News18 India World Cup 2019

ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಏಲಕ್ಕಿಯಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದೆ. ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸುತ್ತದೆ.

news18
Updated:January 6, 2019, 10:23 PM IST
ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಿಸುವ ನೈಸರ್ಗಿಕ ಆಹಾರಗಳು
ಸಾಂದರ್ಭಿಕ ಚಿತ್ರ
news18
Updated: January 6, 2019, 10:23 PM IST
ಒಂದು ವೇಳೆ ನಿಮಗೆ ಸಂಗಾತಿಯೊಡನೆ ರತಿಕ್ರೀಡೆ ನಡೆಸಲು ಮನಸ್ಸಾಗದಿದ್ದರೆ ಇದಕ್ಕೆ  ಲೈಂಗಿಕಾಸಕ್ತಿ ಕುಂಠಿತವಾಗಿರುವುದು ಕೂಡ ಕಾರಣವಾಗಿರಬಹುದು. ಇಂತಹ ಮನಸ್ಥಿತಿಯು ನಿಮ್ಮ ದಾಂಪತ್ಯ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಸಮಸ್ಯೆಗಳಿಗೆ ಸಾಮಾನ್ಯವಾಗಿ ಕಾಮಾಸಕ್ತಿಯನ್ನು ಕೆರಳಿಸುವ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು. ಆದರೆ ವೈದ್ಯರ ಸಲಹೆಗಳನ್ನು ಪಡೆಯದೇ ತೆಗೆದುಕೊಳ್ಳುವ ಇಂತಹ ಮಾತ್ರೆಗಳಿಂದ ನಿಮ್ಮ ಲೈಂಗಿಕ ಸಾಮರ್ಥ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

ಹೆಚ್ಚಾಗಿ ವಿವಾಹಿತರಲ್ಲಿ ಕಂಡು ಬರುವ ಈ ರೀತಿಯ ಸಮಸ್ಯೆಗಳಿಗೆ ನೈಸರ್ಗಿಕವಾಗಿಯೇ  ಪರಿಹಾರ ಕಂಡುಕೊಳ್ಳಬಹುದು. ನಾವು ದಿನನಿತ್ಯ ಕಾಣುವ ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಕೂಡ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕಾಮಾಸಕ್ತಿಯನ್ನು ಮರಳಿ ಪಡೆಯಬಹುದು. ಅಂತಹ ಪ್ರಮುಖ ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಬಾದಾಮಿ

ಬಾದಾಮಿ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿರುತ್ತದೆ. ಇದನ್ನು ತಿನ್ನುವುದರಿಂದ ಪುರುಷರ ದೇಹದಲ್ಲಿ ಟೆಸ್ಟಾಸ್ಟೆರಾನ್ ಎಂಬ ರಸದೂತ ಹೆಚ್ಚು ಉತ್ಪಾದನೆಯಾಗುತ್ತದೆ. ಈ ಟೆಸ್ಟೋಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಈ ಬೀಜಗಳಲ್ಲಿರುವ ಸತು, ಸೆಲೆನಿಯಂ ಹಾಗೂ ವಿಟಮಿನ್ ಇ ಸತ್ವಗಳು ವಿಶೇಷವಾಗಿ ಲೈಂಗಿಕಾಸಕ್ತಿಯನ್ನು ಕೆರಳಿಸುತ್ತದೆ. ಹೀಗಾಗಿಯೇ ಲೈಂಗಿಕ ಸಮಸ್ಯೆಯಿಂದ ಪಾರಾಗಲು ಹೆಚ್ಚಿನವರು ಬಾದಾಮಿ ಸೇವನೆಯ ಮೊರೆ ಹೋಗುತ್ತಾರೆ.

ಲವಂಗ
ಎಲ್ಲರ ಮನೆಯಲ್ಲೂ ಕಾಣ ಸಿಗುವ ಲವಂಗವನ್ನು ಅಡುಗೆಗೆ ಹೊರತಾಗಿ ಮನೆಮದ್ದಾಗಿ ಉಪಯೋಗಿಸಲಾಗುತ್ತದೆ. ಆದರೆ ಇದೇ ಲವಂಗದಲ್ಲಿ ಕಾಮೋತ್ತೇಜನವನ್ನು ನೀಡುವ ಅಂಶಗಳಿವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಲವಂಗವನ್ನು ಆಹಾರದಲ್ಲಿ ಅಥವಾ ಸುಮ್ಮನೆ ಜಗಿಯುವ, ಟೀಯೊಂದಿಗೆ ಕುದಿಸಿ ಸೇವಿಸಬಹುದು. ಹೀಗೆ ಸೇವಿಸುವುದರಿಂದ ಕೂಡ ಪುರುಷರ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಬಹುದು ಎನ್ನುತ್ತಾರೆ ಡಾ. ಗ್ಲಾಸ್ಮನ್.
Loading...

ಮೆಕ್ಸಿಕನ್ ಆಹಾರದಲ್ಲಿ ಲವಂಗದ ಪುಡಿಯನ್ನು ಬೆರೆಸಲಾಗುತ್ತದೆ. ಇನ್ನು ಕೆಲವರು ಲವಂಗ ಪುಡಿಗೆ ಕೊಂಚ ಜೀರಿಗೆ ಮತ್ತು ದಾಲ್ಚಿನ್ನಿ ಪುಡಿಯನ್ನು ಬೆರೆಸಿ ತಿನ್ನುತ್ತಾರೆ. ಇದರಿಂದ ಬಾಯಿ ರುಚಿಯೊಂದಿಗೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎನ್ನುತಾರೆ ಗ್ಲಾಸ್ಮನ್.

ಇದನ್ನೂ ಓದಿ: ಡಿಜಿಟಲ್​ ಯುಗದಲ್ಲಿ ವಿಶ್ವದ ಗಮನ ಸೆಳೆದ ಹೊಸ ಆವಿಷ್ಕಾರಗಳು

ಅಂಜೂರ
ಅಂಜೂರ ಸೇವನೆಯಿಂದ ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲೂ ಕಾಮಾಸಕ್ತಿ ಮೂಡುತ್ತದೆ. ದೇಹದಲ್ಲಿರುವ ಫೆರೋಮೋನುಗಳೆಂಬ ಹಾರ್ಮೋನ್​ಗಳನ್ನು ಪ್ರಚೋದಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಲೈಂಗಿಕ ಕ್ರೀಡೆಗೂ ಮುನ್ನ ಐದು ಅಂಜೂರ ಹಣ್ಣುಗಳನ್ನು ತಿಂದರೆ ನವತಾರುಣ್ಯದಿಂದ ರತಿ ಸುಖ ಅನುಭವಿಸಬಹುದು ಎನ್ನುತ್ತಾರೆ ಲೈಂಗಿಕ ತಜ್ಞರು.

ಇದನ್ನೂ ಓದಿ: ಚಾಲನಾ ಪರವಾನಗಿ-ಆಧಾರ್ ಜೋಡಣೆ: ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ನಿಯಮ

ಕಲ್ಲಂಗಡಿ
ನೀರಿನಾಂಶ ಹೆಚ್ಚಾಗಿರುವ ಕಲ್ಲಂಗಡಿಯ ಸೇವನೆಯಿಂದ ಕಾಮಾಸಕ್ತಿ ಮೂಡುತ್ತದೆ.  ಇದರಲ್ಲಿರುವ ಸಿಟ್ರುಲೈನ್ ಎಂಬ ಪೋಷಕಾಂಶ ದೇಹದಲ್ಲಿ ಆರ್ಜಿನೈನ್ ಎಂಬ ಅಮೈನೋ ಆಮ್ಲವನ್ನು ಉತ್ಪಾದಿಸುತ್ತದೆ. ಹಾಗೆಯೇ ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಏರಿಸುತ್ತದೆ. ಈ ಮೂಲಕ ರಕ್ತನಾಳಗಳನ್ನು ಸಡಿಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಯಾಗ್ರಾ ಮಾತ್ರೆಗಳು ಕೂಡ ಇದೇ ಕೆಲಸವನ್ನು ಮಾಡುವುದರಿಂದ ಅದರಿಂದ ಪಡೆಯುವ ಪರಿಣಾಮವನ್ನು ನೈಸರ್ಗಿಕವಾಗಿ ಕಲ್ಲಂಗಡಿಯಿಂದ ಪಡೆಯಬಹುದು.

ಇದನ್ನೂ ಓದಿ: ಬೀಟ್​ ರೂಟ್​ನಿಂದ ಸಿಗುವ ಆರೋಗ್ಯಕರ ಲಾಭಗಳು ಅಷ್ಟಿಷ್ಟಲ್ಲ..!

ಬಟರ್​ ಫ್ರೂಟ್​(ಬೆಣ್ಣೆ ಹಣ್ಣು)
ಬಟರ್​ ಫ್ರೂಟ್​ ಎಂಬುದು ಅತ್ಯುತ್ತಮ ಕಾಮೋತ್ತೇಜಕ ಅಂಶಗಳನ್ನು ಒಳಗೊಂಡ ಹಣ್ಣಾಗಿದೆ. ಇದರಲ್ಲಿ ಉತ್ತಮ ಕೊಬ್ಬಿನಾಂಶ ಸಮೃದ್ಧವಾಗಿದ್ದು, ಇದನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳು ದೊರೆಯುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ಹೃದಯ ಬಡಿತ ಉತ್ತಮಗೊಳ್ಳುವುದಲ್ಲದೆ, ರಕ್ತ ಪರಿಚಲನೆ ದೇಹದ ಎಲ್ಲ ಅಂಗಾಂಗಳಲ್ಲೂ ಹರಿಯಲು ಸಹಾಯಕವಾಗುತ್ತದೆ. ಇದರಿಂದ ನಿಮಿರುವಿಕೆ ಸಮಸ್ಯೆಗಳು ದೂರುವಾಗಿ ಲೈಂಗಿಕ ಆಸಕ್ತಿಯು ಹೆಚ್ಚುತ್ತದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ

ಮೊಟ್ಟೆಗಳು
ದಿನಕ್ಕೆ ಎರಡು ಮೊಟ್ಟೆಗಳನ್ನು ತಿನ್ನುತ್ತಿದ್ದರೆ ಲೈಂಗಿಕ ಶಕ್ತಿಯನ್ನು ಮರಳಿ ಪಡೆಯಬಹುದಾಗಿದೆ. ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದ್ದು, ಇದು ಪುರುಷರ ಕಾಮಾಸಕ್ತಿಯನ್ನು ಪ್ರಚೋದಿಸುತ್ತದೆ. ಅಲ್ಲದೆ ಇದರಲ್ಲಿರುವ ಎಲ್​-ಆರ್ಜಿನೈನ್ ಎಂಬ ಪೋಷಕಾಂಶ ಪುರುಷರ ದೇಹದಲ್ಲಿ ಟೆಸ್ಟಾಸ್ಟೆರಾನ್ ಅನ್ನು ಉತ್ಪಾದಿಸಿ ಲೈಂಗಿಕ ಆಸಕ್ತಿಯನ್ನು ಮೂಡಿಸುತ್ತದೆ ಎಂದು ಲೈಂಗಿಕ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್ ಮತ್ತೊಬ್ಬ ಗಿಲ್​ಕ್ರಿಸ್ಟ್​: ಲೆಜೆಂಡ್​ ಆಟಗಾರನಿಂದ ಪ್ರಶಂಸೆ

ಕೇಸರಿ
ಹಾಲಿನಲ್ಲಿ ಕೇಸರಿ ಮಿಶ್ರಣ ಮಾಡಿ ಸೇವಿಸಿದರೆ ಪುರುಷರಲ್ಲಿ ಕಾಮೋತ್ತೇಜನ ಹೆಚ್ಚಾಗುತ್ತದೆ. ರಾತ್ರಿ ಮಲಗುವ ಮುನ್ನ ಕುಡಿಯುವುದು ಉತ್ತಮ. ಇದರಿಂದ ದೇಹದಲ್ಲಿ ಕಾಮಾಸಕ್ತಿ ಹೆಚ್ಚಿಸುವ ಆಕ್ಸಿಟೋಸಿನ್ ಎಂಬ ಅಂಶ ಹೆಚ್ಚು ಬಿಡುಗಡೆಯಾಗುತ್ತವೆ.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಬ್ರೋಮಿಲೈನ್ ಎಂಬ ಕಿಣ್ವವಿದ್ದು, ಇದು ನೈಸರ್ಗಿಕವಾಗಿ ಲೈಂಗಿಕಾಸಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನಲ್ಲಿರುವ ಪೊಟಾಶಿಯಂ, ಮೆಗ್ನೀಷಿಯಂ ಹಾಗೂ ಇತರ ಪೋಷಕಾಂಶಗಳು ಆರೋಗ್ಯವನ್ನು ವೃದ್ದಿಸುತ್ತದೆ. ಇದರ ಜೊತೆಗೆ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ.

ಇದನ್ನೂ ಓದಿ: ಒಂದು ಮೀನಿನ ಬೆಲೆ 21 ಕೋಟಿ: ಅಚ್ಚರಿಯಾದರೂ ಇದು ಸತ್ಯ..!

ಏಲಕ್ಕಿ
ಏಲಕ್ಕಿಯಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದೆ. ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ದಿನ ನಿತ್ಯ ಏಲಕ್ಕಿಯನ್ನು ಬಳಸುವುದರಿಂದ ನಿಮಿರುವಿಕೆ ಸಮಸ್ಯೆಗೆ ಪರಿಹಾರ ಕಾಣಬಹುದು. ಒಟ್ಟಿನಲ್ಲಿ ಲೈಂಗಿಕ ಆಸಕ್ತಿಯನ್ನು ಮೂಡಿಸಲು ಏಲಕ್ಕಿ ಅದ್ಭುತವಾದ ಆಹಾರವಾಗಿದೆ.

First published:January 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...