Cancer Symptoms: ಬೆಳಗ್ಗೆ ಮುಂಚೆ ಹೀಗಾದ್ರೆ ಅದಕ್ಕೆ ಕಾರಣ ಕ್ಯಾನ್ಸರ್ ಇರಬಹುದಂತೆ, ಎಚ್ಚರದಿಂದಿರಿ!

ಕ್ಯಾನ್ಸರ್ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಮತ್ತು ಗೆಡ್ಡೆಯ ಬೆಳವಣಿಗೆಯಿಂದ ಗುಣಲಕ್ಷಣಗಳನ್ನು ಹೊಂದಿದ್ದು, ಕ್ಯಾನ್ಸರ್ ತನ್ನ ಹಂತಗಳಲ್ಲಿ ದೇಹದಾದ್ಯಂತ ಹರಡಿ ಮೆಟಾಸ್ಟಾಟಿಕ್ ಆಗಿ ಬದಲಾಗುತ್ತದೆ. ಇದರ ಪರಿಣಾಮದಿಂದ ಚಿಕಿತ್ಸೆಯು ಮತ್ತಷ್ಟು ಕಷ್ಟವಾಗುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

  • Share this:
ಕ್ಯಾನ್ಸರ್​ನಂತಹ (Cancer) ಮಾರಕ ರೋಗಗಳು ಯಾವಾಗ ದೇಹದಲ್ಲಿ ಶುರುವಾಗುತ್ತವೋ ಗೊತ್ತೇ ಆಗುವುದಿಲ್ಲ. ಒಂದು ಹಂತವನ್ನು ಕಳೆದ ನಂತರ ಕ್ಯಾನ್ಸರ್ ಜೀವವನ್ನೇ ತೆಗೆಯಬಲ್ಲದು. ಚಿಕಿತ್ಸೆ (Treatment) ಫಲಕಾರಿಯಾಗದೆ ಇರಬಹುದು. ಆದರೆ ಅದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಾದರೆ ಎಷ್ಟೊಂದು ಜೀವಗಳು ಉಳಿಯಬಹುದು ಅಲ್ಲವೇ ? ಹಾಗಾಗಿ ಕ್ಯಾನ್ಸರ್​ನ್ನು ಆರಂಭಿಕ ಹಂತದಲ್ಲಿ ತಿಳಿದುಕೊಂಡರೆ ಅದು ದೊಡ್ಡ ವರದಾನ ಎನ್ನಬಹುದು. ಎಕ್ಸ್​ಪರ್ಟ್ಸ್​ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗಿ ತೋರಿಸುವ, ಅನುಭವಿಸುವ ಕೆಲವು ಸಾಮಾನ್ಯ ಲಕ್ಷಣಗಳ ಬಗ್ಗೆ ಹೇಳಿದ್ದಾರೆ. ಈ ಮೂಲಕ ಕ್ಯಾನ್ಸರ್ ಇದ್ದರೂ ಅದನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು.

ನಮ್ಮಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಾವು ಬಹಳಷ್ಟು ಸಂದರ್ಭಗಳಲ್ಲಿ ನಿರ್ಲಕ್ಷ್ಯ (Neglect) ಮಾಡಿರುತ್ತೇವೆ. ಆದರೆ ಅದು ತಪ್ಪು, ಆರೋಗ್ಯದಲ್ಲಿ ಏನಾದರೂ ಏರು ಪೇರಾದಾಗ, ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಅದನ್ನು ಪರೀಕ್ಷಿಸುವುದು ಅತೀ ಅಗತ್ಯ. ನಾವು ನಿರ್ಲಕ್ಷಿಸುವ ಸಣ್ಣ ರೋಗ ಲಕ್ಷಣ (Symptoms) ಮುಂದೆ ಕೈಮೀರಿ ಹೋಗಬಹುದು ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು.

ಜನರ ಸಾವಿಗೆ ಕಾರಣವಾಗುವ ಪ್ರಮುಖ ರೋಗಗಳಲ್ಲಿ ಕ್ಯಾನ್ಸರ್ ಕೂಡಾ ಒಂದು

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ವಿಶ್ವಾದ್ಯಂತ ಜನರ ಸಾವಿಗೆ ಕಾರಣವಾಗುವ ಹಲವು ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಕೂಡಾ ಪ್ರಮುಖವಾಗಿದೆ. 2022ರ ಡಾಟಾ ಪ್ರಕಾರ ಇದು ಸಾಬೀತಾಗಿದೆ. ಬೇರೆ ಬೇರೆ ವಿಧದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಮನುಷ್ಯನ ದೇಹದಲ್ಲಿ ಬಹಳಷ್ಟು ಸಮಯ ತೆಗೆದುಕೊಂಡು, ಹಲವು ಹಂತಗಳಲ್ಲಿ ಬೆಳೆಯುವ ರೋಗವಾಗಿದೆ. ನಂತರದಲ್ಲಿ ಲಕ್ಷಣಗಳನ್ನು ತೋರಿಸುತ್ತದೆ. ಸೈಲೆಂಟಾಗಿ ಬೆಳೆಯುವ ಈ ಸ್ವಭಾವವೇ ಕ್ಯಾನ್ಸರ್ ಕುರಿತು ಹೆಚ್ಚು ಭಯಪಡುವ ವಿಚಾರ.

ಇದನ್ನೂ ಓದಿ: Cancer: ಮೂಳೆ ಕ್ಯಾನ್ಸರ್ ಎಂದರೇನು? ಲಕ್ಷಣಗಳು ಏನು?

ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆ

ಕ್ಯಾನ್ಸರ್ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಮತ್ತು ಗೆಡ್ಡೆಯ ಬೆಳವಣಿಗೆಯಿಂದ ಗುಣಲಕ್ಷಣಗಳನ್ನು ಹೊಂದಿದ್ದು, ಕ್ಯಾನ್ಸರ್ ತನ್ನ ಹಂತಗಳಲ್ಲಿ ದೇಹದಾದ್ಯಂತ ಹರಡಿ ಮೆಟಾಸ್ಟಾಟಿಕ್ ಆಗಿ ಬದಲಾಗುತ್ತದೆ. ಇದರ ಪರಿಣಾಮದಿಂದ ಚಿಕಿತ್ಸೆಯು ಮತ್ತಷ್ಟು ಕಷ್ಟವಾಗುತ್ತದೆ. ಜಾಗತಿಕವಾಗಿ, ಕೊಲೊನ್, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗಳು ಈ ರೋಗದ ಸಾಮಾನ್ಯ ರೂಪಗಳಾಗಿವೆ. ತಜ್ಞರು ಕ್ಯಾನ್ಸರ್ ಆರಂಭಿಕ ಲಕ್ಷಣಗಳನ್ನು ಕ್ಯಾನ್ಸರ್ ಅಪಾಯ ತಡೆಯುವಲ್ಲಿ ಪ್ರಮುಖವಾಗಿ ಅಂಶವಾಗಿ ಪರಿಗಣಿಸುತ್ತಾರೆ.

ನೀವು ಕ್ಯಾನ್ಸರ್ ಎಚ್ಚರಿಕೆ ಗಂಟೆಯನ್ನು ಗಮನಿಸಿ

ಕೆಲವು ಜನರು ಸೀನುವಿಕೆ ಅಥವಾ ರನ್ನಿಂಗ್ ನೋಸ್ (Running Nose) ಅಥವಾ ಕೆಮ್ಮಿನಿಂದ ಬೆಳಗ್ಗೆ ಏಳುತ್ತಾರೆ. ಜ್ವರ (Fever) ಅಥವಾ ನಿದ್ರಾಹೀನತೆಯಿಂದ ಬಳಲುತ್ತಿರುವ ಹೊರತು ಈ ರೋಗಲಕ್ಷಣಗಳ ಜೊತೆಗೆ ಆಯಾಸವನ್ನೂ ಅನುಭವಿಸುತ್ತಿದ್ದರೆ ಇದನ್ನು ಗಮನಿಸಬೇಕು. ಕೆಮ್ಮು ಆಯಾಸದಿಂದ (Tiredness) ಕೂಡಿದ್ದರೆ, ಅದು ಕ್ಯಾನ್ಸರ್ನ ಸಂಕೇತವಾಗಿರಬಹುದು ಎಂದು ತಜ್ಞರು ನಂಬುತ್ತಾರೆ.

ನಿರಂತರ ಗಂಟಲು ನೋವು

ಒಬ್ಬ ವ್ಯಕ್ತಿಯು ನಿರಂತರ ಕೆಮ್ಮನ್ನು ಹೊಂದಿದ್ದರೆ ಇದನ್ನು ಬೇರೆ ರೋಗವಾಗಿ ಪರಿಗಣಿಸುವ ಸಾಧ್ಯತೆ ಇದೆ. ವಿಶೇಷವಾಗಿ ಧೂಮಪಾನದ (Smoking) ಅಭ್ಯಾಸವಿರುವವರಲ್ಲಿ ಇದನ್ನು ಪತ್ತೆ ಮಾಡುವುದು ಕಷ್ಟ. ಯಾವುದೇ ಸುಧಾರಣೆಯ ಲಕ್ಷಣಗಳಿಲ್ಲದೆ ಎರಡು ವಾರಗಳ ಕಾಲ ನಿರಂತರ ಗಂಟಲು ನೋಯುತ್ತಿದ್ದರೆ (Throat Pain) ಇದು ಕೂಡಾ ಕ್ಯಾನ್ಸರ್ ಲಕ್ಷಣವಾಗಿರಬಹುದು.

ಇದನ್ನೂ ಓದಿ: World Cancer Day 2021:ಇಂದು ವಿಶ್ವ ಕ್ಯಾನ್ಸರ್‌ ದಿನಾಚರಣೆ; ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಕ್ಯಾನ್ಸರ್ಗೆ ಪ್ರಮುಖ ಕಾರಣಗಳು ಯಾವುವು?

WHO ವಿವರಿಸಿದಂತೆ, ಪ್ರಮುಖ ಕಾರಣಗಳು ಕಾರ್ಸಿನೋಜೆನ್‌ಗಳು ಮತ್ತು ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದು. ಇದರ ಜೊತೆಗೆ, ಇತರ ಕಾರಣಗಳು ಕ್ಯಾನ್ಸರ್​ಗೆ ಕಾರಣವಾಗಬಹುದು. ಅವುಗಳು ಯಾವುವು ? ಇಲ್ಲಿ ನೋಡಿ

  • ಅನುವಂಶಿಕ

  • ಕುಟುಂಬದಲ್ಲಿ ಇತರ ಸದಸ್ಯರಿಗೆ ಕ್ಯಾನ್ಸರ್ ಇದ್ದ ಸಂದರ್ಭ

  • ಧೂಮಪಾನ ತಂಬಾಕು

  • ಮದ್ಯ

  • ವಿಕಿರಣಕ್ಕೆ ಒಡ್ಡಿಕೊಳ್ಳುವುದು

  • ರಾಸಾಯನಿಕ ಕಾರ್ಸಿನೋಜೆನ್‌ಗಳು ಅಥವಾ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಪರಾವಲಂಬಿಗಳಂತಹ ಜೈವಿಕ ಕಾರ್ಸಿನೋಜೆನ್‌ಗಳಿಗೆ ಒಡ್ಡಿಕೊಳ್ಳುವುದು

  • ನೀರಿನ ಮಾಲಿನ್ಯಕಾರಕ ಆರ್ಸೆನಿಕ್ ಜೊತೆ ಸಂಪರ್ಕ


ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ದೇಹದೊಳಗೆ ಗೆಡ್ಡೆ ಬೆಳೆಯಲು ಪ್ರಾರಂಭವಗುತ್ತದೆ. ನಂತರ ಕ್ಯಾನ್ಸರ್ ಕೋಶಗಳು ದೇಹದ ವಿವಿಧ ಭಾಗಗಳಿಗೆ ಹರಡಿ ಮಾರಣಾಂತಿಕವಾಗಿ ಬದಲಾಗುತ್ತದೆ. ಜಂಕ್ ಫುಡ್ (Junk Food), ದೈಹಿಕ ವ್ಯಾಯಾಮದ ಕೊರತೆ ಮತ್ತು ವಾಯುಮಾಲಿನ್ಯದ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

2018 ರಲ್ಲಿ, 13 ಶೇಕಡಾ ಕ್ಯಾನ್ಸರ್ ಪ್ರಕರಣಗಳು ಹೆಪಟೈಟಿಸ್ ಬಿ ಮತ್ತು ಸಿ ಅಥವಾ ಹ್ಯೂಮನ್ ಪ್ಯಾಪಿಲೋಮವೈರಸ್‌ನಂತಹ ಕಾರ್ಸಿನೋಜೆನಿಕ್ ಸೋಂಕುಗಳಿಗೆ ಕಾರಣವಾಗಿವೆ. ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ಹೆಚ್ಚು ಸಮತೋಲನ ಆಹಾರ, ಆರೋಗ್ಯಕರ ಜೀವನಶೈಲಿಯನ್ನು (Healthy Lifestyle) ಅಳವಡಿಸಿಕೊಳ್ಳಬೇಕು. ಆಲ್ಕೋಹಾಲ್ ಮತ್ತು ತಂಬಾಕಿನಿಂದ ದೂರವಿರುವುದು ಅಗತ್ಯ.
Published by:Divya D
First published: