ಇತ್ತೀಚಿನ ದಿನಗಳಲ್ಲಿ ತ್ವಚೆಯ ಆರೈಕೆಗೆಂದೇ (Skin Care) ಹಲವು ರೀತಿಯ ಎಕ್ಸ್‌ಫೋಲಿಯೇಟಿಂಗ್ (Exfoliated) ಏಜೆಂಟ್ ಗಳು ಸಿಗುತ್ತವೆ. ವಿವಿಧ ಕಂಪನಿಗಳು (Many Companies) ಮತ್ತು ಬ್ರ್ಯಾಂಡ್ ಗಳು ವಿವಿಧ ರೀತಿಯ ಸ್ಕ್ರಬ್ ಗಳನ್ನು (Scrubs) ತಯಾರಿಸುತ್ತವೆ. ಆದರೆ ಅವುಗಳಲ್ಲಿ ಸಾಕಷ್ಟು ಪ್ರಮಾಣದ ರಾಸಾಯನಿಕವಿರುತ್ತದೆ. ಹಾಗಾಗಿ ಅವುಗಳ ಬಳಕೆಯ ಸರಿಯಾದ ವಿಧಾನ ತಿಳಿಯುವುದು ತುಂಬಾ ಮುಖ್ಯ. ಅದನ್ನು ತಪ್ಪಾಗಿ ಬಳಸಿದರೆ ಚರ್ಮಕ್ಕೆ ತುಂಬಾ ಹಾನಿ ಉಂಟಾಗುತ್ತದೆ. ಪ್ರೊಡಕ್ಟ್ (Product) ಬಳಕೆಯ ಸರಿಯಾದ ಮಾಹಿತಿ ಇಲ್ಲದಿರುವುದರಿಂದಾಗಿ ಅನೇಕ ಜನರು ನಿಯಮಿತವಾಗಿ ಚರ್ಮವನ್ನು ಎಕ್ಸ್‌ಫೋಲಿಯೇಟಿಂಗ್ ಮಾಡುತ್ತಾರೆ. ಆದರೆ ಇದು ಚರ್ಮದ ರಂಧ್ರಗಳು ದೊಡ್ಡದಾಗಲು ಕಾರಣವಾಗುತ್ತದೆ.
ಎಕ್ಸ್‌ಫೋಲಿಯೇಟಿಂಗ್ ಅಡ್ಡ ಪರಿಣಾಮಗಳು
ಧೂಳು ಮತ್ತು ಮಾಲಿನ್ಯವು ಸುಲಭವಾಗಿ ಚರ್ಮದೊಳಗೆ ಕುಳಿತುಕೊಳ್ಳುತ್ತದೆ. ಈ ರಾಸಾಯನಿಕ ಉತ್ಪನ್ನಗಳ ಅಧಿಕ ಬಳಕೆಯಿಂದ ತ್ವಚೆಯು ಹಾಳಾಗುತ್ತದೆ. ಹಾಗಾಗಿ ರಸಾಯನಿಕಯುಕ್ತ ಎಕ್ಸ್‌ಫೋಲಿಯೇಟಿಂಗ್ ಪ್ರೊಡಕ್ಟ್ ಗಳ ಬದಲು ನೀವು ಮನೆಯಲ್ಲೇ ಸ್ಕ್ರಬ್ ತಯಾರಿಸಿ ಬಳಸಿ.
ಮನೆಯಲ್ಲಿ ಮಾಡಿದ ರಸಾಯನಿಕ ಮುಕ್ತ ಸ್ಕ್ರಬ್ ತ್ವಚೆಯ ಆರೋಗ್ಯಕ್ಕೆ ಉತ್ತಮ. ಮನೆಯಲ್ಲಿ ತಯಾರಿಸಿದ ಸ್ಕ್ರಬ್ ಕೂಡ ದಿನವೂ ನಿಯಮಿತವಾಗಿ ಬಳಕೆ ಮಾಡುವುದು ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಸೀಮಿತವಾಗಿ ಬಳಕೆ ಮಾಡಿ.
ಅತಿಯಾಗಿ ಚರ್ಮಕ್ಕೆ ಸ್ಕ್ರಬ್ಬಿಂಗ್ ಮಾಡುವುದು ಹಾನಿ ಉಂಟು ಮಾಡುತ್ತದೆ. ಮನೆಯಲ್ಲಿ ಸ್ಕ್ರಬ್ ತಯಾರಿಸುವುದು ಹೇಗೆ ಮತ್ತು ಅತಿಯಾದ ಸ್ಕ್ರಬ್ಬಿಂಗ್ ಯಾವೆಲ್ಲಾ ಅನಾನುಕೂಲತೆ ಉಂಟು ಮಾಡುತ್ತದೆ ಎಂದು ನೋಡೋಣ.
ಅತಿಯಾದ ಸ್ಕ್ರಬ್ಬಿಂಗ್ ನಿಂದಾಗುವ ಅನಾನುಕೂಲತೆಗಳು
ಅತಿಯಾದ ಸ್ಕ್ರಬ್ಬಿಂಗ್ ಚರ್ಮದ ತಡೆಗೋಡೆಗೆ ಹಾನಿ ಮಾಡುತ್ತದೆ. ಚರ್ಮದ ಮೇಲ್ಭಾಗದಲ್ಲಿ ಎಣ್ಣೆ, ಕೊಬ್ಬು ಮತ್ತು ಸತ್ತ ಚರ್ಮದ ಕೋಶಗಳ ಪದರಗಳು ಚರ್ಮಕ್ಕೆ ರಕ್ಷಣೆ ನೀಡುತ್ತವೆ.
ಚರ್ಮವನ್ನು ಎಕ್ಸ್‌ಫೋಲಿಯೇಟಿಂಗ್ ಮಾಡಿದಾಗ ಚರ್ಮದ ರಕ್ಷಣಾತ್ಮಕ ಪದರ ಹೊರ ಹೋಗಿ, ಚರ್ಮದ ತಡೆಗೋಡೆ ದುರ್ಬಲವಾಗುತ್ತದೆ. ಚರ್ಮವನ್ನು ಅತಿಯಾಗಿ ಎಕ್ಸ್‌ಫೋಲಿಯೇಟಿಂಗ್ ಮಾಡಿದರೆ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ.
ನಿಯಮಿತ ತ್ವಚೆ ಉತ್ಪನ್ನಗಳನ್ನು ಅನ್ವಯಿಸಿದರೆ ಅದು ಸುಡುವಿಕೆ ಮತ್ತು ಸಂವೇದನೆ ಉಂಟು ಮಾಡುತ್ತದೆ. ಚರ್ಮದ ಒಡೆಯುವಿಕೆ, ತ್ವಚೆಯ ಜಲಸಂಚಯನ ಕಡಿಮೆಯಾಗಿ ಒಣ ಚರ್ಮ ಸಮಸ್ಯೆ ಉಂಟಾಗುತ್ತದೆ.
ಅತಿಯಾಗಿ ಸ್ಕ್ರಬ್ಬಿಂಗ್ ಮಾಡುವ ಹಾನಿ ಕಡಿಮೆ ಮಾಡಲು ಫೋಮಿಂಗ್ ಕ್ಲೆನ್ಸರ್ ಬಳಕೆ ತಪ್ಪಿಸಿ. ಭೌತಿಕ ಮತ್ತು ರಾಸಾಯನಿಕ ಎಕ್ಸ್‌ಫೋಲಿಯೇಟ್‌ಗಳ ಬಳಕೆ ತಪ್ಪಿಸಿ.
ಸೌಮ್ಯವಾದ ಕ್ಲೆನ್ಸರ್ ಮತ್ತು ಸುಗಂಧ ರಹಿತ ಮಾಯಿಶ್ಚರೈಸರ್ ಬಳಸಿ. ವಿಶೇಷ ಚರ್ಮ ಸ್ನೇಹಿ ಉತ್ಪನ್ನ ಬಳಸಿ. ಇದು ಸಾಕಷ್ಟು ತೇವಾಂಶ ಕಾಪಾಡುತ್ತದೆ.
ಓಟ್ ಮೀಲ್ ಮತ್ತು ಮೊಸರು ಸ್ಕ್ರಬ್
ಓಟ್ ಮೀಲ್ ಉತ್ಕರ್ಷಣ ನಿರೋಧಕ ಹೊಂದಿದೆ. ಇದರ ಜೊತೆ ಉರಿಯೂತದ ಗುಣಲಕ್ಷಣ ಹೊಮದಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.
ಮೊಸರು ಮತ್ತು ಓಟ್ಮೀಲ್ನ ಸ್ಕ್ರಬ್ಬಿಂಗ್ ತಯಾರಿಸಲು ಎರಡು ಚಮಚ ಓಟ್ಸ್, ಒಂದು ಚಮಚ ಮೊಸರು ಮತ್ತು ಒಂದು ಚಮಚ ತೆಂಗಿನ ಎಣ್ಣೆ ಮಿಶ್ರಣ ಮಾಡಿ. ನಂತರ ಅದನ್ನು ಚರ್ಮದ ಮೇಲೆ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ.
ಇದನ್ನೂ ಓದಿ: ಮುಖದ ತ್ವಚೆ ಸುಂದರವಾಗಲಿ ಅಂತ ಅಡುಗೆ ಸೋಡಾ ಬಳಸುತ್ತೀರಾ? ಹಾಗಿದ್ರೆ ಇದು ಎಷ್ಟು ಸೇಫ್?
ಆಪಲ್ ಮತ್ತು ಹನಿ ಸ್ಕ್ರಬ್
ಮೊದಲು ಸೇಬನ್ನು ತುರಿ ಮಾಡಿ. ಈಗ ಅದಕ್ಕೆ 1 ಚಮಚ ಜೇನುತುಪ್ಪ ಮತ್ತು 1 ಚಮಚ ಜೊಜೊಬಾ ಎಣ್ಣೆಯನ್ನು ಸೇರಿಸಿ. ಮಿಕ್ಸ್ ಮಾಡಿ. ನಂತರ ಚರ್ಮದ ಮೇಲೆ ಅನ್ವಯಿಸಿ. ವೃತ್ತಾಕಾರದ ಚಲನೆಯಲ್ಲಿ ಲಘುವಾಗಿ ಚರ್ಮಕ್ಕೆ ಮಸಾಜ್ ಮಾಡಿ. 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ