Mental Health: ಹೆಚ್ಚು ಆತಂಕ ಅನುಭವಿಸುತ್ತಿದ್ದೀರಾ? ಆತಂಕದ ಸಮಸ್ಯೆಯಿಂದ ಹೊರ ಬರಲು ಇಲ್ಲಿದೆ ಟಿಪ್ಸ್

Anxiety Issue: ಆತಂಕವು ಸಾಮಾನ್ಯ ಪ್ರತಿಕ್ರಿಯೆ. ಸಾಮಾನ್ಯವಾಗಿ ಉಂಟಾಗುವ ಆತಂಕ ಭಯವನ್ನು ಸೃಷ್ಟಿ ಮಾಡುತ್ತದೆ. ಗೊಂದಲ ಸೇರಿದಂತೆ ವಿಚಿತ್ರ ಭಾವಗಳು ಆವರಿಸುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಕಾರಣದಿಂದ ಜಗತ್ತು ಪರಿಪೂರ್ಣವಾಗಿ ಬದಲಾಗಿದೆ. ಪ್ರತಿಯೊಬ್ಬರ ಜೀವನದ ಮೇಲೆ ಈ ಕೊರೊನಾ ವಿಭಿನ್ನವಾಗಿ ಪರಿಣಾಮ ಬೀರಿದೆ. ಮನೆಯಿಂದ ಕೆಲಸ, ಮಕ್ಕಳು. ಆರೋಗ್ಯ ಪ್ರತಿಯೊಂದು ಒತ್ತಡವನ್ನು ಉಂಟು ಮಾಡುತ್ತಿದೆ. ಮಾನಸಿಕವಾಗಿ ಹೆಚ್ಚಿನ ಜನರು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಅವರಲ್ಲಿ ಈ ಒತ್ತಡ ಹಲವಾರು ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಜನರಲ್ಲಿ ಇದು ಹೆಚ್ಚಿನ ಕೋಪಕ್ಕೆ ಕಾರಣವಾಗಿದೆ. ಜನರಲ್ಲಿ ಆತಂಕ ಹೆಚ್ಚಾಗುತ್ತದೆ. ಆತಂಕ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ.

ಆತಂಕವು ಸಾಮಾನ್ಯ ಪ್ರತಿಕ್ರಿಯೆ. ಸಾಮಾನ್ಯವಾಗಿ ಉಂಟಾಗುವ ಆತಂಕ ಭಯವನ್ನು ಸೃಷ್ಟಿ ಮಾಡುತ್ತದೆ. ಗೊಂದಲ ಸೇರಿದಂತೆ ವಿಚಿತ್ರ ಭಾವಗಳು ಆವರಿಸುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ.

ಪ್ಯಾನಿಕ್ ಡಿಸಾರ್ಡರ್: ಪ್ಯಾನಿಕ್ ಡಿಸಾರ್ಡರ್ ಹೊಂದಿರುವ ಜನರು ಸಾಮಾನ್ಯವಾಗಿ ಹಲವಾರು  ಲಕ್ಷಣಗಳನ್ನು  ಹೊಂದಿರುತ್ತಾರೆ. ಎದೆ ಬಡಿತ, ಬೆವರುವುದು, ನಡುಕ ಉಂಟಾಗುವುದು . ಉಸಿರಾಟದ ತೊಂದರೆ, ಎದೆ ನೋವು. ತಲೆತಿರುಗುವಿಕೆ ಅಥವಾ ತಲೆನೋವು, ಉಸಿರುಗಟ್ಟಿಸುವಿಕೆ, ಶೀತ, ವಾಕರಿಕೆ ನಿರ್ಲಿಪ್ತತೆ, ನಿಯಂತ್ರಣ ಕಳೆದುಕೊಳ್ಳುವ ಭಯ ಮತ್ತು ಸಾಯುವ ಭಯ ಹೀಗೆ ವಿಭಿನ್ನ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾರೆ.  ಇದಕ್ಕೆ ಉತ್ತಮ ಪರಿಹಾರ ಎಂದರೆ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಇನ್ನು ಸಮಸ್ಯೆ ಹೆಚ್ಚಾಗುತ್ತಿದೆ ಎನಿಸಿದಲ್ಲಿ ಮಾನಸಿಕ ತಜ್ಞರ ಭೇಟಿ ಮಾಡುವುದು ಸೂಕ್ತ.

ಸಾಮಾನ್ಯವಾದ ಆತಂಕದ  ಸಮಸ್ಯೆಯಲ್ಲಿ ಅತಿಯಾದ ಆತಂಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. GAD ಹೊಂದಿರುವ ಜನರು ಅತಿಯಾದ ಚಿಂತೆ ಮಾಡುತ್ತಾರೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಆತಂಕ, ನಿದ್ರಾಹೀನತೆ, ಆಯಾಸ, ಸ್ನಾಯುಗಳಲ್ಲಿ ನೋವು, ಬೆವರು, ಕಿರಿಕಿರಿ, ವಾಕರಿಕೆ ಉಂಟಾಗುತ್ತದೆ. ಈ ಸಮಸ್ಯೆಗೆ ಚಿಕಿತ್ಸೆ ಎಂದರೆ  ಔಷಧಿಗಳನ್ನು ಮಾನಸಿಕ ಚಿಕಿತ್ಸೆಯ ಮೂಲಕ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಚರ್ಮದ ಹೊಳಪನ್ನು ಹೆಚ್ಚಿಸಲು ಬೆಂಡೆಕಾಯಿ ಪೇಸ್ಟ್ ಟ್ರೈ ಮಾಡಿ

ಸಾಮಾಜಿಕ ಆತಂಕ : ಸಾಮಾಜಿಕ ಸನ್ನಿವೇಶಗಳನ್ನು ಎದುರಿಸಲು ಕಷ್ಟವಾಗುವ ಸಂದರ್ಭ ಇದು. ಸಾಮಾಜಿಕವಾಗಿ ಬೆರೆಯಲು ಈ ಸಮಸ್ಯೆ ಹೊಂದಿರುವ ಜನರು ಹೆದರುತ್ತಾರೆ. ಈ ಸಮಸ್ಯೆ ಇರುವ ವ್ಯಕ್ತಿಗಳಿಗೆ ಜನರ ಜೊತೆ ಸಾಮಾಜಿಕವಾಗಿ ಬೆರೆಯುವುದು ಇಷ್ಟವಾಗುವುದಿಲ್ಲ. ಇದಕ್ಕೂ ಸಹ ಮನೋ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ ಪರಿಹಾರ.

ಇನ್ನು ಈ ಎಲ್ಲಾ ಸಮಸ್ಯೆಗಳಿಗೆ 2 ರೀತಿಯಲ್ಲಿ ಚಿಕಿತ್ಸೆ ಪಡೆಯಬಹುದು

ಸೈಕೋಥೆರಪಿ

ಟಾಕ್ ಥೆರಪಿ ಅಥವಾ ಸೈಕಲಾಜಿಕಲ್ ಕೌನ್ಸೆಲಿಂಗ್ ಎಂದು ಇದನ್ನು ಕರೆಯುತ್ತಾರೆ. ಈ ಮಾನಸಿಕ ಚಿಕಿತ್ಸೆಯು ನಿಮ್ಮ ಆತಂಕದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಆತಂಕದ ಸಮಸ್ಯೆಗಳಿಗೆ ಈ ಮಾನಸಿಕ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗಿದೆ.  ನೀವು ಹೊಂದಿರುವ ಆತಂಕದ  ಸಮಸ್ಯೆಯ ಪ್ರಕಾರ ಮತ್ತು ನಿಮಗೆ ಇತರ ಮಾನಸಿಕ ಅಥವಾ ದೈಹಿಕ ಆರೋಗ್ಯ ಸಮಸ್ಯೆಗಳಿವೆಯೇ ಎಂಬುದನ್ನು ಅವಲಂಬಿಸಿ  ಸಮಸ್ಯೆ ನಿವಾರಿಸಲು ಹಲವಾರು ರೀತಿಯ ಔಷಧಿಗಳನ್ನು ಬಳಸಲಾಗುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: