ಚಿರ ಯೌವ್ವನರಾಗಿರಲು ವ್ಯಾಯಾಮ ಮಾಡಿ ಎನ್ನುತ್ತಿದೆ ಈ ಅಧ್ಯಯನ

news18
Updated:May 24, 2018, 11:33 AM IST
ಚಿರ ಯೌವ್ವನರಾಗಿರಲು ವ್ಯಾಯಾಮ ಮಾಡಿ ಎನ್ನುತ್ತಿದೆ ಈ ಅಧ್ಯಯನ
news18
Updated: May 24, 2018, 11:33 AM IST
ನ್ಯೂಸ್ 18 ಕನ್ನಡ

ದೀರ್ಘಕಾಲದವರೆಗೆ ಯೌವ್ವನವನ್ನು ಕಾಪಾಡಿಕೊಳ್ಳಬೇಕೆ? ಹಾಗಿದ್ದಲ್ಲಿ, ಪ್ರತಿನಿತ್ಯ ನಾಲ್ಕರಿಂದ ಐದು ಬಾರಿ ವ್ಯಾಯಾಮ ಮಾಡಬೇಕಾಗುತ್ತದೆ. ವ್ಯಾಯಾಮದಿಂದ ಹೃದಯ ಆರೋಗ್ಯವಾಗಿರುತ್ತದೆ. ಅಲ್ಲದೆ ವಿವಿಧ ಪ್ರಮಾಣದಲ್ಲಿ ಅಪಧಮನಿಗಳ ಮೇಲೆ ವ್ಯಾಯಾಮ ಪರಿಣಾಮ ಬೀರುವುದರಿಂದ ಪ್ರಾಯ ಕಡಿಮೆ ಇರುವಂತೆ ಗೋಚರಿಸುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.

'ವಾರಕ್ಕೆ 2-3 ದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಮಧ್ಯಮ ಗಾತ್ರದ ಅಪಧಮನಿ ಬಿಗಿಯಾಗುವುದು ಕಡಿಮೆಯಾಗುತ್ತದೆ. ವಾರದಲ್ಲಿ ನಾಲ್ಕರಿಂದ ಐದು ದಿನಗಳವರೆಗೆ ವ್ಯಾಯಾಮ ಮಾಡಿದರೆ ದೊಡ್ಡ ಗಾತ್ರದ ಅಪಧಮನಿಗಳು ತಾರುಣ್ಯದಿಂದ ಕೂಡಿರುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುದಲ್ಲದೆ, ರಕ್ತನಾಳಗಳೂ ಸಹ ಉತ್ತಮಗೊಳ್ಳುತ್ತದೆ' ಎಂದು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಲೇಖಕ ಬೆಂಜಮಿನ್ ಲೆವಿನ್ ಹೇಳಿದ್ದಾರೆ.

ಈ ಅಧ್ಯಯನಕ್ಕಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವ 60 ವರ್ಷಕ್ಕಿಂತಲೂ ಹೆಚ್ಚು ಪ್ರಾಯದ 102 ಜನರನ್ನು ಪರೀಕ್ಷಿಸಲಾಗಿದೆ. ವ್ಯಾಯಾಮ ಮಾಡುವ ಸಮಯವನ್ನು ಆಧರಿಸಿ ನಾಲ್ಕು ಗುಂಪುಗಳಾಗಿ ಇವರನ್ನು ವಿಂಗಡಿಸಲಾಗಿತ್ತು.

ಇದರಲ್ಲಿ ವಾರಕ್ಕೆ 2 ಬಾರಿ, 2-3 ಬಾರಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವವರು, ನಾಲ್ಕರಿಂದ ಐದು ಬಾರಿ ವ್ಯಾಯಾಮ ಮಾಡುವವರು ಮತ್ತು ವಾರಕ್ಕೆ ಆರರಿಂದ ಏಳು ಬಾರಿ ವ್ಯಾಯಾಮ ಮಾಡುವವರು ಭಾಗವಹಿಸಿದ್ದರು.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...