• Home
  • »
  • News
  • »
  • lifestyle
  • »
  • Health Tips: ಈ ವ್ಯಾಯಾಮಗಳನ್ನು ಪ್ರತಿದಿನ ಮಾಡಿದ್ರೆ ಆಯಸ್ಸು ಹೆಚ್ಚಾಗುತ್ತಂತೆ

Health Tips: ಈ ವ್ಯಾಯಾಮಗಳನ್ನು ಪ್ರತಿದಿನ ಮಾಡಿದ್ರೆ ಆಯಸ್ಸು ಹೆಚ್ಚಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Exercises to Help you Live Longer: ರೋಗಗಳು ಹೆಚ್ಚಾಗುತ್ತಿರುವುದರಿಂದ, ಜನರಲ್ಲಿ ಸಾವಿನ ಅಪಾಯವು ಹೆಚ್ಚಾಗಿದೆ. ಆದಾಗ್ಯೂ, ಬಿಡುವಿಲ್ಲದ ಕೆಲಸದಿಂದಾಗಿ ಅನೇಕರು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ನಿರ್ಲಕ್ಷಿಸುತ್ತಾರೆ.

  • Share this:

ಈ ಮೂರು ವರ್ಷಗಳಲ್ಲಿ ಕೋವಿಡ್-19 (Covid) ಸಾಂಕ್ರಾಮಿಕ ರೋಗದಿಂದ ಮತ್ತು ಹೆಚ್ಚುತ್ತಿರುವ ಹೃದ್ರೋಗದ ಪ್ರಕರಣಗಳಿಂದಾಗಿ ಜನರಲ್ಲಿ ಆರೋಗ್ಯದ (Health) ಬಗ್ಗೆ ಮೊದಲಿದ್ದ ಕಾಳಜಿ ಈಗ ಇನ್ನಷ್ಟು ಜಾಸ್ತಿಯಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು ತುಂಬಾನೇ ಮುಖ್ಯವಾಗಿದೆ. ನೀವು ಆರೋಗ್ಯಕರವಾಗಿ ದೀರ್ಘಕಾಲದವರೆಗೆ ಬದುಕಲು ಬಯಸಿದರೆ, ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು (Practice) ಅನುಸರಿಸಬೇಕು, ಇದು ಮುಖ್ಯವಾಗಿ ಆರೋಗ್ಯಕರ ಆಹಾರ (Food) ಮತ್ತು ವ್ಯಾಯಾಮವನ್ನು (Exercise) ಒಳಗೊಂಡಿರುತ್ತದೆ.


ರೋಗಗಳು ಹೆಚ್ಚಾಗುತ್ತಿರುವುದರಿಂದ, ಜನರಲ್ಲಿ ಸಾವಿನ ಅಪಾಯವು ಹೆಚ್ಚಾಗಿದೆ. ಆದಾಗ್ಯೂ, ಬಿಡುವಿಲ್ಲದ ಕೆಲಸದಿಂದಾಗಿ ಅನೇಕರು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ನಿರ್ಲಕ್ಷಿಸುತ್ತಾರೆ. ಹಾಗೆ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಲ್ತ್ ಶಾಟ್ಸ್ ಫಿಟ್ನೆಸ್ ತಜ್ಞೆ ಕಮಲ್ ಕೌರ್ ಅವರು ದೀರ್ಘಕಾಲದವರೆಗೂ ಆರೋಗ್ಯಕರವಾಗಿ ಬದುಕಲು ಅನುಸರಿಸುವ ವ್ಯಾಯಾಮಗಳ ಬಗ್ಗೆ ಹೇಳಿದ್ದಾರೆ ನೋಡಿ.


ಫಿಟ್ನೆಸ್ ತಜ್ಞೆ ವ್ಯಾಯಾಮ ಮತ್ತು ಆರೋಗ್ಯದ ಬಗ್ಗೆ ಹೇಳಿದ್ದೇನು?


"ವ್ಯಾಯಾಮ ಮಾಡುವುದು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ನೀವು ಆರೋಗ್ಯಕರ ಜೀವನವನ್ನು ಬಯಸಿದರೆ, ನೀವು ಪ್ರತಿದಿನ ತಪ್ಪದೆ ಸ್ವಲ್ಪ ವ್ಯಾಯಾಮ ಮಾಡಲೇಬೇಕು. ಇದು ನಿಮಗೆ ಹೆಚ್ಚು ಕಾಲ ಬದುಕಲು ಸಹ ಸಹಾಯ ಮಾಡುತ್ತದೆ" ಎಂದು ಕೌರ್ ಅವರು ಹೇಳಿದರು.


ದೀರ್ಘಾಯುಷ್ಯಕ್ಕಾಗಿ ಈ ವ್ಯಾಯಾಮಗಳನ್ನು ತಪ್ಪದೆ ಮಾಡಿರಿ:


1. ವಾಕಿಂಗ್


ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ನ ಎಪಿಡೆಮಿಯಾಲಜಿ, ಪ್ರಿವೆನ್ಷನ್, ಲೈಫ್‌ಸ್ಟೈಲ್ ಮತ್ತು ಕಾರ್ಡಿಯೋಮೆಟಾಬಾಲಿಕ್ ಹೆಲ್ತ್ ಕಾನ್ಫರೆನ್ಸ್ 2021 ರಲ್ಲಿ ಪ್ರಸ್ತುತಪಡಿಸಿದ ಸಂಶೋಧನಾ ಫಲಿತಾಂಶಗಳ ಪ್ರಕಾರ, ಹೃದಯದ ಆರೋಗ್ಯ ಸೇರಿದಂತೆ ಫಿಟ್ನೆಸ್ ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ವಾಕಿಂಗ್ ಮಾಡುವುದು ಸುರಕ್ಷಿತ ಮತ್ತು ಸರಳ ತಂತ್ರಗಳಲ್ಲಿ ಒಂದಾಗಿದೆ.


ಇದು ಖಂಡಿತವಾಗಿಯೂ ನೀವು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ. ನಿಮಗೆ ನಡೆಯಲು ಸಮಯವಿಲ್ಲದಿದ್ದರೆ, ಮನೆಯಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ಮಾಡುವಾಗ ನೀವು ನಡೆಯಬಹುದು. ನಡಿಗೆಯು ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇತರ ಕಾಯಿಲೆಗಳ ಜೊತೆಗೆ ಮಧುಮೇಹ ಮತ್ತು ಕ್ಯಾನ್ಸರ್ ನ ಅಪಾಯ ಸಹ ಇದರಿಂದ ಕಡಿಮೆಯಾಗುತ್ತದೆ.


2. ಈಜುವುದು


ನೀವು ದೀರ್ಘಕಾಲ ಬದುಕಲು ಬಯಸಿದರೆ ಬೆಳಿಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಒಂದು ಗಂಟೆ ಈಜುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಇದರಿಂದ ನಿಮ್ಮ ಇಡೀ ದೇಹವು ಸಕ್ರಿಯಗೊಳ್ಳುತ್ತದೆ ಮತ್ತು ಬಲಿಷ್ಟಗೊಳ್ಳುತ್ತದೆ. ಇದು ನಿಮ್ಮ ಸ್ನಾಯು ಬಲ ಮತ್ತು ಹೃದಯ ರಕ್ತನಾಳದ ಫಿಟ್ನೆಸ್ ಅನ್ನು ಸಹ ಹೆಚ್ಚಿಸುತ್ತದೆ.
ವಾಸ್ತವವಾಗಿ, ನೀವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಈಜುವುದು ಒಂದು ಪೂರ್ಣ ದೇಹದ ತಾಲೀಮು ಅಂತಾನೆ ಹೇಳಬಹುದು. ಇದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಶ್ವಾಸಕೋಶ ಮತ್ತು ಹೃದಯವನ್ನು ಬಲಪಡಿಸುತ್ತದೆ ಮತ್ತು ಹಠಾತ್ ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: ಟೀ ಚೆಲ್ಲಿ ಬಟ್ಟೆ ಕಲೆ ಆಗಿದ್ರೆ ಬೇಜಾರ್ ಆಗ್ಬೇಡಿ, ಈ ಮ್ಯಾಜಿಕ್ ಟ್ರಿಕ್ಸ್ ಟ್ರೈ ಮಾಡಿ


3. ಏರೋಬಿಕ್ಸ್


ಏರೋಬಿಕ್ ವ್ಯಾಯಾಮವು ತೂಕ ಕಡಿಮೆ ಮಾಡುವುದಲ್ಲದೆ, ಇನ್ನಿತರ ಅನೇಕ ಪ್ರಯೋಜನಗಳನ್ನು ಇದು ನೀಡುತ್ತದೆ ಎಂದು ಹೇಳಬಹುದು. ಈ ರೀತಿಯ ದೈಹಿಕ ಚಟುವಟಿಕೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ಹೃದಯದ ಆರೋಗ್ಯವನ್ನು ಸಹ ಕಾಪಾಡುತ್ತದೆ.


ನ್ಯೂರಾಲಜಿಯ ಇತ್ತೀಚಿನ ಅಧ್ಯಯನದ ಪ್ರಕಾರ, ನಿಯಮಿತ ಏರೋಬಿಕ್ ವ್ಯಾಯಾಮವು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ಮೂಲಕ ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.


4. ಓಡುವುದು


ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನವು, ಯಾವುದೇ ಪ್ರಮಾಣದ ಓಟವು ಹೃದ್ರೋಗ ಮತ್ತು ಎಲ್ಲಾ ಕ್ಯಾನ್ಸರ್ ಗಳಿಂದ ಸಾಯುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡು ಹಿಡಿದಿದೆ.


ಕೌರ್ ಪ್ರಕಾರ "ಓಡುವುದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಅಲ್ಲದೆ ಇದು ಆಯುಷ್ಯವನ್ನು ಸಹ ಹೆಚ್ಚಿಸುತ್ತದೆ."


5. ಸೈಕಲ್ ಓಡಿಸುವುದು


ಸ್ಪೋರ್ಟ್ಸ್ ಮೆಡಿಸಿನ್ ಜರ್ನಲ್ ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯ ಪ್ರಕಾರ, ನಿಯಮಿತವಾಗಿ ಕೆಲಸಕ್ಕಾಗಿ ಅಥವಾ ಶಾಲೆಗೆ ಸೈಕಲ್ ನಲ್ಲಿ ಪ್ರಯಾಣಿಸುವವರು ದೀರ್ಘ, ಆರೋಗ್ಯಕರ ಜೀವನವನ್ನು ಆನಂದಿಸುತ್ತಾರೆ.


ಇದನ್ನೂ ಓದಿ: ಕೇವಲ 15 ನಿಮಿಷದಲ್ಲಿ ರೆಡಿಯಾಗುತ್ತೆ ಚಾಕೊಲೇಟ್​ ಕುಕ್ಕೀಸ್​, ಇಲ್ಲಿದೆ ರೆಸಿಪಿ


ನೀವೂ ಸಹ ದೀರ್ಘಾಯುಷ್ಯವನ್ನು ಹೊಂದಲು ಬಯಸಿದರೆ ನೀವು ಸೈಕ್ಲಿಂಗ್ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು. ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು, ತೂಕವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆಯಾಗಿ ನಿಮ್ಮ ಫಿಟ್ನೆಸ್ ಮಟ್ಟವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ವಾಸ್ತವವಾಗಿ, ಸೈಕ್ಲಿಂಗ್ ಕೋವಿಡ್ -19 ನಂತಹ ಉಸಿರಾಟದ ಸೋಂಕುಗಳ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯ ರಕ್ಷಣೆಗಳನ್ನು ಬೆಂಬಲಿಸುತ್ತದೆ.

Published by:Sandhya M
First published: