• Home
  • »
  • News
  • »
  • lifestyle
  • »
  • Vada Recipe: ಸಂಜೆ ಚಹಾದ ಜೊತೆ ರುಚಿಕರ ವಡಾ ಮಾಡುವುದು ಹೇಗೆ? ಇಲ್ಲಿದೆ ಓದಿ ಸುಲಭದ ರೆಸಿಪಿ

Vada Recipe: ಸಂಜೆ ಚಹಾದ ಜೊತೆ ರುಚಿಕರ ವಡಾ ಮಾಡುವುದು ಹೇಗೆ? ಇಲ್ಲಿದೆ ಓದಿ ಸುಲಭದ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ನಿಮಗೆ ಒಂದು ರೆಸಿಪಿ ತಂದಿದ್ದೇವೆ. ಅದು ರುಚಿಕರ ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಉತ್ತಮ ಎಂದು ಸಾಬೀತಾಗುತ್ತದೆ. ಟೇಸ್ಟಿ ಮತ್ತು ಕ್ರಿಸ್ಪಿ ವಡೆ ಪದಾರ್ಥ ಸೇವನೆ ನಿಮಗೂ ಇಷ್ಟ ಅಂದ್ರೆ. ಟೇಸ್ಟಿ ಮತ್ತು ಆರೋಗ್ಯಕರ ವಡಾ ಹೇಗೆ ಮಾಡೋದು ನೋಡೋಣ.

  • Share this:

    ಸಂಜೆ ಚಹಾ (Evening Tea) ಜೊತೆ ಏನಾದರೂ ತಿನ್ನಬೇಕು ಎಂಬ ಬಯಕೆ ಎಲ್ಲರಿಗೂ ಆಗುತ್ತದೆ. ಆಫೀಸ್ (Office) ಇರಲಿ ಮನೆಯೇ (Home) ಇರಲಿ. ಎಲ್ಲೇ ಇದ್ದರೂ ಸಂಜೆ ಚಹಾ ಜೊತೆ ಏನಾದ್ರೂ ತಿನ್ನಬೇಕು ಎನ್ನಿಸುವುದು ಕಾಮನ್ (Common). ಅದೇ ವೇಳೆ ಆರೋಗ್ಯಕರ ತಿಂಡಿ (Healthy Food) ತಿನ್ನುವುದು ತುಂಬಾ ಮುಖ್ಯ ಆಗುತ್ತದೆ. ನೀವು ಉತ್ತಮ ಪದಾರ್ಥ ಸೇವನೆ ಮಾಡಿದರೆ ಅದು ಚಹಾದ ಮೋಜನ್ನು ದ್ವಿಗುಣ ಮಾಡುತ್ತದೆ. ಆದರೆ ಸಮಸ್ಯೆ ಅಂದ್ರೆ ಚಹಾ ಸೇವನೆ ವೇಳೆ ನೀಡುವ ಹೆಚ್ಚಿನ ತಿಂಡಿಗಳು ಅನಾರೋಗ್ಯಕರ ಪದಾರ್ಥಗಳಿಂದ ಮಾಡಲ್ಪಟ್ಟಿರುತ್ತವೆ. ಇವುಗಳು ರುಚಿಕರವಾಗಿ ಕಂಡರೂ ಸಹ ಅವುಗಳು ಆರೋಗ್ಯಕ್ಕೆ ಹಾನಿಕರ.


    ಸಿಹಿ ತಿಂಡಿಗಳ ಸೇವನೆ


    ನೀವು ತೂಕ ಹೆಚ್ಚಳಕ್ಕೆ ಬಯಸುತ್ತಿದ್ದರೆ, ಸಿಹಿ ತಿಂಡಿಗಳ ಸೇವನೆ ಮಾಡುವ ರೂಪದಲ್ಲಿ ಸಾಕಷ್ಟು ಕ್ಯಾಲೊರಿ ನೀವು ಸೇವನೆ ಮಾಡುತ್ತೀರಿ. ಆದರೆ ಅದು ಅನಾರೋಗ್ಯಕರವಲ್ಲ, ಆರೋಗ್ಯಕರ ದಾರಿಯಲ್ಲಿ ಎಂಬುದನ್ನು ಸರಿಯಾಗಿ ನಿರ್ಣಯ ಮಾಡಿಕೊಳ್ಳಿ.


    ಹಾಗಾದರೆ ನಾವು ಇಂದು ನಿಮಗೆ ಒಂದು ರೆಸಿಪಿ ತಂದಿದ್ದೇವೆ. ಅದು ರುಚಿಕರ ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಉತ್ತಮ ಎಂದು ಸಾಬೀತಾಗುತ್ತದೆ. ಟೇಸ್ಟಿ ಮತ್ತು ಕ್ರಿಸ್ಪಿ ವಡೆ ಪದಾರ್ಥ ಸೇವನೆ ನಿಮಗೂ ಇಷ್ಟ ಅಂದ್ರೆ. ಟೇಸ್ಟಿ ಮತ್ತು ಆರೋಗ್ಯಕರ ವಡಾ ಹೇಗೆ ಮಾಡೋದು ನೋಡೋಣ.


    ಇದನ್ನೂ ಓದಿ: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?


    ಈಗ ವಡಾ ಹೆಸರು ಕೇಳಿದಾಗ ಮೊದಲು ನೆನಪಿಗೆ ಬರುವುದು ಹಿಟ್ಟು. ಇದಕ್ಕೆ ನೀವು ಕಡಲೆ ಹಿಟ್ಟು ಇಲ್ಲವೇ ಮೈದಾ ಹಿಟ್ಟು ಬಳಸುತ್ತೀರಿ. ಆದ್ರೆ ಇಲ್ಲಿ ನಾವು ಹಿಟ್ಟು ಬಳಕೆ ಮಾಡಿ ವಡಾ ಮಾಡುವುದು ಹೇಗೆ ಎಂದು ತಿಳಿಯೋಣ. ನಿಮ್ಮ ಹೊಟ್ಟೆ ಮತ್ತು ಒಟ್ಟಾರೆ ಆರೋಗ್ಯ ಗಮನದಲ್ಲಿಟ್ಟುಕೊಂಡು ಹಿಟ್ಟಿನಿಂದ ತಯಾರಿಸಿದ ಗರಿಗರಿಯಾದ ಮತ್ತು ಕುರುಕುಲಾದ ವಡಾ ರುಚಿಕರ ಪಾಕ ವಿಧಾನ ನೋಡೋಣ.


    ಕ್ರಿಸ್ಪಿ ಕ್ರಿಸ್ಪಿ ವಡಾ ಪಾಕವಿಧಾನ


    ಬೇಕಾಗುವ ಪದಾರ್ಥಗಳು


    ನಾಲ್ಕು ಕಪ್ ಹಿಟ್ಟು, ನಾಲ್ಕು ಕಪ್ ರವೆ, ಐದರಿಂದ ಏಳು ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಕರಿಮೆಣಸು, ಒಂದು ಟೀಸ್ಪೂನ್ ಅಜ್ವೈನ್, ಒಂದು ಟೀ ಸ್ಪೂನ್ ಕಸೂರಿ ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ ಅಥವಾ ಆಲಿವ್ ಎಣ್ಣೆ, ಅಡಿಗೆ ಸೋಡಾ ಒಂದು ಪಿಂಚ್,


    ಕ್ರಿಸ್ಪಿ ವಡಾ ಹೀಗೆ ತಯಾರಿಸಿ


    ಕ್ರಿಸ್ಪಿ ವಡಾ ಮಾಡಲು ಮೊದಲು ಹಿಟ್ಟನ್ನು ತಯಾರಿಸಲು ಮೊದಲು ದೊಡ್ಡ ಪಾತ್ರೆ ತೆಗೆದುಕೊಳ್ಳಿ. ರವೆ, ಮೈದಾ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕರಿಮೆಣಸು, ಕೇರಂ ಕಾಳು, ಕಸೂರಿ ಮೆಂತ್ಯ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಸೇರಿಸದೆ ಚೆನ್ನಾಗಿ ಮಿಶ್ರಣ ಮಾಡಿ.


    ಈಗ ಅದಕ್ಕೆ ಒಂದು ಚಿಟಿಕೆ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ. ಐದು ಚಮಚ ತುಪ್ಪ ಸೇರಿಸಿ. ಈಗ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಉಗುರು ಬೆಚ್ಚಗಿನ ನೀರನ್ನು ಬಳಸಿ. ಉಗುರು ಬೆಚ್ಚನೆಯ ನೀರನ್ನು ಸೇರಿಸಿ ಹಿಟ್ಟು ತಯಾರಿಸಿ. ಮತ್ತು ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿ.


    ನಂತರ 20 ನಿಮಿಷ ಬಿಡಿ. ನಂತರ ಅದರಿಂದ ಸಣ್ಣ ಉಂಡೆ ಮಾಡಿ ಚಪ್ಪಟೆ ಮಾಡಿ. ಪ್ಯಾನ್ ಅನ್ನು ಬಿಸಿ ಮಾಡಿ, ಮಧ್ಯಮ ಉರಿಯಲ್ಲಿರಿಸಿ. ಈಗ ಪ್ಯಾನ್ ಗೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಸಿದ್ಧಪಡಿಸಿದ ವಡಾ ಹಿಟ್ಟನ್ನು ಹಾಕಿ. ಎರಡೂ ಬದಿ ಚೆನ್ನಾಗಿ ಬೇಯಿಸಿ.


    ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


    ಅದು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಬೆಂದ ನಂತರ ಚಾಟ್ ಮಸಾಲಾ ಸಿಂಪಡಿಸಿ. ಸಂಜೆ ಚಹಾದೊಂದಿಗೆ ಗರಿಗರಿಯಾದ, ಕುರುಕಲು ವಡಾ ಸೇವಿಸಿ.

    Published by:renukadariyannavar
    First published: