HOME » NEWS » Lifestyle » EVEN 1 SUGARY DRINK A DAY COULD BOOST HEART DISEASE ZP

ಪ್ರತಿದಿನ ಸಿಹಿ ಪಾನೀಯ ಸೇವಿಸುವ ಮಹಿಳೆಯರಲ್ಲಿ ಹೃದ್ರೋಗದ ಅಪಾಯ ಹೆಚ್ಚು: ಅಧ್ಯಯನ

ಸಿಹಿ ಪಾನೀಯವು ಹೃದಯದ ಮೇಲೂ ಪರಿಣಾಮ ಬೀರುತ್ತದೆ. ದಿನಕ್ಕೆ ಒಂದು ಅಥವಾ ಹೆಚ್ಚಿನ ಬಾರಿ ಸಕ್ಕರೆ ಮಿಶ್ರ ಹಣ್ಣಿನ ಪಾನೀಯಗಳನ್ನು ಕುಡಿಯುವುದರಿಂದ ಹೃದ್ರೋಗದ ಶೇಕಡಾ 42 ರಷ್ಟು ಹೆಚ್ಚಿನ ಅಪಾಯವಿದೆ.

news18-kannada
Updated:January 8, 2021, 7:30 AM IST
ಪ್ರತಿದಿನ ಸಿಹಿ ಪಾನೀಯ ಸೇವಿಸುವ ಮಹಿಳೆಯರಲ್ಲಿ ಹೃದ್ರೋಗದ ಅಪಾಯ ಹೆಚ್ಚು: ಅಧ್ಯಯನ
ಸಾಂದರ್ಭಿಕ ಚಿತ್ರ
  • Share this:
ಪ್ರತಿದಿನ ಒಂದಕ್ಕಿಂತ ಹೆಚ್ಚಿನ ಬಾರಿ ಸಕ್ಕರೆ ಪಾನೀಯಗಳನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದಲ್ಲಿ ಈ ಸಂಶೋಧನೆ ನಡೆಸಲಾಗಿದ್ದು, ಸರಾಸರಿ 52 ವರ್ಷ ವಯಸ್ಸಿನ 1,06,000 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.

ಈ ಎಲ್ಲ ಮಹಿಳೆಯರು ಅಧ್ಯಯನದಲ್ಲಿ ಭಾಗವಹಿಸುವಾಗ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಮುಕ್ತರಾಗಿದ್ದರು. ಆದರೆ ಹೆಚ್ಚಿನ ಸಕ್ಕರೆ ಸೇವನೆಯು ಮಧುಮೇಹ, ಹೃದಯದ ತೊಂದರೆಗಳು, ಬೊಜ್ಜು ಮತ್ತು ಚಯಾಪಚಯ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಪ್ರತಿದಿನ ಮಹಿಳೆಯರು ಎಷ್ಟು ಸಿಹಿ ಪಾನೀಯಗಳನ್ನು ಸೇವಿಸುತ್ತಾರೆ ಎಂಬುದನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ಇಲ್ಲಿ ಕ್ಯಾಲೋರಿ-ತಂಪು ಪಾನೀಯಗಳು, ಸಿಹಿ ಬಾಟಲ್ ನೀರು ಅಥವಾ ಚಹಾ ಮತ್ತು ಸಕ್ಕರೆ ಹೊಂದಿರುವ ಹಣ್ಣಿನ ಪಾನೀಯಗಳು ಸೇರಿಸಲಾಗಿದೆ. ಹಾಗೆಯೇ ಹೃದಯಾಘಾತ, ಪಾರ್ಶ್ವವಾಯು ಯಾರು ಅನುಭವಿಸಿದರು ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಆಸ್ಪತ್ರೆಯ ದಾಖಲೆಗಳನ್ನು ಬಳಸಿ ಪರಿಶೀಲಿಸಿ ಅಧ್ಯಯನ ನಡೆಸಲಾಗಿದೆ.

ಇದೇ ವೇಳೆ ದಿನಕ್ಕೆ ಒಂದು ಅಥವಾ ಹೆಚ್ಚು ಸಿಹಿಗೊಳಿಸಿದ ಪಾನೀಯಗಳನ್ನು ಕುಡಿಯುವುದರಿಂದ ಹೃದ್ರೋಗದ ಶೇಕಡಾ 20 ರಷ್ಟು ಹೆಚ್ಚಿನ ಅಪಾಯವಿದೆ. ಇದು ಪಾರ್ಶ್ವವಾಯುವಿನ ಶೇ.21 ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಂತಹ ಶೇಕಡಾ 26 ರಷ್ಟು ರೋಗಿಗಳಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಬೇಕಾಗಬಹುದು.

ಸಿಹಿ ಪಾನೀಯವು ಹೃದಯದ ಮೇಲೂ ಪರಿಣಾಮ ಬೀರುತ್ತದೆ. ದಿನಕ್ಕೆ ಒಂದು ಅಥವಾ ಹೆಚ್ಚಿನ ಬಾರಿ ಸಕ್ಕರೆ ಮಿಶ್ರ ಹಣ್ಣಿನ ಪಾನೀಯಗಳನ್ನು ಕುಡಿಯುವುದರಿಂದ ಹೃದ್ರೋಗದ ಶೇಕಡಾ 42 ರಷ್ಟು ಹೆಚ್ಚಿನ ಅಪಾಯವಿದೆ. ಹಾಗೆಯೇ ಪ್ರತಿದಿನ ಸೋಡಾದಂತಹ ತಂಪು ಪಾನೀಯಗಳನ್ನು ಕುಡಿಯುವುದರಿಂದ ಶೇ. 23 ರಷ್ಟು ಹೆಚ್ಚಿನ ಅಪಾಯವಿದೆ ಎಂದು ತಿಳಿದು ಬಂದಿದೆ.

'ಸಕ್ಕರೆ ಅನೇಕ ವಿಧಗಳಲ್ಲಿ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಮತ್ತು ಇನ್ಸುಲಿನ್ ಅನ್ನು ಅಧಿಕಗೊಳಿಸುತ್ತದೆ. ಹಾಗೆಯೇ ಇದು ಹಸಿವು ಮತ್ತು ಬೊಜ್ಜು ಹೆಚ್ಚಿಸುತ್ತದೆ. ಹಾಗೆಯೇ ಇದು ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದು ಎಂದು ಸಂಶೋಧಕರು ತಿಳಿಸಿದ್ದಾರೆ.
ಹೆಚ್ಚಿನ ಮಹಿಳೆಯರಿಗೆ ದಿನಕ್ಕೆ 100 ಕ್ಯಾಲೊರಿಗಳಿಗಿಂತ (6 ಟೀ ಸ್ಪೂನ್ ಸಕ್ಕರೆ ಅಥವಾ 25 ಗ್ರಾಂ) ಸಕ್ಕರೆಯನ್ನು ಸೀಮಿತಗೊಳಿಸಲು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ಶಿಫಾರಸು ಮಾಡುತ್ತದೆ. ಹಾಗೆಯೇ ಹೆಚ್ಚಿನ ಪುರುಷರಿಗೆ ದಿನಕ್ಕೆ 150 ಕ್ಯಾಲೊರಿಗಳಿಗಿಂತ ಹೆಚ್ಚು (9 ಟೀಸ್ಪೂನ್ ಅಥವಾ 38 ಗ್ರಾಂ) ಕ್ಯಾಲೊರಿ ಇರಬಾರದು. ಸಾಮಾನ್ಯ ಸೋಡಾದಲ್ಲಿ 130 ಕ್ಯಾಲೋರಿಗಳು ಮತ್ತು 8 ಟೀ ಚಮಚಗಳು (34 ಗ್ರಾಂ) ಸಕ್ಕರೆ ಇರುತ್ತದೆ. ನಿಯಮಿತವಾಗಿ ಕುಡಿಯುವುದರಿಂದ ಅಪಾಯ ಹೆಚ್ಚು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
Published by: zahir
First published: January 8, 2021, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories