ಸಾಮಾನ್ಯವಾಗಿ ಎಲ್ಲರೂ ಆಮ್ಲೇಟ್ (Omelette) ಅನ್ನು ಇಷ್ಟ ಪಡುತ್ತಾರೆ. ಅದರಲ್ಲೂ ಈ ಡಯಟ್ ಮಾಡುತ್ತಿರುವವರಿಗೆ ಎಗ್ ಆಮ್ಲೆಟ್ ಬಲು ಪ್ರಿಯ. ಮೊಟ್ಟೆ (Egg) ಪ್ರಯೋಜನಗಳ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಮೊಟ್ಟೆ ಪ್ರೋಟೀನ್ ಕಣಜವಾಗಿದ್ದು, ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ. ಮೊಟ್ಟೆಯನ್ನು ಕೇವಲ ಆಮ್ಲೆಟ್ ಅಲ್ಲದೇ ಕರಿ, ಗ್ರೇವಿ, ಬುರ್ಜಿ, ಸ್ಯಾಂಡ್ವಿಚ್, ಬ್ರೆಡ್ಗಳಲ್ಲಿ ಸಹ ಬಳಸಿ ಸೇವಿಸಬಹುದು. ಮೊಟ್ಟೆಯಿಂದ ಇಷ್ಟೆಲ್ಲಾ ಮಾಡುವಾಗ ಎಂದಾದರೂ ಮೊಟ್ಟೆ ಇಲ್ಲದೇ ಆಮ್ಲೆಟ್ ಮಾಡಿದ್ದಿರಾ? ಮೊಟ್ಟೆ ಇಲ್ಲದೇ ಆಮ್ಲೆಟ್ ಹೇಗೆ ಸಾಧ್ಯ ಅಂತಾ ಯೋಚಿಸ್ತಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಹೌದು ಮೊಟ್ಟೆ ಇಲ್ಲದೇ ನಾವು ತರಕಾರಿ ಆಮ್ಲೆಟ್ (Veg Omelette) ತಯಾರಿಸಬಹುದು. ಇದು ಮೊಟ್ಟೆ ಇಷ್ಟ ಪಡದವರಿಗೆ ಸೂಕ್ತವಾದ ರೆಸಿಪಿ (Recipe)ಯಾಗಿದೆ.
ಈ ವಿಶಿಷ್ಟವಾದ ವೆಜ್ ಆಮ್ಲೆಟ್ ರೆಸಿಪಿಯನ್ನು ಸೆಲೆಬ್ರಿಟಿ ಚೆಫ್ ರಣವೀರ್ ಬ್ರಾರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಫಟಾ ಫಟ್ ಆಗಿ ವೆಜ್ ಆಮ್ಲೆಟ್ ರೆಸಿಪಿಯನ್ನು ಹೇಗೆ ಮಾಡೋದು ಇಲ್ಲಿದೆ ನೋಡಿ.
ವೆಜ್ ಆಮ್ಲೆಟ್ ಗೆ ಬೇಕಾದ ಪದಾರ್ಥಗಳು:
½ ಟೀಸ್ಪೂನ್ ಎಣ್ಣೆ
1 ಟೀಸ್ಪೂನ್ ಬೆಣ್ಣೆ
1 ಈರುಳ್ಳಿ, ಕತ್ತರಿಸಿದ
ಕತ್ತರಿಸಿದ 2 ಹಸಿರು ಮೆಣಸಿನಕಾಯಿ
ಕತ್ತರಿಸಿದ ½ ಇಂಚಿನ ಶುಂಠಿ
1 ಕತ್ತರಿಸಿದ ಮಧ್ಯಮ ಗಾತ್ರದ ಟೊಮ್ಯಾಟೋ
1 ಕತ್ತರಿಸಿದ ಕೊತ್ತಂಬರಿ ಸೊಪ್ಪು
¼ ಚೀಸ್, ತುರಿದ
ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗೆ ಇಷ್ಟವಾಗೋ ವೆಜಿಟೇಬಲ್ ಸ್ಯಾಂಡ್ವಿಜ್
ಹಿಟ್ಟು ತಯಾರಿಸಲು:
1 ಬ್ರೆಡ್ ಸ್ಲೈಸ್, (ಅಂಚುಗಳನ್ನು ಕತ್ತರಿಸಿ)
1 ಕಪ್ ಕಡಲೆ ಹಿಟ್ಟು
⅓ ಕಪ್ ಮೈದಾ ಹಿಟ್ಟು
ರುಚಿಗೆ ಉಪ್ಪು
¼ ಟೀಸ್ಪೂನ್ ಸಕ್ಕರೆ
1 ಚಮಚ ತಿಳಿ ಕೇಸರಿ ಬಣ್ಣದ ನೀರು
1 ಕಪ್ ಹಾಲು
½-¾ ಕಪ್ ನೀರು
1/2 ರಿಂದ 1 ಟೀಸ್ಪೂನ್ ಅಡಿಗೆ ಸೋಡಾ
1-2 ಟೀಸ್ಪೂನ್ ಬೆಣ್ಣೆ
ತರಕಾರಿ ಆಮ್ಲೆಟ್ ರೆಸಿಪಿ ಪಾಕವಿಧಾನ:
ತರಕಾರಿ ಆಮ್ಲೆಟ್ ಮಾಡಲು ಮೊದಲು ಹಿಟ್ಟನ್ನು ತಯಾರಿಸಿಟ್ಟುಕೊಳ್ಳಿ. ಬೌಲ್ನಲ್ಲಿ ಕತ್ತರಿಸಿದ ಬ್ರೆಡ್ ತುಂಡು ಮತ್ತು ಕಡಲೆ ಹಿಟ್ಟು, ಮೈದಾ ಹಿಟ್ಟು, ಉಪ್ಪು, ಸಕ್ಕರೆ, ಕೇಸರಿ ನೀರು, ಹಾಲು, ಅಡಿಗೆ ಸೋಡಾ ಮತ್ತು ಬೆಣ್ಣೆಯನ್ನು ಹಾಕಿ ನೀರು ಬೆರೆಸಿ ಬ್ಯಾಟರ್ ರೀತಿ ಹದ ಮಾಡಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಸೇರಿಸಿ ಮತ್ತು ಅದರಲ್ಲಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಟೊಮ್ಯಾಟೋವನ್ನು ಹಸಿ ವಾಸನೆ ಹೋಗುವವರೆಗೂ ಹುರಿಯಬೇಕು. ಸ್ವಲ್ಪ ಸಮಯದ ನಂತರ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಹುರಿಯಿರಿ.
ಇದನ್ನೂ ಓದಿ: BreakFast Recipe: ಮಕ್ಕಳಿಗಾಗಿ ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಕರ ಎಗ್ ರೋಲ್
ಈಗ, ನೀವು ಅದಕ್ಕೆ ಒಂದು ಸೌಟ್ ಬ್ಯಾಟರನ್ನು ದೋಸೆ ರೀತಿ ಸೇರಿಸಬೇಕು ಮತ್ತು ಅದನ್ನು ಸಮವಾಗಿ ಹರಡಬೇಕು. ತರಕಾರಿಗಳಿಗೆ ಹಿಟ್ಟನ್ನು ಸೇರಿಸಿದ ನಂತರ ಅದನ್ನು ಚೆನ್ನಾಗಿ ಬೇಯಿಸಿ ಮತ್ತು ಅದಕ್ಕೆ ತುರಿದ ಚೀಸ್ ಸೇರಿಸಿದರೆ ರುಚಿಯಾದ ವೆಜ್ ಆಮ್ಲೆಟ್ ರೆಡಿ.
ಸಂಜೆ ಸಮಯದ ತಿಂಡಿಗೆ ಇದು ಉತ್ತಮವಾಗಿದ್ದು, ಮಕ್ಕಳಿಗೂ ಇಷ್ಟವಾಗುತ್ತದೆ. ಕೇವಲ ಅರ್ಧಗಂಟೆಯಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು.
ಈ ವೆಜ್ ಆಮ್ಲೆಟ್ ಹೊರತಾಗಿ ನೀವು ಇನ್ನೂ ಕೆಲವು ಆಮ್ಲೆಟ್ ಅನ್ನು ಪ್ರಯತ್ನಿಸಿ:
1) ರಾಸ್ ಆಮ್ಲೆಟ್- ಸ್ಥಳೀಯವಾಗಿ 'ರಾಸ್' ಆಮ್ಲೆಟ್ ಎಂದು ಕರೆಯಲ್ಪಡುವ ಈ ಪಾಕವಿಧಾನವನ್ನು ಈರುಳ್ಳಿ, ತೆಂಗಿನ ಹಾಲು, ಕರಿಬೇವಿನ ಎಲೆಗಳು, ಸಾಸಿವೆ ಬೀಜಗಳು ಮತ್ತು ಮಸಾಲೆಗಳೊಂದಿಗೆ ತಯಾರಾಗುತ್ತದೆ.
2) ಕರಂಡಿ ಆಮ್ಲೆಟ್- ತಮಿಳುನಾಡಿನಾದ್ಯಂತ ಈ ಕರಂಡಿ ಆಮ್ಲೆಟ್ ಜನಪ್ರಿಯವಾಗಿದೆ. ಕುಂಜದ ತಮಿಳು ಪದ ಕರಂಡಿ. ಇದು ತ್ವರಿತ ಆಮ್ಲೆಟ್ ಆಗಿದ್ದು, ಇದನ್ನು ಸಾಮಾನ್ಯವಾಗಿ 'ತಡ್ಕಾ'ಕ್ಕೆ ಬಳಸಲಾಗುವ ದೊಡ್ಡ ಕುಂಜದಲ್ಲಿ ತಯಾರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ