Sugar And Health: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

ಸಕ್ಕರೆಯ ಅತಿಯಾದ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಯಾವುದೇ ರೀತಿಯ ಹಾನಿ ಉಂಟು ಮಾಡಲ್ಲ. ಆದರೆ ಸಕ್ಕರೆಯನ್ನು ಹೆಚ್ಚು ಸೇವನೆ ಮಾಡುವುದು ದೇಹದಲ್ಲಿ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ದಿನನಿತ್ಯವೂ (Daily) ಸಕ್ಕರೆಯನ್ನು (Sugar) ಒಂದಲ್ಲ ಒಂದು ಆಹಾರ ಪದಾರ್ಥ (Food Ingredients) ತಯಾರಿಕೆಯಲ್ಲಿ ಬಳಸುತ್ತೇವೆ. ಸಿಹಿ (Sweet) ಪದಾರ್ಥಗಳ ರೆಸಿಪಿಯಲ್ಲಿ (Recipe) ಸಕ್ಕರೆಯನ್ನು ಬಳಕೆ ಮಾಡಲಾಗುತ್ತದೆ. ದಿನವೂ ಚಹಾ ಮಾಡಲು ಭಾರತೀಯ ಮನೆಗಳಲ್ಲಿ ಸಕ್ಕರೆಯನ್ನು ಬಳಕೆ ಮಾಡುತ್ತಾರೆ. ಸಕ್ಕರೆ ಭೂಮಿಯ ಮೇಲಿನ ಸಿಹಿ ಪದಾರ್ಥ ಆಗಿದೆ. ಸಕ್ಕರೆ ಹಾಕದೇ ಸಿಹಿ ಆಹಾರ ತಯಾರು ಮಾಡಲಾಗುವುದಿಲ್ಲ ಎನ್ನುವಷ್ಟರ ಪಟ್ಟಿಗೆ ಸಕ್ಕರೆಯನ್ನು ಸಿಹಿ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಸಕ್ಕರೆಯನ್ನು ಸಾವಿರಾರು ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಬಹುತೇಕ ಎಲ್ಲರೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಸಕ್ಕರೆ ಸೇವನೆ ಮಾಡುತ್ತಾರೆ.

    ಸಕ್ಕರೆಯ ಅತಿಯಾದ ಸೇವನೆ ಮತ್ತು ಕಾಯಿಲೆಗಳು

    ಆದರೆ ಸಕ್ಕರೆಯ ಅತಿಯಾದ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಯಾವುದೇ ರೀತಿಯ ಹಾನಿ ಉಂಟು ಮಾಡಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ ಸಕ್ಕರೆಯನ್ನು ಹೆಚ್ಚು ಸೇವನೆ ಮಾಡುವುದು ದೇಹದಲ್ಲಿ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ.

    ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು?

    ಪ್ರತಿದಿನ 6 ಟೀ ಚಮಚ ಸಕ್ಕರೆ ಸೇವಿಸುವುದು ಆರೋಗ್ಯಕ್ಕೆ ಹಾನಿ ಉಂಟು ಮಾಡಲ್ಲ ಎಂದು ತಜ್ಞರು ಸೂಚಿಸುತ್ತಾರೆ. ಆದರೆ ಪ್ರತಿದಿನ ಆರು ಟೀ ಚಮಚಕ್ಕಿಂತ ಹೆಚ್ಚು ಸಕ್ಕರೆ ಸೇವನೆ ಮಾಡುವುದು ನಿಮಗೆ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು.

    ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!

    ಹೆಚ್ಚು ಸಕ್ಕರೆ ಸೇವನೆ ಮಾಡುವುದು ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ, ಆಲ್ಝೈಮರ್ ಕಾಯಿಲೆ ಇತ್ಯಾದಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ನೀವು ಹೆಚ್ಚು ಸಕ್ಕರೆ ತಿನ್ನುತ್ತಿದ್ದೀರಿ ಎಂದು ಸೂಚಿಸುವ ಕೆಲವು ಸಂಕೇತಗಳು ಮತ್ತು ರೋಗ ಲಕ್ಷಣಗಳು ಯಾವವು ಎಂದು ನೋಡೋಣ.

    ಸ್ನಾಯು ಮತ್ತು ಕೀಲು ನೋವು

    ನೀವು ಯಾವಾಗಲೂ ಸ್ನಾಯು ಮತ್ತು ಕೀಲು ನೋವು ಹೊಂದಿದ್ದರೆ, ಇದಕ್ಕೆ ಕಾರಣ ಹೆಚ್ಚು ಸಕ್ಕರೆ ಆಹಾರ ಸೇವಿಸುವುದು. ಅಷ್ಟೇ ಅಲ್ಲದೇ ದೇಹದಲ್ಲಿ ಇದರ ಪ್ರಮಾಣ ಹೆಚ್ಚಾಗುವುದು ಸಂಧಿವಾತ, ಕಣ್ಣಿನ ಪೊರೆ, ಹೃದ್ರೋಗ, ಜ್ಞಾಪಕ ಶಕ್ತಿ ಕುಂದುವ ಕಾಯಿಲೆ ಉಂಟು ಮಾಡುತ್ತದೆ.

    ಹೆಚ್ಚಿನ ಅಥವಾ ಕಡಿಮೆ ಶಕ್ತಿಯ ಮಟ್ಟ

    ಗ್ಲೂಕೋಸ್ ನಿಮ್ಮ ದೇಹದಲ್ಲಿ ಶಕ್ತಿ ಉತ್ಪಾದಿಸುತ್ತದೆ. ಹಾಗಾಗಿ ನಿಮ್ಮ ರಕ್ತದ ಸಕ್ಕರೆ ಮಟ್ಟ ಸರಿಯಾಗಿ ಇಟ್ಟುಕೊಳ್ಳವುದು ಮುಖ್ಯ. ನೀವು ಸಿಹಿತಿಂಡಿ ಸೇವಿಸಿದಾಗ, ಮೇದೋಜ್ಜೀರಕ ಗ್ರಂಥಿಯು ಜೀವಕೋಶಗಳಿಗೆ ಗ್ಲೂಕೋಸ್ ತಲುಪಿಸಲು ಸಹಾಯ ಮಾಡಲು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಮತ್ತು ನಿಮಗೆ ಶಕ್ತಿ ನೀಡುತ್ತದೆ. ಈ ಚಕ್ರವು ಕೊನೆಗೊಂಡ ನಂತರ ನಿಮ್ಮ ದೇಹವು ಹೆಚ್ಚು ಸಕ್ಕರೆ ಸೇವನೆಗೆ ಹಂಬಲಿಸುತ್ತದೆ. ಇದರಿಂದ ಶಕ್ತಿಯ ಮಟ್ಟದಲ್ಲಿ ಕುಸಿತ ಉಂಟಾಗುತ್ತದೆ.

    ಚರ್ಮದ ಹಾನಿ

    ಸಕ್ಕರೆ ಹೊಂದಿರುವ ಆಹಾರಗಳು ಇನ್ಸುಲಿನ್ ಮಟ್ಟ ಹೆಚ್ಚಿಸುತ್ತವೆ. ಮತ್ತು ಗ್ಲೈಕೇಶನ್ ಪ್ರಕ್ರಿಯೆ ಪ್ರಾರಂಭಿಸುತ್ತವೆ. ಗ್ಲೂಕೋಸ್ ನಿಮ್ಮ ರಕ್ತ ಪ್ರವಾಹಕ್ಕೆ ಪ್ರವೇಶಿಸಿದಾಗ, ಇದು ಉರಿಯೂತ ಮತ್ತು ಚರ್ಮದ ಕಾಯಿಲೆ ಕಾರಣವಾಗಬಹುದು. ಈ ಇನ್ಸುಲಿನ್ ಚರ್ಮದಲ್ಲಿ ತೈಲ ಗ್ರಂಥಿಗಳ ಚಟುವಟಿಕೆ ಹೆಚ್ಚಿಸುತ್ತದೆ ಮತ್ತು ಉರಿಯೂತದ ಪ್ರಕ್ರಿಯೆ ಸಕ್ರಿಯಗೊಳಿಸುತ್ತದೆ.

    ತೂಕ ಹೆಚ್ಚಾಗುವುದು

    HCF ನ ವರದಿಯ ಪ್ರಕಾರ, ಹೆಚ್ಚು ಸಕ್ಕರೆ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ತಿನ್ನುವ ಚಾಕೊಲೇಟ್ ಅಥವಾ ಕೇಕ್‌ನಂತಹ ಆಹಾರಗಳು ನಿಮಗೆ ಕೆಟ್ಟ ರೀತಿಯಲ್ಲಿ ಹಾನಿ ಉಂಟು ಮಾಡಬಹುದು.

    ಹಲ್ಲಿನ ಕ್ಷಯ

    ಸಿಹಿ ಆಹಾರಗಳು ಹಲ್ಲುಕುಳಿ ಮತ್ತು ದಂತಕ್ಷಯಕ್ಕೆ ಕಾರಣವಾಗುತ್ತದೆ. ಹಲ್ಲುಗಳು ಕೊಳೆಯಲು ಸಕ್ಕರೆಯಲ್ಲ, ಆದರೆ ತಿಂದ ನಂತರ ಹಲ್ಲುಗಳ ಮೇಲೆ ಉಳಿದಿರುವ ಆಹಾರದ ಅವಶೇಷಗಳು ಕಾರಣ. ಸರಿಯಾಗಿ ಹಲ್ಲುಜ್ಜದಿದ್ದರೆ, ಹಲ್ಲುಗಳ ಮೇಲೆ ಪ್ಲೇಕ್ ಉಂಟಾಗಿ ಹಲ್ಲಿನ ಗಟ್ಟಿಯಾದ ಮೇಲ್ಮೈಯನ್ನು ನಾಶಪಡಿಸುತ್ತದೆ.

    ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್

    ಆಗಾಗ್ಗೆ ಶೀತ ಮತ್ತು ಜ್ವರ

    ಹೆಚ್ಚು ಸಕ್ಕರೆ ತಿನ್ನುವುದು ಅಥವಾ ಕುಡಿಯುವುದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಫ್ಲೂ ಬ್ಯಾಕ್ಟೀರಿಯಾದ ವಿರುದ್ಧ ಶೂನ್ಯ ಶಕ್ತಿ ಹೊಂದಿರುವ ಗ್ಲೂಕೋಸ್ ಅನ್ನು ತೆಗೆದುಕೊಳ್ಳುತ್ತದೆ.
    Published by:renukadariyannavar
    First published: