ಗೋಲ್ಡ್ ಲೋನ್‌‌ಗಳ ಬಗ್ಗೆ ನೀವು ತಿಳಿದಿರಬೇಕಾದ ಪ್ರತಿಯೊಂದು ವಿಷಯಗಳು

ನೀವು ನಿಮ್ಮ ಚಿನ್ನವನ್ನು ಸಾಲಗಾರನ ಬಳಿಗೆ ಕೊಂಡೊಯ್ದರೆ, ಅವರು ಅದರ ಶುದ್ಧತೆಯನ್ನು ನಿರ್ಣಯಿಸುತ್ತಾರೆ ಮತ್ತು ನೀವು ಸಾಲ ಪಡೆಯಬಹುದಾದ ಸಾಲದ ಮೊತ್ತವನ್ನು ನಿಮಗೆ ತಿಳಿಸುತ್ತಾರೆ.

news18-kannada
Updated:June 29, 2020, 6:31 PM IST
ಗೋಲ್ಡ್ ಲೋನ್‌‌ಗಳ ಬಗ್ಗೆ ನೀವು ತಿಳಿದಿರಬೇಕಾದ ಪ್ರತಿಯೊಂದು ವಿಷಯಗಳು
ಸಾಂದರ್ಭಿಕ ಚಿತ್ರ
  • Share this:
ಭಾರತದಲ್ಲಿ ಅನೇಕರು ಚಿನ್ನದ ಠೇವಣಿಯ ಮೇಲೆ ಹಣವನ್ನು ಸಾಲ ಪಡೆಯುತ್ತಾರೆ. ಸಾಲದಾತರು ತಮಗೆ ನೀಡಿದ ಚಿನ್ನದ ಭದ್ರತೆಯ ಮೇಲೆ ಹಣವನ್ನು ನೀಡುತ್ತಾರೆ. ಸ್ವೀಕರಿಸಿದ ಹಣವನ್ನು ನಿಮ್ಮ ವ್ಯವಹಾರ ವೆಚ್ಚಗಳು, ವೈದ್ಯಕೀಯ ವೆಚ್ಚಗಳು ಅಥವಾ ಇನ್ನಾವುದೇ ಹಣಕಾಸಿನ ಅಗತ್ಯಗಳಿಗಾಗಿ ಯಾರನ್ನೂ ಅವಲಂಬಿಸದೆ ಬಳಸಬಹುದು ಮತ್ತು ನಿಮ್ಮ ಅಗತ್ಯಗಳನ್ನು ನೀವೇ ಪೂರೈಸಿಕೊಳ್ಳಬಹುದು.

ಗೋಲ್ಡ್ ಲೋನ್ ತುರ್ತು ಹಣವನ್ನು ಪಡೆಯಲು ತುಲನಾತ್ಮಕವಾಗಿ ಸುಲಭವಾದ ಮಾರ್ಗವಾಗಿದ್ದರೂ, ಇದರ ಬಗ್ಗೆ ನಿಮಗೆ ಹಲವಾರು ಅನುಮಾನಗಳು ಇರಬಹುದು. ಆದ್ದರಿಂದ, ನಿಮಗೆ ಸಹಾಯ ಮಾಡಲು ಸಾಮಾನ್ಯ ಪ್ರಶ್ನೆಗಳು ಮತ್ತು ತಜ್ಞರ ಉತ್ತರಗಳ ಪಟ್ಟಿ ಇಲ್ಲಿದೆ.

ಗೋಲ್ಡ್ ಲೋನ್ ಎಂದರೇನು?

ಗೋಲ್ಡ್ ಲೋನ್ ಸುರಕ್ಷಿತ ಸಾಲವಾಗಿದ್ದು,  ಸಾಲದಾರನೊಂದಿಗೆ (ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ) ಚಿನ್ನದ ಆಭರಣಗಳ ಮೇಲಾಧಾರವಾಗಿ ಅಡವಿಡುವುದರ ಮೂಲಕ ನೀವು ಪಡೆಯಬಹುದು. ಸಾಲದಾತನು ನಿಮ್ಮ ಚಿನ್ನದ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಸಾಲದ ಮೊತ್ತವನ್ನು ನಿಮಗೆ ನೀಡುತ್ತಾನೆ. ಮತ್ತು ನೀವು ಆಯ್ಕೆ ಮಾಡಿದ ಅಧಿಕಾರಾವಧಿಯ ಕೊನೆಯಲ್ಲಿ ಸಾಲದ ಮೊತ್ತ ಮತ್ತು ಬಡ್ಡಿಯನ್ನು ಮರುಪಾವತಿಸಿದ ನಂತರ, ನಿಮ್ಮ ಚಿನ್ನವನ್ನು ಹಿಂತಿರುಗಿಸಲಾಗುತ್ತದೆ.



 

ನೀವು ಯಾವ ರೀತಿಯ ಆಭರಣಗಳನ್ನು ಅಡವಿಡಬಹುದು?ನೀವು ಚಿನ್ನದ ಆಭರಣಗಳನ್ನು ಅಡವಿಡಬಹುದು; ಚಿನ್ನದ ಶುದ್ಧತೆಯು ನೀವು ಎಷ್ಟು ಸಾಲ ಪಡೆಯಬಹುದು ಎಂಬುದನ್ನು ನಿರ್ಧರಿಸುತ್ತದೆ. ಸಾಲಕ್ಕಾಗಿ ಬ್ಯಾಂಕುಗಳು ಚಿನ್ನದ ಬಾರ್‌ಗಳು, ನಾಣ್ಯಗಳು ಅಥವಾ ಚಿನ್ನದ ಗಟ್ಟಿಗಳನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ಗಮನಿಸಿ.

ನೀವು ಗೋಲ್ಡ್ ಲೋನ್ ಅನ್ನು ಹೇಗೆ ಪಡೆಯಬಹುದು?

ನೀವು ನಿಮ್ಮ ಚಿನ್ನವನ್ನು ಸಾಲಗಾರನ ಬಳಿಗೆ ಕೊಂಡೊಯ್ದರೆ, ಅವರು ಅದರ ಶುದ್ಧತೆಯನ್ನು ನಿರ್ಣಯಿಸುತ್ತಾರೆ ಮತ್ತು ನೀವು ಸಾಲ ಪಡೆಯಬಹುದಾದ  ಮೊತ್ತವನ್ನು ನಿಮಗೆ ತಿಳಿಸುತ್ತಾರೆ. RBI ಮಾರ್ಗಸೂಚಿಗಳ ಪ್ರಕಾರ, ಈ ಮೊತ್ತವು ಚಿನ್ನದ ಮೌಲ್ಯದ 75% ವರೆಗೆ ಇರಬಹುದು. ನೀವು ಪ್ರಕ್ರಿಯೆಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಅದನ್ನು ಬ್ಯಾಂಕಿನ ನೀತಿಯ ಪ್ರಕಾರವಾಗಿ ವಿಧಿಸಲಾಗುತ್ತದೆ.



ಸಾಲಗಾರರೊಂದಿಗೆ ಇಟ್ಟ ನಿಮ್ಮ ಚಿನ್ನ ಸುರಕ್ಷಿತವೇ?

ಪರವಾನಗಿ ಪಡೆಯದ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯೊಂದಿಗೆ, ನಿಮ್ಮ ಚಿನ್ನದ ಆಭರಣಗಳನ್ನು ಕಳೆದುಕೊಳ್ಳುವ ಅಥವಾ ಅದಲು ಬದಲಾಗುವ ಅಪಾಯವನ್ನು ನೀವು ಎದುರಿಸುತ್ತಿರಬಹುದು. ಇದಕ್ಕಾಗಿಯೇ HDFC Bank ನಂತಹ ವಿಶ್ವಾಸಾರ್ಹ ಸಾಲಗಾರರಿಂದ ಗೋಲ್ಡ್ ಲೋನ್‌‌ಗೆ  ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ. ಮತ್ತು ಅದನ್ನು ವಾಲ್ಟ್‌ನಲ್ಲಿ ಭದ್ರಪಡಿಸಲಾಗಿರುವುದರಿಂದ, ನಿಮ್ಮ ಚಿನ್ನದ ಸುರಕ್ಷತೆಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಆದ್ದರಿಂದ, ನಿಮ್ಮ ಅಮೂಲ್ಯವಾದ  ಸ್ವತ್ತಿನ ಸುರಕ್ಷತೆಯೊಂದಿಗೆ, ನೀವು ನಿಶ್ಚಿಂತೆಯಿಂದಿರಬಹುದು.

ನಿಮಗೆ ಯಾವ ದಾಖಲೆಗಳು ಬೇಕಾಗುತ್ತವೆ?

ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ ಜೊತೆಗೆ, ನಿಮ್ಮ ಯಾವುದೇ ಗುರುತಿನ ಪುರಾವೆಗಳನ್ನು (ಪಾಸ್‌ಪೋರ್ಟ್, ಚಾಲಕರ ಪರವಾನಗಿ, ಆಧಾರ್ ಕಾರ್ಡ್) ಮತ್ತು ವಿಳಾಸದ ಪುರಾವೆ (ವಿದ್ಯುತ್ ಬಿಲ್‌ಗಳು, ಫೋನ್ ಬಿಲ್‌ಗಳು) ಸಲ್ಲಿಸಬೇಕು. ನಿಮ್ಮ ಬಳಿ PAN ಕಾರ್ಡ್ ಇಲ್ಲದಿದ್ದರೆ, ನೀವು ಫಾರ್ಮ್ 60 ಅನ್ನು ಸಲ್ಲಿಸಬಹುದು.

ಗೋಲ್ಡ್ ಲೋನ್‌‌ಗೆ ಯಾರು ಅರ್ಜಿ ಸಲ್ಲಿಸಬಹುದು?

18 ವರ್ಷ ಮತ್ತು ಮೇಲ್ಪಟ್ಟ ಯಾರಾದರೂ ಗೋಲ್ಡ್ ಲೋನ್‌‌ಗೆ ಅರ್ಜಿ ಸಲ್ಲಿಸಲು ತಮ್ಮ ಚಿನ್ನವನ್ನು ಅಡವಿಡಬಹುದು.

ಸಾಲವನ್ನು ಮಂಜೂರು ಮಾಡಲು ಎಷ್ಟು ಸಮಯ ಬೇಕಾಗುತ್ತದೆ?

ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ, HDFC Bank ನಂತಹ ವಿಶ್ವಾಸಾರ್ಹ ಬ್ಯಾಂಕ್, ಸಾಲದ ಮೊತ್ತವನ್ನು ಕೇವಲ 45 ನಿಮಿಷಗಳಲ್ಲಿ ಕೌಂಟರ್ ಮೂಲಕ ವಿತರಿಸತ್ತದೆ.

ಲಭ್ಯವಿರುವ ಗೋಲ್ಡ್ ಲೋನ್ ಮರುಪಾವತಿ ಆಯ್ಕೆಗಳು ಯಾವುವು?

HDFC bank ನಂತಹ ಸಾಲದಾತರು ನಿಮ್ಮ ಆದ್ಯತೆ ಮತ್ತು ಅನುಕೂಲತೆಯ ಆಧಾರದ ಮೇಲೆ ನೀವು ಆಯ್ಕೆ ಮಾಡಬಹುದಾದ ಅನೇಕ ಸುಲಭ ಮತ್ತು ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ನೀಡುತ್ತಾರೆ:

  • ಮುಂಗಡ ಬಡ್ಡಿ: ಅಧಿಕಾರಾವಧಿಯ ಆರಂಭದಲ್ಲಿ ಸಂಪೂರ್ಣ ಬಡ್ಡಿಯನ್ನು ಮತ್ತು ಕೊನೆಯಲ್ಲಿ ಅಸಲು ಪಾವತಿಸಿ.

  • ಬುಲೆಟ್ ಮರುಪಾವತಿ: ಇಲ್ಲಿ ಯಾವುದೇ EMI ಇರುವುದಿಲ್ಲ; ಸಾಲದ ಅವಧಿಯ ಕೊನೆಯಲ್ಲಿ ನೀವು ಅಸಲು ಮತ್ತು ಬಡ್ಡಿ ಮೊತ್ತವನ್ನು ಒಟ್ಟಿಗೆ ಪಾವತಿಸುತ್ತೀರಿ.

  • ನಿಯಮಿತ EMIs: ಮರುಪಾವತಿ EMIs ರೂಪದಲ್ಲಿರುತ್ತದೆ

  • ಓವರ್‌ಡ್ರಾಫ್ಟ್ ಸೌಲಭ್ಯ: ಇದು ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸುವ ಸೌಲಭ್ಯವಾಗಿದೆ


ಮರುಪಾವತಿ ಅವಧಿ ಏನು?

ಗೋಲ್ಡ್ ಲೋನ್ ಮರುಪಾವತಿ ಮಾಡುವ ಅವಧಿ ಸಾಮಾನ್ಯವಾಗಿ ಸಾಲದಾತನನ್ನು ಅವಲಂಬಿಸಿ ಆರು ತಿಂಗಳು ಮತ್ತು ಎರಡು ವರ್ಷಗಳ ನಡುವೆ ಇರುತ್ತದೆ. ಉದಾಹರಣೆಗೆ, HDFC Bank ಗೋಲ್ಡ್ ಲೋನ್ ಅವಧಿ 6 ತಿಂಗಳಿಂದ ಪ್ರಾರಂಭವಾಗುತ್ತದೆ ಮತ್ತು 24 ತಿಂಗಳವರೆಗೆ ಇರುತ್ತದೆ. ಕೆಲವು ಸಾಲದಾತರು ನಿಮ್ಮ ಸಾಲವನ್ನು ನವೀಕರಿಸುವ ಮೂಲಕ ಅಧಿಕಾರಾವಧಿಯಲ್ಲಿ ವಿಸ್ತರಣೆಯನ್ನು ಸಹ ನೀಡುತ್ತಾರೆ. ಆದರೆ, ಬಡ್ಡಿಯ ಮೊತ್ತ ಹೆಚ್ಚಾಗುವುದರಿಂದ ಪಾವತಿ ಮೊತ್ತವೂ ಹೆಚ್ಚಾಗುವುದು.

ನೀವು ಗೋಲ್ಡ್ ಲೋನ್ ಅನ್ನು ಮರುಪಾವತಿಸದಿದ್ದರೆ ಏನಾಗುತ್ತದೆ?

ನೀವು ಗೋಲ್ಡ್ ಲೋನ್ ಅನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಮರುಪಾವತಿ ಮಾಡದಿದ್ದ ಸಂದರ್ಭದಲ್ಲಿ ಉಳಿದ ಸಾಲದ ಮೊತ್ತವನ್ನು ಮರುಪಡೆಯಲು ಸಾಲದಾರನಿಗೆ ನಿಮ್ಮ ಚಿನ್ನವನ್ನು ಹರಾಜು ಮಾಡುವ ಹಕ್ಕಿದೆ..

 ಗೋಲ್ಡ್ ಲೋನ್ ಮೇಲಿನ ಬಡ್ಡಿದರ ಎಷ್ಟು?

ಕ್ರೆಡಿಟ್ ಕಾರ್ಡ್ ಮೇಲಿನ ಸಾಲ, ಮ್ಯೂಚುಯಲ್ ಫಂಡ್‌ಗಳ ಮೇಲಿನ ಸಾಲ, ವೈಯಕ್ತಿಕ ಸಾಲ ಮುಂತಾದ ಇತರ ಸಾಲದ ಆಯ್ಕೆಗಳ ಮೇಲಿನ ಬಡ್ಡಿ ದರಕ್ಕಿಂತ ಗೋಲ್ಡ್ ಲೋನ್ ಬಡ್ಡಿದರಗಳು ಕಡಿಮೆಯಾಗಿವೆ. ಈ ಬಡ್ಡಿದರವು ಸಾಮಾನ್ಯವಾಗಿ 11% ರಿಂದ 17% ರವರೆಗೆ ಇರುತ್ತದೆ, ಇದು ಸಾಲದಾರನನ್ನು ಅವಲಂಬಿಸಿರುತ್ತದೆ. HDFC Bank ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಗೋಲ್ಡ್ ಲೋನ್ ಅನ್ನು ನೀಡುತ್ತದೆ.

ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳಲ್ಲಿ ನಿಮ್ಮ ಆಯ್ಕೆ ಯಾವುದಾಗಿರಬೇಕು?

ಇಂದು ನೀವು ದೇಶಾದ್ಯಂತದ ಎನ್‌ಬಿಎಫ್‌ಸಿ ಮತ್ತು ಬ್ಯಾಂಕುಗಳಿಂದ ಗೋಲ್ಡ್ ಲೋನ್ ಅನ್ನು ತೆಗೆದುಕೊಳ್ಳಬಹುದು. ಎರಡೂ ಸಾಲ ಮತ್ತು ಮೌಲ್ಯದ 75% ಅನುಪಾತವನ್ನು ನೀಡುತ್ತವೆಯಾದರೂ, ತ್ವರಿತ ಮಾರ್ಗದರ್ಶಿ ಇಲ್ಲಿದೆ, ಅದು ನಿಮಗೆ ಉತ್ತಮವಾಗಿದೆ.

HDFC Bank ನಂತಹ ವಿಶ್ವಾಸಾರ್ಹ ಬ್ಯಾಂಕುಗಳಿಂದ ಪಡೆಯುವ ಗೋಲ್ಡ್ ಲೋನ್‌‌ಗಳು ಎನ್‌ಬಿಎಫ್‌ಸಿಗಳಿಗಿಂತ ಸ್ಪರ್ಧಾತ್ಮಕ ಬಡ್ಡಿದರವನ್ನು ಹೊಂದಿರುತ್ತವೆ. ಇದಲ್ಲದೆ, HDFC Bank ಪ್ರಕ್ರಿಯೆ ಕ್ಷಿಪ್ರ ಗತಿಯಲ್ಲಿರುತ್ತದೆ; ಕನಿಷ್ಠ ದಾಖಲೆಗಳೊಂದಿಗೆ ಸಾಲವನ್ನು 45 ನಿಮಿಷಗಳಲ್ಲಿ ಮಂಜೂರು ಮಾಡಲಾಗುತ್ತದೆ ಮತ್ತು ಯಾವುದೇ ಗುಪ್ತ ಶುಲ್ಕಗಳಿರುವುದಿಲ್ಲ. ಮತ್ತು ಪ್ರಮುಖ ಬ್ಯಾಂಕುಗಳು ಉತ್ತಮ ಭದ್ರತೆಯನ್ನು ಹೊಂದಿರುವುದರಿಂದ, ಪ್ರತಿಷ್ಠಿತ ಬ್ಯಾಂಕಿನಿಂದ ಪಡೆದ ಸಾಲದೊಂದಿಗೆ ನಿಮ್ಮ ಆಭರಣಗಳು ಸುರಕ್ಷಿತವೆಂದು ನೀವು ಖಚಿತವಾಗಿ ಹೇಳಬಹುದು.

ಯಾವ ವೆಚ್ಚಗಳು ಅಥವಾ ಶುಲ್ಕಗಳು ಒಳಗೊಂಡಿವೆ?

ಒಳಗೊಂಡಿರುವ ಕೆಲವು ಹೆಚ್ಚುವರಿ ಶುಲ್ಕಗಳು ಸಂಸ್ಕರಣಾ ಶುಲ್ಕ, ಮರುಪಾವತಿ ಶುಲ್ಕಗಳು ಮತ್ತು ಮೌಲ್ಯಮಾಪನ ಶುಲ್ಕವನ್ನು ಒಳಗೊಂಡಿರುತ್ತವೆ. ಕೆಲವು ಸಾಲದಾತರು ಮೇಲ್ಮೈಯಲ್ಲಿ ಸಮಂಜಸವಾಗಿ ಕಾಣಲು ಈ ವೆಚ್ಚಗಳನ್ನು ಬಹಿರಂಗಪಡಿಸದೇ ಇರಬಹುದು. ಆದಾಗ್ಯೂ, HDFC Bank ನಂತಹ ಬ್ಯಾಂಕುಗಳು ಗುಪ್ತ ಶುಲ್ಕವಿಲ್ಲದೆ ಸಂಪೂರ್ಣವಾಗಿ ಪಾರದರ್ಶಕ ಪ್ರಕ್ರಿಯೆಯ ಮೂಲಕ ಗೋಲ್ಡ್ ಲೋನ್ ಅನ್ನು ನೀಡಲು ಹೆಸರುವಾಸಿಯಾಗಿದೆ.

ಪ್ರಸ್ತುತ ನಗದು ಬಿಕ್ಕಟ್ಟನ್ನು ಎದುರಿಸಲು ತ್ವರಿತ ಹಣ ಪಡೆಯುವ ಮಾರ್ಗವನ್ನು ನೀವು ಹುಡುಕುತ್ತಿದ್ದರೆ, ಗೋಲ್ಡ್ ಲೋನ್‌‌ಗಳು ಇದೀಗ ಯೋಚಿಸಬಹುದಾದ ಸುಲಭವಾದ ಮೂಲಗಳಾಗಿವೆ. ಚಿನ್ನದ ದರಗಳು ಹೆಚ್ಚಾಗುತ್ತಿರುವುದರಿಂದ, ನಿಮ್ಮ ಚಿನ್ನಕ್ಕಾಗಿ ಹೆಚ್ಚಿನ ಸಾಲದ ಮೊತ್ತವನ್ನು ನೀವು ಪಡೆಯಬಹುದು. ಆದ್ದರಿಂದ, ನಿಮ್ಮ ಗೋಲ್ಡ್ ಲೋನ್ ಅನ್ನು ತ್ವರಿತವಾಗಿ ಮತ್ತು ಸುಲಭವಾಗಿ ಅನುಮೋದಿಸಲು ಇಲ್ಲಿ ಕ್ಲಿಕ್ ಮಾಡಿ.

 
First published:June 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading