Rice: ತಾಜಾ ಅನ್ನಕ್ಕಿಂತ ತಂಗಳನ್ನವೇ ಆರೋಗ್ಯಕರವಂತೆ! ಇದರಲ್ಲೂ ಇದೆಯಂತೆ ರೋಗ ನಿವಾರಿಸುವ ಗುಣ

ವಿಭಿನ್ನತೆ, ಜನಪ್ರಿಯತೆ ಹೊಂದಿರುವ ಅನ್ನದ ಬಗ್ಗೆ ಹೊಸದಾಗಿ ಮತ್ತೊಂದು ವಿಚಾರ ಕೇಳಿ ಬರುತ್ತಿದೆ. ಪೌಷ್ಟಿಕತಜ್ಞೆ ಪೂಜಾ ಮಖಿಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ತಂಗಳನ್ನ ತಾಜಾ ಅನ್ನಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಅನ್ನವನ್ನು ಭಾರತೀಯ ಊಟದ (Lunch) ಆತ್ಮ ಎಂದು ಹೇಳಬಹುದು. ಯಾವುದೇ ಕಾರ್ಯಕ್ರಮ ಇರಲಿ, ಏನೇ ಅದ್ಧೂರಿತನವಿರಲಿ, ಎಷ್ಟೇ ಬಗೆಬಗೆಯ ಭಕ್ಷ್ಯ ಭೋಜನಗಳಿದ್ದರೂ ಭಾರತೀಯರಾದ (Indian) ನಮಗೆ ಕೊನೆಗೆ ಸ್ವಲ್ಪ ಅನ್ನ ಊಟ ಮಾಡಿದರೆ ಏನೋ ಒಂಥರಾ ಸಂತೃಪ್ತಿ. ಅಷ್ಟರ ಮಟ್ಟಿಗೆ ನಾವು ಅನ್ನದ ಆಹಾರಗಳಿಗೆ ಒಗ್ಗಿ ಹೋಗಿದ್ದೇವೆ. ಅನ್ನದಲ್ಲಿ (Rice) ಹಲವಾರು ಉಪಹಾರಗಳನ್ನು (Breakfast) ಮಾಡುತ್ತೇವೆ. ಪಲಾವ್, ಚಿತ್ರನ್ನ, ಬಿರಿಯಾನಿ, ಪುಳಿಯೊಗರೆ, ಟೋಮ್ಯಾಟೋ ಬಾತ್ ಕೊನೆಗೆ ಸಾಂಬಾರಿನ ಜೊತೆ. ಅಬ್ಬಾಬ್ಬ ಎಷ್ಟೇಲ್ಲಾ ಬಗೆಗಳಿವೆ. ಖಂಡಿತವಾಗಿಯೂ ಅನ್ನವನ್ನೂ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕೆಲವು ಆಹಾರ ತಜ್ಞರು (Food Experts) ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆ ಎನ್ನುವುದರಿಂದ ಸಣ್ಣ ಆಗಲು ಬಯಸುತ್ತಿರುವವರು ಸ್ವಲ್ಪ ಅನ್ನದಿಂದ ದೂರು ಉಳಿಯುತ್ತಾರೆ.

ತಾಜಾ ಅನ್ನಕ್ಕಿಂತ ತಂಗಳನ್ನ ಉತ್ತಮ ಏಕೆ?  
ಇಷ್ಟೇಲ್ಲಾ ವಿಭಿನ್ನತೆ, ಜನಪ್ರಿಯತೆ ಹೊಂದಿರುವ ಅನ್ನದ ಬಗ್ಗೆ ಹೊಸದಾಗಿ ಮತ್ತೊಂದು ವಿಚಾರ ಕೇಳಿ ಬರುತ್ತಿದೆ. ಪೌಷ್ಟಿಕತಜ್ಞೆ ಪೂಜಾ ಮಖಿಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ತಂಗಳನ್ನ ತಾಜಾ ಅನ್ನಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ. ತಾಜಾ ಅನ್ನ ಮತ್ತು ತಂಗಳನ್ನದ ಕುರಿತಾದ ಚರ್ಚೆ ನಡೆಯುತ್ತಲೇ ಇರುತ್ತದೆ, ಕೆಲವರು ತಂಗಳನ್ನ ತಿಂದರೆ ತೂಕ ಅಧಿಕವಾಗುತ್ತದೆ ಎನ್ನುತ್ತಾರೆ. ಇನ್ನೂ ಕೆಲವರು ಬಿಸಿಯಾದ ತಾಜಾ ಅನ್ನವನ್ನು ಮಾತ್ರ ಇಷ್ಟಪಡುತ್ತಾರೆ.

ಬೇಯಿಸಿದ ಪಿಷ್ಟವನ್ನು ತಂಪಾಗಿಸುವಿಕೆಯು ಪಿಷ್ಟದ ಹಿಮ್ಮೆಟ್ಟುವಿಕೆ ಎಂದು ಕರೆಯಲ್ಪಡುವ ಪ್ರಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ ಎಂದು ಪೂಜಾ ಮಖಿಜಾ ಹೇಳಿದ್ದಾರೆ. ಇದು ಜೀರ್ಣವಾಗುವ ಪಿಷ್ಟವನ್ನು ನಿರೋಧಕ ಪಿಷ್ಟವಾಗಿ ಪರಿವರ್ತಿಸುತ್ತದೆ.

ಇದನ್ನೂ ಓದಿ: Isabgol Benefits: ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ಇಸಾಬ್ಗೋಲ್ ಬೆಸ್ಟ್ ಮೆಡಿಸಿನ್ ಅಂತೆ

ಸರಳವಾಗಿ ಹೇಳುವುದಾದರೆ, ಅಕ್ಕಿ ಅಥವಾ ಆಲೂಗಡ್ಡೆಯಂತಹ ಹೆಚ್ಚಿನ ಪಿಷ್ಟದ ಆಹಾರವನ್ನು ಬೇಯಿಸಿದಾಗ ಮತ್ತು ಅದನ್ನು ತಂಪಾಗಿಸಿದಾಗ, ಅದು ಜೀರ್ಣವಾಗುವ ಪಿಷ್ಟವನ್ನು ನಿರೋಧಕ ಪಿಷ್ಟವಾಗಿ ಪರಿವರ್ತಿಸುತ್ತದೆ. ಜೀರ್ಣವಾಗುವ ಪಿಷ್ಟವು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಾಗುವಂತೆ ಮಾಡುತ್ತದೆ. ನಿರೋಧಕ ಪಿಷ್ಟವು ಪ್ರೋಬಯಾಟಿಕ್ ಆಗಿರುವುದರಿಂದ ಈ ಪಿಷ್ಟವು ಆರೋಗ್ಯಕರವಾದದ್ದು ಎನ್ನುತ್ತಾರೆ ಪೂಜ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ ಮತ್ತು ಕರುಳಿಗೆ ಆರೋಗ್ಯಕರವಾಗಿರುತ್ತದೆ.

ತಂಗಳನ್ನದ ಪ್ರಯೋಜನಗಳು
ತಂಗಳನ್ನ ನೈಸರ್ಗಿಕ ಶೀತಕವಾಗಿದೆ, ಇದನ್ನು ನಿಯಮಿತವಾಗಿ ಸೇವಿಸಿದರೆ, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ತಂಪಾಗಿರಿಸುತ್ತದೆ. ತಂಗಳನ್ನ ಫೈಬರ್ನಲ್ಲಿ ಸಮೃದ್ಧವಾಗಿದೆ ಮತ್ತು ಇದು ಮಲಬದ್ಧತೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಅಲ್ಸರ್ ನಿಂದ ಬಳಲುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲು ಈ ಅನ್ನವನ್ನು ವಾರಕ್ಕೆ ಮೂರು ಬಾರಿ ಬೆಳಿಗ್ಗೆ ಸೇವಿಸಬೇಕು.

ತಂಗಳನ್ನ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳಲ್ಲಿ ಅಧಿಕವಾಗಿವೆ ಎಂದು ಅಧ್ಯಯನವೊಂದು ಹೇಳುತ್ತದೆ. ಹಾಗಾಗಿ ಪ್ರತಿನಿತ್ಯ ಈ ಅನ್ನ ಸೇವನೆ ಹಲವಾರು ರೋಗಗಳನ್ನು ದೂರು ಮಾಡುತ್ತದೆ.

ಇದನ್ನೂ ಓದಿ:  Itching Problem: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

ಉಳಿದ ಅನ್ನ, ತಂಗಳನ್ನದಿಂದ ನಾವು ಚಿತ್ರನ್ನ, ಪೊಳಿಯೋಗರೆ ಇಂತಹಾ ಅನೇಕ ತಿಂಡಿಗಳನ್ನು ಮಾಡುತ್ತೇವೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿ ನೀವು ಮೊಟ್ಟೆ, ಬೆಳ್ಳುಳ್ಳಿ ಫ್ರೈಡ್ ರೈಸ್ ಮಾಡಿಕೊಂಡು ಸೇವಿಸಬಹುದು. ಈ ಪಾಕವಿಧಾನಕ್ಕೆ ಕೆಲವೇ ಪದಾರ್ಥಗಳು ಬೇಕಾಗುತ್ತವೆ ಮತ್ತು ನಿಮಗೆ ಹೊಸ ರುಚಿಯನ್ನು ನೀಡುತ್ತದೆ.

ಎಗ್ ಗಾರ್ಲಿಕ್ ಫ್ರೈಡ್ ರೈಸ್ ಮಾಡುವುದು ಹೇಗೆ?
ಮೊದಲಿಗೆ ಬಾಣಲೆಯಲ್ಲಿ ಮಧ್ಯಮ ಬಿಸಿ ಎಣ್ಣೆಗೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿಯನ್ನು ಸೇರಿಸಿ ಮತ್ತು ಅದು ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ಬಳಿಕ ಇದಕ್ಕೆ ಒಂದು ಟೀಚಮಚ ಕೆಂಪು ಮೆಣಸಿನಕಾಯಿ, ಶುಂಠಿ ಮತ್ತು ಸ್ಪ್ರಿಂಗ್ ಆನಿಯನ್ ಸೇರಿಸಿ ಮತ್ತೆ ಒಂದು ನಿಮಿಷ ಹುರಿಯಿರಿ. ನಂತರ ಬಾಣಲೆಗೆ ನಿಮಗೆ ಬೇಕಾದಷ್ಟು ಮೊಟ್ಟೆಯನ್ನು ಒಡೆದು ಸೇರಿಸಿ. ಅದರ ನಂತರ, ಉಳಿದ ಅನ್ನವನ್ನು ಸೇರಿಸಿ ಮತ್ತು ಎಲ್ಲವನ್ನೂ ನಿಧಾನವಾಗಿ ಬೆರೆಸಿ. ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿದ ನಂತರ ಅನ್ನದ ಮಿಶ್ರಣದ ಮೇಲೆ ಸೋಯಾ ಸಾಸ್ ಹಾಕಿ. ನಂತರ ಒಂದು ಬಟ್ಟಲಿನಲ್ಲಿ, ಸ್ಪ್ರಿಂಗ್ ಆನಿಯನ್ ನೊಂದಿಗೆ ಈ ಫ್ರೈಡ್ ರೈಸ್ ಅನ್ನು ಬಡಿಸಿ.
Published by:Ashwini Prabhu
First published: