• Home
  • »
  • News
  • »
  • lifestyle
  • »
  • Coronavirus: ಹಿರಿಯರಲ್ಲಿ ಹೆಚ್ಚಾಗ್ತಿದೆ ಕೊರೋನಾ ಸೋಂಕು, ಹೊರಗೆ ಹೋಗದಂತೆ ತಜ್ಞರ ಎಚ್ಚರಿಕೆ

Coronavirus: ಹಿರಿಯರಲ್ಲಿ ಹೆಚ್ಚಾಗ್ತಿದೆ ಕೊರೋನಾ ಸೋಂಕು, ಹೊರಗೆ ಹೋಗದಂತೆ ತಜ್ಞರ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Corona Effect In Elderly People: ಈಗಾಗಲೇ ಹಲವು ತಿಂಗಳಿಂದ ಕೊರೋನಾ ಹೊಸ ರೂಪಾಂತರ ದಾಳಿ ಇಟ್ಟಿದೆ. ಇದಕ್ಕೆ ವಯಸ್ಸಾದವರು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರು, ಬೇಗನೆ ತುತ್ತಾಗುತ್ತಾರೆ ಎಂದು ತಜ್ಞರು ಹೇಳುತ್ತಿದ್ದಾರೆ.

  • Share this:

ಕೋವಿಡ್‌ (Covid) ನಿಂದ ಜಗತ್ತು ಎರಡು ವರ್ಷಗಳಿಂದ ಬಳಲುತ್ತಲೇ ಇದೆ. ಆದರೆ ಈ ಕೊರೋನಾದ (Corona) ಅಟ್ಟಹಾಸ ಮಾತ್ರ ಇನ್ನು ಕಡಿಮೆ ಆಗುತ್ತಿಲ್ಲ. ದಿನದಿಂದ ದಿನಕ್ಕೆ ಅದು ರೂಪಾಂತರದ ಮೂಲಕ ಜನರ ಆರೋಗ್ಯದ (Health) ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದ ಯಾರಿಗೂ ನೆಮ್ಮದಿಯೇ ಇಲ್ಲದಂತಾಗಿದೆ. ಹೊರಗಡೆ ಕಾಲಿಟ್ಟರೆ ಸಾಕು, ಏನು ಆಗುತ್ತೊ ಏನೋ ಅನ್ನೊ ಭಯ ಸದಾ ಕಾಡುತ್ತಿರುತ್ತದೆ. ಜಗತ್ತಿಗೆ ಕೊರೋನಾ ಎಂಬುದು ತಲೆ ಮೇಲೆ ಇರುವ ತೂಗು ಕತ್ತಿ ಎಂದ್ರೂ ಅತಿಶೋಕ್ತಿ ಆಗಲ್ಲ. ಏಕೆಂದರೆ ಈ ತೂಗು ಕತ್ತಿ ಯಾವಾಗ ನಮ್ಮ ತಲೆ ಕತ್ತರಿಸುತ್ತದೆಯೋ ಎಂಬುದು ಗೊತ್ತಿರದೇ, ಪ್ರತಿ ಕ್ಷಣವೂ ಭಯದಿಂದ ಬದುಕುವಂತಾಗಿದೆ.


ಈಗಾಗಲೇ ಹಲವು ತಿಂಗಳಿಂದ ಕೊರೋನಾ ಹೊಸ ರೂಪಾಂತರ ದಾಳಿ ಇಟ್ಟಿದೆ. ಇದಕ್ಕೆ ವಯಸ್ಸಾದವರು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರು, ಬೇಗನೆ ತುತ್ತಾಗುತ್ತಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದು ನಿಜವೇ? ಅಥವಾ ಕೇವಲ ವದಂತಿನಾ ಎಂಬುದನ್ನು ತಿಳಿಯೋಣ ಬನ್ನಿ.


ತಜ್ಞರು ಏನ್‌ ಹೇಳ್ತಿದಾರೆ?


“ಭಾರತದಲ್ಲಿ ಹೆಚ್ಚು ಸಾಂಕ್ರಾಮಿಕವಾಗಿರುವ ಹೊಸ COVID-19 ರೂಪಾಂತರದ ಇತ್ತೀಚಿನ ವರದಿಗಳನ್ನು ಪರಿಶಿಲನೆ ನಡೆಸಿದಾಗ ಕೋವಿಡ್‌ ಪ್ರಮಾಣ ಮತ್ತೆ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಸಾರ್ವಜನಿಕರು COVID-ಸೂಕ್ತ ಕ್ರಮಗಳನ್ನು ಅನುಸರಿಸಿ ಅದರಿಂದ ದೂರವಿರಬೇಕು" ಎಂದು ತಜ್ಞರು ಎಚ್ಚರಿಸಿದ್ದಾರೆ.


"ಹಿರಿಯರು ಮತ್ತು ಇತರ ಕಾಯಿಲೆ ಇರುವ ವ್ಯಕ್ತಿಗಳು ಹೊರಗಡೆ ಹೋಗುವುದನ್ನು ತಪ್ಪಿಸಿ, ಮನೆಯಲ್ಲಿಯೇ ಇರುವುದು ಹೆಚ್ಚು ಸೂಕ್ತ. ಏಕೆಂದರೆ ಅನಾರೋಗ್ಯ ಹರಡುವ ಹೆಚ್ಚಿನ ಅಪಾಯವಿದೆ ಮತ್ತು ಕೆಲವರು ಗಂಭೀರವಾದ ಸೋಂಕಿಗೂ ಗುರಿಯಾಗುವ ಸಾಧ್ಯತೆಯನ್ನು ಸಹ ಹೊಂದಿದ್ದಾರೆ” ಎಂದು ದೆಹಲಿ ಏಮ್ಸ್‌ನ ಮಾಜಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಹೇಳುತ್ತಾರೆ.


ಓಮಿಕ್ರಾನ್‌ ನ ಹೊಸ ರೂಪಾಂತರಗಳ ಆಗಮನದಿಂದ ಎಚ್ಚೆತ್ತ ಆರೋಗ್ಯ ಸಚಿವಾಲಯ ಅಕ್ಟೋಬರ್‌ 18 ರಂದು ಪ್ರಮುಖ ಸಭೆಯನ್ನು ನಡೆಸಿತು. ಅಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಹಿರಿಯ ಆರೋಗ್ಯ ಅಧಿಕಾರಿಗಳ ನಡುವಿನ ಉನ್ನತ ಮಟ್ಟದ ಸಭೆಯ ನಂತರ ರಾಷ್ಟ್ರವ್ಯಾಪಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಬೇಕು ಮತ್ತು COVID19-ಸೂಕ್ತ ನಡವಳಿಕೆಗಳನ್ನು ಮುಂದುವರಿಸಬೇಕೆಂದು ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


ಇದನ್ನೂ ಓದಿ: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ


ಹೆಚ್ಚುವರಿಯಾಗಿ, ವಿಜ್ಞಾನಿಗಳು, ವೈದ್ಯರು ಮತ್ತು ಹಿರಿಯ ಆಡಳಿತಗಾರರ ಗುಂಪು ಕಣ್ಗಾವಲು ಮತ್ತು ಜೀನೋಮ್ ಅನುಕ್ರಮವನ್ನು ಹೆಚ್ಚಿಸುವಂತೆ ಸಲಹೆ ನೀಡಿತು. ಆರೋಗ್ಯ ವೃತ್ತಿಪರರು ವಯಸ್ಸಾದ ಹಿರಿಯರು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ COVID-19 ರೋಗನಿರೋಧಕ ಡೋಸ್ ಅನ್ನು ನೀಡಬೇಕೆಂದು ಆರೋಗ್ಯ ಸಚಿವಾಲಕ್ಕೆ ಸಲಹೆ ನೀಡಿದ್ದಾರೆ.


ಅಕ್ಟೋಬರ್ 18 ಕ್ಕೂ ಮುಂಚೆ ಕೊರೋನಾವೈರಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹಿಂದಿನ ವಾರಕ್ಕಿಂತ 17.7% ರಷ್ಟು ಹೆಚ್ಚಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ. ಕೇರಳ ಮತ್ತು ಭಾರತದ ಇತರ ಪ್ರದೇಶಗಳಲ್ಲಿ ಗುರುತಿಸಲಾದ XBB ಸೇರಿದಂತೆ SARS-CoV-2 ವೈರಸ್‌ನ ಹೊಸ ರೂಪಾಂತರಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ.


ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ


“ಪ್ರತಿಯೊಬ್ಬರೂ ಹೊರಗೆ ಹೋಗುವಾಗ ಮಾಸ್ಕ್ ಬಳಸಬೇಕು, ವಿಶೇಷವಾಗಿ ಜನನಿಬಿಡ ಪ್ರದೇಶಗಳಲ್ಲಿ ಧರಿಸಲೇಬೇಕು. ಈಗ ಇರುವ ಹೊಸ ರೂಪಾಂತರಗಳ ಜೊತೆ ಮತ್ತೆ ಬೇರೆ ಹೊಸ ಕೋವಿಡ್‌ ರೂಪಾಂತರಗಳು ಯಾವಾಗ ಬೇಕಾದರೂ ಜನ್ಮ ತಾಳಬಹುದು ಆದ್ದರಿಂದ ಮಾಸ್ಕ್‌ ಬಳಸಿ ಕೊರೋನಾದಿಂದ ದೂರವಿರಿ” ಎಂದು ಡಾ. ರಣದೀಪ್‌ ಗುಲೇರಿಯಾ ಸಲಹೆ ನೀಡುತ್ತಾರೆ.


ಇದನ್ನೂ ಓದಿ: ಮೂಳೆ ಕ್ಯಾನ್ಸರ್‌ಗೆ ಈ ಹೊಸ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಂತೆ, ಅಧ್ಯಯನದಲ್ಲಿ ಬಹಿರಂಗ


“ಮತ್ತೊಂದೆಡೆ ಕೊರೋನಾ ಬಂದ ವ್ಯಕ್ತಿಗಳು ಈ ಸಲ ಆಸ್ಪತ್ರೆ ಮತ್ತು ಐಸಿಯುಗೆ ದಾಖಲಾಗುವ ಸಾಧ್ಯತೆಗಳು ಕಡಿಮೆ. ಈ ಬಾರಿ ಸೌಮ್ಯವಾದ ಸೋಂಕು, ಜ್ವರ, ಶೀತ, ಕೆಮ್ಮು ಮತ್ತು ದೇಹ ನೋವು ಇರುತ್ತದೆ, 3-4 ದಿನಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಯಿದೆ, ಸಾಮಾನ್ಯವಾಗಿ, ಈ ಋತುವಿನಲ್ಲಿ, COVID ನಿಂದಾಗಿ ವೈರಲ್ ಜ್ವರ ವರದಿಯಾಗಿದೆ ”ಎಂದು ಗುಲೇರಿಯಾ ಅವರು ಹೇಳಿದರು.

Published by:Sandhya M
First published: