Expensive Divorce: ದುಬಾರಿ ಜೀವನಾಂಶ ಕೊಟ್ಟು ಸುದ್ದಿಯಾದ ವಿಚ್ಛೇದಿತ ಜೋಡಿಗಳು

ಈಗ ದುಬಾರಿ ವಿವಾಹಕ್ಕಿಂತ ಹೆಚ್ಚಾಗಿ ಕಾಸ್ಟ್ಲಿ ವಿಚ್ಛೇದನದ್ದೇ ಸದ್ದು. ಹೌದು, ಈಗ ಜನರು ವಿವಾಹಕ್ಕಿಂತ ಹೆಚ್ಚಾಗಿ ವಿಚ್ಛೇದನಕ್ಕೆ ಖರ್ಚು ಮಾಡುತ್ತಿದ್ದಾರೆ. ವಿಶ್ವದಲ್ಲಿ ವಿದ್ಛೇದನ ನೀಡುವುದರೊಂದಿಗೆ ವಿಚ್ಛೇದಿತ ಪತ್ನಿಗೆ ಕೊಡುವ ಜೀವನಾಂಶವೇ ಅಧಿಕವಾಗಿರುತ್ತದೆ. ಇದಕ್ಕೆ ವಿಶ್ವದಲ್ಲಿ ಆಗುತ್ತಿರುವ ದುಬಾರಿ ವಿಚ್ಛೇದನಗಳೇ ಸಾಕ್ಷಿ.

Seema.R | news18
Updated:July 2, 2019, 6:23 PM IST
Expensive Divorce: ದುಬಾರಿ ಜೀವನಾಂಶ ಕೊಟ್ಟು ಸುದ್ದಿಯಾದ ವಿಚ್ಛೇದಿತ ಜೋಡಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: July 2, 2019, 6:23 PM IST
  • Share this:
ಮದುವೆ ಎನ್ನುವುದು ಎರಡು ಜೀವಗಳನ್ನು ಬೆಸೆಯುವ ಪವಿತ್ರ ಬಂಧನ. ಆದರೆ ಇತ್ತೀಚಿಗಿನ ದಿನಗಳಲ್ಲಿ ವಿವಾಹ ಶ್ರೀಮಂತಿಕೆಯನ್ನು ತೋರುವ ಕಾರ್ಯಕ್ರಮವಾಗುತ್ತಿದೆ. ಹೀಗಾಗಿಯೇ ಜಗತ್ತಿನಾದ್ಯಂತ ನಡೆಯುವ ದುಬಾರಿ ಅಥವಾ ಕಾಸ್ಟ್ಲಿ  ಮದುವೆಗಳು ಸಾಮಾಜಿಕ ಜಾಲತಾಣದಲ್ಲೂ ಟ್ರೆಂಡಿಂಗ್​ನಲ್ಲಿರುತ್ತವೆ.

ವಾರಗಟ್ಟಲೆ ನಡೆಯುವ ಮದುವೆ ಕಾರ್ಯಗಳು... ನಂತರ ನಾಲ್ಕೈದು ಆರತಕ್ಷತೆ... ಇವಕ್ಕೆಲ್ಲ ಕೋಟಿ ಕೋಟಿ ವೆಚ್ಚ ಮಾಡುವ ಮಂದಿ.... ಮದುವೆ ಹೇಗೆ ಮಾಡಿಕೊಂಡರೂ ಕೆಲ ಸಂಬಂಧಗಳು ಬಹಳ ಕಾಲ ಉಳಿಯೋದಿಲ್ಲ ಎನ್ನುವುದಕ್ಕೆ ಈಗ ಹೆಚ್ಚುತ್ತಿರುವ ವಿಚ್ಛೇದನದ ಸಂಖ್ಯೆಯೇ ಉದಾಹರಣೆ.

ಆದರೆ ಈಗ ದುಬಾರಿ ವಿವಾಹಕ್ಕಿಂತ ಹೆಚ್ಚಾಗಿ ಕಾಸ್ಟ್ಲಿ ವಿಚ್ಛೇದನದ್ದೇ ಸದ್ದು. ಹೌದು, ಈಗ ಜನರು ವಿವಾಹಕ್ಕಿಂತ ಹೆಚ್ಚಾಗಿ ವಿಚ್ಛೇದನಕ್ಕೆ ಖರ್ಚು ಮಾಡುತ್ತಿದ್ದಾರೆ. ವಿಶ್ವದಲ್ಲಿ ವಿದ್ಛೇದನ ನೀಡುವುದರೊಂದಿಗೆ ವಿಚ್ಛೇದಿತ ಪತ್ನಿಗೆ ಕೊಡುವ ಜೀವನಾಂಶವೇ ಅಧಿಕವಾಗಿರುತ್ತದೆ. ಇದಕ್ಕೆ ವಿಶ್ವದಲ್ಲಿ ಆಗುತ್ತಿರುವ ದುಬಾರಿ ವಿಚ್ಛೇದನಗಳೇ ಸಾಕ್ಷಿ. ಅಂತಹ ಕಾಸ್ಟ್ಲಿ ವಿಚ್ಛೇದನದ ಕುರಿತು ವಿಶೇಷ ವರದಿ ಇಲ್ಲಿದೆ ಓದಿ...

ದಶಕಗಳು ಒಟ್ಟಿಗೆ ಜೀವನ ಕಳೆದ ನಂತರವೂ ಹಲವಾರು ದಂಪತಿಗಳು ಬೇರೆಯಾಗುತ್ತಿದ್ದಾರೆ. ಅಷ್ಟೆ ಅಲ್ಲ ಹೆಂಡತಿಗೆ ದಾಖಲೆ ಮೊತ್ತದ ಜೀವನಾಂಶ ನೀಡುವ ಮೂಲಕ ಸಂಸಾರ ಬಂಧನದಿಂದ ಸತಿಪತಿಗಳು ಹೊರ ನಡೆಯುತ್ತಿದ್ದಾರೆ.

ಅಮೆಜಾನ್​ ಸಿಇಒ ಜೆಫ್​ ಬೆಸೋಸ್​ ಹಾಗೂ ಮ್ಯಾಕ್​ ಕೆನ್ಜಿ ಬೆಸೋಸ್


ಇದಕ್ಕೆ ಉದಾಹರಣೆ, ಅಮೆಜಾನ್​ ಸಂಸ್ಥಾಪಕ ಹಾಗೂ ಸಿಇಒ ವಿಚ್ಛೇದನ ಪ್ರಕರಣ. ಅಮೆಜಾನ್​ ಸಿಇಒ ಜೆಫ್​ ಬೆಸೋಸ್​ ಹಾಗೂ ಮ್ಯಾಕ್​ ಕೆನ್ಜಿ ಬೆಸೋಸ್​ ತಮ್ಮ 26 ವರ್ಷದ ಸಂಸಾರಿಕ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಇಬ್ಬರೂ ಒಪ್ಪಿ ಬೇರಾಗಿದ್ದು, ಜೆಫ್ಸಂ​ಹೆಂಡತಿಗೆ ದುಬಾರಿ ಮೊತ್ತದ ಜೀವನಾಂಶ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಜಗತ್ತಿನ ಶ್ರೀಮಂತ ಮಹಿಳೆ ಪಟ್ಟಿಯಲ್ಲಿ ಅದಾಗಲೇ ಸ್ಥಾನ ಪಡೆದಿರುವ ಮ್ಯಾಕ್​ ಕೆನ್ಜಿ ಈಗ ಗಂಡನಿಂದ 38 ಬಿಲಿಯನ್​ ಡಾಲರ್ (3ಸಾವಿರದ 800 ಕೋಟಿ)​ ಜೀವನಾಂಶ ಪಡೆದಿದ್ದಾರೆ.ಇವರಷ್ಟೆ ಅಲ್ಲ ಇನ್ನು ಅನೇಕ ದಂಪತಿಗಳು ಕೂಡ ತಮ್ಮ ವಿವಾಹ ವಿಚ್ಛೇದನಕ್ಕೆ ನೀಡಿರುವ ಜೀವನಾಂಶದ ಹಣದಿಂದಲೇ ಸಖತ್​ ಸದ್ದು ಮಾಡಿದ್ದಾರೆ. ಈ ಕುರಿತ ವಿವರ ಮುಂದೆ ಇದೆ.

ರೋಪರ್ಟ್​ ಮುರ್ಡೋಕ್​ ಹಾಗೂ ಅನ್ನಾ ತ್ರೋವ್​


ರೋಪರ್ಟ್​ ಮುರ್ಡೋಕ್​ ಹಾಗೂ ಅನ್ನಾ ತ್ರೋವ್​

ಮಾಧ್ಯಮ ಜಗತ್ತಿನ ದೈತ್ಯ ಎಂದೇ ಖ್ಯಾತಿ ಪಡೆದಿರುವ ಮುರ್ಡೋಕ್​, ಪತ್ರಕರ್ತೆ ಅನ್ನಾ ತ್ರೋವ್​ ಅವರೊಂದಿಗೆ 31 ವರ್ಷಗಳ ಕಾಲ ಜೀವನ ನಡೆಸಿದ್ದರು. ಮೂರು ಮಕ್ಕಳನ್ನು ಹೊಂದಿದ್ದ ಈ ದಂಪತಿ 1998ರಲ್ಲಿ ಬೇರಾಗುವ ನಿರ್ಧಾರ ಕೈ ಗೊಂಡರು. ತಮ್ಮ ದಾಂಪತ್ಯದಿಂದ ದೂರದಾ ಹೆಂಡತಿಗೆ ಮುರ್ಡೋಕ್​ 1.7 ಬಿಲಿಯನ್​ ಡಾಲರ್​ (ಒಂದು  ಸಾವಿರದ 700 ಕೋಟಿ) ಜೀವನಾಂಶ ನೀಡಿದ್ದರು.

ಅಲೆಕ್​ ವೈಲ್ಡೆನ್​ಸ್ಟೈನ್​ ಮತ್ತು ಜೊಸಿಲೈನ್​ ವೈಲ್ಡೆನ್​ಸ್ಟೈನ್​


ಅಲೆಕ್​ ವೈಲ್ಡೆನ್​ಸ್ಟೈನ್​ ಮತ್ತು ಜೊಸಿಲೈನ್​ ವೈಲ್ಡೆನ್​ಸ್ಟೈನ್​

1999ರಲ್ಲಿ ದೂರದ ಈ ಜೋಡಿಯದ್ದು ದುಬಾರಿ ವಿಚ್ಚೇದನ ಎಂದೇ ಸುದ್ದಿಯಾಗಿತ್ತು. ಫ್ರೆಂಚ್​-ಅಮೆರಿಕ ಉದ್ಯಮಿಯಾಗಿದ್ದ ಅಲೆಕ್ ಹಾಗೂ ಜೊಸಿಲೈನ್​ 21 ವರ್ಷಗಳ ಕಾಲ ಸಂಸಾರ ನಡೆಸಿ, ದೂರಾದರು. ಈ ವೇಳೆ 2.5 ಡಾಲರ್​ (2 ಸಾವಿರದ 500 ಕೋಟಿ) ಜೀವನಾಂಶವನ್ನು ನೀಡಲಾಯಿತು.

First published: July 2, 2019, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading