Alcohol: 2020ರಲ್ಲಿ ಮದ್ಯ ಸೇವಿಸಿ ಸತ್ತವರೆಷ್ಟು? ಅಧ್ಯಯನ ವರದಿಯಿಂದ ಗುಟ್ಟು ರಟ್ಟು

ಚಟದಿಂದಾಗೋ, ಫ್ಯಾಶನ್ ನಿಂದಾಗೋ ಗೊತ್ತಿಲ್ಲ ಮದ್ಯಪಾನಕ್ಕೆ ಹಲವಾರು ಜನ ವ್ಯಸನಿಗಳಾಗುತ್ತಿದ್ದಾರೆ. ವಯಸ್ಸಿನ ಮಿತಿ ಇಲ್ಲದೇ ಕುಡಿತದ ಅನಾರೋಗ್ಯದ ಪರಿಣಾಮಗಳ ಅರಿವಿದ್ದರೂ ಸಹ ಜಾಣ ಕುರುಡರಂತೆ ಆಲ್ಕೋಹಾಲ್ ಸೇವೆನೆಗೆ ಒಗ್ಗಿ ಹೋಗುತ್ತಿದ್ದಾರೆ. ಎಷ್ಟರ ಮಟ್ಟಿಗೆ ಮದ್ಯಪಾನ ಹೆಚ್ಚಾಗುತ್ತಿದೆ ಎಂಬುವುದನ್ನು ಇತ್ತೀಚಿನ ಅಧ್ಯಯನ ತಿಳಿಸುವ ಪ್ರಯತ್ನ ಮಾಡಿದೆ.

ಆಲ್ಕೋಹಾಲ್

ಆಲ್ಕೋಹಾಲ್

  • Share this:
ಚಟದಿಂದಾಗೋ, ಫ್ಯಾಶನ್ ನಿಂದಾಗೋ ಗೊತ್ತಿಲ್ಲ ಮದ್ಯಪಾನಕ್ಕೆ (Alcohol) ಹಲವಾರು ಜನ ವ್ಯಸನಿಗಳಾಗುತ್ತಿದ್ದಾರೆ. ವಯಸ್ಸಿನ ಮಿತಿ ಇಲ್ಲದೇ ಕುಡಿತದ ಅನಾರೋಗ್ಯದ (Illness) ಪರಿಣಾಮಗಳ ಅರಿವಿದ್ದರೂ ಸಹ ಜಾಣ ಕುರುಡರಂತೆ ಆಲ್ಕೋಹಾಲ್ ಸೇವೆನೆಗೆ ಒಗ್ಗಿ ಹೋಗುತ್ತಿದ್ದಾರೆ. ಎಷ್ಟರ ಮಟ್ಟಿಗೆ ಮದ್ಯಪಾನ ಹೆಚ್ಚಾಗುತ್ತಿದೆ ಎಂಬುವುದನ್ನು ಇತ್ತೀಚಿನ ಅಧ್ಯಯನ ತಿಳಿಸುವ ಪ್ರಯತ್ನ ಮಾಡಿದೆ. ಹೌದು, ವಾಷಿಂಗ್ಟನ್, ಸಿಯಾಟಲ್ ವಿಶ್ವವಿದ್ಯಾನಿಲಯದ ಸಮಗ್ರ ಅಧ್ಯಯನವು (Study) ಇದೇ ವಿಷಯದ ಮೇಲೆ ಕೇಂದ್ರಿಕರಿಸಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್, ಇಂಜುರೀಸ್ ಮತ್ತು ರಿಸ್ಕ್ ಫ್ಯಾಕ್ಟರ್ಸ್ ಸ್ಟಡಿ (GBD), 204 ದೇಶಗಳ, 19 ರಿಂದ 95 ವರ್ಷದ ವಯಸ್ಸಿನವರನ್ನು ಅಧ್ಯಯನಕ್ಕೆ ತೆಗೆದುಕೊಂಡು ಮದ್ಯದ ಪರಿಣಾಮಗಳನ್ನು ಕಂಡುಕೊಂಡಿದೆ.

ಇಲ್ಲಿಯವರೆಗೆ, ಅಲ್ಪ ಪ್ರಮಾಣದ ಆಲ್ಕೋಹಾಲ್ ಕೂಡ ಹಾನಿಕಾರಕವಾಗಿದೆ ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸೇವನೆಯಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅಧ್ಯಯನವು ಕಂಡುಹಿಡಿದಿದೆ.

ಆಲ್ಕೋಹಾಲ್ ಸೇವನೆಯ ವರದಿ ಹೇಗಿದೆ 
ಜಾಗತಿಕವಾಗಿ, 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 1.03 ಶತಕೋಟಿ ಪುರುಷರು ಮತ್ತು 312 ಮಿಲಿಯನ್ ಮಹಿಳೆಯರು 2020 ರಲ್ಲಿ ಸುರಕ್ಷಿತ ಮಿತಿಗಳನ್ನು ಮೀರಿದ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದ್ದಾರೆ ಎಂದು GBD ಕಂಡುಹಿಡಿದಿದೆ. ಅದೇ ಅಧ್ಯಯನವು 15-39 ವರ್ಷ ವಯಸ್ಸಿನ ವ್ಯಕ್ತಿಗಳಲ್ಲೂ ಸಹ ಹಾನಿಕಾರಕ ಸೇವನೆಯ ಬಗ್ಗೆ ವರದಿ ಮಾಡಿದೆ.

ಅತಿ ಹೆಚ್ಚು ಹಾನಿಕಾರಕ ಮದ್ಯ ಸೇವನೆ ಮಾಡಿದ ದೇಶಗಳು 
ಆಸ್ಟ್ರೇಲಿಯಾ, ಪಶ್ಚಿಮ ಯುರೋಪ್ ಮತ್ತು ಮಧ್ಯ ಯುರೋಪ್‌ನಲ್ಲಿ 15-39 ವರ್ಷ ವಯಸ್ಸಿನ ಪುರುಷರು 59.1 ಶೇಕಡಾವಾರು ಪ್ರಮಾಣದಲ್ಲಿ ಮದ್ಯಪಾನವನ್ನು ಸೇವಿಸುತ್ತಿದ್ದಾರೆ. ಅದೇ ವಯೋಮಾನದ ಮಹಿಳೆಯರಲ್ಲಿ, ಆಸ್ಟ್ರೇಲಿಯಾ, ಪಶ್ಚಿಮ ಯುರೋಪ್ ಮತ್ತು ದಕ್ಷಿಣ ಲ್ಯಾಟಿನ್ ಅಮೆರಿಕದಲ್ಲಿ ಅತಿ ಹೆಚ್ಚು ಹಾನಿಕಾರಕ ಮದ್ಯ ಸೇವನೆಯ ಪ್ರಮಾಣವಿದೆ ಎಂದು ವರದಿ ಮಾಡಿದೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ, 65 ವರ್ಷಕ್ಕಿಂತ ಹೆಚ್ಚಿನವರು ಕೇವಲ 6.55% ಹಾನಿಕಾರಕ ಪ್ರಮಾಣದಲ್ಲಿ ಆಲ್ಕೋಹಾಲ್ ಅನ್ನು ಸೇವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಹಾನಿಕಾರಕ ಆರೋಗ್ಯ ಸಮಸ್ಯೆಗಳು 
"ಜೀವನದ ಯಾವುದೇ ಹಂತದಲ್ಲಿ ಯಾವುದೇ ಪ್ರಮಾಣದಲ್ಲಿ ಆಲ್ಕೊಹಾಲ್ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ" ಎಂದು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ.ವಿಕಾಸ್ ದೇಸ್ವಾಲ್ ಹೇಳುತ್ತಾರೆ. ಮದ್ಯ ಸೇವನೆ ಕಾರ್ಸಿನೋಮಗಳು, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಸಿರೋಸಿಸ್ ಮತ್ತು ಇತರ ತೀವ್ರ ಮತ್ತು ಅಪಾಯಕಾರಿ ಆರೋಗ್ಯ ಪರಿಸ್ಥಿತಿಗಳಂತಹ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವುದೇ ವಯಸ್ಸಿನಲ್ಲಿ ಆಲ್ಕೊಹಾಲ್ ಕುಡಿಯಲು ಶಿಫಾರಸು ಮಾಡಲಾಗುವುದಿಲ್ಲ.

2020ರಲ್ಲಿ ಮದ್ಯ ಸೇವನೆಯಿಂದ 1.78 ಮಿಲಿಯನ್ ಸಾವು
ಅಧ್ಯಯನದ ಹೊಸ ಆವಿಷ್ಕಾರಗಳ ಹೊರತಾಗಿಯೂ, ನವದೆಹಲಿಯ ಓಖ್ಲಾದಲ್ಲಿರುವ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೊಬಿಲೋರಿ ವಿಜ್ಞಾನದ ನಿರ್ದೇಶಕ ಡಾ. ಪಂಕಜ್ ಪುರಿ, ವಯಸ್ಸಾದವರಿಗೂ ಮದ್ಯವನ್ನು ಶಿಫಾರಸು ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:  Intelligent: ಇದೇ ಕಾರಣಕ್ಕೆ ಬುದ್ಧಿವಂತರು ಸಂತೋಷವಾಗಿ ಇರುವುದೇ ಇಲ್ಲ!

"ವಾಸ್ತವವಾಗಿ, ಮದ್ಯ ಸೇವನೆ ಸ್ಥೂಲಕಾಯತೆಗೆ ಸಂಬಂಧಿಸಿದ ಕೊಬ್ಬಿನ ಯಕೃತ್ತು, ವೈರಲ್ ಹೆಪಟೈಟಿಸ್, ಇತ್ಯಾದಿಗಳಂತಹ ಇತರ ಲಿವರ್ ಫೈಬ್ರೋಸಿಸ್ ಸ್ಥಿತಿ ಉಂಟಾಗಬಹುದು, ಅಷ್ಟೇ ಅಲ್ಲದೇ ಕಡಿಮೆ ಪ್ರಮಾಣದ ಆಲ್ಕೋಹಾಲ್‌ನಿಂದಲೂ ಯಕೃತ್ತಿನ ಹಾನಿ ಉಂಟಾಗಬಹುದು" ಎಂದು ಹೇಳಿದ್ದಾರೆ. ಕಳೆದ ತಿಂಗಳು ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಲ್ಕೋಹಾಲ್ ಸೇವನೆಯಿಂದ 2020ರಲ್ಲಿ 1.78 ಮಿಲಿಯನ್ ಸಾವುಗಳಾಗಿದ್ದು, ಅದರಲ್ಲಿ 15-49 ವರ್ಷ ವಯಸ್ಸಿನ ಪುರುಷರ ಸಂಖ್ಯೆ ಹೆಚ್ಚಿದೆ ಎಂಬುವುದೇ ಆಘಾತಕಾರಿ ವಿಚಾರ.

ಈ ಬಗ್ಗೆ GBD ಸಂಶೋಧಕರು ಕಂಡುಕೊಂಡಿದ್ದೇನು? 
ಆದಾಗ್ಯೂ ಆರೋಗ್ಯವಂತ 40 ವರ್ಷಕ್ಕಿಂತ ಮೇಲ್ಪಟ್ಟ ಜನರು, 0.1 ರಿಂದ 1.87 ಸ್ಟ್ಯಾಂಡರ್ಡ್ ಪಾನೀಯಗಳಿಂದ ಸಣ್ಣ ಪ್ರಮಾಣದ ಆಲ್ಕೋಹಾಲ್‌ನಿಂದ ಪ್ರಯೋಜನ ಪಡೆಯಬಹುದು ಎಂದು GBD ಸಂಶೋಧಕರು ಕಂಡುಕೊಂಡಿದ್ದಾರೆ, ಇದು ರಕ್ತಕೊರತೆಯ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ದುರದೃಷ್ಟವಶಾತ್ ಅಂತಹ ಪ್ರಯೋಜನಗಳಿಗೆ ಕಾರಣವಾಗುವ ಆಲ್ಕೋಹಾಲ್ ಪ್ರಮಾಣವು ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಪ್ರಸ್ತುತ ಕುಡಿಯುವ ಮಾರ್ಗಸೂಚಿಗಳಿಗಿಂತ ತುಂಬಾ ಕಡಿಮೆಯಾಗಿದೆ.

ಇದನ್ನೂ ಓದಿ: Home Remedies: ಅಜೀರ್ಣ ಸಮಸ್ಯೆಯಿಂದ ಮುಕ್ತಿ ಬೇಕು ಅಂದ್ರೆ ಈ ಮನೆಮದ್ದುಗಳನ್ನು ಬಳಸಿ ಸಾಕು

"30ml ವಿಸ್ಕಿಯ ಪಾನೀಯ, 100ml ವೈನ್ ಅಥವಾ 250ml ಬಿಯರ್, 10gm ಆಲ್ಕೋಹಾಲ್ಗೆ ಸಮನಾಗಿರುತ್ತದೆ. ಯಕೃತ್ತಿನ ಸುರಕ್ಷಿತ ದೃಷ್ಟಿಯಿಂದ ಪುರುಷರಿಗೆ ದಿನಕ್ಕೆ 2-3 ಪ್ರಮಾಣಿತ ಪಾನೀಯಗಳು ಮತ್ತು ಮಹಿಳೆಯರಿಗೆ ದಿನಕ್ಕೆ 1-2 ಪ್ರಮಾಣಿತ ಪಾನೀಯಗಳನ್ನು ಶಿಫಾರಸ್ಸು ಮಾಡುತ್ತಾರೆ" ಪುರಿ.

ಒಟ್ಟಾರೆ ಅಧ್ಯಯನವು ಜಗತ್ತಿನಾದ್ಯಂತ ಲೆಕ್ಕಕ್ಕೆ ಸಿಗದಷ್ಟು ಮಂದಿ ಈ ಕೆಟ್ಟ ಚಟ ಮದ್ಯಕ್ಕೆ ವ್ಯಸನಿಗಳಾಗಿದ್ದಾರೆ ಎಂಬುವುದನ್ನು ಸ್ಪಷ್ಟವಾಗಿ ಹೇಳಿದೆ.
Published by:Ashwini Prabhu
First published: