Health Tips: ಮೂಳೆಗಳ ನೋವು ನಿಮ್ಮನ್ನು ಕಾಡುತ್ತಿರುತ್ತದೆಯೇ? ಹಾಗಿದ್ರೆ ಈ ಆಹಾರವನ್ನು ಸೇವಿಸಿ

ಕೆಲವೊಮ್ಮೆ ನೀವು ಹೊರಗಿಂದ ಕಾಣಲು ಎಷ್ಟೇ ಫಿಟ್ ಆಗಿ ಕಂಡರೂ ಸಹ, ನಿಮ್ಮ ದೇಹದಲ್ಲಿರುವ ಮೂಳೆಗಳ ನೋವು ನಿಮ್ಮನ್ನು ಕಾಡುತ್ತಿರುತ್ತದೆ. ಹೌದು.. ದೇಹದ ಇತರೆ ಅಂಗಾಂಗಗಳ ರೀತಿಯಲ್ಲಿಯೇ ಈ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವೊಮ್ಮೆ ನೀವು ಹೊರಗಿಂದ ಕಾಣಲು ಎಷ್ಟೇ ಫಿಟ್ ಆಗಿ ಕಂಡರೂ ಸಹ, ನಿಮ್ಮ ದೇಹದಲ್ಲಿರುವ ಮೂಳೆಗಳ (Bones) ನೋವು ನಿಮ್ಮನ್ನು ಕಾಡುತ್ತಿರುತ್ತದೆ. ಹೌದು.. ದೇಹದ ಇತರೆ ಅಂಗಾಂಗಗಳ ರೀತಿಯಲ್ಲಿಯೇ ಈ ಮೂಳೆಗಳ ಆರೋಗ್ಯವನ್ನು (Health) ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ನಿಮ್ಮ ದೇಹದಲ್ಲಿರುವ ಮೂಳೆಗಳಲ್ಲಿ ನೀವು ಎಂದಾದರೂ ಹಠಾತ್ ನೋವನ್ನು (Pain) ಅನುಭವಿಸಿದ್ದೀರಾ? ನೀವು ಆಗಾಗ್ಗೆ ನೋವು ಅನುಭವಿಸಿದರೆ ನಿಮ್ಮ ಮೂಳೆಗಳು ದುರ್ಬಲವಾಗಿರುವ (Weak) ಸಾಧ್ಯತೆಯಿದೆ ನೋಡಿ. ಮೂಳೆಗಳು ದುರ್ಬಲವಾಗುವುದಕ್ಕೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ವಯಸ್ಸಾಗುವಿಕೆ, ಕೀಲುಗಳಲ್ಲಿ ನಿರಂತರ ನೋವನ್ನು ಅನುಭವಿಸುವುದು ಇವೆಲ್ಲವೂ ಸೇರಿದೆ.

ಮೂಳೆಯ ಆರೋಗ್ಯವನ್ನು ಸುಧಾರಿಸಲು ಡಯಟ್ ಪ್ಲಾನ್
ನಮ್ಮಲ್ಲಿ ಅನೇಕರು ತಮ್ಮ ದೇಹದ ಆರೋಗ್ಯಕ್ಕಾಗಿ ವಿಭಿನ್ನ ಆಹಾರಗಳನ್ನು ಸೇವಿಸುತ್ತಾರೆ ಮತ್ತು ಅನೇಕ ಪೂರಕಗಳನ್ನು ಸಹ ತೆಗೆದುಕೊಳ್ಳುತ್ತಾರೆ. ನಿಮ್ಮ ಮೂಳೆಯ ಆರೋಗ್ಯವನ್ನು ಸುಧಾರಿಸಲು ಯಾವೆಲ್ಲಾ ಆಹಾರ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ಪೌಷ್ಟಿಕ ತಜ್ಞೆ ನಮಾಮಿ ಅಗರ್ವಾಲ್ ಅವರು ಇಲ್ಲಿ ಹೇಳಿದ್ದಾರೆ ನೋಡಿ.

1) ಎಳ್ಳು ಬೀಜಗಳು
ಇತ್ತೀಚೆಗೆ, ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ಮೂಳೆಯ ಆರೋಗ್ಯದ ಬಗ್ಗೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೊದಲಿಗೆ ಅವರು ಎಳ್ಳು ಬೀಜಗಳನ್ನು ಉಲ್ಲೇಖಿಸುತ್ತಾರೆ. ಇವರ ಪ್ರಕಾರ, ಈ ಎಳ್ಳು ಬೀಜಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಅವು ರಂಜಕ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ.

2) ಬೀನ್ಸ್
ನಮಾಮಿ ಉಲ್ಲೇಖಿಸುವ ಎರಡನೇ ಪದಾರ್ಥ ಎಂದರೆ ಅದು ಬೀನ್ಸ್. ಬೀನ್ಸ್ ಮೂಳೆ ಸ್ನೇಹಿ ಆಗಿದ್ದು, ಅನೇಕ ರೀತಿಯ ಪೋಷಕಾಂಶಗಳನ್ನು ಇದು ಹೊಂದಿದೆ. ಅವು ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿರುತ್ತವೆ, ಇದು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Turmeric Tea Benefits: ಅರಶಿನ ಟೀ ಕುಡಿಯುವುದರಿಂದ ಹಲವು ಪ್ರಯೋಜನ!

3) ರಾಗಿ
ಮೂರನೇಯದಾಗಿ ಅವರು ರಾಗಿಯ ಬಗ್ಗೆ ಮಾತನಾಡುತ್ತಾ, ರಾಗಿಯಲ್ಲಿ ಕ್ಯಾಲ್ಸಿಯಂ ಇರುತ್ತದೆ ಮತ್ತು ಇದು ನಿಮ್ಮ ಮೂಳೆಗಳಿಗೆ ಉತ್ತಮವಾಗಿದೆ ಎಂದು ಅವರು ಹೇಳುತ್ತಾರೆ. ರಾಗಿಯನ್ನು ಬಳಸಿಕೊಂಡು ಪ್ಯಾನ್ ಕೇಕ್, ರೊಟ್ಟಿಗಳು ಮತ್ತು ಹೆಚ್ಚಿನದನ್ನು ತಯಾರಿಸಿ ಮಕ್ಕಳಿಗೆ ಬಡಿಸಬಹುದು. ಇಷ್ಟೇ ಅಲ್ಲದೆ ಪೌಷ್ಟಿಕ ತಜ್ಞೆ ನಮಾಮಿ ಅವರು ಆಹಾರದ ಜೊತೆಗೆ ಇನ್ನೂ ಕೆಲವು ಹಣ್ಣುಗಳನ್ನು ಮತ್ತು ಹಸಿರು ತರಕಾರಿಗಳನ್ನು ಸೇವಿಸಲು ಹೇಳಿದ್ದಾರೆ.

4) ಅನಾನಸ್
ಅನಾನಸ್ ಹಣ್ಣಿನಲ್ಲಿ ಪೊಟ್ಯಾಶಿಯಮ್ ಇರುತ್ತದೆ, ಇದು ದೇಹದ ಆಮ್ಲದ ಹೊರೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕ್ಯಾಲ್ಸಿಯಂ ನಷ್ಟವನ್ನು ತಡೆಯುತ್ತದೆ. ಹೆಚ್ಚುವರಿಯಾಗಿ, ಇದು ಸಾಕಷ್ಟು ವಿಟಮಿನ್ ಎ ಅನ್ನು ಸಹ ಹೊಂದಿರುತ್ತದೆ.

5) ಪಾಲಕ್ ಸೊಪ್ಪು
 ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಇದ್ದು, ಈ ಹಸಿರು ಎಲೆ ತರಕಾರಿಯು ಮೂಳೆಗಳು ಮತ್ತು ಹಲ್ಲುಗಳ ರಚನೆಗೆ ಸಹಾಯ ಮಾಡುತ್ತದೆ. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಿಂದ ದೇಹವು ತನ್ನ ದೈನಂದಿನ ಕ್ಯಾಲ್ಸಿಯಂ ಅಗತ್ಯಗಳಲ್ಲಿ ಸುಮಾರು 25 ಪ್ರತಿಶತದಷ್ಟನ್ನು ಪಡೆಯಬಹುದು. ಕಬ್ಬಿಣ ಮತ್ತು ವಿಟಮಿನ್ ಎ ಸಹ ಫೈಬರ್ ಸಮೃದ್ಧ ಎಲೆಗಳಲ್ಲಿ ಹೇರಳವಾಗಿವೆ.

6) ನಟ್ಸ್
ಕನ್ನಡದಲ್ಲಿ ಇದನ್ನು ಬೀಜಗಳು ಎಂದು ಹೇಳಬಹುದು, ಇದರಲ್ಲಿ ಕ್ಯಾಲ್ಸಿಯಂ ಜೊತೆಗೆ, ಮೂಳೆಯ ಆರೋಗ್ಯಕ್ಕೆ ಅತ್ಯಗತ್ಯವಾದ ಮೆಗ್ನೀಸಿಯಮ್ ಮತ್ತು ರಂಜಕ ಸಹ ಇರುತ್ತದೆ. ಮೆಗ್ನೀಸಿಯಮ್ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಅದನ್ನು ಮೂಳೆಗಳಲ್ಲಿಡಲು ಸಹಾಯ ಮಾಡುತ್ತದೆ.

7) ಬಾಳೆಹಣ್ಣು
ಬಾಳೆಹಣ್ಣುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ, ಬಾಳೆಹಣ್ಣುಗಳು ಮೆಗ್ನೀಸಿಯಮ್ ನ ಅದ್ಭುತ ಮೂಲವಾಗಿದೆ. ಮೂಳೆಗಳು ಮತ್ತು ಹಲ್ಲುಗಳ ರಚನೆಗೆ ವಿಟಮಿನ್ ನಿರ್ಣಾಯಕವಾಗಿದೆ. ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ಮೂಳೆಗಳು ದುರ್ಬಲವಾಗುವುದನ್ನು ನಾವು ತಡೆಗಟ್ಟಬಹುದು.

ಇದನ್ನೂ ಓದಿ:  Fatty Liver Disease: ಬೆಳಗ್ಗೆ ಎದ್ದ ನಂತರ ನಿಮ್ಗೆ ಹೀಗೆಲ್ಲಾ ಆಗ್ತಾ ಇದ್ಯಾ? ಹಾಗಿದ್ರೆ ಇದು ಯಕೃತ್ತಿನ ಕಾಯಿಲೆಯ ಎಚ್ಚರಿಕೆ ಸಂಕೇತ

8) ಪಪ್ಪಾಯಿ
100 ಗ್ರಾಂ ಪಪ್ಪಾಯಿಯಲ್ಲಿ 20 ಮಿಲಿ ಗ್ರಾಂ ಕ್ಯಾಲ್ಸಿಯಂ ಇರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿರಿ, ಇದು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
Published by:Ashwini Prabhu
First published: