆ ನೀಡಲಾಗುತ್ತದೆ ಮತ್ತು ಸಮಸ್ಯೆ ಹೆಚ್ಚಾಗಿದ್ದರೆ, ಕನ್ನಡಕಗಳನ್ನು ಧರಿಸಲು ಪ್ರಯತ್ನಿಸಿ. ಇದು ನಿಮ್ಮ ಕಣ್ಣುಗಳನ್ನು ಕೊರೆಯುವ ಶೀತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

  ಇದನ್ನು ಓದಿ- ಮಕ್ಕಳ ಮೂಳೆಯ ಆರೋಗ್ಯ ಕಾಪಾಡುವುದು ಹೇಗೆ? ಮಕ್ಕಳು ಯಾವ ಭಂಗಿ ಅನುಸರಿಸಿದರೆ ಉತ್ತಮ? ಇಲ್ಲಿದೆ ಪರಿಹಾರ

  ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ
  ಶೀತ ವಾತಾವರಣದಲ್ಲಿ ನಿಮ್ಮ ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ. ಕೈಯಲ್ಲಿರುವ ಸೂಕ್ಷ್ಮಾಣುಗಳು, ವೈರಸ್‌ಗಳು ಮತ್ತು ಧೂಳಿನ ಕಣಗಳು ಕಣ್ಣುಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಇದು ವೈರಲ್ ಕೆರಟೈಟಿಸ್ (ಕಾರ್ನಿಯಾದ ಸೋಂಕು) (an infection of the cornea)ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

  ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ
  - ಶೀತ ವಾತಾವರಣದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮ್ಮ ಕೈ ಮತ್ತು ಪಾದಗಳನ್ನು ಸರಿಯಾಗಿ ಮುಚ್ಚಿಡಿ. ಇದು ನಿಮ್ಮನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಕೆಲವೊಮ್ಮೆ, ತುಂಬಾ ತಂಪಾಗಿರುವಾಗ ಕಣ್ಣುಗಳಲ್ಲಿ ನೀರು ಬರಲು ಪ್ರಾರಂಭಿಸುತ್ತವೆ.

  - ಚಳಿಗಾಲದಲ್ಲಿ ದೆಹಲಿಯಂತಹ ಅನೇಕ ನಗರಗಳಲ್ಲಿ ಮಾಲಿನ್ಯದ (Pollution) ಮಟ್ಟವು ಹೆಚ್ಚಾಗುತ್ತದೆ. ಹೆಚ್ಚು ಮಾಲಿನ್ಯವಿರುವಾಗ ಕಣ್ಣುಗಳನ್ನು ಸರಿಯಾಗಿ ಮುಚ್ಚಿಕೊಂಡು ಮನೆಯಿಂದ ಹೊರಹೋಗಲು ಪ್ರಯತ್ನಿಸಿ.

  - ಚಳಿಯ ವಾತಾವರಣದಲ್ಲಿ ಮುಖವನ್ನು ಸರಿಯಾಗಿ ತೇವಗೊಳಿಸುವುದು ಬಹಳ ಮುಖ್ಯ. ಚರ್ಮದ ಶುಷ್ಕತೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. (Eye Dryness )ಹಾಗಾಗಿ ತೇವಾಂಶವುಳ್ಳು ಚಳಿಗಾಲದ ಕ್ರೀಮ್‌ ಅಥವಾ ಮನೆಮದ್ದುಗಳನ್ನು ಬಳಸಿ ಶುಷ್ಕತೆ ಕಾಪಾಡಿಕೊಳ್ಳಿ, ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

  ಇದನ್ನು ಓದಿ- ಬೆನ್ನು ನೋವಿಗೆ ಇಲ್ಲಿವೆ ಸುಲಭ ಪರಿಹಾರಗಳು

  -ಬೇಸಿಗೆಯಲ್ಲಿ ಹೆಚ್ಚು ನೀರು(water) ಕುಡಿಯುವುದರಿಂದ ದೇಹಕ್ಕೆ ಪ್ರಯೋಜನ ಸಿಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಚಳಿಗಾಲದಲ್ಲಿ ಸಹ ದೇಹದ ಆರೋಗ್ಯದ ದೃಷ್ಟಿಯಿಂದ ಹೆಚ್ಚು ನೀರು ಕುಡಿಯುವುದು ಅಗತ್ಯವಾಗಿರುತ್ತದೆ

  -ನೀವು ಕಂಪ್ಯೂಟರ್ (computer) ಮತ್ತು ಲ್ಯಾಪ್‌ಟಾಪ್‌ನಲ್ಲಿ (laptop) ದೀರ್ಘಕಾಲ ಕೆಲಸ ಮಾಡುತ್ತಿದ್ದರೆ, ನಿಮ್ಮ ಕಣ್ಣುಗಳು ಬೇಗನೆ ಒಣಗುತ್ತವೆ. ಜೊತೆಗೆ ಕಣ್ಣಿಗೆ ಬಹಳ ಬೇಗ ಆಯಾಸವಾಗುತ್ತದೆ. ಹಾಗಾಗಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ, ಸ್ವಲ್ಪ ವಿರಾಮ ತೆಗೆದುಕೊಳ್ಳಲು ಮರೆಯದಿರಿ

  ಚಳಿಗಾಲದಲ್ಲಿ, ಮನೆಯ ಹೊರಗಿನ ತಂಪಾದ ಗಾಳಿ ಮತ್ತು ಮನೆಯೊಳಗಿನ ಬಿಸಿ ಗಾಳಿಯಿಂದಾಗಿ ಒಣ-ಕಣ್ಣಿನ ಸಿಂಡ್ರೋಮ್‌ನ ಅಪಾಯ ಹೆಚ್ಚಾಗಿರುತ್ತದೆ. ಇದರಿಂದಾಗಿ ಕಣ್ಣುಗಳಲ್ಲಿ ತೇವಾಂಶದ ಕೊರತೆ ಉಂಟಾಗುವ ಸಾಧ್ಯತೆಯಿದ್ದು ಕಣ್ಣುಗಳಿಗೆ ಸಾಕಷ್ಟು ಹಾನಿಯಾಗುತ್ತದೆ.
  Published by:vanithasanjevani vanithasanjevani
  First published: