Pomegranate Benefits: ದಾಳಿಂಬೆಯಲ್ಲಿ ಅಡಗಿದೆ ಪೋಷಕಾಂಶಗಳ ಗಣಿ ನೀವೆ ಓದಿ‌ ನೋಡಿ

ದಾಳಿಂಬೆ ಹಣ್ಣುಗಳು ನಾಲಗೆಗೆ ರುಚಿ ನೀಡುವುದರ ಜೊತೆಗೆ ಪೋಷಕಾಂಶಗಳ ಗಣಿಯನ್ನು ಹೊಂದಿರುವ ಒಂದು ಅತ್ಯದ್ಭುತ ಹಣ್ಣಾಗಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಾಳಿಂಬೆ ಹಣ್ಣುಗಳು (Pomegranate) ನಾಲಗೆಗೆ ರುಚಿ ನೀಡುವುದರ ಜೊತೆಗೆ ಪೋಷಕಾಂಶಗಳ ಗಣಿಯನ್ನು ಹೊಂದಿರುವ ಒಂದು ಅತ್ಯದ್ಭುತ ಹಣ್ಣಾಗಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ಹಲವಾರು ರೀತಿಯ ರೋಗಗಳಿಂದ ದೂರವಿರಬಹುದು. ದಾಳಿಂಬೆ ಹಣ್ಣಿನ ಜ್ಯೂಸ್ (Pomegranate Juice) ಸೇವಿಸುವುದರಿಂದ ಕೂಡ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸಬಹುದು ಎಂದು ಆರೋಗ್ಯ ತಜ್ಞರು (Health Specialist) ಹೇಳುತ್ತಾರೆ. ಮತ್ತೊಂದೆಡೆ, ದಾಳಿಂಬೆ ಕೂಡ ಮನಸ್ಸನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಆರೋಗ್ಯದ ಜೊತೆಗೆ ಚರ್ಮಕ್ಕೂ (Skin) ಪ್ರಯೋಜನಕಾರಿ.

    ದಾಳಿಂಬೆಯಲ್ಲಿ ಅಡಗಿರುವ ಪೋಷಕಾಂಶಗಳು

    ದಾಳಿಂಬೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿವೆ, ಇದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ತಿನ್ನಲು ಮಾತ್ರವಲ್ಲ, ಅದರ ರಸವನ್ನು ಹೊರತೆಗೆಯುವುದರ ಮೂಲಕವೂ ಸೇವಿಸಬಹುದು.

    ಗರ್ಭಿಣಿ ಮಹಿಳೆಗೆ ಪ್ರಯೋಜನಕಾರಿ

    ದಾಳಿಂಬೆ ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ತುಂಬಾ ಪ್ರಯೋಜನವಿದೆ. ದಾಳಿಂಬೆ ಹೂ ರಕ್ತದ ಕೊರತೆಯನ್ನು ನೀಗಿಸುತ್ತದೆ ಜೊತೆಗೆ ದೇಹದಲ್ಲಿನ ನೀರಿನ ಪ್ರಮಾಣವನ್ನು ಸಹ ಇದು ಹೆಚ್ಚಿಸುತ್ತದೆ. ದಾಳಿಂಬೆ ಯಲ್ಲಿರುವ ಖನಿಜಗಳು, ಜೀವಸತ್ವಗಳು ಹಾಗೂ ಫ್ಲೋರಿಕ್ ಆಸಿಡ್ ಗರ್ಭಿಣಿಯರ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

    ಇದನ್ನೂ ಓದಿ: Soybean Benefits: ಪ್ರತಿದಿನ ಸೋಯಾಬಿನ್ ತಿಂದ್ರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಂತೆ

    ಮೂಳೆಗಳನ್ನು ಬಲ ಪಡಿಸಿಕೊಳ್ಳಬಹುದು

    ದಾಳಿಂಬೆ ಬೀಜಗಳನ್ನು ಸೇವಿಸುವುದರಿಂದ ಮೂಳೆಗಳನ್ನು ಬಲ ಪಡಿಸಿಕೊಳ್ಳಬಹುದು. ಇದರಲ್ಲಿ ಅಡಕವಾಗಿರುವ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ ಇದಕ್ಕೆ ಮುಖ್ಯ ಕಾರಣವಾಗಿದೆ. ಇದು ಮೂಳೆಗಳನ್ನು ಬಲಪಡಿಸುವ ಕಾರ್ಯವನ್ನು ಮಾಡುತ್ತದೆ. ಆದ್ದರಿಂದ ಮೂಳೆಗಳ ಬಲ ಹೆಚ್ಚಿಸಲು ದಾಳಿಂಬೆಗಳನ್ನು ಸೇವಿಸುವುದು ಉತ್ತಮ.

    ಹೃದ್ರೋಗದಲ್ಲಿ ಪ್ರಯೋಜನಕಾರಿ

    ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಾಳಿಂಬೆಯು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಅಧಿಕವಾಗಿದೆ. ಆದ್ದರಿಂದ ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ಅದೇ ರೀತಿ ಹೃದ್ರೋಗ ಸಮಸ್ಯೆ ಇರುವವರು ದಾಳಿಂಬೆಯನ್ನು ಯಥೇಚ್ಛವಾಗಿ ತಿನ್ನಿ ಎಂದು ವೈದ್ಯರು ಸಹ ಸೇವಿಸಲು ಶಿಫಾರಸು ಮಾಡುತ್ತಾರೆ.

    ಮೊಡವೆ ವಿರುದ್ಧ ಹೋರಾಡುವ ಗುಣ ಹೊಂದಿದೆ

    ಮೊಡವೆಯ ಸಮಸ್ಯೆ ಯಾರಿಗಿಲ್ಲ ಹೇಳಿ! ಜೀವನದಲ್ಲಿ ಒಂದಲ್ಲ ಒಂದು ಬಾರಿಯಾದರೂ ಎಲ್ಲರೂ ಮೊಡವೆ ಸಮಸ್ಯೆಯಿಂದ ಹೈರಾಣಾಗಿರುತ್ತಾರೆ. ಆದರೆ ದಾಳಿಂಬೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಮೊಡವೆಗಳಿಗೆ ಕಾರಣವಾಗುವಂತಹ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ತ್ವಚೆಗೆ ಉತ್ತಮವಾದ ಹೊಳಪನ್ನು ನೀಡುವುದು.

    ಇದನ್ನೂ ಓದಿ: Sleep Facts: ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ ಅಂತ ಗೊಣಗಬೇಡಿ! ಯಾಕಂದ್ರೆ ನೀವು ಜೀವನ ಮೂರನೇ ಒಂದು ಭಾಗ ನಿದ್ರೆಯಲ್ಲಿ ಕಳೆಯುತ್ತೀರಾ

    ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿ ಕೆಲಸ ಮಾಡುತ್ತದೆ

    ಸಾಮಾನ್ಯವಾಗಿ ಅಲರ್ಜಿ ಕಾಟವು ಎಲ್ಲರಿಗೂ ಇರುತ್ತದೆ. ಹೂವಿನ ಪರಾಗ, ಕೀಟಗಳ ಕಚ್ಚುವಿಕೆ, ಕೆಲವು ಗಿಡಗ ಮುಳ್ಳುಗಳು, ಎಲೆ ತುಂಡಾದರೆ ಒಸರುವ ಹಾಲಿನಂತಹ ದ್ರವ ಮೊದಲಾದವು ಅಲರ್ಜಿ ಉಂಟುಮಾಡುತ್ತವೆ. ಈ ಅಲರ್ಜಿಗಳನ್ನು ಎದುರಿಸಲು ದೇಹ ಅದಕ್ಕೆ ಕಾರಣವಾದ ಅಲರ್ಜಿಕಾರಕ ವಸ್ತುವಿಗೆ ಪ್ರತಿರೋಧಿಯನ್ನು ಸೃಷ್ಟಿಸಿಕೊಳ್ಳಬೇಕು. ದಾಳಿಂಬೆಯಲ್ಲಿರುವ ಪೊಲಿಫಿನೊಲ್ ಎಂಬ ಕಿಣ್ವ ಈ ಪ್ರತಿರೋಧಿಯನ್ನು ಸೃಷ್ಟಿಸಲು ನೆರವಾಗುತ್ತದೆ. ಪರಿಣಾಮವಾಗಿ ದೇಹ ಅಲರ್ಜಿಯಿಂದ ಶೀಘ್ರ ಹೊರಬರುತ್ತದೆ.

    ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು

    ದಾಳಿಂಬೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮಳೆಗಾಲದಲ್ಲಿ ಗಾಳಿ, ನೀರಿನ ಮೂಲಕ ದೇಹಕ್ಕೆ ಧಾಳಿಯಿಡುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ.
    Published by:Swathi Nayak
    First published: