Urine Problem: ಅತಿಯಾದ ಮೂತ್ರ ವಿಸರ್ಜನೆ ಈ ಕಾಯಿಲೆಯ ಸಂಕೇತವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನಕ್ಕೆ ಎಂಟು ಬಾರಿಗಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋದರೆ ನೀವು ಮೂತ್ರನಾಳ ಸೋಂಕು ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇದು ಮಧುಮೇಹ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳನ್ನು ಹುಟ್ಟು ಹಾಕುತ್ತದೆ.

  • Share this:

    ಚಳಿಗಾಲದಲ್ಲಿ (Winter) ಪದೇ ಪದೇ ಮೂತ್ರ ವಿಸರ್ಜನೆಗೆ (Urine) ಹೋಗುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಮೂತ್ರನಾಳದಲ್ಲಿ ಕೆಲವು ರೀತಿಯ ಅಡಚಣೆ, ಸಮಸ್ಯೆ (Problem) ಉಂಟಾದಾಗ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾದ ಸ್ಥಿತಿ ಬರುತ್ತದೆ. ಈ ಸಮಸ್ಯೆ ಬಹುತೇಕ ಜನರಿಗೆ (People) ಸಾಮಾನ್ಯವಾಗಿರುತ್ತದೆ. ಇನ್ನು ಹೆಚ್ಚು ನೀರು (Water) ಸೇವನೆ ಮಾಡಿದರೆ, ತಂಪು ಪಾನೀಯ ಸೇವನೆ ಮಾಡಿದರೆ, ಜ್ಯೂಸ್ ಸೇವನೆ ಹಾಗೂ ದ್ರವ ಪದಾರ್ಥ ಸೇವನೆಯಿಂದ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾದ ಸಮಸ್ಯೆ ಬರುತ್ತದೆ. ಇದು ಸಾಮಾನ್ಯ. ಇನ್ನು ಮೂತ್ರನಾಳವು, ಮೂತ್ರಪಿಂಡಗಳು ಮತ್ತು ಸಂಬಂಧಿತ ಮೂತ್ರಕೋಶ ಹಾಗೂ ಮೂತ್ರವು ದೇಹದಿಂದ ಹೊರ ಬರುವ ನಾಳಗಳನ್ನು ಹೊಂದಿದೆ.


    ಎಂಟು ಬಾರಿಗಿಂತ ಹೆಚ್ಚು ಮೂತ್ರ ವಿಸರ್ಜನೆಗೆ ಹೋಗುವುದು ಸೋಂಕು ಉಂಟು ಮಾಡುತ್ತದೆ


    ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ನೀವು ದಿನಕ್ಕೆ ಎಂಟು ಬಾರಿಗಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋದರೆ ನೀವು ಮೂತ್ರನಾಳ ಸೋಂಕು ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇದು ಮಧುಮೇಹ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳನ್ನು ಹುಟ್ಟು ಹಾಕುತ್ತದೆ.


    ಮಧುಮೇಹ ಸಮಸ್ಯೆ


    ಡಯಾಬಿಟಿಸ್.ಯುಕೆ.ಕಾಂ ಪ್ರಕಾರ ನೀವು ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋದರೆ ಅಂದರೆ ದೇಹವು ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗುವಂತೆ ಮಾಡಿದರೆ ಅದು ಪಾಲಿಯುರಿಯಾ ಎಂಬ ಕಾಯಿಲೆಯ ಸ್ಥಿತಿ ಆಗಿದೆ.




    ಪಾಲಿಯುರಿಯಾ ಕಾಯಿಲೆ ಉಂಟಾದಾಗ ಆಗಾಗ್ಗೆ ಅಂದ್ರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾದ ಸ್ಥಿತಿ ಉಂಟಾಗುತ್ತದೆ. ಪಾಲಿಯುರಿಯಾ ಸ್ಥಿತಿಯಲ್ಲಿ ಹೆಚ್ಚಿನ ಪ್ರಮಾಣದ ಮೂತ್ರವು ಹೊರಗೆ ಹೋಗುತ್ತದೆ. ಈ ಸ್ಥಿತಿಯು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್‌ ನ ಮುಖ್ಯ ಲಕ್ಷಣದಲ್ಲಿ ಒಂದು ಎಂದು ಹೇಳಲಾಗಿದೆ.


    ಈ ಪಾಲಿಯುರಿಯಾ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡದೇ ಹೋದರೆ ಅದು ನಿಮ್ಮ ಮೂತ್ರಪಿಂಡದ ಕಾರ್ಯ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಉತ್ತಮ.


    ಅತಿಯಾದ ಮೂತ್ರಕೋಶ ಸ್ಥಿತಿ


    ಇನ್ನು ಅತಿ ಕ್ರಿಯಾಶೀಲ ಮೂತ್ರಕೋಶ ಸಹ (OAB) ಒಂದು ಸ್ಥಿತಿ ಆಗಿದೆ. ಇದರಲ್ಲಿ ವ್ಯಕ್ತಿಗೆ ಮೂತ್ರ ವಿಸರ್ಜನೆಯ ಬಲವಾದ ಪ್ರಚೋದನೆ ಉಂಟಾಗುತ್ತದೆ. ಇದನ್ನು ನಿಯಂತ್ರಿಸಲು ಸಾಕಷ್ಟು ಕಷ್ಟವಾಗುತ್ತದೆ. ಈ ಸ್ಥಿತಿಯ ಲಕ್ಷಣಗಳಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ ಸಹ ಒಂದಾಗಿದೆ.


    ಸಾಂದರ್ಭಿಕ ಚಿತ್ರ


    ಯುಟಿಐ ಸಮಸ್ಯೆ


    ಮೂತ್ರನಾಳದ ಸೋಂಕು ಅಂದ್ರೆ ಯುಟಿಐ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಯುಟಿಐ ಸಮಸ್ಯೆ ಇದ್ದಾಗಲೂ ಆಗಾಗ್ಗೆ ಮೂತ್ರ ವಿಸರ್ಜನೆ, ನೋವು ಮತ್ತು ಮೂತ್ರ ವಿಸರ್ಜನೆ ವೇಳೆ ಉರಿ, ಬಲವಾದ ಮೂತ್ರ ವಿಸರ್ಜನೆ ಅನುಭವ ಆಗುತ್ತದೆ. ಅಲ್ಲದೇ ಕಿಬ್ಬೊಟ್ಟೆ ಸೆಳೆತ ಮತ್ತು ರಕ್ತಸಿಕ್ತ ಮೂತ್ರ ವಿಸರ್ಜನೆ ಸಹ ಆಗುತ್ತದೆ.


    ಪುರುಷರಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣಗಳು


    ಪುರುಷರಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವ ಸಮಸ್ಯೆಯು ಪ್ರಾಸ್ಟೇಟ್ ಸಮಸ್ಯೆಯ ಲಕ್ಷಣಗಳಲ್ಲಿ ಒಂದಾಗಿದೆ. ಪ್ರಾಸ್ಟೇಟ್ ಉರಿಯೂತ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆ. ಹಾಗಾಗಿ ಆಗಾಗ್ಗೆ ಮೂತ್ರ ವಿಸರ್ಜನೆ ಲಕ್ಷಣಗಳ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!


    ಮಹಿಳೆಯರಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣಗಳು ಯಾವವು?


    ಮಹಿಳೆಯರಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಗೆ ಹಲವು ಕಾರಣಗಳಿವೆ. ಯುಟಿಐ, ಒಎಬಿ, ಮೂತ್ರಕೋಶದ ಸೋಂಕು ಮತ್ತು ಮಧುಮೇಹ, ಗರ್ಭಧಾರಣೆ, ಫೈಬ್ರಾಯ್ಡ್‌ಗಳು, ಋತುಬಂಧ ಮತ್ತು ಅಂಡಾಶಯದ ಕ್ಯಾನ್ಸರ್ ಮತ್ತು ಕಡಿಮೆ ಮಟ್ಟದ ಈಸ್ಟ್ರೊಜೆನ್ ಸಮಸ್ಯೆ ಸೇರಿದೆ.

    Published by:renukadariyannavar
    First published: