• Home
  • »
  • News
  • »
  • lifestyle
  • »
  • Protein Diet: ಜಾಸ್ತಿ ಪ್ರೋಟಿನ್​​ ಸೇವಿಸಿದ್ರೂ ಆರೋಗ್ಯ ಸಮಸ್ಯೆ ಉಂಟಾಗುತ್ತೆ, ಎಚ್ಚರಿಕೆ!

Protein Diet: ಜಾಸ್ತಿ ಪ್ರೋಟಿನ್​​ ಸೇವಿಸಿದ್ರೂ ಆರೋಗ್ಯ ಸಮಸ್ಯೆ ಉಂಟಾಗುತ್ತೆ, ಎಚ್ಚರಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯಕ್ಕೆ ಸರಿಯಾದ ಪ್ರಮಾಣದ ಪ್ರೋಟಿನ್ ಸೇವನೆ ಮಾಡುವುದು ತುಂಬಾ ಮುಖ್ಯ. ಫಿಟ್‌ನೆಸ್ ಕಾಳಜಿವುಳ್ಳವರು ಹೆಚ್ಚಾಗಿ ಪ್ರೋಟಿನ್ ಶೇಕ್ಸ್ ಅಥವಾ ಹೆಚ್ಚಿನ ಪ್ರೋಟಿನ್​ ಆಹಾರ ತೆಗೆದುಕೊಳ್ಳಲು ಇದು ಕಾರಣ ಆಗಿದೆ. ಆದರೆ ನಿರ್ದಿಷ್ಟ ಪ್ರಮಾಣದ ಪ್ರೋಟಿನ್‌ ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಿದೆ.

ಮುಂದೆ ಓದಿ ...
  • Share this:

    ಸದೃಢ ಆರೋಗ್ಯಕ್ಕೆ (Health) ಮತ್ತು ರೋಗಗಳಿಂದ (Disease) ದೂರವಿರಲು ಪ್ರತಿಯೊಬ್ಬರಿಗೂ ಪೋಷಕಾಂಶಗಳ (Nutrients) ಅಗತ್ಯತೆ ಇದೆ. ಆಹಾರದಲ್ಲಿ (Food) ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವುದು ಸದೃಢ ಆರೋಗ್ಯ ಮತ್ತು ಬೆಳವಣಿಗೆಗೆ (Growth) ಬಹಳ ಮುಖ್ಯ. ದೇಹಕ್ಕೆ (Body) ಬೇಕಾದ ಅತ್ಯಗತ್ಯವಾದ ಪೋಷಕಾಂಶಗಳಲ್ಲಿ ಪ್ರೋಟಿನ್ (Protein) ಕೂಡ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಚರ್ಮದ ಆರೋಗ್ಯಕ್ಕೆ, ಸ್ನಾಯುಗಳ ಬೆಳವಣಿಗೆ ಮತ್ತು ಬಲಿಷ್ಠತೆಗೆ, ಕೂದಲು ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ಪ್ರಮಾಣದ ಪ್ರೋಟೀನ್ ಸೇವನೆ ಮಾಡುವುದು ತುಂಬಾ ಮುಖ್ಯ. ಫಿಟ್‌ನೆಸ್ ಪ್ರೀಕ್‌ ಗಳು ಹೆಚ್ಚಾಗಿ ಪ್ರೋಟೀನ್ ಶೇಕ್ಸ್ ಅಥವಾ ಹೆಚ್ಚಿನ ಪ್ರೊಟೀನ್ ಆಹಾರ ತೆಗೆದುಕೊಳ್ಳಲು ಇದು ಕಾರಣ ಆಗಿದೆ.


    ನಿರ್ದಿಷ್ಟ ಪ್ರಮಾಣದ ಪ್ರೋಟಿನ್‌ ಆರೋಗ್ಯಕ್ಕೆ ಹಾನಿಕರ?!


    ಆದರೆ ನಿರ್ದಿಷ್ಟ ಪ್ರಮಾಣದ ಪ್ರೋಟಿನ್‌ ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಿದೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ. ಹೆಚ್ಚಿನ ಪ್ರೊಟೀನ್ ಆಹಾರ ಸೇವನೆ ಯಾವೆಲ್ಲಾ ದುಷ್ಪರಿಣಾಮ ಬೀರುತ್ತದೆ ಎಂದು ನೋಡೋಣ.


    ಹೆಚ್ಚುವರಿ ಪ್ರೋಟೀನ್ ನಿಮ್ಮ ದೇಹಕ್ಕೆ ಹೇಗೆ ಅಪಾಯಕಾರಿ ಆಗಿರುತ್ತದೆ ಎಂಬ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ನೋಡೋಣ. ಹೆಚ್ಚಿನ ಪ್ರೋಟೀನ್ ಆಹಾರ ಯಾವಾಗ ಮತ್ತು ಹೇಗೆ ಹಾನಿಕರ ಎಂಬುದನ್ನೂ ಸಹ ತಿಳಿಯೋಣ.




    ಪ್ರೋಟಿನ್ ಎಂದರೇನು?


    ಪ್ರೋಟೀನ್ ಒಂದು ರೀತಿಯ ಅಣುವಾಗಿದೆ. ಇದು ದೇಹದ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಅಣುಗಳು ಜೀವಕೋಶಗಳಲ್ಲಿ ಇರುತ್ತವೆ. ದೇಹದ ಅಂಗಾಂಶಗಳು ಮತ್ತು ಅಂಗಗಳ ರಚನೆ, ಕಾರ್ಯ ಮತ್ತು ನಿಯಂತ್ರಣಕ್ಕೆ ಪ್ರೋಟೀನ್ ಅತ್ಯಗತ್ಯವಾಗಿ ಬೇಕು.


    ಹೋಲಿಸ್ಟಿಕ್ ನ್ಯೂಟ್ರಿಷನ್ ತರಬೇತುದಾರರಾಗಿರುವ ಪ್ರಿಯಾಂಶಿ ಭಟ್ನಾಗರ್ ಅವರ ಪ್ರಕಾರ, ಒಟ್ಟಾರೆ ಆರೋಗ್ಯಕ್ಕೆ ಸಮತೋಲಿತ ಆಹಾರ ಅತ್ಯಗತ್ಯ. ಹೆಚ್ಚು ಪ್ರೋಟೀನ್ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಎಂದು ಹೇಳುತ್ತಾರೆ.


    ದೀರ್ಘಕಾಲದವರೆಗೆ ಹೆಚ್ಚಿನ ಪ್ರೋಟೀನ್ ಸೇವನೆ ಮಾಡುವುದು ಮೂತ್ರಪಿಂಡ, ಯಕೃತ್ತು ಮತ್ತು ಮೂಳೆಗಳ ಮೇಲೆ ಚಯಾಪಚಯ ಒತ್ತಡ ಉಂಟು ಮಾಡುತ್ತದೆ. ಹಾಗೂ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.


    ಹೃದಯದ ಆರೋಗ್ಯಕ್ಕೆ ಹಾನಿಕರ


    ಹೆಚ್ಚಿನ ಪ್ರೋಟೀನ್ ಸೇವನೆ ಹೃದಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಹೆಚ್ಚು ಪ್ರೋಟೀನ್ ಬಳಸುತ್ತಿದ್ದರೆ, ಅದು ನಿಮ್ಮ ಹೃದಯಕ್ಕೆ ಅಪಾಯಕಾರಿ. ಇದು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ.


    ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ


    ಹೆಚ್ಚು ಪ್ರೋಟೀನ್ ಸೇವನೆ ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ದೇಹದಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಾದರೆ ಕಿಡ್ನಿಗಳು ಸಾರಜನಕ ತೊಡೆದು ಹಾಕಲು ತೊಂದರೆಯಾಗುತ್ತದೆ. ಮೂತ್ರಪಿಂಡ ಸಮಸ್ಯೆಯಿದ್ದರೆ ಹೆಚ್ಚು ಪ್ರೋಟೀನ್ ಸೇವಿಸಬಾರದು. ಹೆಚ್ಚಿನ ಪ್ರೋಟೀನ್ ಸೇವನೆ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತದೆ.


    ಮೂಳೆ ಮುರಿತ ಮತ್ತು ದುರ್ಬಲ ಮೂಳೆಗಳು


    ಹೆಚ್ಚುವರಿ ಪ್ರೋಟೀನ್ ಸೇವನೆ ನಿಮ್ಮ ಮೂಳೆಗಳಿಗೆ ಹಾನಿಕರ. ಮೂಳೆಗಳಲ್ಲಿ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ದೇಹದ ಹೆಚ್ಚಿನ ಪ್ರಮಾಣದ ಪ್ರೋಟೀನ್ ಕ್ಯಾಲ್ಸಿಯಂನ್ನು ಕಡಿಮೆ ಮಾಡುತ್ತದೆ. ಇದು ಮೂಳೆಗಳು ದುರ್ಬಲವಾಗಲು ಕಾರಣವಾಗುತ್ತದೆ.


    ಹೆಚ್ಚಿನ ಪ್ರೋಟೀನ್ ಸೇವನೆ ದೇಹವನ್ನು ಆಯಾಸಗೊಳಿಸುತ್ತದೆ. ಇದು ನಿಮ್ಮ ಮೂತ್ರಪಿಂಡ ಮತ್ತು ಮೂಳೆಗಳಿಗೆ ಒತ್ತಡ ಉಂಟು ಮಾಡುತ್ತದೆ. ಇದು ಅತಿಯಾದ ಕೆಲಸ ಮಾಡಲು ಕಾರಣ ಆಗುತ್ತದೆ. ನೀವು ಹೆಚ್ಚು ಪ್ರೋಟೀನ್ ಸೇವಿಸಿದರೆ ಕರುಳಿನ ಅಸಮಾಧಾನ, ಅಜೀರ್ಣ, ವಾಕರಿಕೆ, ತಲೆನೋವು ಮತ್ತು ಒತ್ತಡ ಸಮಸ್ಯೆ ಅನುಭವಿಸಬೇಕಾಗುತ್ತದೆ.


    ಇದನ್ನೂ ಓದಿ: ಅನ್ನ ಉಳಿದರೆ ಚಿಂತೆ ಬೇಡ, ಈ 3 ಟೇಸ್ಟಿ ರೆಸಿಪಿ ಟ್ರೈ ಮಾಡಿ


    ಒಂದು ದಿನದಲ್ಲಿ ಎಷ್ಟು ಪ್ರೋಟಿನ್ ಸೇವಿಸಬೇಕು?


    ವ್ಯಕ್ತಿಯ ಆಧಾರದ ಮೇಲೆ, ಪ್ರೋಟೀನ್ ಅಗತ್ಯತೆ ಭಿನ್ನವಾಗಿರುತ್ತದೆ. ವಯಸ್ಸು, ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಸ್ಥಿತಿ ಅವಲಂಬಿಸಿ ಪ್ರೊಟೀನ್ ಸೇವನೆ ಭಿನ್ನವಾಗಿರುತ್ತದೆ. ಒಂದು ಸಂಶೋಧನಾ ಪ್ರಬಂಧದ ಪ್ರಕಾರ, ದಿನವೂ ಒಬ್ಬ ವ್ಯಕ್ತಿ ಪ್ರತಿ ಕೆಜಿ ದೇಹದ ತೂಕಕ್ಕೆ 1.6 ಗ್ರಾಂ ಪ್ರೋಟೀನ್ ಸೇವಿಸಬೇಕು. ಅಂದ್ರೆ ದೈನಂದಿನ ಸೇವನೆಯು ಸುಮಾರು 50 ಗ್ರಾಂ ಆಗಿರಬೇಕು.

    Published by:renukadariyannavar
    First published: