Estrogen Rich Foods: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆಯರು ತಮ್ಮ ಆರೋಗ್ಯ ಉತ್ತಮವಾಗಿಡಲು ಬಯಸಿದರೆ, ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂದು ವೈದ್ಯರು ಮತ್ತು ತಜ್ಞರು ಸೂಚನೆ ನೀಡುತ್ತಾರೆ.

  • Share this:

ಈಸ್ಟ್ರೊಜೆನ್ (Estrogen) ದೇಹದ (Body) ವಿವಿಧ ಕಾರ್ಯಗಳಿಗೆ ಅಗತ್ಯವಾಗಿ ಬೇಕಾದ ಹಾರ್ಮೋನ್ (Hormone) ಆಗಿದೆ. ಹೆಚ್ಚಿನ ಜನರು (People) ಇದನ್ನು ಸ್ತ್ರೀ ಲೈಂಗಿಕತೆ ಮತ್ತು ಸಂತಾನೋತ್ಪತ್ತಿಗೆ ಸೇವನೆ ಮಾಡುತ್ತಾರೆ ಎಂದು ತಿಳಿದಿದ್ದಾರೆ. ಈ ಹಾರ್ಮೋನ್ ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಇತರೆ ಅಂಗಗಳ (Parts) ಬೆಳವಣಿಗೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ. ಆದರೆ ಇದು ಮೂಳೆಗಳನ್ನು ಬಲಪಡಿಸುವುದು, ಹೃದಯವನ್ನು ಆರೋಗ್ಯಕರವಾಗಿಸುವುದು ಮತ್ತು ದೇಹದ ಇತರೆ ಕಾರ್ಯಗಳನ್ನು ಉತ್ತಮವಾಗಿ ಇಡುವ ಕೆಲಸ ಮಾಡುತ್ತದೆ. ಮಹಿಳೆಯರು ತಮ್ಮ ಆರೋಗ್ಯ ಉತ್ತಮವಾಗಿಡಲು ಬಯಸಿದರೆ, ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.


ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂದು ವೈದ್ಯರು ಮತ್ತು ತಜ್ಞರು ಸೂಚನೆ ನೀಡುತ್ತಾರೆ. ಈಸ್ಟ್ರೋಜನ್ ಹಾರ್ಮೋನ್ ಚೆನ್ನಾಗಿರದಿದ್ದರೆ ಯಾವ ಲಕ್ಷಣಗಳು ಅಥವಾ ದೇಹದಲ್ಲಿ ಯಾವ ಬದಲಾವಣೆಗಳು ಕಂಡು ಬರುತ್ತವೆ?


ಹಾರ್ಮೋನ್ ಅಸಮತೋಲನ,


ಋತುಸ್ರಾವ ಸಮಯದಲ್ಲಿ ಲಘು ಅಥವಾ ಭಾರೀ ರಕ್ತಸ್ರಾವ,


ರಾತ್ರಿ ಬೆವರುವಿಕೆ,


ಮೂಡ್ ಬದಲಾವಣೆಗಳು,


ನಿದ್ರೆಯ ತೊಂದರೆ,


ತೂಕ ಹೆಚ್ಚಾಗುವುದು,


ಕಡಿಮೆ ಲೈಂಗಿಕ ಬಯಕೆ,


ಯೋನಿ ಶುಷ್ಕತೆ,


ಆಯಾಸ,


ಖಿನ್ನತೆ ಮತ್ತು ಆತಂಕ,


ಅನಿಯಮಿತ ಅಥವಾ ಮುಟ್ಟಿನ ಅವಧಿಗಳು ಸಮಸ್ಯೆಗಳು ಉದ್ಭವಿಸಬಹುದು.


ಇದನ್ನೂ ಓದಿ: ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯ ಲಕ್ಷಣಗಳು ಮತ್ತು ಪದಾರ್ಥಗಳು ಯಾವವು?


ಗೋಡಂಬಿಯ ನಿಯಮಿತ ಸೇವನೆ


ಈಸ್ಟ್ರೊಜೆನ್ ಮಟ್ಟವನ್ನು ಸಮತೋಲನದಲ್ಲಿಡಲು ಹಲವು ವೈದ್ಯಕೀಯ ಚಿಕಿತ್ಸೆಗಳು ಮತ್ತು ಔಷಧಿಗಳು ಲಭ್ಯ ಇವೆ. ನೀವು ಆಹಾರದಲ್ಲಿ ಬದಲಾವಣೆ ಮಾಡುವ ಮೂಲಕ ಅದನ್ನು ಸಮತೋಲನದಲ್ಲಿ ಇಡಬಹುದು. ಪೌಷ್ಟಿಕ ತಜ್ಞೆ ಭಕ್ತಿ ಕಪೂರ್ ಪ್ರಕಾರ, ಗೋಡಂಬಿಯ ನಿಯಮಿತ ಸೇವನೆಯು ಈಸ್ಟ್ರೊಜೆನ್ ಮಟ್ಟವನ್ನು ಸರಿಯಾಗಿ ಮಾಡಬಹುದು.


ಗೋಡಂಬಿಯು ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕ ಉತ್ತಮ ಮೂಲ. ಇದು ಮಹಿಳೆಯರಲ್ಲಿ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಇದು ನೈಸರ್ಗಿಕ ವಿರೋಧಿ ಈಸ್ಟ್ರೊಜೆನ್ ಪರಿಣಾಮ ಹೊಂದಿರುವ ಅನಾಕಾರ್ಡಿಕ್ ಆಮ್ಲ ಎಂಬ ವಸ್ತು ಹೊಂದಿದೆ.


ಈಸ್ಟ್ರೊಜೆನ್ ಹಾರ್ಮೋನ್ ಏನಾಗುತ್ತದೆ?


ಈಸ್ಟ್ರೊಜೆನ್ ಹಾರ್ಮೊನ್ ಮಹಿಳೆಯರ ಜರಾಯು ಮತ್ತು ಅಂಡಾಶಯದಲ್ಲಿ ಉತ್ಪತ್ತಿ ಆಗುತ್ತದೆ. ಈಸ್ಟ್ರೊಜೆನ್‌ನ ಪ್ರಮುಖ ರೂಪವೆಂದರೆ ಸ್ತ್ರೀ ದೇಹದಿಂದ ಉತ್ಪತ್ತಿಯಾಗುವ ಎಸ್ಟ್ರಾಡಿಯೋಲ್. ಇದನ್ನು ಮಗುವಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಹಾರ್ಮೋನ್ ಎಂದು ಕರೆಯುತ್ತಾರೆ. ಈ ಹಾರ್ಮೋನ್ ಗರ್ಭ ಧರಿಸಲು ಸಹಕಾರಿ. ಗರ್ಭಪಾತ ತಡೆಯುತ್ತದೆ.


ಈಸ್ಟ್ರೊಜೆನ್ ಮಟ್ಟ ಹೆಚ್ಚಾದರೆ ಏನಾಗುತ್ತದೆ?


ಹೆಚ್ಚಿನ ಮಟ್ಟದ ಈಸ್ಟ್ರೊಜೆನ್, ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್‌ಗೆ ಅಪಾಯಕಾರಿ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ (ACS) ಮೂಲದ ಪ್ರಕಾರ, ಈಸ್ಟ್ರೊಜೆನ್ ಪ್ರಾಬಲ್ಯವು ನಿಮ್ಮ ಎಂಡೊಮೆಟ್ರಿಯಲ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಹೆಚ್ಚಿದ ಈಸ್ಟ್ರೊಜೆನ್ ರಕ್ತ ಹೆಪ್ಪುಗಟ್ಟುವುದು, ಪಾರ್ಶ್ವವಾಯು, ಆಯಾಸ ಮತ್ತು ತೂಕದಲ್ಲಿನ ಬದಲಾವಣೆ, ಥೈರಾಯ್ಡ್ ಕಾಯಿಲೆಯ ಸಾಧ್ಯತೆ ಹೆಚ್ಚಿಸುತ್ತದೆ.


ಮಹಿಳೆಯರಲ್ಲಿ ಈಸ್ಟ್ರೊಜೆನ್ ಸಮಸ್ಯೆ


ನಮ್ಮ ಆಹಾರ ಮತ್ತು ಪರಿಸರ ಈಸ್ಟ್ರೊಜೆನ್ ಮತ್ತು ಸಂಶ್ಲೇಷಿತ ರಾಸಾಯನಿಕಗಳಿಂದ ತುಂಬಿದೆ. ಹೆಚ್ಚಿನ ಈಸ್ಟ್ರೊಜೆನ್ ಮಹಿಳೆಯರಲ್ಲಿ ಸಾಮಾನ್ಯ ಸ್ಥಿತಿ. ಮಹಿಳೆಯರಲ್ಲಿ ಹೆಚ್ಚಿನ ಈಸ್ಟ್ರೊಜೆನ್ PMS, ಭಾರೀ ಅಥವಾ ನೋವಿನ ಮುಟ್ಟಿನ ರಕ್ತಸ್ರಾವ, ಗರ್ಭಾಶಯದ ಫೈಬ್ರಾಯ್ಡ್‌ಗಳು ಮತ್ತು ಸ್ತನ ಕ್ಯಾನ್ಸರ್ ಅಪಾಯ ಸಮಸ್ಯೆ ಉತ್ತೇಜಿಸುತ್ತದೆ.


ಗೋಡಂಬಿ ಸಹಕಾರಿ


ಆರೋಗ್ಯದಲ್ಲಿ ಗೋಡಂಬಿ, ಅನಾಕಾರ್ಡಿಕ್ ಆಸಿಡ್ ಎಂಬ ವಸ್ತು ಹೊಂದಿದೆ. ಇದು ನೈಸರ್ಗಿಕ ವಿರೋಧಿ ಈಸ್ಟ್ರೊಜೆನ್ ಪರಿಣಾಮಗಳಲ್ಲಿ ಸಮೃದ್ಧವಾಗಿದೆ. ಗೋಡಂಬಿಯು ಸುಮಾರು 20 ಮಿಲಿಗ್ರಾಂ ಅನಾಕಾರ್ಡಿಕ್ ಆಮ್ಲ ಹೊಂದಿದೆ. ಇದರ ಸೇವನೆಯು ಹಾರ್ಮೋನುಗಳ ಸಮತೋಲನಕ್ಕೆ ಮಹಿಳೆಯರಿಗೆ ಪ್ರಯೋಜನಕಾರಿ.


ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ


ಎಷ್ಟು ಪ್ರಮಾಣದ ಗೋಡಂಬಿ ಪ್ರತಿದಿನ ಸೇವಿಸಬೇಕು?


ಹೆಚ್ಚಿದ ಈಸ್ಟ್ರೊಜೆನ್‌ ಅಡ್ಡ ಪರಿಣಾಮ ಎದುರಿಸುತ್ತಿರುವ ಮಹಿಳೆಯರು ಪ್ರತಿದಿನ ಗೋಡಂಬಿ ಸೇವಿಸಿ. ಸುಮಾರು 1/4 ಕಪ್ ಪೌಷ್ಟಿಕಾಂಶ-ಭರಿತ ಗೋಡಂಬಿ ಸೇವಿಸಿ.

top videos
    First published: