Health: ಹೃದ್ರೋಗದಿಂದ ಅಪಾಯದಲ್ಲಿರುವ 44% ಭಾರತೀಯರು: ತಜ್ಞರು ಹೇಳುವುದೇನು..?

ಹೋಲಿಕೆ ಮಾಡುವುದಾದರೆ 20% Caucasians ಹೃದ್ರೋಗದ ಅಪಾಯ ಎದುರಿಸುತ್ತಿದ್ದರೆ, ಚೀನಾದವರಲ್ಲಿ 10% ಜನರು ಈ ಅಪಾಯದಲ್ಲಿದ್ದಾರೆ ಎಂದು ಮುಖ್ಯ ತನಿಖಾಧಿಕಾರಿಯಾಗಿರುವ ಚಿಕಾಗೋ ಮೂಲದ ಹೃದ್ರೋಗ ತಜ್ಞ ಡಾ ಇನಾಸ್ ಎ ಇನಾಸ್ ವಿವರಿಸಿದ್ದಾರೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿಶ್ವಾದ್ಯಂತ 44%ನಷ್ಟು ಭಾರತೀಯರು ಅನುವಂಶಿಕ ಸ್ಥಿತಿಯಿಂದಾಗಿ ಮಾರಣಾಂತಿಕ ಹೃದ್ರೋಗದ ಅಪಾಯದಲ್ಲಿದ್ದಾರೆ ಎಂಬುದಾಗಿ ಭಾರತೀಯ ಪರಂಪರೆಯ ಕುರಿತು ದೀರ್ಘಕಾಲದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಅನುಭವಿ ಹೃದ್ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಹೃದಯ ರೋಗಗಳ ಅಪಾಯಗಳು ದಕ್ಷಿಣ-ಏಷ್ಯನ್ ಪೂರ್ವಜರ ಡಿಎನ್‌ಎಗೆ ಸಂಬಂಧಿಸಿರುತ್ತದೆ ಹಾಗೂ ಆಹಾರ ಹಾಗೂ ಜೀವನಶೈಲಿಯಿಂದ ಉಲ್ಬಣಗೊಳ್ಳುತ್ತದೆ ಎಂದು ತಿಳಿಸಿರುವ ತಜ್ಞರು ಅನುವಂಶಿಕತೆಯು ಹೃದ್ರೋಗದ ಅಪಾಯಗಳನ್ನು ಒಗ್ಗೂಡಿಸುತ್ತದೆ ಹಾಗೂ ಸುತ್ತಲಿನ ಪರಿಸರ ಎಂದರೆ ನಮ್ಮ ಜೀವನಶೈಲಿ, ಆಹಾರಗಳು ಅಪಾಯಕ್ಕೆ ಪುಷ್ಟಿ ನೀಡಿ ಸಮಸ್ಯೆ ಉಲ್ಬಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಹೋಲಿಕೆ ಮಾಡುವುದಾದರೆ 20% Caucasians ಹೃದ್ರೋಗದ ಅಪಾಯ ಎದುರಿಸುತ್ತಿದ್ದರೆ, ಚೀನಾದವರಲ್ಲಿ 10% ಜನರು ಈ ಅಪಾಯದಲ್ಲಿದ್ದಾರೆ ಎಂದು ಮುಖ್ಯ ತನಿಖಾಧಿಕಾರಿಯಾಗಿರುವ ಚಿಕಾಗೋ ಮೂಲದ ಹೃದ್ರೋಗ ತಜ್ಞ ಡಾ ಇನಾಸ್ ಎ ಇನಾಸ್ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ


ಹೃದ್ರೋಗ ಸಮಸ್ಯೆಗೆ ಕಾರಣವೇನು?: ಹೃದ್ರೋಗ ಸಮಸ್ಯೆಗೆ ಕಾರಣವಾಗಿರುವ ಲಿಪೋಪ್ರೋಟೀನ್ (ಸರಳ ಪ್ರೋಟೀನ್) ಕಡಿಮೆ ಸಾಂದ್ರತೆಯಲ್ಲಿದ್ದರೆ ಅದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಇದೊಂದು ಅನುವಂಶಿಕ ರೂಪವಾಗಿದೆ ಎಂದು ತಿಳಿಸಿರುವ ವೈದ್ಯರು ಮಾರಣಾಂತಿಕ ಹೃದ್ರೋಗಕ್ಕೆ ಇದು ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ ಹಾಗೂ ಅಕಾಲಿಕ ಮರಣಕ್ಕೆ ಕಾರಣವಾಗುತ್ತದೆ ಎಂದು ಗುರುತಿಸಲಾಗಿದೆ ಎಂಬುದಾಗಿ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಕಾಲಿಕ ಮರಣವುಂಟಾಗಲು ಈ ಲಕ್ಷಣ ಕಾರಣವಾಗಿದೆ ಎಂದು ಇನಾಸ್ ಅಭಿಪ್ರಾಯಪಟ್ಟಿದ್ದಾರೆ

ಭಾರತೀಯ ಮೂಲದವರಲ್ಲಿ ಹೃದ್ರೋಗ ಅಪಾಯ ಹೆಚ್ಚು: ಅಕ್ಟೋಬರ್ 29ರಂದು ಹೃದಯ ಸ್ತಂಭನದಿಂದ ಮರಣ ಹೊಂದಿದ ನಟ ಪುನೀತ್ ರಾಜ್‌ಕುಮಾರ್ ಪ್ರಕರಣ ಕೂಡ ಇದೇ ಅಪಾಯವನ್ನು ಸೂಚಿಸುತ್ತದೆ ಹಾಗೂ ಈ ರೀತಿಯ ಮರಣ ಪ್ರಮಾಣಗಳು ಹೆಚ್ಚಾಗುತ್ತಿವೆ. ಈ ಘಟನೆ ಬಳಿಕ ಭಾರತದಲ್ಲಿ ಹೃದಯಾಘಾತದ ಪ್ರತಿಕೂಲ ಪರಿಣಾಮಗಳ ಕುರಿತು ಜಾಗೃತಿ ಹೆಚ್ಚುತ್ತಿದೆ ಎಂದು ಸಿಲಿಕಾನ್ ವ್ಯಾಲಿಯಲ್ಲಿರುವ ಸೌತ್ ಏಷ್ಯನ್ ಹಾರ್ಟ್ ಸೆಂಟರ್‌ನ ವೈದ್ಯರ ಸಲಹಾ ಸಮಿತಿಯ ಸದಸ್ಯರಾದ ನರಸ್ ಭಟ್ ತಿಳಿಸಿದ್ದಾರೆ.

ಇದನ್ನೂ ಓದಿ: Andhra Style ದೋಸೆಯನ್ನು ಮನೆಯಲ್ಲೇ ತಯಾರಿಸಿ ಸವಿಯಿರಿ: ಇಲ್ಲಿದೆ ರೆಸಿಪಿ

ಭಾರತೀಯ ಅಮೆರಿಕನ್ನರಲ್ಲಿ ಕೂಡ ಇದೇ ರೀತಿಯ ಹೃದಯ ಪ್ರವೃತ್ತಿಗಳನ್ನು ಗಮನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವ್ಯಕ್ತಿಯು ಭಾರತದಿಂದಲೇ ಬಂದಿರಲಿ ಅಥವಾ ಬೇರೆ ದೇಶದಿಂದ ಬಂದಿದ್ದು ಭಾರತೀಯ ಮೂಲದವನಾಗಿದ್ದರೂ ಇದು ಅನ್ವಯಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಮಸ್ಯೆ ಹೊಂದಿರುವ ಅವರ ಅತಿ ಕಿರಿಯ ವಯಸ್ಸಿನ ರೋಗಿಯು ಫಿಜಿ ದೇಶದಿಂದ ಬಂದವರಾಗಿದ್ದರೂ ಅವರು ಭಾರತೀಯರು ಮೂಲದವರು ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಈ ರೋಗಿಯ ಅನುವಂಶಿಕ ಅಂಶಗಳು ಭಾರತೀಯ ಉಪಖಂಡದ ಇತರರಲ್ಲಿ ಕಂಡುಬರುವಂತೆಯೇ ಇತ್ತು ಎಂಬುದನ್ನು ವೈದ್ಯರು ಉಲ್ಲೇಖಿಸಿದ್ದಾರೆ.  ಜೀನ್‌ಗಳು ಸಹ ಉನ್ನತ ಕೊಲೆಸ್ಟ್ರಾಲ್ ಮಟ್ಟವನ್ನು ಉಂಟುಮಾಡಬಹುದು ಎಂಬುದನ್ನು ಸೂಚಿಸಿದ್ದಾರೆ.

ಹೃದಯ ಪರೀಕ್ಷೆ ಅಗತ್ಯ: ಹೃದಯದ ಸಮಸ್ಯೆ ಹೊಂದಿರುವ ಭಾರತೀಯ ಮೂಲದ ಸುಮಾರು 50% ಜನರು ಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟ ಹೊಂದಿದ್ದಾರೆ ಎಂದು ತಜ್ಞರು ಗಮನಿಸಿದ್ದಾರೆ. ಕೊಲೆಸ್ಟ್ರಾಲ್ ನಿವಾರಿಸಲು ಅನ್ಯ ಮಾರ್ಗವಿಲ್ಲದೇ ಇರುವುದರಿಂದ ಹೃದಯ ಪರೀಕ್ಷೆಯ ಭಾಗವಾಗಿ ಲಿಪೋಪ್ರೋಟೀನ್ ಪ್ರೊಫೈಲ್‌ಗಳನ್ನು ಮಾಡಬೇಕು” ಎಂದು ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ. ಕೇವಲ 30% ಕೊಲೆಸ್ಟ್ರಾಲ್ ಆಹಾರ ಸೇವನೆಯ ಮೂಲಕ ದೇಹವನ್ನು ಸೇರುತ್ತದೆ. ಉಳಿದವು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಸ್ನಾನ ಮಾಡಿದರೆ ಹೃದಯ ಸಂಬಂಧಿ ಕಾಯಿಲೆ ಬರೋದಿಲ್ವಂತೆ!

ದೇಶದಲ್ಲಿ ಲಿಪೋಪ್ರೋಟೀನ್ (ಎ) (ಸರಳ ಪ್ರೋಟೀನ್) ಅನ್ನು ಸರಿಯಾಗಿ ಅಳೆಯಲಾಗಿಲ್ಲ, ಅಂದರೆ ಭಾರತದಲ್ಲಿ ಸಂಭವಿಸುವ ದರದ ಬಗ್ಗೆ ಯಾವುದೇ ಅಂಕಿಅಂಶಗಳಿಲ್ಲ ಎಂಬುದನ್ನು ಅಪೋಲೋ ಹಾಸ್ಪಿಟಲ್ಸ್‌ನ ಹೃದ್ರೋಗ ತಜ್ಞ ಡಾ ಅಭಿಜಿತ್ ವಿಲಾಸ್ ಕುಲಕರ್ಣಿ ಸೂಚಿಸಿದ್ದಾರೆ.
Published by:Anitha E
First published: