ಚಳಿಗಾಲದಲ್ಲಿ ಶೀತ (Winter Cold) ಆಗುವುದು ಸಾಮಾನ್ಯ. ಸೋರುವ ಮೂಗು, ಚಳಿ, ನೆಗಡಿ ಆಗುತ್ತಲೇ ಇರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವರು ಮೈ ತುಂಬಾ ಬೆಚ್ಚಗಿನ ಬಟ್ಟೆ (Cloth) ಹಾಕಿರುತ್ತಾರೆ. ನಂತರ ಸ್ವೆಟ್ಟರ್, ಗ್ಲೌಸ್ ಸಹ ಧರಿಸಿರುತ್ತಾರೆ. ಆದರೂ ಸಹ ಚಳಿ ಮಾತ್ರ ಆಗುತ್ತದೆ ಎಂದು ಹೇಳುತ್ತಾರೆ. ಗಢ ಗಢ ನಡುಗುತ್ತಾರೆ. ಮನೆಯಲ್ಲಿ (Home) ಉಳಿದ ಸದಸ್ಯರಿಗಿಂತ ಹೆಚ್ಚು ಚಳಿ ಭಾವನೆ (Cold Feel) ಅನುಭವಿಸುತ್ತಾರೆ. ಹೀಗೆ ಹೆಚ್ಚು ಚಳಿ ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ಯಾಕಂದ್ರೆ ಇದು ದೇಹದಲ್ಲಿ ಕಬ್ಬಿಣದ ಕೊರತೆಯ (Iron Deficiency) ಸಂಕೇತ ಆಗಿದೆ.
ಅತಿಯಾದ ಚಳಿ ಉಂಟಾಗುವುದು ದೇಹದಲ್ಲಿ ಕಬ್ಬಿಣದ ಕೊರತೆಯ ಸಂಕೇತ
ಹೆಚ್ಚು ಚಳಿ ಉಂಟಾದರೆ ಸರಿಯಾದ ಸಮಯಕ್ಕೆ ಅದನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಿ. ಯಾಕಂದ್ರೆ ಇದು ದೇಹದಲ್ಲಿ ಕಬ್ಬಿಣದ ಕೊರತೆಯಿಂದಲೂ ಉಂಟಾಗಿರುತ್ತದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಸೇರಿ ಹಲವು ಕಾಯಿಲೆಗಳು ದೇಹವನ್ನು ಬಾಧಿಸುತ್ತವೆ. ಹಾಗಾಗಿ ಇದನ್ನು ಸರಿಯಾಗಿ ಗುರುತಿಸಬೇಕು.
ಆಹಾರ ತಜ್ಞ ಹಾಗೂ ಪೌಷ್ಟಿಕ ತಜ್ಞ ಜೂಹಿ ಕಪೂರ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಕಬ್ಬಿಣದ ಕೊರತೆ ಸಮಸ್ಯೆ ಸರಿಪಡಿಸಲು ಉತ್ತಮ ಮತ್ತು ಪರಿಣಾಮಕಾರಿ ಮಾರ್ಗ ಅಂದ್ರೆ ರಾಗಿಯಿಂದ ಮಾಡಿ ಖಾದ್ಯ ಸೇವಿಸುವುದು. ಚಳಿಗಾಲದಲ್ಲಿ ರಾಗಿ ಸೇವನೆ ಹಲವು ಪ್ರಯೋಜನ ತಂದು ಕೊಡುತ್ತದೆ. ರಾಗಿ ಚಳಿಗಾಲದ ಧಾನ್ಯವಾಗಿದೆ.
ರಾಗಿಯ ಖಾದ್ಯಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸಿ. ರಾಗಿ ಸೂಪರ್ ಫುಡ್ ಆಗಿದೆ. ಇದು ಹೃದಯ, ಚಯಾಪಚಯ, ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳ್ತಾರೆ.
ಕಬ್ಬಿಣದ ಕೊರತೆ ಲಕ್ಷಣಗಳು ಯಾವವು?
ಕಬ್ಬಿಣದ ಕೊರತೆಯಿಂದ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆ ಕಡಿಮೆ ಆಗುತ್ತದೆ. ಇದು ರಕ್ತಹೀನತೆ ಸಮಸ್ಯೆ ಉಂಟಾಗಲು ಕಾರಣವಾಗಿದೆ. ಹೀಗಾಗಿ ಅದು ಹೆಚ್ಚು ಶೀತ ಅನುಭವಿಸಲು ಕಾರಣವಾಗಿದೆ. ಜೊತೆಗೆ ಹಲವು ರೋಗ ಲಕ್ಷಣಗಳನ್ನು ಗಮನಿಸುವುದು ಅವಶ್ಯಕವಾಗಿದೆ.
ಚಳಿಗಾಲದಲ್ಲಿ ವಿಪರೀತ ಆಯಾಸವಾಗುವುದು, ದೌರ್ಬಲ್ಯ ಅನುಭವ, ಚರ್ಮ ತೆಳುವಾಗುವುದು, ಎದೆ ನೋವು, ವೇಗದ ಹೃದಯ ಬಡಿತ ಅಥವಾ ಉಸಿರಾಟದ ತೊಂದರೆ ಆಗುವುದು, ತಲೆನೋವು, ತಲೆಸುತ್ತು ಬರುವುದು, ಕೈಗಳು ಮತ್ತು ಪಾದಗಳು ತಣ್ಣಗಾಗುವುದು, ನಾಲಿಗೆ ಊದಿಕೊಳ್ಳುವುದು, ದೇಹದಲ್ಲಿ ನೋವು, ಉಗುರುಗಳು ಸುಲಭವಾಗಿ ತುಂಡಾಗುವುದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕಬ್ಬಿಣದ ಕೊರತೆ ನಿವಾರಿಸಲು ರಾಗಿ ಬೆಸ್ಟ್ ಆಯ್ಕೆ
ರಾಗಿ ಅತ್ಯಧಿಕ ಪ್ರಮಾಣದ ಕಬ್ಬಿಣದಂಶ ಹೊಂದಿದೆ. ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಕೂಡ ಈ ಧಾನ್ಯದಲ್ಲಿ ಸಾಕಷ್ಟು ಕಂಡು ಬರುತ್ತದೆ ಅಂತಾರೆ ತಜ್ಞರು. ರಾಗಿಯನ್ನು ನಿಯಮಿತವಾಗಿ ಸೇವಿಸಿದರೆ ಚಳಿಗಾಲದ ಶೀತ ದಿನಗಳಲ್ಲಿ ನೀವು ಕಬ್ಬಿಣದ ಕೊರತೆ ತಪ್ಪಿಸಬಹುದು. ರೊಟ್ಟಿ, ದೋಸೆ, ಗಂಜಿ ರೂಪದಲ್ಲಿ ಸೇವಿಸಬಹುದು. ತುಪ್ಪ, ಬೆಲ್ಲ ಅಥವಾ ಉಪ್ಪಿನಕಾಯಿ ಜೊತೆ ತಿನ್ನಬಹುದು.
ತೂಕ ನಷ್ಟಕ್ಕೂ ರಾಗಿ ಪ್ರಯೋಜನಕಾರಿ
ತೂಕ ಇಳಿಕೆಗೆ ರಾಗಿ ಬೆಸ್ಟ್ ಆಹಾರವಾಗಿದೆ. ರಾಗಿ ಸಂಕೀರ್ಣ ಕಾರ್ಬೋಹೈಡ್ರೇಟ್ ನಿಂದ ಕೂಡಿದೆ. ಇದು ದೇಹದಿಂದ ನಿಧಾನವಾಗಿ ಹೀರಲ್ಪಡುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸುತ್ತದೆ. ಸ್ಥೂಲಕಾಯ ನಿಯಂತ್ರಣಕ್ಕೆ ಸಹಕಾರಿ.
ಮಧುಮೇಹ ನಿಯಂತ್ರಿಸುತ್ತದೆ ರಾಗಿ
ರಾಗಿ ಖಾದ್ಯ ಸೇವನೆ ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ. ಇದರಲ್ಲಿರುವ ಫೈಬರ್ ಮತ್ತು ಮೆಗ್ನೀಸಿಯಮ್ ಸಕ್ಕರೆ ಮಟ್ಟ ಏರಿಕೆ ತಡೆಯುತ್ತದೆ ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ.
ಕರುಳಿನ ಆರೋಗ್ಯಕ್ಕೆ ರಾಗಿ ಉತ್ತಮ
ಜೀರ್ಣಕಾರಿ ಆರೋಗ್ಯ ಸುಧಾರಿಸಲು ರಾಗಿ ಸಹಕಾರಿ. ಇದರಲ್ಲಿನ ಕರಗದ ಫೈಬರ್ ಕರುಳಿನ ಚಲನೆ ಸುಧಾರಿಸುತ್ತದೆ. ರಾಗಿಯಲ್ಲಿರುವ ಕರಗದ ಫೈಬರ್ ಅಂಶವು ಪ್ರಿಬಯಾಟಿಕ್ ಆಗಿ ಕೆಲಸ ಮಾಡುತ್ತದೆ. ಇದು ಮಲಬದ್ಧತೆ ಸಮಸ್ಯೆ ತೊಡೆದು ಹಾಕಿ, ಕರುಳನ್ನು ನಿರ್ವಿಷಗೊಳಿಸುತ್ತದೆ.
ಇದನ್ನೂ ಓದಿ: ಅಗಸೆ ಬೀಜಗಳನ್ನು ಹುರಿದು ತಿನ್ನಿ ಸಾಕು.. ಅತಿಯಾದ ತೂಕ, ನಿದ್ರೆ ಸಮಸ್ಯೆ ಮಾಯವಾಗುತ್ತೆ!
ಹೃದಯ ಆರೋಗ್ಯವಾಗಿರುತ್ತದೆ
ರಾಗಿ ಒಮೆಗಾ-3 ಕೊಬ್ಬು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್ ಮತ್ತು ಇತರ ಪೋಷಕಾಂಶ ಹೊಂದಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಮಾರಣಾಂತಿಕ ಹೃದಯ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ