• Home
  • »
  • News
  • »
  • lifestyle
  • »
  • Alcohol Disadvantages: ಆಲ್ಕೋಹಾಲ್ ಅತಿಯಾದ ಸೇವನೆ ಪುರುಷರ ಆರೋಗ್ಯ ಹಾಳಾಗೋಕೆ ಕಾರಣವಂತೆ

Alcohol Disadvantages: ಆಲ್ಕೋಹಾಲ್ ಅತಿಯಾದ ಸೇವನೆ ಪುರುಷರ ಆರೋಗ್ಯ ಹಾಳಾಗೋಕೆ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಿತಿಮೀರಿದ ಆಲ್ಕೋಹಾಲ್ ಸೇವನೆ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಕಾಪಾಡಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಆಲ್ಕೊಹಾಲ್ ಸೇವನೆಯು ಪುರುಷರಲ್ಲಿ ಬಂಜೆತನದ ಗಂಭೀರ ಅಪಾಯ ಹೆಚ್ಚಿಸುತ್ತದೆ. ಆಗಾಗ್ಗೆ ಕುಡಿಯುವುದು ವೀರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮುಂದೆ ಓದಿ ...
  • Share this:

    ಆಲ್ಕೋಹಾಲ್ (Alcohol) ಸೇವನೆ (Drinking) ಆರೋಗ್ಯಕ್ಕೆ (Health) ಹಾನಿಕರ (Harmful) ಎಂಬುದು ಗೊತ್ತಿರುವ ವಿಷಯ. ಆದರೂ ಕುಡುಕರು ಮಾತ್ರ ಪೆಗ್ ಹಾಕುವುದು ಬಿಡಲ್ಲ. ಆಲ್ಕೋಹಾಲ್ ನಲ್ಲಿರುವ ಎಥೆನಾಲ್ ಎಂಬ ಅಂಶವು ನಿದ್ರಾಜನಕ (Sleeping) ಭಾವನೆ ಉಂಟು ಮಾಡುವ ಮೂಲಕ ವಿಶ್ರಾಂತಿ ಪ್ರಬಲ ಭಾವನೆಗೆ ಕಾರಣವಾಗುತ್ತದೆ. ಇದನ್ನು ಒತ್ತಡ ನಿವಾರಕವಾಗಿ ಬಳಸುತ್ತಾರೆ. ಮನರಂಜನೆಗಾಗಿಯೂ ಬಳಸುತ್ತಾರೆ. ಆದರೆ ಮಿತಿಮೀರಿದ ಆಲ್ಕೋಹಾಲ್ ಸೇವನೆ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಕಾಪಾಡಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದು ಚಲನೆ, ಸಮನ್ವಯ ಮತ್ತು ಕೆಲವು ದೈಹಿಕ ಕ್ರಿಯೆಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.


    ಆಲ್ಕೊಹಾಲ್ ಸೇವನೆಯ ಅನಾನುಕೂಲಗಳು?


    ಆಲ್ಕೊಹಾಲ್ ಸೇವನೆಯು ಪುರುಷರಲ್ಲಿ ಬಂಜೆತನದ ಗಂಭೀರ ಅಪಾಯ ಹೆಚ್ಚಿಸುತ್ತದೆ. ರಿಪ್ರೊಡಕ್ಟಿವ್ ಬಯೋಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಪುರುಷರು ಆಗಾಗ್ಗೆ ಕುಡಿಯುವುದು ವೀರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದೆ.


    ಇದು ಗೊನಾಡೋಟ್ರೋಪಿನ್ ಬಿಡುಗಡೆ, ವೃಷಣ ಕ್ಷೀಣತೆ, ಟೆಸ್ಟೋಸ್ಟೆರಾನ್, ವೀರ್ಯ ಉತ್ಪಾದನೆ, ವೀರ್ಯ ನಿಯತಾಂಕಗಳ ಗುಣಮಟ್ಟ ಮತ್ತು ಕೆಲವೊಮ್ಮೆ ಅಜೋಸ್ಪೆರ್ಮಿಯಾ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಮದ್ಯಪಾನದಿಂದ ಪುರುಷರಲ್ಲಿ ಲೈಂಗಿಕ ಸಮಸ್ಯೆ


    ಅತಿಯಾದ ಆಲ್ಕೋಹಾಲ್ ಸೇವನೆ ಲೈಂಗಿಕ ಅಪಸಾಮಾನ್ಯ ಕ್ರಿಯೆಗೆ ಸಂಬಂಧಿಸಿದೆ. ಇದು ಆರಂಭಿಕ ಸ್ಖಲನ ಅಥವಾ ಕಡಿಮೆ ಸ್ಖಲನಕ್ಕೆ ಕಾರಣವಾಗುತ್ತದೆ. ವೀರ್ಯದ ಗಾತ್ರ ಮತ್ತು ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಪುರುಷರು ಪರಿಣಾಮಕಾರಿ ಸಂಭೋಗ ಹೊಂದಲು ಸಾಧ್ಯವಾಗಲ್ಲ.


    ಇದು ಪುರುಷರ ಲೈಂಗಿಕ ಬಯಕೆ ಕಡಿಮೆ ಮಾಡುತ್ತದೆ . ಮತ್ತು ಕೆಲ ಸಮಯ ಇದು ಅವರನ್ನು ದುರ್ಬಲರನ್ನಾಗಿ ಮಾಡಬಹುದು. ಮದ್ಯಪಾನವು ಕಾಮಾಸಕ್ತಿ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಫಲವತ್ತತೆಯ ಮೇಲೆ ಪರಿಣಾಮ ಬೀರುವ ವೀರ್ಯಾಣು ಸಂಖ್ಯೆ ಕಡಿಮೆ ಮಾಡುತ್ತದೆ.




    ವೀರ್ಯದ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ


    ಆಲ್ಕೋಹಾಲ್ ಸತು ಹೀರಿಕೊಳ್ಳುವ ದೇಹದ ನೈಸರ್ಗಿಕ ಸಾಮರ್ಥ್ಯ ಕಡಿಮೆ ಮಾಡುತ್ತದೆ. ವೀರ್ಯವು ಹೆಚ್ಚಿನ ಪ್ರಮಾಣದ ಸತು ಹೊಂದಿದೆ. ನಿಯಮಿತವಾಗಿ ಆಲ್ಕೋಹಾಲ್ ಕುಡಿಯುವುದು ಸತುವನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಕಳಪೆ ವೀರ್ಯ ಗುಣಮಟ್ಟವು ಗರ್ಭಧಾರಣೆ ಸಾಧ್ಯತೆಗೆ ಪೆಟ್ಟು ಕೊಡುತ್ತದೆ.


    ಫಲವತ್ತತೆ ಮೇಲೆ ಪರಿಣಾಮ ಬೀರಬಹುದು


    ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ ಸೇವಿಸುವುದು ಫಲವತ್ತತೆ ಹೆಚ್ಚಿಸಲು ಅವಶ್ಯಕ. ಅತಿಯಾದ ಮದ್ಯಪಾನ, ಅಧಿಕ ತೂಕ, ಇತ್ಯಾದಿಗಳೆಲ್ಲವೂ ನಿಮ್ಮ ಫಲವತ್ತತೆಗೆ ಹಾನಿಕಾರಕ. ಆಲ್ಕೋಹಾಲ್ ಸೇವನೆ ಕಡಿಮೆ ಮಾಡುವುದು ಮನಸ್ಥಿತಿ, ಶಕ್ತಿ, ನಿದ್ರೆ ಮತ್ತು ತೂಕ ಸುಧಾರಿಸುತ್ತದೆ. ಇದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಸಹಕಾರಿ.


    ಆಲ್ಕೋಹಾಲ್ ತ್ಯಜಿಸುವುದು


    ಆಲ್ಕೋಹಾಲ್ ಸೇವನೆ ತ್ಯಜಿಸಿದರೆ ಆರೋಗ್ಯಕರ ವೀರ್ಯ ಉತ್ಪಾದನೆಗೆ ಸಹಕಾರಿ. ಇದು ಮೂರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಸಂಶೋಧನೆ ಹೇಳಿದೆ. ಫಲವತ್ತತೆ ಸುಧಾರಿಸುತ್ತದೆ.


    ಟೆಸ್ಟೋಸ್ಟೆರಾನ್ ಮಟ್ಟ


    ಅತಿಯಾದ ಕುಡಿಯುವಿಕೆಯ ಪ್ರಮುಖ ಕಾರಣಗಳಲ್ಲಿ ಒತ್ತಡವು ಒಂದು. ಇದು ಅಲ್ಪಾವಧಿಗೆ ಆತಂಕ ಕಡಿಮೆ ಮಾಡುತ್ತದೆ. ಅಂತಿಮವಾಗಿ ಇದು ಹೆಚ್ಚು ಅಪಾಯಕಾರಿ ಪರಿಣಾಮ ಬೀರುತ್ತದೆ.


    ದೀರ್ಘಕಾಲದ ಒತ್ತಡ ಕಾರ್ಟಿಸೋಲ್ ಮಟ್ಟ ಹೆಚ್ಚಿಸುತ್ತದೆ, ಇದು ಟೆಸ್ಟೋಸ್ಟೆರಾನ್ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹೊರಗೆ ವಾಕಿಂಗ್ ಹೋಗುವುದು, ಧ್ಯಾನ, ವ್ಯಾಯಾಮ ಮಾಡುವುದು ಅಥವಾ ಸ್ನೇಹಿತರೊಂದಿಗೆ ಸುತ್ತಾಡುವುದು ಒತ್ತಡ ಕಡಿಮೆ ಮಾಡುತ್ತದೆ.


    ವ್ಯಾಯಾಮ


    ನಿಯಮಿತ ವ್ಯಾಯಾಮವು ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಿ ಫಲವತ್ತತೆ ಹೆಚ್ಚಿಸುತ್ತದೆ. ಆರೋಗ್ಯ ಪ್ರಯೋಜನ ನೀಡುತ್ತದೆ. ಆರೋಗ್ಯಕರ ಆಹಾರವು ಒತ್ತಡದ ಮಟ್ಟ ಕಡಿಮೆ ಮಾಡುತ್ತದೆ. ಮಾನಸಿಕ ಆರೋಗ್ಯ, ಕಾಮಾಸಕ್ತಿ ಮತ್ತು ಫಲವತ್ತತೆ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಸತುವು ಸಮೃದ್ಧ ಆಹಾರ


    ಸತು ಸಮೃದ್ಧ ಆಹಾರ ಸೇವನೆ ಪುರುಷ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಮಾಂಸ, ಮೀನು, ಮೊಟ್ಟೆ ಮತ್ತು ಶೆಲ್ ಮೀನಿನ ಹೆಚ್ಚಿನ ಸಾಂದ್ರತೆಯು ಸತು ಹೊಂದಿದೆ. ಹಣ್ಣು, ತರಕಾರಿ ಮತ್ತು ಧಾನ್ಯ ಸೇವಿಸಿ.

    Published by:renukadariyannavar
    First published: